Connect with us

    BANTWAL

    ಬಂಟ್ವಾಳ : ಗತಕಾಲ ಸಾರುವ ಪಾಣೆಮಂಗಳೂರು ಸೇತುವೆಯನ್ನು ಸ್ಮಾರಕವಾಗಿ ಉಳಿಸಲು ಆಗ್ರಹ..!

    Published

    on

    ಬಂಟ್ವಾಳ: ಶತಮಾನದ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನೇತ್ರಾವತಿ ನದಿಗೆ ನಿರ್ಮಾಣಗೊಂಡಿರುವ ಪಾಣೆ ಮಂಗಳೂರು ಹಳೆ ಸೇತುವೆಯನ್ನು ನವೀಕರಣಗೊಳಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

    ಶತಮಾನ ಮಾನ ಕಂಡ ಈ ಸೇತುವೆ ಸ್ಮಾರಕವಾಗಿ ಉಳಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

    ಪ್ರಥಮ ಸೇತುವೆ ಎಂಬ ಹೆಗ್ಗಳಿಕೆ ಅವಿಭಜಿತ ದ.ಕ.ಜಿಲ್ಲೆಯಲ್ಲಿ ನದಿಯೊಂದಕ್ಕೆ ನಿರ್ಮಾಣಗೊಂಡಿರುವ ಆಧುನಿಕ ಶೈಲಿಯ ಮೊದಲ ಸೇತುವೆ ಎಂಬ ಹೆಗ್ಗಳಿಕೆ ಪಾಣೆಮಂಗಳೂರು ಸೇತುವೆಗಿದೆ.

    ಇದೇ ಶೈಲಿಯ ಸೇತುವೆಗಳು ಉಪ್ಪಿನಂಗಡಿ ಹಾಗೂ ಗುರುಪುರದಲ್ಲಿದ್ದರೂ, ಅದು ಇದರ ಬಳಿಕವೇ ನಿರ್ಮಾಣಗೊಂಡಿದೆ
    ತಜ್ಞರ ಮಾಹಿತಿ ಪ್ರಕಾರ 1914ರಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆಯು ಒಂದು ಕಾಲದಲ್ಲಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಂಪರ್ಕದ ಕೊಂಡಿಯಾಗಿದ್ದು, ಈಗಲೂ ಸುಸ್ಥಿತಿಯಲ್ಲಿದೆ.

    ದಿ ಹಾರ್ಸ್ ವೇ ಎಂಬ ಬ್ರಿಟಿಷ್ ಕಂಪೆನಿ ಈ ಸೇತುವೆಯನ್ನು ನಿರ್ಮಾಣ ಮಾಡಿತ್ತು.

    1914 ರಲ್ಲಿ ಇದರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು 1918 ರಲ್ಲಿ ಪೂರ್ಣಗೊಂಡಿತ್ತು.

    ಭಾರತದಲ್ಲಿ ಉಕ್ಕು ಉತ್ಪಾದನೆ ಇಲ್ಲದ ಕಾರಣ ಇದಕ್ಕೆ ಬಳಸಿದ ಉಕ್ಕನ್ನು ಇಂಗ್ಲೇಡಿನಿಂದ ಆಮದು ಮಾಡಲಾಗಿತ್ತು.

    ಸನಿಹದಲ್ಲೇ ಹೊಸ ಸೇತುವೆ ನಿರ್ಮಾಣ ಮಾಡಿದ್ದರಿಂದ 2002 ರಲ್ಲಿ ಈ ಸೇತುವೆ ಸಂಚಾರದಿಂದ ಮುಕ್ತವಾಗಿತ್ತು.

    ಇವತ್ತಿಗೂ ಗಟ್ಟಿಮುಟ್ಟಾಗಿರುವ ಸೇತುವೆಯ ಕಬ್ಬಿಣ ಕರಾವಳಿಯ ಬಿಸಿಲು, ಮಳೆ-ಗಾಳಿಗೆ ಮೈಯೊಡ್ಡಿದ್ದರೂ ತುಕ್ಕು ಹಿಡಿಯದೆ ಇರುವುದು ವಿಶೇಷವೇ ಸರಿ.

