Home Uncategorized ಕಮರಿದ ಕ್ಷೌರಿಕನ ಬದುಕು: ಸುಂದರ ಬದುಕಿನ ಮೇಲೆ ವಿಧಿಯ ವಕ್ರ ದೃಷ್ಟಿ..!!

ಕಮರಿದ ಕ್ಷೌರಿಕನ ಬದುಕು: ಸುಂದರ ಬದುಕಿನ ಮೇಲೆ ವಿಧಿಯ ವಕ್ರ ದೃಷ್ಟಿ..!!

ಕಮರಿದ ಕ್ಷೌರಿಕನ ಬದುಕು: ಸುಂದರ ಬದುಕಿನ ಮೇಲೆ ವಿಧಿಯ ವಕ್ರ ದೃಷ್ಟಿ..!

-ಪ್ರಮೋದ್ ಸುವರ್ಣ ಕಟಪಾಡಿ

ಉಡುಪಿ: ಆತ ಸುಂದರ ಬದುಕಿನ ಕನಸು ಕಂಡಾತ. ಆದರೆ ವಿಧಿ ಆತನ ಬದುಕಿನಲ್ಲಿ ಆಟವಾಡಿಬಿಟ್ಟಿತು. ಕನಸು ಕಮರಿ ಹೋಯಿತು. ಕ್ಷೌರಿಕ ವೃತ್ತಿ ನಡೆಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದವರು ಇಂದು ತಮ್ಮ ಜೀವನವನ್ನು ಹಾಸಿಗೆಯಲ್ಲಿ ಕಳೆಯುತ್ತಿದ್ದಾರೆ. ಸಮಾಜದ ಮಾನವೀಯ ಜನರ ನೆರವಿಗಾಗಿ ಎದುರು ನೋಡುತ್ತಿದ್ದಾರೆ.

ಹಾಸಿಗೆಯಲ್ಲಿ ದಾರುಣ ಸ್ಥಿತಿಯಲ್ಲಿ ಮಲಗಿರುವ ಇವರ ಹೆಸರು ಗೋಪಾಲ್‌ ಅಮೀನ್‌. ವಯಸ್ಸು 58. ಉಡುಪಿ ಜಿಲ್ಲೆಯ ಕೊಡವೂರಿನ ಹಾಳೆಕಟ್ಟೆ ನಿವಾಸಿ ದಿ.ಸೀನ ಸುವರ್ಣ ಮತ್ತು ಬೇಬಿ ಅಮೀನ್ ಮಗ. ಒಂದು ಕಾಲದಲ್ಲಿ ತಾಯಿ, ಹೆಂಡತಿ ಶಕುಂತಳಾ ಮತ್ತು ತನ್ನ ಇಬ್ಬರು ಹೆಣ್ಣುಮಕ್ಕಳ ಜೊತೆಗಿನ ಸುಂದರ ಕುಟುಂಬ ಇವರದಾಗಿತ್ತು.

 

ತಮ್ಮ ಕುಲಕಸುಬು ಕ್ಷೌರಿಕ ವೃತ್ತಿಯನ್ನು ನಡೆಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಆದ್ರೆ ಅದೊಂದು ದಿನ ಗೋಪಾಲ್‌ ಅಮೀನ್‌ರ ಕ್ಷೌರಿಕ ಅಂಗಡಿಯ ಮುಂದೆ ರಸ್ತೆ ಅಗಲೀಕರಣ ಮಾಡಬೇಕು ಎಂದು ಹೇಳಿ ಜಿಲ್ಲಾಡಳಿತ ಅಂಗಡಿಯನ್ನು ಕೆಡವಿ ಬಿಟ್ಟಿತು.

ಆದರೆ ಗೋಪಾಲ ಅಮೀನ್‌ ಎದೆಗೊಂದಲಿಲ್ಲ. ಬದುಕು ಸಾಗಿಸೋಕೆ ಇನ್ನೊಂದು ದಾರಿ ಹುಡುಕಿಕೊಂಡರು. ರಿಕ್ಷಾ ಚಾಲನೆ ಮಾಡಿ ದುಡಿಯಾರಂಭಿಸಿದರು. ಆದ್ರೆ ಈ ಕುಟುಂಬಕ್ಕೆ ಯಾರ ವಕ್ರ ದೃಷ್ಟಿ ಬಿತ್ತೋ ಗೊತ್ತಿಲ್ಲ. ಅದೊಂದು ದಿನ ಬಾಡಿಗೆಗೆಂದು ತೆರಳಿದ ಗೋಪಾಲ್‌ ಅಮೀನ್‌ರ ರಿಕ್ಷಾ ಅಪಘಾತಕ್ಕೀಡಾಯಿತು. ಗಂಭೀರವಾಗಿ ಗಾಯಗೊಂಡ ಅವರು ತಮ್ಮ ಒಂದು ಕಾಲನ್ನು ಕಳೆದುಕೊಂಡರು.

