ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಟಾಸ್ಕ್ ನೀಡಿದ್ದರು. ಗೊಬ್ಬರದ ಅಬ್ಬರ ಎಂಬ ಹೆಸರಿನಲ್ಲಿ ಸ್ಪರ್ಧೆ ಎರ್ಪಡಿಸಿದ್ದರು. ಆದರೆ ಈ ಟಾಸ್ಕ್ ವೇಳೆ ಮನೆಯ ಕ್ಯಾಪ್ಟನ್ ನಿರ್ಣಯ ಸ್ಪರ್ಧಿಗಳಿಗೆ ಬೇಸರ ತರಿಸಿದೆ. ಈ ಕುರಿತಾಗಿ ಇತ್ತಂಡಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಹಂಸಾ ಮನೆಯ ಕ್ಯಾಪ್ಟನ್ ಆಗಿದ್ದು, ಟಾಸ್ಕ್ ವೇಳೆ ನಿಯಮ ಉಲ್ಲಂಘನೆ ಬಗ್ಗೆ ಕ್ಯಾಪ್ಟನ್ ಸರಿಯಾದ ನಿರ್ಣಯ ಕೈಗೊಂಡಿರಲಿಲ್ಲ. ಟಾಸ್ಕ್ ವೇಳೆ ಚೆಂಡನ್ನು ತಳ್ಳಿಕೊಂಡು ಹೋಗುವ ಬದಲು ಕೈಯಲ್ಲಿ ಹಿಡಿದಿದ್ದಾರೆ. ಇನ್ನು ಕೆಲವರು ಜಂಪ್ ಮಾಡುತ್ತಾ ಟಾಸ್ಕ್ ಪೂರ್ತಿ ಮಾಡಿದ್ದಾರೆ. ಆದರೆ ಹಂಸಾ ಈ ಕುರಿತಾಗಿ ಸರಿಯಾಗಿ ಟಾಸ್ಕ್ ನಡೆಸಿಕೊಟ್ಟಿಲ್ಲ ಎಂದು ನರಕ ಮತ್ತು ಸ್ವರ್ಗದ ನಿವಾಸಿಗಳು ಪಟ್ಟಾಂಗ ಹಾಕುತ್ತಿದ್ದಾರೆ. ಉಸ್ತುವಾರಿ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ.
ನರಕದಲ್ಲಿ ಶಿಶಿರ್, ಜಗದೀಶ್, ಮಾನಸಾ ಉಸ್ತುವಾರಿ ಬಗ್ಗೆ ಮಾತನಾಡಿದರೆ, ಅತ್ತ ಸ್ವರ್ಗದಲ್ಲಿ ಉಗ್ರಂ ಮಂಜು, ತಿವಿಕ್ರಮ ಈ ಇದೇ ವಿಚಾರವಾಗಿ ಚರ್ಚಿಸಿದ್ದಾರೆ. ಆದರೀಗ ಹಂಸಾರವರು ಕ್ಯಾಪ್ಟನ್ಸಿ ವಿಚಾರವಾಗಿ ಮನೆಯ ಉಸ್ತುವಾರಿಯನ್ನು ಕಳೆದುಕೊಳ್ಳುತ್ತಾರಾ ಎಂಬ ಕುತೂಹಲತೆಯು ಅಭಿಮಾನಿಗಳನ್ನು ಕಾಡುತ್ತಿದೆ.
ಬಿಗ್‌ಬಾಸ್ ರಿಯಾಲಿಟಿ ಶೋ ಸ್ಪರ್ಧಿಗಳ ಬದುಕಿಗೆ ಹೊಸ ಸ್ಪರ್ಶ ಹಾಗೂ ಭರವಸೆಗಳನ್ನು ನೀಡುತ್ತದೆ. ಬರೀ ನೆಗೆಟಿವ್ ಇಟ್ಟುಕೊಂಡೇ ಬಿಗ್‌ಬಾಸ್ ಸೀಸನ್ 10ಕ್ಕೆ ಹೋಗಿದ್ದ ಡ್ರೋನ್ ಪ್ರತಾಪ್, ವ್ಯಕ್ತಿತ್ವದ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ರಿಯಾಲಿಟಿ ಶೋನಿಂದ ಬಂದ ಮೇಲೆ ಅವರ ಜೀವನದಲ್ಲಿ ಒಂದೊಂದೇ ಬೆಳವಣಿಗೆ ಆಗುತ್ತಿವೆ. ಇದೀಗ ಡ್ರೋನ್ ಪ್ರತಾಪ್ ಹೀರೋ ಆಗಿ ಸಿನಿಮಾವೊಂದರಲ್ಲಿ ಅಭಿನಯ ಮಾಡುತ್ತಿದ್ದಾರೆ.
