LATEST NEWS
ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾ*ವು !!
Published
2 weeks agoon
ಮಂಗಳೂರು/ಬೆಳಗಾವಿ: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮೃ*ತಪಟ್ಟ ಘಟನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ (ನ.19) ನಡೆದಿದ್ದು, ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಾ, ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಕಲ್ಪನಾ ರಾಠೋಡ ಮೃ*ತ ಬಾಣಂತಿ ಎಂದು ಗುರುತಿಸಲಾಗಿದೆ. ಬಿಮ್ಸ್ ಆಸ್ಪತ್ರೆ ಎದುರು ಮೃ*ತದೇಹವನ್ನಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
‘ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾ*ವನ್ನಪ್ಪಿದ್ದಾಳೆ. ಎರಡೆರಡು ಬಾರಿ ಸಿಸೇರಿಯನ್ ಮಾಡಲಾಗಿದ್ದು, ಆಪರೇಷನ್ ಸಂದರ್ಭದಲ್ಲಿ ಹಾಕುವ ಸಮವಸ್ತ್ರ ಧರಿಸಿರಲಿಲ್ಲ, ಅವಸರದಲ್ಲಿ ಸಿಸೇರಿಯನ್ ಮಾಡಿದ್ದಾರೆ’ ಎಂದು ಆರೋಪಿಸಲಾಗಿದೆ. ಬಾಣಂತಿ ಆರೋಗ್ಯದಲ್ಲಿ ಏರುಪೇರಾದಾಗ ಡಿಸ್ಟಾರ್ಜ್ ಮಾಡುವಂತೆ ಕುಟುಂಬಸ್ಥರು ಮನವಿ ಮಾಡಿದರೂ ಬೇರೆ ಆಸ್ಪತ್ರೆಗೆ ಕಳುಹಿಸುವುದಿಲ್ಲ ಎಂದು ವೈದ್ಯರು ಹೇಳಿದ್ದು, ತಕ್ಷಣವೇ ಅವ್ಉ ವಜಾ ಮಾಡುವಂತೆ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.
ನ್ಯಾಯ ಸಿಗುವುವರೆಗೂ ಮೃ*ತದೇಹ ತೆಗೆಯುವುದಿಲ್ಲವೆಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಬರುವಂತೆ ಮೃತ ಬಾಣಂತಿಯ ಕುಟುಂಬಸ್ಥರು ಒತ್ತಾಯಿಸುತ್ತಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಬಿಮ್ಸ್ ಮುಂಭಾಗದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
You may like
LATEST NEWS
ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ ಡೊನಾಲ್ಡ್ ಟ್ರಂಪ್ ಬಿಸಿನೆಸ್ ಪಾರ್ಟ್ನರ್
Published
4 minutes agoon
07/12/2024By
NEWS DESK2ಮಂಗಳೂರು: ಚಂಪಾಷಷ್ಠಿ ಹಿನ್ನೆಲೆಯಲ್ಲಿ ಶನಿವಾರ (ಡಿಸೆಂಬರ್ 07) ಕುಕ್ಕೆ ಸುಬ್ರಮಣ್ಯದಲ್ಲಿ ರಥೋತ್ಸವ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಮಣ್ಯಕ್ಕೆ ಅಮೆರಿಕಾದ ನಿಯೋಜಿತ ಡೊನಾಲ್ಡ್ ಟ್ರಂಪ್ ಅವರ ಬಿಸಿನೆಸ್ ಪಾರ್ಟ್ನರ್ ಶಶಿಭೂಷಣ್ ಭೇಟಿ ನೀಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರು. ಹೈದರಾಬಾದ್ ಮೂಲದ ಶಶಿಭೂಷಣ್ ಅವರು ಅಮೇರಿಕಾದಲ್ಲಿ ನೆಲೆಸಿದ್ದಾರೆ.
