ಮಂಗಳೂರು/ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಿ 117 ದಿನಗಳು ಕಳೆದಿವೆ. ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಇಂದು ಸಂಜೆ 6 ಗಂಟೆಗೆ ಶುರುವಾಗಲಿದೆ. 6 ಸ್ಪರ್ಧಿಗಳ ಪೈಕಿ ಮನೆಯಿಂದ ಮೊದಲು ಹೊರ ಬರುವುದು ಓರ್ವ ಮಹಿಳಾ ಸ್ಪರ್ಧಿ ಎನ್ನಲಾಗುತ್ತಿದೆ. ಆದರೆ ಬಿಗ್ ಬಾಸ್ ವೀಕ್ಷಕರಿಗೆ ಅದೊಂದು ಬೇಸರ ಶುರುವಾಗಿದೆ.
ಒಂದೇ ದಿನದಲ್ಲಿ ಬಿಗ್‌ಬಾಸ್ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಹೀಗಾಗಿ ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಆರು ಸ್ಪರ್ಧಿಗಳ ಪೈಕಿ ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಕೂತುಹಲ ವೀಕ್ಷಕರಲ್ಲಿದೆ. ಫಿನಾಲೆಯಲ್ಲಿ ಇಬ್ಬರು ಮಹಿಳಾ ಸ್ಪರ್ಧಿಗಳ ಪೈಕಿ ಒಬ್ಬರು ಮೊದಲು ಹೊರಬರಬಹುದು ಎನ್ನಲಾಗುತ್ತಿದೆ.
ಫಿನಾಲೆಯಲ್ಲಿ 5 ಜನರು ಮಾತ್ರ ಇರಲಿದ್ದು, ಒಬ್ಬರು ಎಲಿಮಿನೇಟ್ ಆಗಬಹುದು ಎನ್ನಲಾಗುತ್ತಿದೆ. ಅದರಲ್ಲೂ ಮಹಿಳಾ ಸ್ಪರ್ಧಿಯೇ ಎಲಿಮಿನೇಟ್ ಆಗುತ್ತಾರೆ ಎನ್ನುವುದಕ್ಕೆ ಕಾರಣ, ಕಂಟೆಸ್ಟೆಂಟ್‌ಗಳಿಗೆ ಬಂದಿರುವ ವೋಟ್‌ಗಳು.
ಮನೆಯ 6 ಸ್ಪರ್ಧಿಗಳಿಗೆ ಬಂದ ವೋಟಿಂಗ್ ಪ್ರಕಾರ, ಹನುಮಂತ ಅತಿ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಉಗ್ರಂ ಮಂಜು ಎರಡನೇ ಸ್ಥಾನದಲ್ಲಿದ್ದಾರೆ. ಮೋಕ್ಷಿತಾ ಮೂರನೇ ಸ್ಥಾನದಲ್ಲಿದ್ದಾರೆ. ತ್ರಿವಿಕ್ರಮ್, ರಜತ್ ಹಾಗೂ ಭವ್ಯಾ ಬಾಟಮ್ 3ರಲ್ಲಿದ್ದಾರೆ.
ಹೀಗಾಗಿ ಇಂದು ಬಿಗ್‌ಬಾಸ್ ಮನೆಯಿಂದ ಮೊದಲು ರಜತ್ ಅಥವಾ ಭವ್ಯಾ ಎಲಿಮಿನೇಟ್ ಆಗಿ ಹೊರಬರಬಹುದು ಎನ್ನಲಾಗುತ್ತಿದೆ. ಇನ್ನು ಭವ್ಯಾ ಗೌಡ ಅವರು ಹೊರಬರುವ ಸಾಧ್ಯತೆ ಜಾಸ್ತಿ ಇದೆ ಎಂದು ಬಿಗ್‌ಬಾಸ್ ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.