    ಇಂತಹ ಸೇತುವೆಯನ್ನು ಮತ್ತೆ ನಿರ್ಮಿಸುವುದು ಸಾಧ್ಯವೇ ಎಂಬುದರ ಕುರಿತು ಆಲೋಚಿಸಿ ಹಳೆಯ ಶೈಲಿಯ ಸೇತುವೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂಬ ಆಗ್ರಹವನ್ನು ಸಾರ್ವಜನಿಕರು ಮುಂದಿಟ್ಟಿದ್ದಾರೆ.

    ಹೆದ್ದಾರಿಯಲ್ಲಿ ಹೊಸ ಸೇತುವೆ ನಿರ್ಮಾಣಗೊಂಡು ಚಾಲನೆಯಲ್ಲಿದ್ದರೂ ಈ ಉಕ್ಕಿನ ಸೇತುವೆಯ ಸೇವೆ ಇನ್ನೂ ಮುಂದುವರಿದಿದೆ.

    ಗೂಡಿನಬಳಿ, ಪಾಣೆಮಂಗಳೂರು ಪೇಟೆ, ನಂದಾವರ ದೇವಸ್ಥಾನ ಸಂಪರ್ಕ ಹೀಗೆ ಈ ಭಾಗದ ಮಂದಿಗೆ ಇದು ಅನಿವಾರ್ಯವಾಗಿದೆ.

    ಸೇತುವೆಯ ಬಲಿಷ್ಠವಾಗಿರುವ ಉಕ್ಕು ತುಕ್ಕು ಹಿಡಿದ ರೀತಿಯಲ್ಲಿ ಕಂಡು ಬರುತ್ತಿದ್ದು, ಅದನ್ನು ಶುಚಿಗೊಳಿಸಿ ಬಣ್ಣ ಬಳಿಯುವ ಕಾರ್ಯ, ಕೆಲವೊಂದು ಸಣ್ಣಪುಟ್ಟ ಕಬ್ಬಿಣ್ಣಗಳು ತುಂಡಾಗಿದ್ದು, ಅದನ್ನು ದುರಸ್ತಿಪಡಿಸುವ ಕಾರ್ಯ ನಡೆಯಬೇಕಿದೆ.

    ಬಳಿಕ ಸೇತುವೆಯ ರಸ್ತೆ ಭಾಗಕ್ಕೆ ಡಾಮರು ಹಾಕಿ ನವೀಕರಣಗೊಳಿಸುವ ಕಾರ್ಯ ಮಾಡಬೇಕಿದ್ದು ಈ ನಿಟ್ಟಿನಲ್ಲಿ ಸ್ಥಳಿಯ ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿದ್ದಾರೆ.

    1 Comment

    1 Comment

    1. Shanavaz

      16/02/2023 at 11:13 PM

      Save this bridge

    Leave a Reply

    Your email address will not be published. Required fields are marked *

    BANTWAL

    ಬ್ರೇಕಪ್ ಆದ್ರೂ ಬಿಡದ ಪಾಗಲ್ ಪ್ರೇಮಿ; ನಿಮಿಷಕ್ಕೊಮ್ಮೆ ಗೂಗಲ್ ಪೇ ಮಾಡಿ ಹಿಂಸೆ..!

    Published

    on

    ಪ್ರೀತಿ ಒಂದು ಮಾಯೆ. ಯುವಕ – ಯುವತಿಯ ನಡೆವಿನ ಅನ್ಯೋನ್ಯತೆ, ಹೊಂದಿಕೊಳ್ಳುವುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತವೆ. ಪ್ರೀತಿ ಎಂದರೆ ಕೇವಲ ಆಕರ್ಷಣೆಯಲ್ಲ. ಅಥವಾ ಒಂದು ಹೆಣ್ಣಿನ ಅಂಗಾಂಗ ನೋಡಿ ಉಕ್ಕಿ ಬರುವ ಭಾವವೂ ಅಲ್ಲ. ಅದೊಂದು ಪವಿತ್ರ ಬಂಧ. ಎಲ್ಲಿ ಸರಿಯಾದ ಹೊಂದಾಣಿಕೆ ಇರುವುದಿಲ್ಲವೋ ಅಲ್ಲಿ ಬ್ರೇಕಪ್ ಆಗುತ್ತದೆ. ಅಷ್ಡು ಮಾತ್ರವಲ್ಲದೇ ಯಾವುದೋ ಒತ್ತಡ, ಕೌಟುಂಬಿಕ ಕಲಹಗಳಿಂದಲೂ ಪ್ರೇಮಿಗಳ ಸಂಬಂಧಕ್ಕೆ ಬಿರುಕು ಬೀಳುತ್ತದೆ.

