Connect with us

  BANTWAL

  ಬಂಟ್ವಾಳ: ಕೆ.ಜೆ-ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಬೋಳಂತೂರು ನಿವಾಸಿ ಪೊಲೀಸ್ ವಶಕ್ಕೆ

  Published

  on

  ಬಂಟ್ವಾಳ: ಬೆಂಗಳೂರು ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ನಡೆದ ರಾಜ್ಯದಲ್ಲಿ ಸಂಚಲನ ಮೂಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಬೊಳಂತೂರು ನಿವಾಸಿಯೋರ್ವನನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಯ ದೃಷ್ಟಿಯಿಂದ ಬೆಂಗಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ.


  ಬೋಳಂತೂರು ನಿವಾಸಿ ಮಹಮ್ಮದ್ ಕುಟ್ಟಿ ಅವರ ಪುತ್ರ ಮಹಮ್ಮದ್ ತಪ್ಸೀರ್ ಎಂಬಾತನ್ನು ಪೋಲೀಸರು ದೀರ್ಘಕಾಲದ ವಿಚಾರಣೆ ಬಳಿಕ ಬೆಳಿಗ್ಗೆ 11.45 ರ ಸುಮಾರಿಗೆ ವಶಕ್ಕೆ ಪಡೆದುಕೊಂಡು ಬಂಟ್ವಾಳಕ್ಕೆ ಕರೆತಂದಿದ್ದಾರೆ. ಆ ಬಳಿಕ ರಾಜ್ಯ ಪೋಲೀಸರಿಗೆ ಒಪ್ಪಿಸಿದ್ದಾರೆ.

  ಕಳೆದ ವರ್ಷ ಬೆಂಗಳೂರಿನ ಕೆ.ಜೆ. ಡಿ.ಜೆ .ಹಳ್ಳಿಯಲ್ಲಿ ಅಖಂಡ ಶ್ರೀನಿವಾಸ ಅವರ ಮನೆಗೆ ದಾಂಧಲೆ ನಡೆಸಿ ಅ ಬಳಿಕ ಪೋಲಿಸ್ ಠಾಣೆಗೆ ನುಗ್ಗಲು ಪ್ರಯತ್ನಿಸಿ ಸಾಕಷ್ಟು ಹಾನಿ ಉಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಪೋಲೀಸರ ತಂಡ ತನಿಖೆ ನಡೆಸುತ್ತಿತ್ತು .


  ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ ತಪ್ಸೀರ್ ಕೂಡ ಭಾಗಿಯಾಗಿದ್ದ ಎಂಬ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿದೆ.

  ಈ ಪ್ರಕರಣಕ್ಕೆ ಆರಂಭದಲ್ಲಿ ಪೂರಕವಾದ ಯೋಜನೆ ರೂಪಿಸಿದ ತಂಡದ ಜೊತೆಗೆ ಈತ ನಿರಂತರವಾಗಿ ಸಂಪರ್ಕವನ್ನು ಇರಿಸಿಕೊಂಡಿದ್ದ ಎಂಬ ಆರೋಪದಲ್ಲಿ ಈತನ ಮನೆಗೆ ದಾಳಿ ನಡೆಸಲಾಗಿದೆ.

  ತಪ್ಸೀರ್ ಪಿ.ಎಫ್.ಐ‌ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದ. ಈತ ಇತ್ತೀಚಿನ ದಿನಗಳಲ್ಲಿ ಪ್ರಮುಖವಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಪ್ರಸ್ತುತ ಈತ ಉದ್ಯಮ ನಡೆಸುತ್ತಿದ್ದು, ಬೋಳಂತರಿನಲ್ಲಿ ವಾಸವಾಗಿದ್ದ.


  ಬಂಟ್ವಾಳ ಹಾಗೂ ವಿಟ್ಲ ಪೋಲಿಸರ ತಂಡ ಮುಂಜಾನೆ ಮೂರು ಗಂಟೆಗೆ ರಾಜ್ಯದ ಪೋಲೀಸರು ನೀಡಿದ ವಿಳಾಸದಂತೆ ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದಲ್ಲಿರುವ ಈತನ ದೊಡ್ಡಪ್ಪನ ಮನೆಗೆ ಈತನ ಮನೆ ಎಂದು ತಪ್ಪಾಗಿ ಗ್ರಹಿಸಿ ಮನೆಗೆ ಹೋದಾಗ ಇಲ್ಲಿ ಈತ ಇಲ್ಲ ಬೊಳಂತೂರಿನಲ್ಲಿ ವಾಸವಾಗಿದ್ದಾನೆ ಎಂದು ತಿಳಿಸಿದ್ದಾರೆ.

