Saturday, April 1, 2023

ಬಂಟ್ವಾಳ : ಕೆಲಿಂಜ ಕಲ್ಮಲೆ ವೀರಕಂಭ ರಕ್ಷಿತಾ ಅರಣ್ಯದಲ್ಲಿ ಅಗ್ನಿ ಅವಘಡಕ್ಕೆ ಮರ, ಪ್ರಾಣಿ ಪಕ್ಷಿಗಳು ಬೆಂಕಿಗಾಹುತಿ..!   

ಬಂಟ್ವಾಳ : ಆಕಸ್ಮಿಕವಾಗಿ ಗುಡ್ಡೆಗೆ ಬೆಂಕಿ ತಗುಲಿ ಅಪಾರ ನಷ್ಡ ಸಂಭವಿಸಿದ ಘಟನೆ ದಕ್ಷಿನ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆಲಿಂಜ ಕಲ್ಮಲೆ  ವೀರಕಂಭ ರಕ್ಷಿತಾ ಅರಣ್ಯದಲ್ಲಿ ನಡೆದಿದೆ.

ಬೆಂಕಿ ಬೀಳಲು ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ, ಬೆಂಕಿಯನ್ನು ನಂದಿಸಲು ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದವರು ಹರಸಾಹಸ ಪಟ್ಟರು.

ಮೀಸಲು ಅರಣ್ಯ ಇಲಾಖೆಗೆ ಸೇರಿದ ಗುಡ್ಡೆ ಇದಾಗಿದ್ದು, ಕಾಡಿನಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಿವಿಧ ಜಾತಿಯ ಮರಗಳಿದ್ದು, ಬಹತೇಕ ಮರಗಳು ಬೆಂಕಿಗಾಹುತಿಯಾಗಿವೆ.

ಕಾಡು ಪ್ರಾಣಿಗಳು ಕೂಡಾ ಇದ್ದು, ಸಣ್ಣ ಸಣ್ಣ ಪ್ರಾಣಿಗಳು ಜೀವ ಕಳೆದುಕೊಂಡರೆ , ಉಳಿದ ಪ್ರಾಣಿಗಳು ಜೀವಭಯದಿಂದ ಕಾಡು ಬಿಟ್ಟು ಹೋಗುವ ಸ್ಥಿತಿ ನಿರ್ಮಾಣ ವಾಗಿದೆ.

ಕಳೆದ ಬಾರಿಯೂ ಇದೇ ಮಾದರಿಯಲ್ಲಿ ಕಾಡಿಗೆ ಬೆಂಕಿ ಬಿದಿದ್ದು, ಅಪಾರ ನಷ್ಟ ಉಂಟಾಗಿತ್ತು. ಬೆಂಕಿಯನ್ನು ನಂದಿಸಲು ಮೂರು ದಿನಗಳು ಬೇಕಾಗಿತ್ತು.

ಕಾಡಿನ ಮಧ್ಯೆ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮ್ ರ್ ನಿಂದ ಬೆಂಕಿ ಹತ್ತಿಕೊಂಡಿರ ಬಹುದು ಎಂಬ ಶಂಕೆಯನ್ನು ಸ್ಥಳೀಯ ರು ವ್ಯಕ್ತಪಡಿಸಿದ್ದಾರೆ.

ಅದರೆ ನೈಜ ಕಾರಣ ತಿಳಿದುಬಂದಿಲ್ಲ.   ಅರಣ್ಯ ಇಲಾಖೆಯ ಅಧಿಕಾರಿ ಪ್ರೀತಂ ಮತ್ತು ಸಿಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

Hot Topics