    ಪ್ರೇಮಿಗಳ ನಡುವೆ ಬ್ರೇಕಪ್ ಸರ್ವೇ ಸಾಮಾನ್ಯ. ಆದರೆ, ಆ ನೋವಿನಿಂದ ಹೊರಬರುವುದಂತೂ ತುಂಬಾ ಕಷ್ಟ. ಕೆಲವರು ಹಳೆಯ ಪ್ರೇಮಿಯ ನೆನಪಲ್ಲಿ ದಿನ ಕಳೆದರೆ, ಇನ್ನು ಕೆಲವರು ಕೈ ಕೊಟ್ಟ ಪ್ರಿಯತಮೆಗೆ ಬುದ್ಧಿ ಕಲಿಸಲು ಮುಂದಾಗುತ್ತಾರೆ. ಆದರೆ, ಇಲ್ಲೊಬ್ಬ ಯುವಕ ಬ್ರೇಕಪ್ ಬಳಿಕ ಮಾಜಿ ಪ್ರಿಯತಮೆಗೆ ವಿಚಿತ್ರವಾಗಿ ಹಿಂಸೆ ನೀಡಿದ್ದಾನೆ ಎಂದು ಉಲ್ಲೇಖವಾಗಿದೆ. ಈ ಕುರಿತು ಸ್ವತಃ ಯುವತಿಯೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾಳೆ.

    ಬ್ರೇಕಪ್‌ ಬಳಿಕ ಯುವತಿಯು ಮಾಜಿ ಪ್ರಿಯಕರನ ನಂಬರನ್ನು ಎಲ್ಲ ಕಡೆಯೂ ಬ್ಲಾಕ್ ಮಾಡಿದ್ದಾಳೆ. ಆದರೆ ಅವನು ತನ್ನ ಪ್ರೇಯಸಿಯನ್ನು ಹಿಂಸಿಸಲು ಗೂಗಲ್ ಪೇ ಆಯ್ಕೆ ಮಾಡ್ಕೊಂಡಿದ್ದಾನೆ. ಬ್ರೇಕಪ್ ನಂತರ ಅವನು ಗೂಗಲ್ ಪೇ ನಲ್ಲಿ ನಿಮಿಷಕ್ಕೆ ಒಂದು ರೂಪಾಯಿ ಸೆಂಡ್ ಮಾಡುತ್ತಿದ್ದಾನಂತೆ.

    ಆಯುಷಿ ಎಂಬುವವರು ತಮ್ಮ ಎಕ್ಸ್ ಖಾತೆ @ShutupAyushiii ಯಲ್ಲಿ ಮಾಜಿ ಪ್ರಿಯಕರ ಬಗ್ಗೆ ಬರೆದುಕೊಂಡಿದ್ದಾಳೆ. ಪೋಸ್ಟ್ ನಲ್ಲಿ, ‘ಎಲ್ಲ ಕಡೆ ಆತನನ್ನು ಬ್ಲಾಕ್ ಮಾಡಿದ ಮೇಲೆ ಗೂಗಲ್ ಪೇನಲ್ಲಿ ಪ್ರತಿ ನಿಮಿಷಕ್ಕೆ ಒಂದು ರೂಪಾಯಿ ಸೆಂಡ್ ಮಾಡ್ತಿದ್ದಾನೆ’ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದು, ಅದರೊಂದಿಗೆ ಅಳುವ ಎಮೋಜಿ ಹಾಕಿದ್ದಾಳೆ. ಈ ಪೋಸ್ಟ್ ನೋಡಿದರೆ ಒಂದು ಕ್ಷಣ ಹೀಗೂ ಹಿಂಸೆ ಕೊಡುತ್ತಾರಾ ? ಎಂದೆನಿಸುತ್ತದೆ.

