Connect with us

BANTWAL

ಬಂಟ್ವಾಳ: ಕಾರು-ಬೈಕ್ ನಡುವೆ ಭೀಕರ ಅಪಘಾತ- ಬೈಕ್ ಸವಾರ ಮೃತ್ಯು, ಸಹಸವಾರ ಗಂಭೀರ..!

Published

on

ಕಾರು ಡಿಕ್ಕಿ ಹೊಡೆದು ಬೈಕ್ ಸವಾರನೊರ್ವ ಮೃತಪಟ್ಟು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಂಟ್ವಾಳ: ಕಾರು ಡಿಕ್ಕಿ ಹೊಡೆದು ಬೈಕ್ ಸವಾರನೊರ್ವ ಮೃತಪಟ್ಟು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ. ಅಮ್ಟಾಡಿ ನಿವಾಸಿ 35 ವರ್ಷದ ಸಂದೀಪ್ ಲೋಬೊ ಮೃತಪಟ್ಟ ದುರ್ದೈವಿಯಾಗಿದ್ದಾನೆ.


ಈತನ ಜೊತೆ ಕೆಲಸ ಮಾಡುವ ನೆರೆಯ ಮನೆಯ ಅಕಾಶ್ ಎಂಬಾತ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇವರಿಬ್ಬರು ವೆಲ್ಡಿಂಗ್ ಕೆಲಸ ಮಾಡುವ ಕಾರ್ಮಿಕರಾಗಿದ್ದು ಬಿಸಿರೋಡಿನಿಂದ ಪುಂಜಾಲಕಟ್ಟೆ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದರು.

ಈ ವೇಳೆ ಎದುರಿನಿಂದ ಓವರ್ ಟೇಕ್ ಮಾಡಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಕ ಕಾರು ಚಲಾಯಿಸಿಕೊಂಡು ಬಂದ ಪರಿಣಾಮ ಈ ರಸ್ತೆ ಅಪಘಾತ ಸಂಭವಿಸಿದೆ.

ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಸಂದೀಪ್ ಲೋಬೋ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅಸುನೀಗಿದ್ದು, ಆಕಾಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

BANTWAL

ಗಂಡ ಹೆಂಡತಿಗೆ ನಾಲ್ವರಿಂದ ಹಲ್ಲೆ..!!

Published

on

ಬಂಟ್ವಾಳ; ಅಪಘಾತದ ವಿಚಾರದಲ್ಲಿ ಗಂಡ ಹೆಂಡತಿಗೆ ನಾಲ್ವರು ಹಲ್ಲೆ ಮಾಡಿರುವ ಘಟನೆ ಕಲ್ಲಡ್ಕದ ಕರಿಂಗಾನ ಕ್ರಾಸ್ ಎಂಬಲ್ಲಿ ಎ.15ರಂದು ಸಂಜೆ ವೇಳೆ ನಡೆದಿದೆ. ಪುತ್ತೂರು ಏರ್ಮುಂಜ ಪಲ್ಲ ನಿವಾಸಿಗಳಾದ ಮಂಜುನಾಥ್ ಮತ್ತು ಅವರ ಪತ್ನಿ ಪೂರ್ಣಿಮಾ ಹಲ್ಲೆಗೊಳಗಾದವರು. ಹಲ್ಲೆಗೊಳಗಾದವರು ಬಂಟ್ವಾಳ ನಗರ ಪೋಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮಂಜುನಾಥ್ ಅವರು ಮಂಗಳೂರಿನಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ ಕಲ್ಲಡ್ಕ ಸಮೀಪದ ನರಹರಿ ಎಂಬಲ್ಲಿ ಇವರ ಕಾರಿಗೆ ಹರಿಯಾಣ ಮೂಲದ ಕಾರೊಂದ ಓವರ್ ಟೇಕ್ ಮಾಡುವ ಭರದಲ್ಲಿ ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಕೈ ಸನ್ನೆಯ ಮೂಲಕ ಪ್ರಶ್ನಿಸಿದಕ್ಕೆ ಅಪಘಾತ ಎಸಗಿದ ಕಾರು ಮುಂದೆ ಹೋಗಿ ಕರಿಂಗಾಣ ಕ್ರಾಸ್ ಎಂಬಲ್ಲಿ ಅಡ್ಡವಾಗಿ ಇರಿಸಿ ಮಂಜುನಾಥ್ ಹಾಗೂ ಅವರ ಪತ್ನಿ ಪೂರ್ಣಿಮಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ ಪೂರ್ಣಿಮಾ ಅವರ ಕುತ್ತಿಗೆಯಲ್ಲಿದ್ದ ಬಂಗಾರದ ಚೈನ್ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಹಲ್ಲೆಯಿಂದ ಮಂಜುನಾಥ್ ಅವರ ಕಣ್ಣಿಗೆ ಏಟಾಗಿದ್ದು, ಅವರು ಬಂಟ್ವಾಳ ನಗರ ಪೋಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಘಟನೆ ನಡೆದ ಕೂಡಲೇ ಸಂಚಾರ ಪೊಲೀಸರು ಭೇಟಿ ನೀಡಿ ವಾಹನವನ್ನು ಹಾಗೂ ಸ್ಥಳದಲ್ಲಿದ್ದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಟ್ವಾಳ ನಗರ ಪೊಲೀಸ್‌ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಅವರು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೆ ಭಜರಂಗದಳ, ವಿಶ್ವಹಿಂದೂಪರಿಷತ್ ಕಲ್ಲಡ್ಕ ಪ್ರಖಂಡ ಖಂಡನೆ ವ್ಯಕ್ತಪಡಿಸಿದ್ದಾರೆ.