ಮನೆಯ ಆಧಾರ ಸ್ತಂಭವಾಗಿದ್ದ ಗೋಪಾಲ ಅಮೀನ್ ಹಾಸಿಗೆ ಹಿಡಿದರು. ಕುಟುಂಬಕ್ಕೆ ದಿಕ್ಕೆ ತೋಚಲಿಲ್ಲ. ಚಿಕಿತ್ಸೆಗಾಗಿ ಅವರ ಕುಟುಂಬಸ್ಥರು ಸಾಲ ಮಾಡಿ, ಅಪಾರ ಖರ್ಚು ಮಾಡಿದರು. ಗೋಪಾಲ ಅಮೀನ್‌ರು ಸ್ವಲ್ಪಸ್ವಲ್ಪವೇ ಚೇತರಿಸಿಕೊಳ್ಳುತ್ತಿದ್ದರು. ಆದ್ರೆ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿ ಇನ್ನೊಂದು ಕಾಲನ್ನು ತುಂಡರಿಸಲಾಯಿತು.

ಗೋಪಾಲ್‌ ಅಮೀನ್‌ ಅವರು ಸುಮಾರು 12 ವರ್ಷಗಳಿಂದ ಮಲಗಿದ ಸ್ಥಿತಿಯಲ್ಲಿದ್ದಾರೆ. ಮದುವೆ ವಯಸ್ಸಿನ ಹೆಣ್ಣು ಮಗಳಿದ್ದಾರೆ. ಆದರೆ ಕುಟುಂಬದ ಹೊಣೆ ಹೊರಬೇಕಾದ ಮನೆಯ ಯಜಮಾನ ಈ ಸ್ಥಿತಿಯಲ್ಲಿದ್ದು ಕುಟುಂಬಕ್ಕೆ ದಿಕ್ಕೆ ತೋಚದಂತಾಗಿದೆ.

ಸುಂದರ ಬದುಕಿನ ಕನಸು ಕಂಡು ತಾಯಿ, ಹೆಂಡತಿ ಮತ್ತು ಎರಡು ಹೆಣ್ಣು ಮಕ್ಕಳೊಂದಿಗೆ ಜೇನಿನ ಗೂಡಿನಂತೆ ಬದುಕುತ್ತಿದ್ದ ಗೋಪಾಲ ಅಮೀನರ ಬದುಕು ಅಕ್ಷರಶಃ ನಲುಗಿ ಹೋಗಿದೆ. ದಾನಿಗಳು, ಸಮಾಜ ಬಾಂಧವರಿಂದ ಕುಟುಂಬ ಸಹಾಯ ಹಸ್ತವನ್ನು ನಿರೀಕ್ಷಿಸುತ್ತದೆ.

ಇವರಿಗೆ ನಿಮ್ಮ ಕೈಯಲ್ಲಾದ ಸಹಾಯವನ್ನು ನೀಡಬಹುದು.

ಶ್ವೇತಾ D/o ಗೋಪಾಲ ಅಮಿನ್
A/C 60285751873
IFSE Code :MAHB0001263
ಉಡುಪಿ ಬ್ರಾಂಚ್‌
ಬ್ಯಾಂಕ್ ಆಫ್ ಮಹಾರಾಷ್ಟ್ರ
ಫೋನ್‌ಪೇ ಸಂಖ್ಯೆ: ಶ್ವೇತಾ- 7353210468

 

ವಿಡಿಯೋಗಾಗಿ

- Advertisment -

RECENT NEWS

ಮಕ್ಕಳಿಗೆ ಪಾಠ ಹೇಳಬೇಕಾದ ಶಿಕ್ಷಕರಿಂದ ಜಂಗೀ ಕುಸ್ತಿ: ಶಾಲೆಯ ಮಾನ ಹರಾಜು..

