ಬಂಟ್ವಾಳ: ನಾವೂರ ಗ್ರಾಮ ಪಂಚಾಯತ್ ನಲ್ಲಿ ಇಂದು ನಡೆದ ಗ್ರಾಮ ಸಭೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ದೂರಿಗೆ ಪ್ರತಿ ದೂರು ದಾಖಲಾಗಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಕುಲಾಲ್ ಅವರಿಗೆ ಸದಸ್ಯ ಜನಾರ್ದನ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾವೂರ ಗ್ರಾ.ಪಂ. ನ ಒಂದನೇ ವಾರ್ಡ್ ನಲ್ಲಿ ರಸ್ತೆ ಚರಂಡಿ ಕಾಮಗಾರಿಯನ್ನು ರಿಯಾಜ್ ಎಂಬಾತ ಮಾಡಿದ್ದು, ಈತನಿಗೆ ಕಾಮಗಾರಿಯ ಹಣ ಪಾವತಿಸಲು ಬಾಕಿ ಇರುವ ವಿಚಾರದಲ್ಲಿ ಗ್ರಾಮ ಸಭೆಯಲ್ಲಿ ಗಲಾಟೆ ನಡೆದಿದೆ.
ಈ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಬಳಿಕ ಹಣ ನೀಡುವಂತೆ ಗ್ರಾಮಪಂಚಾಯತ್ ಅಧ್ಯಕ್ಷರು ಟಿಪ್ಪಣಿ ಬರೆದಿದ್ದರು, ಈ ವಿಚಾರಕ್ಕೆ ಹಾಗೂ ಹಣ ಯಾಕೆ ಪಾವತಿಸುತ್ತಿಲ್ಲ ಎಂದು ಸದಸ್ಯ ಪ್ರಶ್ನೆ ಮಾಡಿದ್ದಲ್ಲದೆ ವೇದಿಕೆಯತ್ತ ಆಗಮಿಸಿ ಅಧ್ಯಕ್ಷ ನ ಮೇಲೆ ಹಲ್ಲೆ ನಡೆಸಿ ದ್ದಾನೆ ಎಂದು ದೂರು ನೀಡಿದ್ದಾನೆ.
ದೂರಿಗೆ ಪ್ರತಿ ದೂರು
ಗ್ರಾಮ ಪಂಚಾಯತ್ ಅಧ್ಯಕ್ಷ ಸದಸ್ಯನೋರ್ವನಿಗೆ ಹಲ್ಲೆ ನಡೆಸಿದ್ದಾನೆ ಎಂದು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ಗ್ರಾಮಸಭೆಯಲ್ಲಿ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದ್ದಕ್ಕೆ ಅಧ್ಯಕ್ಷ ಹಲ್ಲೆ ನಡೆಸಿದ್ದಾನೆ ಎಂದು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದ.
ಅ ಬಳಿಕ ದೂರಿಗೆ ಪ್ರತಿಯಾಗಿ ಅಧ್ಯಕ್ಷ ಸದಸ್ಯ ಹಲ್ಲೆ ನಡೆಸಿದ್ದಾನೆ ಎಂದು ದೂರು ನೀಡಿದ್ದಲ್ಲದೇ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ದಾಖಲಾಗಿದ್ದಾನೆ.
ಬಂಟ್ವಾಳ: ಪ್ರಶ್ನೆ ಕೇಳಿದ್ದಕ್ಕೆ ಸದಸ್ಯನ ಮೇಲೆ ಗ್ರಾ.ಪಂ ಅಧ್ಯಕ್ಷನಿಂದ ಹಲ್ಲೆ, ಚೂರಿ ಇರಿಯಲು ಯತ್ನ