ವೀಕ್ಷಕರಿಗೆ ಶುರುವಾಯ್ತು ಅದೊಂದು ಚಿಂತೆ
ಬಿಗ್‌ಬಾಸ್ ಸ್ಪರ್ಧಿಗಳಿಗೆ ಟ್ರೋಫಿ ಗೆಲ್ಲುವ ಚಿಂತೆಯಾದರೇ, ಮತ್ತೊಂದು ಕಡೆ ನಿರಂತರವಾಗಿ 3 ತಿಂಗಳ ಕಾಲ ಬಿಗ್‌ಬಾಸ್ ನೋಡಿದ ವೀಕ್ಷಕರಿಗೆ ಟೆನ್ಶನ್ ಶುರುವಾಗಿದೆ. ಬಿಗ್‌ಬಾಸ್ ಸೀಸನ್ 11 ಸಪ್ಟೆಂಬರ್ 29ರಂದು ಶುರುವಾಗಿತ್ತು. ಆರಂಭದ ದಿನದಿಂದ ಇಲ್ಲಿಯವರೆಗೂ ಅಂದ್ರೆ 3 ತಿಂಗಳ ಮೇಲೆ 3 ವಾರಗಳ ಕಾಲ ವೀಕ್ಷಕರು ಶೋವನ್ನು ತಪ್ಪದೇ ನೋಡಿಕೊಂಡು ಬಂದಿದ್ದಾರೆ.
ಇಂದು ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಇರೋದರಿಂದ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರ ಹಾಕುತ್ತಿದ್ದಾರೆ. ನೆಚ್ಚಿನ ಬಿಗ್‌ಬಾಸ್ ಶೋ ಮುಗಿದ ಬಳಿಕ ಏನ್ ಮಾಡಬೇಕು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.
ಬೆಂಗಳೂರು: ಬಿಗ್ ಬಾಸ್ ಕನ್ನಡ -11 ರ ಟ್ರೋಫಿಯನ್ನು ಹಳ್ಳಿಹೈದ ಹನುಮಂತು ಮುಡಿಗೇರಿಸಿಕೊಂಡಿದ್ದಾರೆ. ಅವರ ಗೆಲುವನ್ನು ಅಭಿಮನಿಗಳು ಅದ್ಧೂರಿಯಾಗಿಯೇ ಆಚರಿಸಿಕೊಂಡಿದ್ದಾರೆ.
ದೊಡ್ಡನೆ ಆಟಕ್ಕೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟಿದ್ದ ಹನುಮಂತು, ಟಾಕ್ – ಟಾಸ್ಕ್ ಎರಡರಲ್ಲೂ ಮೇಲುಗೈ ಸಾಧಿಸಿ 5 ಕೋಟಿ ವೋಟ್ಸ್ ಪಡೆದು ಬಿಗ್ ಬಾಸ್ ಕಪ್ ಎತ್ತಿಕೊಂಡಿದ್ದಾರೆ. ಅವರ ಗೆಲುವನ್ನು ದೊಡ್ಡನೆಯ ಸ್ಪರ್ಧಿಗಳು ಕೂಡ ಖುಷಿಪಟ್ಟಿದ್ದಾರೆ. ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ ರಜತ್ ಕಿಶನ್ ಅವರು ಹನುಮಂತು ಗೆಲುವಿನ ಬಗ್ಗೆ ಖುಷಿಯಿಂದಲೇ ಮಾತನಾಡಿದ್ದಾರೆ.
“ಹನುಮಂತು ಮುಂದೆ ಗಾಂಧೀಜಿ ನಿಂತಿದ್ರೂ ಹನುಮಂತುನೇ ಗೆಲುತ್ತಿದ್ದ. ತೊಂದರೆ ಇಲ್ಲ. ಎಲ್ಲ ಆರಾಮವಾಗಿದ್ದೀವಿ. ಖುಷಿ ಆಗಿದ್ದೀವಿ. ಇಷ್ಟು ಸಣ್ಣ ಅವಧಿಯಲ್ಲಿ ಪ್ರೀತಿ – ಅಭಿಮಾನವನ್ನು ಸಿಗೋದು ತುಂಬಾ ಕಷ್ಟ. ಇದಕ್ಕೆ ಯಾವತ್ತೂ ಚಿರಋಣಿ” ಎಂದು ರಜತ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ರಜತ್ ಅವರ ಪತ್ನಿಯಿಂದ ಕೆಲ ಟ್ರೋಲ್ ಪೇಜ್ ಹಣ ಪಡೆದ ಬಗ್ಗೆ ಅವರು ಮಾತನಾಡಿದ್ದಾರೆ. ರಜತ್ ಅವರ ಮಾಜಿ ಗೆಳತಿ ಜತೆಗಿನ ಫೋಟೋವನ್ನು ಕೆಲ ಟ್ರೋಲ್ ಪೇಜ್ ಗಳು ವೈರಲ್ ಮಾಡಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಡಲಿ ಬಿಡಿ, ನಾನೀಗ ಹೊರಗೆ ಬಂದಿದ್ದೇನೆ. ನಾನು ನೋಡಿಕೊಳ್ಳುತ್ತೇನೆ ಎಂದು ರಜತ್ ಹೇಳಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ಗೌತಮಿ ಜಾದವ್ ಅವರು ಕೆಲವು ವಾರಗಳ ಹಿಂದೆ ಮನೆಯಿಂದ ಔಟ್ ಆಗಿದ್ದರು. ಮನೆಯಲ್ಲಿ ಸದಾ ಪಾಸಿಟಿವ್ ಮಂತ್ರವನ್ನು ಜಪಿಸುತ್ತಿದ್ದ ಇವರು ಕೊನೆಯ ಹಂತದಲ್ಲಿ ಎಲಿಮಿನೇಟ್ ಆಗಿ ಹೊರ ನಡೆದಿದ್ದರು. ಈ ಬೆನ್ನಲ್ಲೇ ಗೌತಮಿ ಜಾದವ್ ಅವರ ಬದುಕಿನಲ್ಲಿ ಬಿರುಕು ಮೂಡಿದೆಯಾ ಎಂಬ ಅನುಮಾನ ಹುಟ್ಟಿಸಿದೆ. ಇದೆಲ್ಲದಕ್ಕೂ ಕಾರಣ ಅವರ ಮಾವ ಮಾಡಿರುವ ಪೋಸ್ಟ್.