ಶಶಿಭೂಷಣ್ ಅಮೆರಿಕಾದಲ್ಲಿ 500 ಎಕರೆ ಜಾಗದಲ್ಲಿ 3000 ಕೋಟಿ ವೆಚ್ಚದಲ್ಲಿ ಶಂಕರಾಚಾರ್ಯರ ಆಧ್ಯಾತ್ಮಿಕ ಕೇಂದ್ರ ಮತ್ತು ದೇವಸ್ಥಾನ ಕಟ್ಟಿಸುತ್ತಿದ್ದಾರೆ. ಶಶಿಭೂಷಣ್ ಅವರು ಅಮೆರಿಕನ್ ಪೊಲಿಟಿಕಲ್ ಆಕ್ಷನ್ ಕಮಿಟಿಯ ‘ಎ’ ಪ್ಯಾಕ್ ಮುನ್ನೆಡಿಸಿದ್ದಾರೆ. ಟ್ರಂಪ್ ಗೆಲುವಿನಲ್ಲಿ ಎ ಪ್ಯಾಕ್ ಸಾಕಷ್ಟು ಶ್ರಮ ವಹಿಸಿದೆ.
ಸುಬ್ರಮಣ್ಯ ಸ್ವಾಮಿ ದರ್ಶನ ಬಳಿಕ ಮಾತನಾಡಿದ ಶಶಿಭೂಷಣ್, ಕುಕ್ಕೆ ಸುಬ್ರಹ್ಮಣ್ಯ ಅತ್ಯಂತ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಬಂದು ಪುಳಕಿತನಾಗಿದ್ದೇನೆ. ಸನಾತನ ಧರ್ಮ ಉಳಿಸಲು ಅಮೇರಿಕಾದಲ್ಲಿ 500 ಎಕರೆ ಜಾಗದಲ್ಲಿ ಸನಾತನ ಧಾರ್ಮಿಕ ಕೇಂದ್ರ ಕಟ್ಟಿಸುತ್ತಿದ್ದೇವೆ. ಪ್ರಧಾನಿ ಮೋದಿ ಅವರಿಂದ ಸನಾತನ ಧರ್ಮಕ್ಕೆ ಒಳ್ಳೆಯದಾಗಲಿದೆ.
ಚಂಪಾಷಷ್ಠಿ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗ್ಗೆ 6.57ಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಉಮಾಮಹೇಶ್ವರ ಸ್ವಾಮೀಯ ಬ್ರಹ್ಮರಥೋತ್ಸವ ನಡೆಯಿತು. ಶುಕ್ರವಾರ (ಡಿ.06) ರಾತ್ರಿ ಚಂಪಾಷಷ್ಠಿ ಹಿನ್ನಲೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಈ ವೇಳೆ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ತಂದು ಮೆರವಣಿಗೆ ಮಾಡಲಾಯಿತು. ಪಟಾಕಿ ಸಿಡಿಸುವುದನ್ನು ನೋಡಲು ಮದ್ಯರಾತ್ರಿ 2 ಗಂಟೆವರೆಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.
LATEST NEWS
90 ವರ್ಷಗಳ ಲಿವ್ಇನ್ ರಿಲೇಷನ್ಶಿಪ್ ; 102ರ ಅಜ್ಜಿಯೊಡನೆ 100ರ ಅಜ್ಜನ ಮದುವೆ
Published
22 minutes agoon
07/12/2024ಜೊತೆಯಾಗಿ ವ್ಯಾಸಂಗ ಮುಗಿಸಿ ಪರಸ್ಪರ ಪ್ರೀತಿಸಿ 90 ವರ್ಷಗಳ ಕಾಲ ಲಿವ್ಇನ್ ರಿಲೇಷನ್ಶಿಪ್ ನಲ್ಲಿದ್ದ ಜೋಡಿಯೊಂದು ಇದೀಗ ವಿವಾಹವಾಗುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. 100 ವರ್ಷದ ಅಜ್ಜನೊಂದಿಗೆ 102 ವಯಸ್ಸಿನ ಅಜ್ಜಿ ಸಪ್ತಪದಿ ತುಳಿಯುವ ಮುಖಾಂತರ ವಿಶ್ವದ ಅತ್ಯಂತ ಹಳೆಯ ನವವಿವಾಹಿತ ಜೋಡಿ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ.