ಮಕ್ಕಳಿಗೆ ಪಾಠ ಹೇಳಬೇಕಾದ ಶಿಕ್ಷಕರಿಂದ ಜಂಗೀ ಕುಸ್ತಿ: ಶಾಲೆಯ ಮಾನ ಹರಾಜು.. ಚಿಕ್ಕಮಗಳೂರು: ಜೂನ್ ಬಂತೂಂದ್ರೆ ಮಕ್ಕಳ ಕಲರವ ಕೇಳುತ್ತಿದ್ದ ಶಾಲೆಗಳೀಗ ಕೊರೊನಾ ಕಾರಣದಿಂದ ಮೌನವಾಗಿವೆ. ಆದರೆ, ಇಲ್ಲೊಂದು ಶಾಲೆಯಲ್ಲಿ ಮಕ್ಕಳ ಬದಲು ಶಿಕ್ಷಕರೇ ಹೊಡೆದಾಡಿಕೊಂಡು...

ಕರಾವಳಿಯಲ್ಲಿ ಬಾಕಿ ಉಳಿದಿದ್ದ ನೇಪಾಳ ಮೂಲದ ವಲಸೆ ಕಾರ್ಮಿಕರಿಗೆ ಬೆನ್ನುಲುಬಾಗಿ ನಿಂತ ದೀಪಕ್..

ಕರಾವಳಿಯಲ್ಲಿ ಬಾಕಿ ಉಳಿದಿದ್ದ ನೇಪಾಳ ಮೂಲದ ವಲಸೆ ಕಾರ್ಮಿಕರಿಗೆ ಬೆನ್ನುಲುಬಾಗಿ ನಿಂತ ದೀಪಕ್.. ಮಂಗಳೂರು: ಕೋವಿಡ್-19 ವ್ಯಾಪಿಸುತಿದ್ದಂತೆ ಉಂಟಾದ ಲಾಕ್ ಡೌನ್ ನಿಂದ ತವರಿಗೆ ಮರಳಲು ಆಗದೆ ಬಾಕಿಯಾದ ಸುಮಾರು 49 ಮಂದಿ ನೇಪಾಳ...

ತೆರಿಗೆ ವಂಚನೆ ವಿರುದ್ಧ ಮುಂದುವರಿದ ದಾಳಿ: 11 ಕೋಟಿ ಮೌಲ್ಯದ ಅಡಕೆ ಅಕ್ರಮ ದಾಸ್ತಾನು ಪತ್ತೆ, 1.10 ಕೋಟಿ ದಂಡ

ತೆರಿಗೆ ವಂಚನೆ ವಿರುದ್ಧ ಮುಂದುವರಿದ ದಾಳಿ: 11 ಕೋಟಿ ಮೌಲ್ಯದ ಅಡಕೆ ಅಕ್ರಮ ದಾಸ್ತಾನು ಪತ್ತೆ, 1.10 ಕೋಟಿ ದಂಡ ಶಿವಮೊಗ್ಗ/ಸಾಗರ:  ತೆರಿಗೆ ವಂಚನೆ ವಿರುದ್ಧದ ದಾಳಿ ಮುಂದುವರಿಸಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು,...

ರಾಜ್ಯದಲ್ಲಿ ಇನ್ನುಮುಂದೆ ‘ದಲಿತ’ ಪದದ ಬಳಕೆ ಮಾಡುವಂತಿಲ್ಲ: ಉಪಮುಖ್ಯಮಂತ್ರಿ ಕಾರಜೋಳ ಆದೇಶ..

ರಾಜ್ಯದಲ್ಲಿ ಇನ್ನುಮುಂದೆ 'ದಲಿತ' ಪದದ ಬಳಕೆ ಮಾಡುವಂತಿಲ್ಲ: ಉಪಮುಖ್ಯಮಂತ್ರಿ ಕಾರಜೋಳ ಆದೇಶ.. ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ದಲಿತ ಪದವನ್ನು ಬಳಕೆ ಮಾಡಬಾರದು ಎಂದು ಉಪ ಮುಖ್ಯಮಂತ್ರಿ ಕಾರಜೋಳ ಆದೇಶಿಸಿದ್ದಾರೆ. ಕೇಂದ್ರ ಗೃಹ ಸಚಿವಾಲಯ ಹಾಗೂ...