ಗೌತಮಿ ಬಿಗ್‌ಬಾಸ್ ಮನೆಯಲ್ಲಿದ್ದಾಗ ಅವರ ಪತಿ ಅಭಿಷೇಕ್ ಅವರು ಬಂದು, 6 ವರ್ಷದ ಮದುವೆ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಆದರೀಗ ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿ ಗೌತಮಿ ಜಾಧವ ಕುಟುಂಬದಲ್ಲಿ ಬಿರುಗಾಳಿ ಎದ್ದಿದೆ ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಇದಕ್ಕೆ ಕಾರಣ ಅವರ ಮಾವ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವಾಕ್ಯ.
ಹೌದು, ಗೌತಮಿ ಅವರ ಮಾವ, ಖ್ಯಾತ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಫೇಸ್ ಬುಕ್ ಬರಹ ಇದೀಗ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಅವರು ‘ಫೇಸ್‌ಬುಕ್‌ನಲ್ಲಿ ‘ಶ್ರಮ ಅರ್ಥವಾದರೆ ಅಪ್ಪ ಅರ್ಥವಾಗುತ್ತಾನೆ, ಕರುಣೆ ಅರ್ಥವಾದರೆ ತಾಯಿ ಅರ್ಥವಾಗುತ್ತಾಳೆ’ ಎಂದು ಪೋಸ್ಟ್ ಹಾಕಿ ಅದಕ್ಕೆ ಅಪ್ಪ ಅಮ್ಮನನ್ನು ಬಿಟ್ಟು ಕುರುಡು ಮೋಹಕ್ಕೆ ಮರುಳಾಗಿ ಹೆಂಡತಿಯ ಬಾಲ ಹಿಡಿದು ಹೊರಟು ಹೋಗುವ ನಿಯತ್ತಿಲ್ಲದ ಗಂಡು ಮಕ್ಕಳಿಗೆ ಅರ್ಪಣೆ ಎಂದು ಬರೆದಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಅಲ್ಲದೆ ಕೆಲವು ದಿನಗಳ ಹಿಂದೆ ಅನ್ಯಾಯದ ಬೇಡಿಕೆಯ ಪ್ರಾರ್ಥನೆಯನ್ನು ಮುಲಾಜಿಲ್ಲದೆ ಧಿಕ್ಕರಿಸುವ, ತಿರಸ್ಕರಿಸುವ ನಮ್ಮಮ್ಮ ವನದುರ್ಗೆಗೆ ನಮೋ ನಮಃ ಎಂದು ಬರೆದ ವಾಕ್ಯದ ಅರ್ಥ ಹಲವು ಅರ್ಥಗಳನ್ನು ಹುಟ್ಟುಹಾಕಿದೆ.