ಈ ‘ಪ್ರೀತಿ’ ಎಂಬುದು ಬರೆಯಲು ಚಿಕ್ಕ ಪದವಾಗಿರಬಹುದು, ಆದರೆ ಆ ಪದವು ಎಲ್ಲರ ಜೀವನದಲ್ಲಿ ತುಂಬಾ ಮಹತ್ವವಾದ ಪಾತ್ರ ವಹಿಸುತ್ತದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಯಾರಿಗೆ ಈ ‘ಪ್ರೀತಿ’ ಬೇಡ ಹೇಳಿ? ಈ ಪ್ರೀತಿಯು ಉಳಿದಿರುವುದೇ ನಂಬಿಕೆ, ತಿಳುವಳಿಕೆ ಮತ್ತು ಕಾಳಜಿಯ ಮೇಲೆ ಎಂದು ಹೇಳಬಹುದು. ಪ್ರೀತಿ/ಪ್ರೇಮಿಯ ಬಗ್ಗೆ ಸ್ಪಷ್ಟವಾದ ಅರಿವಿದ್ದಾಗ ಆ ಪ್ರೀತಿ ಕೊನೆವರೆಗೂ ಉಳಿಯುತ್ತದೆ. ಹಾಗೆಯೇ ಇಲ್ಲಿಯೂ ಹೆರಯದಲ್ಲೇ ಪ್ರೀತಿಗೆ ಬಿದ್ದ ಪ್ರೇಮಿಗಳು ವೃದ್ಧಾಪ್ಯದಲ್ಲಿ ಮದುವೆಯಾಗುವ ಮುಖಾಂತರ ಪ್ರೇಮಕ್ಕೆ ಹೊಸ ತಿರುವು ನೀಡಿದ್ದಾರೆ.
ಬರ್ನಿ ಲಿಟ್‌ಮ್ಯಾನ್ ಮತ್ತು ಮಾರ್ಜೋರಿ ಫಿಟರ್‌ಮ್ಯಾನ್ ಜೊತೆ ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದಲ್ಲಿನ ತಮ್ಮ ನಿವಾಸದಲ್ಲಿ ವಿವಾಹವಾಗಿದ್ದಾರೆ. ಬರ್ನಿ, ಮಾಜಿ ಇಂಜಿನಿಯರ್ ಮತ್ತು ಮಾರ್ಜೋರಿ, ನಿವೃತ್ತ ಶಿಕ್ಷಕಿ. ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ(www.instagram.com/guinnessworldrecords)ಯಲ್ಲಿ ಇವರ ಮದುವೆಯ ಕುರಿತ ವಿಡಿಯೋ ಹಂಚಿಕೊಳ್ಳಲಾಗಿದ್ದು, ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 1.1 ಮಿಲಿಯನ್ ಅಂದರೆ 10 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 36,820 ನೆಟ್ಟಿಗರು ಲೈಕ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
BIG BOSS
BBK11: ಈ ವಾರ ಬಿಗ್ಬಾಸ್ ಮನೆಯಲ್ಲಿ ಕಾದಿದ್ಯಾ ಬಿಗ್ ಟ್ವಿಸ್ಟ್; ಎಲಿಮಿನೇಷನ್ ಇರೋದು ಡೌಟ್
Published
31 minutes agoon
07/12/2024By
NEWS DESK2ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಶುರುವಾಗಿ 10 ವಾರಗಳು ಕಳೆಯುತ್ತಿವೆ. ಇದೇ ಹೊತ್ತಲ್ಲಿ ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು 8 ಮಂದಿ ನಾಮಿನೇಟ್ ಆಗಿದ್ದರು. ನಿನ್ನೆಯ ಸಂಚಿಕೆಯಲ್ಲಿ ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗುವ ಸ್ಪರ್ಧಿಗಳು ಯಾರೆಲ್ಲಾ ಅಂತ ಹೇಳಿದ್ದರು.
