Friday, July 1, 2022

ಬಂಟ್ವಾಳ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ಗೆ ಪೆಟ್ರೋಲ್ ಹಾಕಿ ಸುಟ್ಟ ಕಿಡಿಗೇಡಿಗಳು

ಬಂಟ್ವಾಳ: ದಾರಿ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಯಾರೋ ಕಿಡಿಗೇಡಿಗಳು ಪೆಟ್ರೋಲ್ ಹಾಕಿ ಸುಟ್ಟ ಘಟನೆ ನಿನ್ನೆ ಸಜೀಪಮುನ್ನೂರಿನ ಮಿತ್ತಕಟ್ಟದಲ್ಲಿ ನಡೆದಿದೆ.


ಮಿತ್ತಕಟ್ಟ ನಿವಾಸಿ ಗೌತಮ್ ಅವರಿಗೆ ಸೇರಿದ ವಾಹನ ಇದಾಗಿದ್ದು ಅವರು ಬುಧವಾರ ರಾತ್ರಿ ತಮ್ಮ ಮನೆಯ ಸಮೀಪ ರಸ್ತೆ ಬದಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಮನೆಗೆ ತೆರಳಿದ್ದರು.

ಇಂದು ಬೆಳಗ್ಗೆ ಹಾಲಿನ ಡೈರಿಗೆ ಹಾಲು ಹಾಕುವುದಕ್ಕೆ ವಾಹನದ ಬಳಿಗೆ ಬಂದಾಗ ದ್ವಿಚಕ್ರ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದ್ದು 20000 ರೂ ನಷ್ಟ ಸಂಭವಿಸಿದೆ.

ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಬೆಳ್ತಂಗಡಿಯಲ್ಲಿ ನಾರಾಯಣ ಗುರು ಪಠ್ಯ ಸೇರ್ಪಡೆಗಾಗಿ ಜು.4 ರಂದು ಪ್ರತಿಭಟನೆ

ಬೆಳ್ತಂಗಡಿ: 10 ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯ ಸೇರ್ಪಡೆ ಮಾಡದಿರುವುದರ ವಿರುದ್ಧ ಪ್ರತಿಭಟನೆ ನಡೆಸುವ ಹಿನ್ನೆಲೆ ಇಂದು ಬೆಳ್ತಂಗಡಿಯ ಗುರು ನಾರಾಯಣ ಸಭಾ ಭವನದಲ್ಲಿ...

ಸುಳ್ಯ: ಭೂಕಂಪನ ಪೀಡಿತ ಗ್ರಾಮಕ್ಕೆ ಸಚಿವ ಅಂಗಾರ ಭೇಟಿ

ಸುಳ್ಯ: ಇತ್ತೀಚೆಗೆ ಕೊಡಗು ಜಿಲ್ಲೆಯ ಚೆಂಬುವಿನಲ್ಲಿ ಉಂಟಾದ ಭೂಕಂಪನದಿಂದಾಗಿ ಸುಳ್ಯ ತಾಲೂಕಿನ ಹಲವೆಡೆ ಭೂಮಿ ಕಂಪಿಸಿದ್ದು ಇದರ ಪರಿಣಾಮವಾಗಿ ತಾಲೂಕಿನ ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿ ಹಾನಿಯಾದ ಪ್ರದೇಶಗಳಲ್ಲಿನ ಮನೆಗಳಿಗೆ ಸಚಿವರಾದ ಎಸ್. ಅಂಗಾರರವರು...

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಸರ್ಪಸಂಸ್ಕಾರ ಸೇವೆಗೆ ರಾಜ್ಯಪಾಲರಿಂದ ಸಂಕಲ್ಪ..!

ಕಡಬ : ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ದ.ಕ ಜಿಲ್ಲೆಯ ಕಡಬ ತಾಲೂಕಿನ ಇತಿಹಾಸ ಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ಧಾರೆ.ಕ್ಷೇತ್ರದಲ್ಲಿ ಶ್ರೀ ದೇವರ ದರುಶನ ಪಡೆದು ದೇವಸ್ಥಾನದಲ್ಲಿ...