BANTWAL
Bantwala: ಮನೆ ಮೇಲೆ ಗುಡ್ಡ ಕುಸಿತ – ಓರ್ವ ಮಹಿಳೆ ಸಾವು, ಇನ್ನೋರ್ವ ಮಹಿಳೆ ಗಂಭೀರ..!
Published
1 year agoon
By
Adminಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರ ಗುಂಪು ಮನೆಯಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಬಿದ್ದು, ಮನೆಯೊಳಗೆ ಸಿಲುಕಿ ಹಾಕಿಕೊಂಡಿದ್ದ ಇಬ್ಬರು ಮಹಿಳೆಯರ ಪೈಕಿ ಓರ್ವ ಮಹಿಳೆಯನ್ನು ರಕ್ಷಣೆ ಮಾಡಲಾಗಿದ್ದು, ಮತ್ತೋರ್ವ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.
ಬಂಟ್ವಾಳ: ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರ ಗುಂಪು ಮನೆಯಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಬಿದ್ದು, ಮನೆಯೊಳಗೆ ಸಿಲುಕಿ ಹಾಕಿಕೊಂಡಿದ್ದ ಇಬ್ಬರು ಮಹಿಳೆಯರ ಪೈಕಿ ಓರ್ವ ಮಹಿಳೆಯನ್ನು ರಕ್ಷಣೆ ಮಾಡಲಾಗಿದ್ದು, ಮತ್ತೋರ್ವ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.
ನಂದಾವರ ನಿವಾಸಿ ಮಹಮ್ಮದ್ ಅವರ ಪತ್ನಿ ಝರೀನಾ(೪೯) ಹಾಗೂ ಶಫಾ(೨೦) ಮನೆಯಡಿಯಲ್ಲಿ ಸಿಲುಕಿ ಹಾಕಿಕೊಂಡವರು.
ಮಣ್ಣಿನೊಳಗಿದ್ದ ಮಹಿಳೆಯನ್ನು ರಕ್ಷಣೆ ಮಾಡಲು ಮಾಡಿದ ಸತತ ಪ್ರಯತ್ನ ವಿಫಲವಾಗಿದೆ.
ಅವರಲ್ಲಿ ಸಫಾ ಅವರನ್ನು ತಕ್ಷಣ ರಕ್ಷಣೆ ಮಾಡಲಾಗಿದ್ದು, ಉಳಿದಂತೆ ಝರಿನಾ ಅವರು ಮೃತಪಟ್ಟಿದ್ದಾರೆ.
ಕೆಲವು ಗಂಟೆಗಳ ಕಾಲ ರಕ್ಷಣಾ ಕಾರ್ಯದಲ್ಲಿ ಸ್ಥಳೀಯರು ತೊಡಗಿದ್ದರು.
ಬಂಟ್ವಾಳ ಅಗ್ನಿಶಾಮಕ ಅಧಿಕಾರಿಗಳು, ಪೊಲೀಸರು, ತಾಲೂಕು ಆಡಳಿತದ ಸಿಬಂದಿ ಸ್ಥಳದಲ್ಲಿ ತಹಶೀಲ್ದಾರ್ ಎಸ್.ಬಿ. ಕೂಡಲೇ ಸ್ಥಳಕ್ಕೆ ಆಗಮಿಸಿದ್ದರು.
ಗುಡ್ಡ ಜರಿದು ಮಹಿಳೆಯೋರ್ವಳು ಮೃತಪಟ್ಟ ನಂದಾವರದ ಪರಿಸರಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಇಂದು ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ಮತ್ತು ಮನೆ ರಿಪೇರಿಗೆ 1.20 ಲಕ್ಷ ಪರಿಹಾರವನ್ನು ಸರಕಾರದಿಂದ ನೀಡುವ ಭರವಸೆ ನೀಡಿದರು.
ಜೊತೆಗೆ ತಾಲೂಕಿನಲ್ಲಿ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ತಾಲೂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ಎಸ್.ವಿ.ಕೂಡಲಗಿ, ತಾಲೂಕು ಪಂಚಾಯತ್ ಇ.ಒ.ರಾಜಣ್ಣ , ಪಿಡಿಒ ಲಕ್ಷಣ್ ಮತ್ತು ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾಜಿ ಸಚಿವ ಬಿ ರಮಾನಾಥ ರೈ ಸೇರಿದಂತೆ ಇತರರು ಉಪಸ್ಥಿತರಿದ್ದರು.
BANTWAL
ಬ್ರೇಕಪ್ ಆದ್ರೂ ಬಿಡದ ಪಾಗಲ್ ಪ್ರೇಮಿ; ನಿಮಿಷಕ್ಕೊಮ್ಮೆ ಗೂಗಲ್ ಪೇ ಮಾಡಿ ಹಿಂಸೆ..!
