ಪುತ್ತೂರು: ಸ್ನಾನದ ಕೊಠಡಿಯಲ್ಲಿ ಸ್ನಾನ ಮಾಡುತ್ತಿದ್ದ ಅಪ್ರಾಪ್ತ ಬಾಲಕಿ ಸ್ನಾನ ಮಾಡುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ಯುವಕನ ವಿರುದ್ದ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಸುಳ್ಯ ಕಲ್ಮಡ್ಕ ಗ್ರಾಮದ ನಿವಾಸಿ ಶ್ಯಾಮ್ ಎಂದು ಗುರುತಿಸಲಾಗಿದ್ದು, ಈತ ಸೆಪ್ಟೆಂಬರ್ 26 ರ ಶನಿವಾರ ರಾತ್ರಿ ಸುಮಾರು 10.10 ಗಂಟೆಗೆ ಅಪ್ರಾಪ್ತ ವಯಸ್ಸಿನ ಬಾಲಕಿ ಅವರ ಮನೆಯ ಸ್ನಾನದ ಕೊಠಡಿಯಲ್ಲಿರುವ ವೇಳೆ ಸ್ನಾನದ ಕೊಠಡಿಯ ಹಿಂಬದಿಗೆ ಬಂದು ಬಾಲಕಿಯು ಸ್ನಾನ ಮಾಡುತ್ತಿರುವ ದೃಶ್ಯವನ್ನು ಆತನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಈ ವೇಳೆ ಬಾಲಕಿಯ ತಾಯಿ ಈ ಘಟನೆ ನೋಡಿದ್ದು ಕೂಡಲೇ ಆರೋಪಿಯ ಮೊಬೈಲ್ ಅನ್ನು ಎಳೆಯಲು ಪ್ರಯತ್ನಿದ್ದಾರೆ. ಆದರೆ ಈ ವೇಳೆ ಆರೋಪಿಯು ಮೊಬೈಲ್ ಎಳೆದುಕೊಂಡು ಪರಾರಿಯಾಗಿದ್ದಾನೆ.
ಅಲ್ಲದೆ ಘಟನೆಯ ಬಗ್ಗೆ ಬಾಲಕಿಯ ತಾಯಿ ಆರೋಪಿಯ ತಂದೆಯ ಬಳಿ ಹೇಳಿದ್ದಾರೆ ಎಂದು ದ್ವೇಷದಿಂದ ಆರೋಪಿ ಬಾಲಕಿಯ ತಂದೆಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ ಎನ್ನಲಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.