ಬಂಟ್ವಾಳ: ಶಾಸಕ ರಾಜೇಶ್ ನಾಯಕ್ ಬೆಂಬಲಿಗರು ಹೇಗೆ ಮರಳುಗಾರಿಕೆ ಹೇಗೇ ಮಾಡುತ್ತಿದ್ದಾರೆ ಅಂತ ಹೇಳಿದರೆ ನನಗೆ ಬೇಸರ ಆಗುತ್ತದೆ. ಯಾರ್ರಿ ನಮ್ಮನ್ನು ನಿಲ್ಸೋನು? ಯಾವ ಮಗ? ಯಾವ ಪೊಲೀಸ್? ಯಾವ ಪತ್ರಿಕೆಯವರು ನಮ್ಮನ್ನು ನಿಲ್ಲಿಸುತ್ತಾನೆ ಎಂದು ರಾಜರೋಷವಾಗಿ ಹೇಳುತ್ತಾ ಮರಳುಗಾರಿಕೆ ಮಾಡುತ್ತಾರೆ ಎಂದು ಮಾಜಿ ಸಚಿವ ಬಿ.ರಮಾನಾಥ್ ರೈ ಆರೋಪಿಸಿದ್ದಾರೆ.
ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಪೆರಾಜೆ ಗ್ರಾಮದ ಬುಡೋಳಿ ಜಂಕ್ಷನ್ ನಲ್ಲಿ ಅಕ್ರಮ ಮರಳು ಗಾರಿಕೆಯ ವಿರುದ್ದ ಬೃಹತ್ ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ರೈ, ಒಂದು ಕಡೆ ಪರ್ಮಿಟ್ ತೆಗೆದು ಎಲ್ಲಾ ಕಡೆ ಮರಳುಗಾರಿಕೆ ಮಾಡುತ್ತಿದ್ದಾರೆ. ಸಜಿಪ, ಬಿಸಿರೋಡ್, ಸರಪಾಡಿ, ಮಣಿನಾಲ್ಕೂರಿನಲ್ಲಿ ತೆಗೆಯುತ್ತಿದ್ದಾರೆ. ರಾಜಾರೋಷವಾಗಿ ಮಿಷನ್ ಮೂಲಕ ತೆಗೆಯುತ್ತಿದ್ದಾರೆ.
ನನ್ನ ಕಾಲದಲ್ಲಿ ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಸಿನಿಯಾರಿಟಿ ಮೇಲೆ ಪಟ್ಟಿ ಮಾಡಿ ಮರಳು ತೆಗೆಯಲು ಅವಕಾಶ ಕೊಡಿ ಎಂದಿದ್ದೆ. ಅದರಲ್ಲಿ ಯಾವ ಪಕ್ಷದವರೂ ಇರಬಹುದು. ಮಯೂರ್ ಎಂಬ ಬಿಜೆಪಿ ನಾಯಕ ಮರಳುಗಾರಿಕಾ ಸಂಘದ ಅಧ್ಯಕ್ಷನಾಗಿದ್ದ.
ಅವನ ಬಳಿ ನಾನೇದರೂ ರಾಜಕೀಯ ಒತ್ತಡವನ್ನು ಮಾಡಿದ್ದೇನಾ ಎಂಬ ಪ್ರಶ್ನೆ ಕೇಳಬೇಕು. ನಾನ್ ಸಿಆರ್‌ಝೆಡ್‌ನಲ್ಲಿ ಮರಳುಗಾರಿಕೆಗೆ ಕಾನೂನುನನ್ನು ನನ್ನ ಕಾಲದಲ್ಲಿ ಮಾಡಿದ್ದೇನೆ.
ಮೂಡೂರು ಜೋಡುಕರೆ ಕಂಬಳದ ವೇಳೆ ಕಂಬಳದ ಕರೆಗೆ ಹಾಕಲು ಅನುಮತಿ ಪಡೆದು ಮರಳು ತೆಗೆಯುತ್ತಿದ್ದಾಗ ಈ ಬಿಜೆಪಿ ಶಾಸಕರ ಮುಖಾಂತರ ಡಿಸಿ, ಎಸ್‌ಪಿಗೆ ಒತ್ತಡದ ಮೂಲಕ ಅದನ್ನು ನಿಲ್ಲಿಸುವ ಕೆಲಸವನ್ನು ಮಾಡಿದ್ದಾರೆ.
ಆದರೆ ಅದೇ ಡಿಸಿ, ಎಸ್‌ಪಿಗೆ ಇಲ್ಲಿ ನಡೆಯುವ ಮರಳುಗಾರಿಕೆ ಬಗ್ಗೆ ತಿಳಿದಿಲ್ಲವೇ ಎಂದು ಕಾಂಗ್ರೆಸ್ ಮುಖಂಡನೋರ್ವ ಪ್ರಶ್ನಿಸಿದರು.
ಈ ಸಂದರ್ಭ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್,
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ,ಎಂ ಎಸ್ ಮೊಹಮ್ಮದ್, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ,
ಮಾಜಿ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಪಿಯೂಸ್ ಎಲ್ ರೊಡ್ರಿಗಸ್, ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪೂಜಾರಿ ಜೋರ,
ಪ್ರಮುಖರಾದ ಮಾಯಿಲಪ್ಪ ಸಾಲ್ಯಾನ್,ಉಮಾನಾಥ್ ಶೆಟ್ಟಿ, ಶ್ರೀಮತಿ ಜಯಂತಿ ವಿ ಪೂಜಾರಿ,ಕುಶಲ ಪೆರಾಜೆ ಮೊದಲಾದವರು ಉಪಸ್ಥಿತರಿದ್ದರು.