Published
6 hours agoon
23/11/2024ಪ್ರೀತಿ ಒಂದು ಮಾಯೆ. ಯುವಕ – ಯುವತಿಯ ನಡೆವಿನ ಅನ್ಯೋನ್ಯತೆ, ಹೊಂದಿಕೊಳ್ಳುವುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತವೆ. ಪ್ರೀತಿ ಎಂದರೆ ಕೇವಲ ಆಕರ್ಷಣೆಯಲ್ಲ. ಅಥವಾ ಒಂದು ಹೆಣ್ಣಿನ ಅಂಗಾಂಗ ನೋಡಿ ಉಕ್ಕಿ ಬರುವ ಭಾವವೂ ಅಲ್ಲ. ಅದೊಂದು ಪವಿತ್ರ ಬಂಧ. ಎಲ್ಲಿ ಸರಿಯಾದ ಹೊಂದಾಣಿಕೆ ಇರುವುದಿಲ್ಲವೋ ಅಲ್ಲಿ ಬ್ರೇಕಪ್ ಆಗುತ್ತದೆ. ಅಷ್ಡು ಮಾತ್ರವಲ್ಲದೇ ಯಾವುದೋ ಒತ್ತಡ, ಕೌಟುಂಬಿಕ ಕಲಹಗಳಿಂದಲೂ ಪ್ರೇಮಿಗಳ ಸಂಬಂಧಕ್ಕೆ ಬಿರುಕು ಬೀಳುತ್ತದೆ.
ಪ್ರೇಮಿಗಳ ನಡುವೆ ಬ್ರೇಕಪ್ ಸರ್ವೇ ಸಾಮಾನ್ಯ. ಆದರೆ, ಆ ನೋವಿನಿಂದ ಹೊರಬರುವುದಂತೂ ತುಂಬಾ ಕಷ್ಟ. ಕೆಲವರು ಹಳೆಯ ಪ್ರೇಮಿಯ ನೆನಪಲ್ಲಿ ದಿನ ಕಳೆದರೆ, ಇನ್ನು ಕೆಲವರು ಕೈ ಕೊಟ್ಟ ಪ್ರಿಯತಮೆಗೆ ಬುದ್ಧಿ ಕಲಿಸಲು ಮುಂದಾಗುತ್ತಾರೆ. ಆದರೆ, ಇಲ್ಲೊಬ್ಬ ಯುವಕ ಬ್ರೇಕಪ್ ಬಳಿಕ ಮಾಜಿ ಪ್ರಿಯತಮೆಗೆ ವಿಚಿತ್ರವಾಗಿ ಹಿಂಸೆ ನೀಡಿದ್ದಾನೆ ಎಂದು ಉಲ್ಲೇಖವಾಗಿದೆ. ಈ ಕುರಿತು ಸ್ವತಃ ಯುವತಿಯೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾಳೆ.
ಬ್ರೇಕಪ್ ಬಳಿಕ ಯುವತಿಯು ಮಾಜಿ ಪ್ರಿಯಕರನ ನಂಬರನ್ನು ಎಲ್ಲ ಕಡೆಯೂ ಬ್ಲಾಕ್ ಮಾಡಿದ್ದಾಳೆ. ಆದರೆ ಅವನು ತನ್ನ ಪ್ರೇಯಸಿಯನ್ನು ಹಿಂಸಿಸಲು ಗೂಗಲ್ ಪೇ ಆಯ್ಕೆ ಮಾಡ್ಕೊಂಡಿದ್ದಾನೆ. ಬ್ರೇಕಪ್ ನಂತರ ಅವನು ಗೂಗಲ್ ಪೇ ನಲ್ಲಿ ನಿಮಿಷಕ್ಕೆ ಒಂದು ರೂಪಾಯಿ ಸೆಂಡ್ ಮಾಡುತ್ತಿದ್ದಾನಂತೆ.
ಆಯುಷಿ ಎಂಬುವವರು ತಮ್ಮ ಎಕ್ಸ್ ಖಾತೆ @ShutupAyushiii ಯಲ್ಲಿ ಮಾಜಿ ಪ್ರಿಯಕರ ಬಗ್ಗೆ ಬರೆದುಕೊಂಡಿದ್ದಾಳೆ. ಪೋಸ್ಟ್ ನಲ್ಲಿ, ‘ಎಲ್ಲ ಕಡೆ ಆತನನ್ನು ಬ್ಲಾಕ್ ಮಾಡಿದ ಮೇಲೆ ಗೂಗಲ್ ಪೇನಲ್ಲಿ ಪ್ರತಿ ನಿಮಿಷಕ್ಕೆ ಒಂದು ರೂಪಾಯಿ ಸೆಂಡ್ ಮಾಡ್ತಿದ್ದಾನೆ’ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದು, ಅದರೊಂದಿಗೆ ಅಳುವ ಎಮೋಜಿ ಹಾಕಿದ್ದಾಳೆ. ಈ ಪೋಸ್ಟ್ ನೋಡಿದರೆ ಒಂದು ಕ್ಷಣ ಹೀಗೂ ಹಿಂಸೆ ಕೊಡುತ್ತಾರಾ ? ಎಂದೆನಿಸುತ್ತದೆ.