ಡ್ರೋನ್ ಪ್ರತಾಪ್ ಅವರು ನಾಯಕ ನಟನಾಗಿ ಇನ್ನು ಹೆಸರು ಇಡದ ಕನ್ನಡದ ಸಿನಿಮಾವೊಂದರಲ್ಲಿ ಅಭಿನಯ ಮಾಡುತ್ತಿದ್ದಾರೆ. ಸ್ವತಹ ಪ್ರತಾಪ್ ಈ ಬಗ್ಗೆ ತಮ್ಮ ಇನ್ಸ್ಟಾ ಅಕೌಂಟ್ನಲ್ಲಿ ವಿಡಿಯೋವೊಂದನ್ನ ಶೇರ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಪ್ರತಾಪ್ ಹೊಸದೊಂದು ಪ್ರಾಜೆಕ್ಟ್ನಲ್ಲಿ ಬ್ಯುಸಿ ಆಗುತ್ತಿದ್ದಾರೆ. ಇದರಿಂದ ಅವರ ಬದುಕಿನಲ್ಲಿ ಮತ್ತಷ್ಟು ಅವಕಾಶಗಳು ಹುಡುಕಿಕೊಂಡು ಬರುವ ಸಾಧ್ಯತೆ ಇದೆ.
ಸದ್ಯ ಡ್ರೋನ್ ಪ್ರತಾಪ್ ಶೇರ್ ಮಾಡಿರುವ ವಿಡಿಯೋದಲ್ಲಿ ಕಾರಿನಿಂದ ಇಳಿಯುತ್ತಿದ್ದಂತೆ ನೇರ ಮಂಡ್ಯದ ಕೆ.ಆರ್ ಪೇಟೆಯ ಹುನುಮಾನ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ದೇವರ ದರ್ಶನ ಪಡೆದು ಒಳ್ಳೆಯದಾಗಲಿ ಎಂದು ದೇವರ ಬಳಿ ಕೇಳಿಕೊಂಡಿದ್ದಾರೆ. ಇದೇ ವೇಳೆ ನಾನು ಹೊಸ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದೇನೆ. ನನ್ನ ಬ್ಯುಸಿನೆಸ್ ಜೊತೆಗೆ ಸಿನಿಮಾ ರಂಗಕ್ಕೂ ಕಾಲಿಡುತ್ತಿದ್ದೇನೆ. ಇದಕ್ಕೆ ನಿಮ್ಮೆಲ್ಲ ಆಶೀರ್ವಾದ ಬೇಕು ಎಂದು ವೇದಿಕೆ ಮೇಲೆ ಹೇಳಿದ್ದಾರೆ.
ಮನರಂಜನೆಯ ಹಬ್ ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪಾಯಿಂಟ್ಸ್ಗಾಗಿ ಕಿತ್ತಾಟ ಶುರುವಾಗಿದೆ. ಭವ್ಯಗೌಡ ಹಾಗೂ ಶೋಭಾ ಶೆಟ್ಟಿ ನಾಯಕತ್ವದಲ್ಲಿ ಎರಡು ತಂಡಗಳನ್ನು ಬಿಗ್‌ಬಾಸ್ ಮಾಡಿದ್ದಾರೆ.
ಎರಡು ತಂಡಗಳಿಗೆ ಪಾಯಿಂಟ್ಸ್ ಗಳಿಸಲು ಬಿಗ್‌ಬಾಸ್ ಟಾಸ್ಕ್ಗಳನ್ನು ನೀಡುತ್ತಿದ್ದಾರೆ. ನಿನ್ನೆ ನಡೆದ ಟಾಸ್ಕ್ನಲ್ಲಿ ಭವ್ಯಗೌಡ ನೇತೃತ್ವದ ತಂಡ ಹಣ ಗಳಿಸಿದೆ. ಇದೀಗ ಎದುರಾಳಿ ಸ್ಪರ್ಧಿಗಳ ಹಣವನ್ನು ಕಿತ್ತುಕೊಳ್ಳುವುದು ಚಾಲ್ತಿಯಲ್ಲಿದೆ. ಇದೇ ವಿಚಾರಕ್ಕೆ ಐಶ್ವರ್ಯ ಹಾಗೂ ಚೈತ್ರಾ ನಡುವೆ ಗಲಾಟೆಯಾಗಿದೆ.