ಪ್ರೇಕ್ಷಕರೆಲ್ಲಾ ಇಂದು ನಡೆಯುವ ಬಿಗ್‌ಬಾಸ್ ಶೋಗಾಗಿ ಎದುರು ನೋಡುತ್ತಿದ್ದಾರೆ. ಕನ್ನಡದ ಬಿಗ್‌ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಬಂದು ತಲುಪಿದೆ. ಕಿಚ್ಚ ಸುದೀಪ್ ಅವರ ಕೊನೆ ಸೀಸನ್ನಲ್ಲಿ ಏನೇನು ಹೇಳಲಿದ್ದಾರೆ ಎನ್ನುವುದು ಜನರ ಮನ ಕದಡಿದೆ. ಗ್ರ್ಯಾಂಡ್ ಫಿನಾಲೆಗೆ ಭರ್ಜರಿಯಾಗಿ ರೆಡಿಯಾಗಿರುವ ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ಇದು ಸುದೀಪ್ ಅವರ ಬಿಗ್‌ಬಾಸ್ ನಿರೂಪಣೆಯ ಕೊನೆಯ ಸೀಸನ್ ಆಗಿದೆ. ಈ ಹೊತ್ತಿನಲ್ಲಿ ಮನೆಯಲ್ಲಿರುವ 6 ಸ್ಪರ್ಧಿಗಳ ಪೈಕಿ ಒಬ್ಬರಿಗೆ ಅತಿ ಹೆಚ್ಚು ಮತಗಳು ಬಂದಿವೆ ಎಂದು ಈಗಾಗಲೇ ಹೇಳಲಾಗುತ್ತಿದೆ. ಆದರೆ ನಿಖರವಾಗಿ ಯಾರಿಗೆ ಎಂದು ತಿಳಿದಿಲ್ಲ. ಸೀಸನ್ 11 ರ ವಿನ್ನರ್ ಯಾರೆಂಬುದು ಸಾಕಷ್ಟು ಚರ್ಚೆಗಳು ಪ್ರೇಕ್ಷಕರಲ್ಲಿ ನಡೆಯುತ್ತಿವೆ.
ಜಗಮಗಿಸೋ ವೇದಿಕೆಯಲ್ಲಿ ಬಾದಷಾ ಕಿಚ್ಚ ಸುದೀಪ್ ಸಖತ್ ಆಗಿಯೇ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡ ಮ್ಯಾಕ್ಸ್ ಸಿನಿಮಾದ ಸಾಂಗ್ಗೆ ಕಿಚ್ಚ ಸೂಪರ್ ಆಗಿಯೇ ಸ್ಟೆಪ್ಸ್ ಹಾಕಿದ್ದಾರೆ. ಅಷ್ಟು ಸುಲಭವಾಗಿ ಎಲ್ಲಿಯು ಸುದೀಪ್ ಅವರು ವೇದಿಕೆ ಮೇಲೆ ಡ್ಯಾನ್ಸ್ ಮಾಡಲ್ಲ. ಆದರೆ ಬಿಗ್ಬಾಸ್ನ ಕಲರ್ ಫುಲ್ ಆಗಿ ಅದ್ಧೂರಿಯಾಗಿರುವ ಸ್ಟೇಜ್ ಮೇಲೆ ಸುದೀಪ್ ಒಂದೆರಡು ಹೆಜ್ಜೆಗಳನ್ನು ಹಾಕಿ ರಂಜಿಸಿದ್ದಾರೆ.
17ನೇ ವಾರದ ಬಿಗ್‌ಬಾಸ್ ಜರ್ನಿ ಇನ್ನೇನು ಮುಕ್ತಾಯ ಆಗುತ್ತಿದೆ. ಮೊದಲು 17 ಸ್ಪರ್ಧಿಗಳು ಮನೆಗೆ ನೇರವಾಗಿ ಎಂಟ್ರಿಕೊಟ್ಟಿದ್ದರು. ಇದಾದ ಮೇಲೆ ಹನಮಂತು, ರಜತ್ ಸೇರಿ ಮೂವರು ವೈಲ್ಡ್ ಕಾರ್ಡ್ ಮೂಲಕ ಮನೆಯೊಳಕ್ಕೆ ಬಂದಿದ್ದರು. ಈ ರೀತಿ ವೈಲ್ಡ್ ಕಾರ್ಡ್ನಲ್ಲಿ ಎಂಟ್ರಿ ಕೊಟ್ಟವರ ಪೈಕಿ ಇಬ್ಬರು ಈಗ ಫಿನಾಲೆ ಹಂತದಲ್ಲಿರುವುದು ವಿಶೇಷವಾಗಿದೆ. ಒಟ್ಟು 6 ಜನರಲ್ಲಿ ಒಬ್ಬರು ಮಾತ್ರ ಫೈನಲ್ನಲ್ಲಿ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ.
Vasu
25/01/2025 at 7:45 PM
Wow