ಈ ಪೋಸ್ಟ್ ಒಂದು ಲಕ್ಷದವರೆಗೆ ವೀಕ್ಷಣೆ ಕಂಡಿದ್ದು, ನೆಟ್ಟಿಗರು ವಿಧವಿಧವಾಗಿ ಕಾಮೆಂಟ್ ಮಾಡಿದ್ದಾರೆ.ಒಬ್ಬರು, ‘ನಿಮ್ಮ ಮಾಜಿ ಇದೇ ಕೆಲಸ ಮುಂದುವರೆಸಿದ್ರೆ ತಿಂಗಳಿಗೆ ನೀವು 40 ಸಾವಿರಕ್ಕಿಂತ ಹೆಚ್ಚು ಸಂಪಾದನೆ ಮಾಡಬಹುದು. ಏನೂ ಕೆಲಸ ಮಾಡದೆ ಕುಳಿತಲ್ಲೇ ಹಣ ಬರುತ್ತೆ ಅಂದ್ರೆ ಟೆನ್ಷನ್ ಏಕೆ’ ಎಂದಿದ್ದಾರೆ. ಇನ್ನೊಬ್ಬರು, ‘ನಿಮಿಷದ ಲೆಕ್ಕದಲ್ಲಿ ನೋಡೋದಾದ್ರೆ ನೀವು ದಿನಕ್ಕೆ 1440 ರೂಪಾಯಿ ಪಡೆಯುತ್ತೀರಿ’ ಎಂದಿದ್ದಾರೆ. ಮತ್ತೊಬ್ಬರು, ‘ಎರಡು ದಿನ ಮಾಡ್ತಾನೆ, ಹಣ ಖಾಲಿ ಆದ್ಮೇಲೆ ಆತನೇ ಸುಮ್ಮನಾಗ್ತಾನೆ’ ಎಂದು ಕಾಮೆಂಟ್ ಮಾಡಿದ್ದಾರೆ.
ಬಂಟ್ವಾಳ: ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದ ಟೀಕೆಗೆ ಗುರಿಯಾಗಿದ್ದ ಕಲ್ಲಡ್ಕದಲ್ಲಿ ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.
ಮಳೆ ದೂರವಾದ ಹಿನ್ನೆಲೆಯಲ್ಲಿ ಕಲ್ಲಡ್ಕದ ಪೂರ್ಲಿಪ್ಪಾಡಿ ಭಾಗದಿಂದ ಒಂದು ಬದಿಯಲ್ಲಿ ಡಾಮರು ಹಾಕಲಾಗುತ್ತಿದೆ.
ಕಳೆದ 2-3 ವರ್ಷಗಳಿಂದ ಹೆದ್ದಾರಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದು, ಈ ಬಾರಿಯ ಮಳೆಗಾಲದಲ್ಲಿ ಕಲ್ಲಡ್ಕ ಪೇಟೆಯನ್ನು ಎಲ್ಲ ರೀತಿಯಿಂದಲೂ ಹಿಂಡಿ ಹಿಪ್ಪೆ ಮಾಡಲಾಗಿತ್ತು. ಮಳೆ ಬಂದರೆ ಕೆಸರು, ಬಿಸಿಲಾದರೆ ಧೂಳು ಎಂಬ ಸ್ಥಿತಿ ಇತ್ತು. ಹೆದ್ದಾರಿ ತುಂಬಾ ಕೆಸರು ತುಂಬಿ ನಡೆದಾಡುವುದು ಕಷ್ಟವಾಗಿರುವ ಜತೆಗೆ ಹೊಂಡಗಳು ಸೃಷ್ಟಿಯಾಗಿ ವಾಹನ ಸಾಗುವುದು ತೀರಾ ತ್ರಾಸದಾಯಕವಾಗಿತ್ತು. ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.