ಕಲರ್ಸ್ ಕನ್ನಡ ಶೇರ್ ಮಾಡಿರುವ ವಿಡಿಯೋದಲ್ಲಿ ಚೈತ್ರಾ ಅತ್ಯಂತ ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದಿದ್ದಾರೆ. ಅದಕ್ಕೆ ಕೋಪಿಸಿಕೊಂಡ ಐಶ್ವರ್ಯ ನೀವು ಲೋ ಲೇವಲ್ಗೆ ಇಳಿದಿದ್ದಾರೆ ಎಂದೆಲ್ಲ ಮಾತನಾಡಬೇಡಿ ಎನ್ನುತ್ತಾರೆ. ಅದಕ್ಕೆ ಚೈತ್ರಾ ನಾನು ಗುಂಪುಗಾರಿಕೆ ಮಾಡಿಕೊಂಡು ಕುತಂತ್ರವನ್ನು ನಾನು ಮಾಡಲ್ಲ. ಇಬ್ಬರ ಮಧ್ಯೆ ವಾಗ್ಯುದ್ಧ ನಡೆದಿದೆ. ಈ ವೇಳೆ ಚೈತ್ರಾ ಈಗ ಗೊತ್ತಾಯ್ತಲ್ವಾ ಡ್ರಾಮಾ ಕ್ವೀನ್ ಯಾರು ಎನ್ನುತ್ತಾರೆ.
ಅದಕ್ಕೆ ಕೋಪಿಸಿಕೊಂಡ ಐಶ್ವರ್ಯ ಹೌದು, ನಾನು ಡ್ರಾಮಾ ಕ್ವೀನ್ ಎಂದು ಜೋರಾಗಿ ಕಿರುಚುತ್ತಾರೆ. ಅದಕ್ಕೆ ಚೈತ್ರಾ, ನಾನು ಇನ್ಮೇಲೆ ಆಟ ಶುರು ಮಾಡ್ತೀನಿ. ಗುಂಪು ಕಟ್ಟಿಕೊಂಡು ಪ್ಲಾನ್ ಮಾಡಿಕೊಂಡು ಬರಲ್ಲ. ಸಿಂಗಲ್ ಸಿಂಹ ರೀತಿ ಹೊಡೆಯುತ್ತೇನೆ ಎಂದು ಡೈಲಾಗ್ ಹೊಡೆದಿದ್ದಾರೆ. ಶೋಭಾ ಶೆಟ್ಟಿ ನಾಯಕತ್ವದ ಕೆಂಪು ಟೀಮ್‌ನಲ್ಲಿ ಹನುಮಂತ, ಧನರಾಜ್ ಆಚಾರ್, ಗೌತಮಿ ಜಾಧವ್, ಉಗ್ರಂ ಮಂಜು, ಚೈತ್ರಾ ಕುಂದಾಪುರ, ರಜತ್ ಕಿಶನ್ ಇದ್ದರೆ ಭವ್ಯಾ ಗೌಡ ಅವರ ನೀಲಿ ಟೀಮ್‌ನಲ್ಲಿ ಗೋಲ್ಡ್ ಸುರೇಶ್, ಧರ್ಮ ಕೀರ್ತಿರಾಜ್, ಶಿಶಿರ್ ಶಾಸ್ತ್ರಿ, ತ್ರಿವಿಕ್ರಮ್, ಮೋಕ್ಷಿತಾ ಪೈ ಮತ್ತು ಐಶ್ವರ್ಯಾ ಇದ್ದಾರೆ. ಈ ಎರಡು ತಂಡಗಳ ಸದಸ್ಯರ ಬಳಿ ಪಾಯಿಂಟ್ಸ್ ಇದ್ದು, ಅದನ್ನು ಕಿತ್ತುಕೊಳ್ಳುವ ಆಟ ಈಗ ಚಾಲ್ತಿಯಲ್ಲಿದೆ.