    ಈ ಪೋಸ್ಟ್ ಒಂದು ಲಕ್ಷದವರೆಗೆ ವೀಕ್ಷಣೆ ಕಂಡಿದ್ದು, ನೆಟ್ಟಿಗರು ವಿಧವಿಧವಾಗಿ ಕಾಮೆಂಟ್ ಮಾಡಿದ್ದಾರೆ.ಒಬ್ಬರು, ‘ನಿಮ್ಮ ಮಾಜಿ ಇದೇ ಕೆಲಸ ಮುಂದುವರೆಸಿದ್ರೆ ತಿಂಗಳಿಗೆ ನೀವು 40 ಸಾವಿರಕ್ಕಿಂತ ಹೆಚ್ಚು ಸಂಪಾದನೆ ಮಾಡಬಹುದು. ಏನೂ ಕೆಲಸ ಮಾಡದೆ ಕುಳಿತಲ್ಲೇ ಹಣ ಬರುತ್ತೆ ಅಂದ್ರೆ ಟೆನ್ಷನ್ ಏಕೆ’ ಎಂದಿದ್ದಾರೆ. ಇನ್ನೊಬ್ಬರು, ‘ನಿಮಿಷದ ಲೆಕ್ಕದಲ್ಲಿ ನೋಡೋದಾದ್ರೆ ನೀವು ದಿನಕ್ಕೆ 1440 ರೂಪಾಯಿ ಪಡೆಯುತ್ತೀರಿ’ ಎಂದಿದ್ದಾರೆ. ಮತ್ತೊಬ್ಬರು, ‘ಎರಡು ದಿನ ಮಾಡ್ತಾನೆ, ಹಣ ಖಾಲಿ ಆದ್ಮೇಲೆ ಆತನೇ ಸುಮ್ಮನಾಗ್ತಾನೆ’ ಎಂದು ಕಾಮೆಂಟ್ ಮಾಡಿದ್ದಾರೆ.

    Continue Reading

    BANTWAL

    ಕಲ್ಲಡ್ಕದಲ್ಲಿ ಸರ್ವೀಸ್ ರಸ್ತೆಗೆ ಡಾಮರು

    Published

    on

    ಬಂಟ್ವಾಳ: ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದ ಟೀಕೆಗೆ ಗುರಿಯಾಗಿದ್ದ ಕಲ್ಲಡ್ಕದಲ್ಲಿ ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.

    ಮಳೆ ದೂರವಾದ ಹಿನ್ನೆಲೆಯಲ್ಲಿ ಕಲ್ಲಡ್ಕದ ಪೂರ್ಲಿಪ್ಪಾಡಿ ಭಾಗದಿಂದ ಒಂದು ಬದಿಯಲ್ಲಿ ಡಾಮರು ಹಾಕಲಾಗುತ್ತಿದೆ.

    ಕಳೆದ 2-3 ವರ್ಷಗಳಿಂದ ಹೆದ್ದಾರಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದು, ಈ ಬಾರಿಯ ಮಳೆಗಾಲದಲ್ಲಿ ಕಲ್ಲಡ್ಕ ಪೇಟೆಯನ್ನು ಎಲ್ಲ ರೀತಿಯಿಂದಲೂ ಹಿಂಡಿ ಹಿಪ್ಪೆ ಮಾಡಲಾಗಿತ್ತು. ಮಳೆ ಬಂದರೆ ಕೆಸರು, ಬಿಸಿಲಾದರೆ ಧೂಳು ಎಂಬ ಸ್ಥಿತಿ ಇತ್ತು. ಹೆದ್ದಾರಿ ತುಂಬಾ ಕೆಸರು ತುಂಬಿ ನಡೆದಾಡುವುದು ಕಷ್ಟವಾಗಿರುವ ಜತೆಗೆ ಹೊಂಡಗಳು ಸೃಷ್ಟಿಯಾಗಿ ವಾಹನ ಸಾಗುವುದು ತೀರಾ ತ್ರಾಸದಾಯಕವಾಗಿತ್ತು. ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.