ಮಂಗಳೂರು: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಮಹಮ್ಮದ್ ಮುಸ್ತಾಫ(21) ಎಂಬಾತನನ್ನು ಕಂಬಕ್ಕೆ ಕಟ್ಟಿ ಹಾಕಿದ ಥಳಿಸಿದ ಆರು ಮಂದಿ ಆರೋಪಿಗಳನ್ನು ಬಂಟ್ವಾಳ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಹಲ್ಲೆ ಮಾಡಿ, ಕೊಲೆ ಬೆದರಿಕೆಯೊಡ್ಡಿದ ಆರೋಪಿಗಳಾದ ಕಂಚಿನಡ್ಕದ ನಿವಾಸಿಗಳಾಗಿರುವ ಮಹಮ್ಮದ್ ಸಪ್ವಾನ್( 25), ಮಹಮ್ಮದ್ ರಿಜ್ವಾನ್ (25), ಇರ್ಪಾನ್(27), ಅನೀಸ್ ಅಹಮ್ಮದ್ (19), ನಾಸೀರ್ (27), ಇಬ್ರಾಹಿಂ, ಶಾಕೀರ್ (18)ನನ್ನು ಬಂಧಿಸಲಾಗಿದೆ.
ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನವೆಂಬರ್ 7ರಂದು ರಾತ್ರಿ 10 ಗಂಟೆ ಸುಮಾರಿಗೆ ಕಂಚಿನಡ್ಕ ಪದವು ನಿವಾಸಿಯಾಗಿರುವ ಯುವತಿಯೊಬ್ಬಳು ಮಹಮ್ಮದ್ ಮುಸ್ತಾಫಾನನ್ನು ಮನೆಗೆ ಬರಲು ಹೇಳಿದ್ದು, ಆಕೆ ಸೂಚನೆಯಂತೆ ಮಹಮ್ಮದ್ ಮುಸ್ತಾಫಾ ಅಲ್ಲಿಗೆ ಹೋಗಿದ್ದ. ಈ ವೇಳೆ ಅಲ್ಲಿದ್ದ ಆರೋಪಿಗಳು ಮಹಮ್ಮದ್ ಮುಸ್ತಾಫ್ ನ ಬಗ್ಗೆ ಸಂಶಯ ವ್ಯಕ್ತಪಡಿಸಿ ಗುಂಪು ಸೇರಿಕೊಂಡು ಆತನನ್ನು ಹಿಡಿದು ರಕ್ತ ಒಸರುವಂತೆ ಥಳಿಸಿದ್ದಲ್ಲದೇ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ.
ಇದನ್ನೂ ಓದಿ : ಬಂಟ್ವಾಳ : ಮನೆಗೆ ಬಂದಿದ್ದ ಪ್ರಿಯಕರನ್ನು ಅ*ರೆಬೆತ್ತಲು ಮಾಡಿ ಹ*ಲ್ಲೆ
ಮಹಮ್ಮದ್ ಮುಸ್ತಾಫ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಬಳಿಕ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲಿ ಪೊಲೀಸರು ವಿಚಾರಣೆ ಮಾಡಲು ತೆರಳಿದಾದ ಮಹಮ್ಮದ್ ಮುಸ್ತಾಫ್ ಆರೋಪಿಗಳು ತನ್ನನ್ನು ಕೊಲೆ ನಡೆಸುವ ಉದ್ದೇಶದಿಂದ ಗುಂಪು ಸೇರಿ ಕಂಬಕ್ಕೆ ಕಟ್ಟಿ ಹಾಕಿ ಕೊಲೆಯತ್ನ ನಡೆಸಿದ್ದಾನೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದೆ.
LATEST NEWS
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ
ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: KSRTC ಬಸ್ಸಿನಲ್ಲಿ ‘UPI’ ಮೂಲಕ ಟಿಕೆಟ್ ಖರೀದಿಸಲು ಅವಕಾಶ
ಪಿಲಿಕುಳ ಕಂಬಳಕ್ಕೆ ಪ್ರಾಣಿಪ್ರಿಯರ ವಿರೋಧ !
Viral Video: ಮಿಂಚಿನ ವೇಗದಲ್ಲಿ ಊಟ ಬಡಿಸಿದ ನಾಲ್ವರು ಯುವಕರು
ವಿದ್ಯಾಸಿರಿ ವಿದ್ಯಾರ್ಥಿ ವೇತನ 2 ಸಾವಿರಕ್ಕೆ ಏರಿಕೆ: ಸಿಎಂ ಸಿದ್ದರಾಮಯ್ಯ
ಜಾರ್ಖಂಡ್ನಲ್ಲಿ ಬಿಗ್ ಟ್ವಿಸ್ಟ್; ಜೆಎಂಎಂ ಮುನ್ನಡೆ – ಎನ್ಡಿಎ ಹಿಂದಿಕ್ಕಿದ ಇಂಡಿಯಾ ಒಕ್ಕೂಟ
Trending
- LATEST NEWS3 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- Baindooru1 day ago
ಯಾವುದೇ ಕಾರಣಕ್ಕೂ ಕೂಡ ಇಂತಹ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಮಾತ್ರ ಇಡಬೇಡಿ!
- LIFE STYLE AND FASHION2 days ago
ಚಿಕನ್ ಪ್ರಿಯರೇ ಗಮನಿಸಿ; ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ
- LATEST NEWS5 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!