ಬಿಗ್‌ಬಾಸ್ ಮನೆಯಲ್ಲಿನ ಸ್ಪರ್ಧಿಗಳ ನಡುವಿನ ಫೈಟ್ ಇನ್ನೊಂದು ಹಂತಕ್ಕೆ ತಲುಪಿದೆ. ವೈಲ್ಡ್ಕಾರ್ಡ್ ಮೂಲಕ ಎಂಟ್ರಿ ನೀಡಿರುವ ರಜತ್ ಮೇಲೆ ಬೇಸರಗೊಂಡಿರುವ ಗೋಲ್ಡ್ ಸುರೇಶ್, ತಾವು ಆಟ ಆಡಲ್ಲ. ಬಾಗಿಲು ತೆಗಿಯಿರಿ ಎಂದು ಬಿಗ್‌ಬಾಸ್ ಬಳಿ ಮನವಿ ಮಾಡಿಕೊಂಡಿದ್ದಾರೆ.
ಆಗಿದ್ದೇನು..?
ಇಂದು ರಾತ್ರಿ 9.30ಕ್ಕೆ ಪ್ರಸಾರವಾಗುವ ಎಪಿಸೋಡ್ಗೆ ಸಂಬಂಧಿಸಿದ ಪ್ರೊಮೋವನ್ನು ಕಲರ್ಸ್ ಕನ್ನಡ ಶೇರ್ ಮಾಡಿಕೊಂಡಿದೆ. ಅದರಲ್ಲಿ ಬಿಗ್‌ಬಾಸ್ ಟಾಸ್ಕ್ ಒಂದನ್ನು ನೀಡಿದ್ದಾರೆ. ಕೊಳವೆ ಮೂಲಕ ಬರುವ ಚೆಂಡನ್ನು ಎತ್ತಿಕೊಂಡು ತಮ್ಮ ತಂಡಕ್ಕೆ ಇರುವ ಮೀಸಲಿರುವ ಚೌಕಟ್ಟಿನಲ್ಲಿ ಇಡಬೇಕು ಎಂದು ಬಿಗ್‌ಬಾಸ್ ಆಟದ ನಿಯಮದಲ್ಲಿತ್ತು.
ಅಂತೆಯೇ ಆಟ ಆರಂಭವಾಗಿದೆ. ಈ ವೇಳೆ ಗೋಲ್ಡ್ ಸುರೇಶ್ ಜೊತೆ ಉಗ್ರಂ ಮಂಜು ಮಾತುಕತೆ ನಡೆಸುತ್ತಿರುತ್ತಾರೆ. ಇಬ್ಬರ ನಡುವಿನ ವಾಗ್ಯುದ್ಧಕ್ಕೆ ರಜತ್ ಎಂಟ್ರಿಯಾಗಿ ಕೆಲವು ಪದಗಳನ್ನು ಗೋಲ್ಡ್ ಸುರೇಶ್ಗೆ ಬಳಸಿದ್ದಾರೆ. ತಮ್ಮ ಮೇಲೆ ಬಳಕೆ ಆಗಿರುವ ಪದಗಳು ಆಕ್ಷೇಪಾರ್ಹವಾಗಿವೆ. ನನಗೆ ಬೇಸರ ಆಗಿದೆ. ಬಿಗ್‌ಬಾಸ್ ಅವರು ನನಗೆ ‘ಮಗನೆ, ಗಿಗನೆ’ ಎಂದೆಲ್ಲ ಹೇಳ್ತಾರೆ. ಇವನು ನನ್ನ ಅಪ್ಪ ಅಲ್ಲ. ಬಿಗ್‌ಬಾಸ್ ನಾನು ಆಡಲ್ಲ. ಬಿಗ್‌ಬಾಸ್ ಬಾಗಿಲು ಓಪನ್ ಮಾಡಿ ಎಂದು ಡೋರ್ ತಟ್ಟಿದ್ದಾರೆ. ಪ್ರೊಮೋ ಬಿಡುಗಡೆ ಬೆನ್ನಲ್ಲೇ ವೀಕ್ಷಕರು ಎಕ್ಸೈಟ್ ಆಗಿದ್ದು, ಇವತ್ತಿನ ಎಪಿಸೋಡ್ಗಾಗಿ ಕಾಯುತ್ತಿದ್ದಾರೆ.