ಉಗ್ರಂ ಮಂಜು, ಗೌತಮಿ ಜಾಧವ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಭವ್ಯಾ ಗೌಡ, ಗೋಲ್ಡ್ ಸುರೇಶ್, ಐಶ್ವರ್ಯಾ ಹಾಗೂ ರಜತ್ ನಾಮಿನೇಟ್ ಆಗಿದ್ದಾರೆ. ಈಗಾಗಲೇ ಬಿಗ್ಬಾಸ್ ಮನೆಯಿಂದ ಯಮುನಾ ಶ್ರೀನಿಧಿ, ರಂಜಿತ್, ಜಗದೀಶ್, ಹಂಸ, ಮಾನಸಾ, ಅನುಷಾ ರೈ, ಧರ್ಮ ಕೀರ್ತಿರಾಜ್ ಔಟ್ ಆಗಿದ್ದಾರೆ. ಶೋಭಾ ಶೆಟ್ಟಿ ಕೂಡ ಕಳೆದ ವಾರ ಆಚೆ ಬಂದಿದ್ದರು ಆದರೆ ಈ ವಾರ ಯಾರು ಔಟ್ ಆಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಆದರೆ ಇದರ ಮಧ್ಯೆ ವೀಕ್ಷಕರು ವೋಟ್ ಮಾಡಲು ವೋಟಿಂಗ್ ಲೈನ್ಸ್ ತೆರೆದಿಲ್ಲ. ಹೀಗಾಗಿ ವೀಕ್ಷಕರಲ್ಲಿ ಅನುಮಾನ ಮೂಡಿದೆ. ನಿನ್ನೆಯ ಸಂಚಿಕೆಯಲ್ಲಿ 10ನೇ ವಾರದ ನಾಮಿನೇಷನ್ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದಿತ್ತು. ಕಾರ್ಯಕ್ರಮದ ಕೊನೆಯಲ್ಲಿ ನಾಮಿನೇಟ್ ಆದ ಸ್ಪರ್ಧಿಗಳ ಹೆಸರನ್ನು ಬಿಗ್ಬಾಸ್ ಘೋಷಣೆ ಮಾಡುತ್ತಿದ್ದರು. ಆದರೆ ಮಾಡಿಲ್ಲ. ಜೊತೆಗೆ ವೋಟಿಂಗ್ ಲೈನ್ಸ್ ಕೂಡ ಓಪನ್ ಆಗಿಲ್ಲ. ಹೀಗಾಗಿ ಒಂದು ಅರ್ಥದಲ್ಲಿ ಈ ವಾರ ಎಲಿಮಿನೇಷನ್ ಇರೋದಿಲ್ಲ ಎಂದು ಖಚಿತವಾಗಿದೆ.
ಈ ವಿಚಾರ ಮನೆಯಲ್ಲಿರೋ ಸ್ಪರ್ಧಿಗಳಿಗೆ ಗೊತ್ತಿಲ್ಲ. ಹೀಗಾಗಿ 8 ಮಂದಿ ನಾಮಿನೇಷನ್ ಟೆನ್ಷನ್ನಲ್ಲೇ ಇದ್ದಾರೆ. ಹಾಗಾದ್ರೇ ಭಾನುವಾರದ ಸಂಚಿಕೆಯಲ್ಲಿ ಬಿಗ್ಬಾಸ್ ಟ್ವಿಸ್ಟ್ ಕೊಡ್ತಾರಾ? ಅಥವಾ ಕಳೆದ ಕೆಲವು ಸೀಸನ್‌ಗಳ ಸ್ಪರ್ಧಿಗಳನ್ನು ಸೀಕ್ರೆಟ್ ರೂಮ್‌ನಲ್ಲಿ ಇರುತ್ತಾರಾ ಅಂತ ಕಾದು ನೋಡಬೇಕಿದೆ.