Continue Reading

BANTWAL

ಹಿಂದೂ ಸಂಘಟನೆಯ ಮುಖಂಡನಿಗೆ ಸ್ನೇಹಿತನಿಂದಲೆ ಚೂ*ರಿ ಇರಿತ

Published

on

ಬಂಟ್ವಾಳ : ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಸ್ನೇಹಿತನೇ ಚೂ*ರಿಯಿಂದ ಇರಿದ ಘಟನೆ ಬಂಟ್ವಾಳದಲ್ಲಿ ಭಾನುವಾರ(ಎ.14) ರಾತ್ರಿ ನಡೆದಿದೆ.

ಹಿಂದೂ ಯುವಸೇನೆಯ ಮುಖಂಡ ಉದ್ಯಮಿಯಾಗಿರುವ ಪುಷ್ಪರಾಜ್ ಎಂಬವರಿಗೆ ಜಕ್ರಿಬೆಟ್ಟು ಎಂಬಲ್ಲಿ ಚೂ*ರಿ ಇರಿತವಾಗಿದೆ. ಇರಿತಕ್ಕೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ. ರಿಕ್ಷಾದಲ್ಲಿ ಜತೆಯಾಗಿ ತೆರಳುತ್ತಿದ್ದಾಗಲೇ ಸ್ನೇಹಿತ ರವಿ ಎಂಬಾತ ಚೂ*ರಿಯಿಂದ ಕುತ್ತಿಗೆಗೆ ಇರಿದಿದ್ದಾನೆ ಎಂದು ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಪುಷ್ಪರಾಜ್ ರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿ ರವಿ ಚೂ*ರಿ ಇರಿದು ಪರಾರಿಯಾಗಿದ್ದಾನೆ. ಬಂಟ್ವಾಳ ನಗರ ಠಾಣಾ ಪೋಲೀಸರು ಸ್ಥಳಕ್ಕೆ ‌ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

BANTWAL

ಬಂಟ್ವಾಳ: ಮಾರ್ಗ ನಡುವೆ ಹೊ*ತ್ತಿ ಉರಿದ ಡಸ್ಟರ್ ಕಾರ್

Published

on

ಬಂಟ್ವಾಳ: ಡಸ್ಟರ್ ಕಾರೊಂದು ಮಾರ್ಗದ ನಡುವೆ ಹೊ*ತ್ತಿ ಉರಿದ ಘಟನೆ ಬಂಟ್ವಾಳ – ಮೂಡುಬಿದಿರೆಯ ಕುದ್ಕೋಳಿ ಸಮೀಪ ಸೋಮವಾರ ಬೆಳಗ್ಗೆ ಸಂಭವಿಸಿದೆ.

ಕಾರಿನಲ್ಲಿ ಏಕಾಏಕಿ ಬೆಂ*ಕಿ ಕಾಣಿಸಿಕೊಂಡಿದ್ದು ಕಾರಿನಲ್ಲಿದ್ದವರು ಕಾರಿನಿಂದ ಕೆಳಗಿಳಿದಿದ್ದಾರೆ. ಬೆಂ*ಕಿ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಮತ್ತು ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂ8ಕಿ ನಂದಿಸುವ ಕಾರ್ಯ ನಿರ್ವಹಿಸಿದರು. ಸುಮಾರು ಒಂದು ಗಂಟೆಯ ಕಾಲ ಬಂಟ್ವಾಳ-ಮೂಡಬಿದ್ರೆ ರೋಡ್ ಬ್ಲಾಕ್ ಆಗಿತ್ತು.

ಕಾರಿನ ಬ್ಯಾಟರಿ ಶಾರ್ಟ್‌ ಸಕ್ಯೂರ್ಟ್‌ನಿಂದಾಗಿ ಬೆಂ*ಕಿ ಕಾಣಿಸಿಕೊಂಡಿದೆ. ಕಾರಿನಲ್ಲಿ ಮಗು ಸೇರಿದಂತೆ ನಾಲ್ಕು ಮಂದಿ ಇದ್ದರು. ಆದರೆ ಯಾರಿಗೂ ಹಾನಿಯಾಗಲಿಲ್ಲ.

Continue Reading

LATEST NEWS

Trending