    Continue Reading

    BANTWAL

    ಮಂಗಳೂರು: ಯುವತಿ ವಿಚಾರದಲ್ಲಿ ಯುವಕನಿಗೆ ಥಳಿತ; ಆರೋಪಿಗಳು ಅರೆಸ್ಟ್

    Published

    on

    ಮಂಗಳೂರು: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಮಹಮ್ಮದ್ ಮುಸ್ತಾಫ(21) ಎಂಬಾತನನ್ನು ಕಂಬಕ್ಕೆ ಕಟ್ಟಿ ಹಾಕಿದ ಥಳಿಸಿದ ಆರು ಮಂದಿ ಆರೋಪಿಗಳನ್ನು ಬಂಟ್ವಾಳ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಹಲ್ಲೆ ಮಾಡಿ, ಕೊಲೆ ಬೆದರಿಕೆಯೊಡ್ಡಿದ ಆರೋಪಿಗಳಾದ ಕಂಚಿನಡ್ಕದ ನಿವಾಸಿಗಳಾಗಿರುವ ಮಹಮ್ಮದ್‌ ಸಪ್ವಾನ್( 25), ಮಹಮ್ಮದ್‌ ರಿಜ್ವಾನ್‌ (25), ಇರ್ಪಾನ್‍(27), ಅನೀಸ್‍ ಅಹಮ್ಮದ್‍ (19), ನಾಸೀರ್‍ (27), ಇಬ್ರಾಹಿಂ, ಶಾಕೀರ್‍ (18)ನನ್ನು ಬಂಧಿಸಲಾಗಿದೆ.

    ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನವೆಂಬರ್ 7ರಂದು ರಾತ್ರಿ 10 ಗಂಟೆ ಸುಮಾರಿಗೆ ಕಂಚಿನಡ್ಕ ಪದವು ನಿವಾಸಿಯಾಗಿರುವ ಯುವತಿಯೊಬ್ಬಳು ಮಹಮ್ಮದ್ ಮುಸ್ತಾಫಾನನ್ನು ಮನೆಗೆ ಬರಲು ಹೇಳಿದ್ದು, ಆಕೆ ಸೂಚನೆಯಂತೆ ಮಹಮ್ಮದ್ ಮುಸ್ತಾಫಾ ಅಲ್ಲಿಗೆ ಹೋಗಿದ್ದ. ಈ ವೇಳೆ ಅಲ್ಲಿದ್ದ ಆರೋಪಿಗಳು ಮಹಮ್ಮದ್‍ ಮುಸ್ತಾಫ್‍ ನ ಬಗ್ಗೆ ಸಂಶಯ ವ್ಯಕ್ತಪಡಿಸಿ ಗುಂಪು ಸೇರಿಕೊಂಡು ಆತನನ್ನು ಹಿಡಿದು ರಕ್ತ ಒಸರುವಂತೆ ಥಳಿಸಿದ್ದಲ್ಲದೇ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ.

     

    ಇದನ್ನೂ ಓದಿ : ಬಂಟ್ವಾಳ : ಮನೆಗೆ ಬಂದಿದ್ದ ಪ್ರಿಯಕರನ್ನು ಅ*ರೆಬೆತ್ತಲು ಮಾಡಿ ಹ*ಲ್ಲೆ

     

    ಮಹಮ್ಮದ್‍ ಮುಸ್ತಾಫ್‍ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಬಳಿಕ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲಿ ಪೊಲೀಸರು ವಿಚಾರಣೆ ಮಾಡಲು ತೆರಳಿದಾದ ಮಹಮ್ಮದ್‍ ಮುಸ್ತಾಫ್‍ ಆರೋಪಿಗಳು ತನ್ನನ್ನು ಕೊಲೆ ನಡೆಸುವ ಉದ್ದೇಶದಿಂದ ಗುಂಪು ಸೇರಿ ಕಂಬಕ್ಕೆ ಕಟ್ಟಿ ಹಾಕಿ ಕೊಲೆಯತ್ನ ನಡೆಸಿದ್ದಾನೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದೆ.

    Continue Reading

    LATEST NEWS

    Trending