  ಆದರೆ ಈತನ ವಿಳಾಸ ಮಾತ್ರ ದೊಡ್ಡಪ್ಪನ ಮನೆಯದ್ದು ನೀಡಿದ್ದ ಎಂಬುದು ಗೊತ್ತಾದ ಬಳಿಕ ರೈಡ್ ಮಾಡಲಾಯಿತು. ಅಗತ್ಯ ದಾಖಲೆಗಳ ಸಹಿತ ಆರೋಪಿ ಮೊಬೈಲ್ ಜೊತೆ ಮನೆಯವರ ಮೊಬೈಲ್ ಗಳನ್ನು ಪೋಲೀಸರು ‌ವಶಕ್ಕೆ ಪಡೆದುಕೊಂಡಿದ್ದಾರೆ.

  ಬೆಂಗಳೂರು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೋಲೀಸರ ನಿರ್ದೇಶನದಂತೆ ಬಂಟ್ವಾಳ ಪೋಲೀಸರ ತಂಡ ಮನೆಗೆ ದಾಳಿ ನಡೆಸಿದಾಗ ಸ್ಥಳೀಯ ಸಂಘಟನೆಯ ಪ್ರಮುಖರು ಮನೆ ಮುಂದೆ ಸುಮಾರು 250 ಕ್ಕೂ ಅಧಿಕ ಜನರ ತಂಡ ಎನ್. ಐ.ಎ ಗೋ ಬ್ಯಾಕ್ ಗೋ ಬ್ಯಾಕ್ ಎಂದು ಘೋಷಣೆ ಕೂಗಿದರು.

  ಆದರೆ ನಾವು ಬಂಟ್ವಾಳ ಪೋಲೀಸರು ಎನ್.ಐ.ಎ.ಅಲ್ಲ ಎಂಬ ವಿಚಾರ ತಿಳಿಸಿ ಬಳಿಕ ಯಾಕೆ ಬಂದಿದ್ದು, ಯಾವ ವಿಚಾರ ನಮಗೆ ತಿಳಿಸಬೇಕು ಎಂದು ಒತ್ತಾಯ ಮಾಡಿದಾಗ ಪೋಲೀಸರ ಭಾಷೆಯಲ್ಲಿ ಸಮಜಾಯಿಷಿ ನೀಡಿದರು.

  ಬಂಧಿತನಾದ ತಪ್ಸೀರ್ ಮನೆ ಮದುವೆಯ ಸಂಭ್ರಮದಲ್ಲಿದೆ. ಈತನ ಸಹೋದರನ ಮದುವೆಗಾಗಿ ಎಲ್ಲಾ ಪೂರ್ವ ತಯಾರಿಗಳು ನಡೆಯುತ್ತಿದೆ. ಆದರೆ ಈ ಮಧ್ಯೆ ಈತನ ಬಂಧನವಾಗಿರುವುದು ಕುಟುಂಬದ ಸದಸ್ಯರಿಗೆ ದುಃಖ ತಂದಿದೆ.

  ರಾಜ್ಯ ಪೋಲೀಸ್ ನಿರ್ದೇಶನದಂತೆ ಬಂಟ್ವಾಳ ಡಿವೈಎಸ್.ಪಿ. ಪ್ರತಾಪ್ ಸಿಂಗ್ ಥೋರಾಟ್ ಅವರ ಮಾರ್ಗದರ್ಶನದಲ್ಲಿ ವಿಟ್ಲ ಇನ್ಸ್ ಪೆಕ್ಟರ್ ನಾಗರಾಜ್ ಎಚ್, ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ,

  ಗ್ರಾಮಾಂತರ ಇನ್ಸ್ ಪೆಕ್ಟರ್ ಟಿ.ಡಿ‌.ನಾಗರಾಜ್. ಪಿ ಎಸ್.ಐ.ಗಳಾದ ಅವಿನಾಶ್, ಹರೀಶ್, ಕಲೈಮಾರ್, ಸಂದೀಪ್, ಹಾಗೂ ಸಿಬ್ಬಂದಿ ವರ್ಗ,ಕೆ.ಎಸ್.ಆರ್‌ಪಿ ಪೋಲಿಸರ ತಂಡ ಕಾರ್ಯಚರಣೆ ನಡೆಸಿತ್ತು.

  BANTWAL

  ಬಂಟ್ವಾಳ: ಹಂಚಿಕಟ್ಟೆಯಲ್ಲಿ ಸಾಗಾಟದ ಲಾರಿಯಲ್ಲಿದ್ದ ಸಿಎನ್‌ಜಿ ಸೋರಿಕೆ

  Published

  on

  ಬಂಟ್ವಾಳ: ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿಯ ವಗ್ಗ ಸಮೀಪದ ಹಂಚಿಕಟ್ಟೆಯಲ್ಲಿ ಗೇಲ್ ಕಂಪನಿಯ ಸಿಎನ್‌ಜಿ ಗ್ಯಾಸ್ ಸಾಗಾಟದ ಲಾರಿಯಲ್ಲಿದ್ದ ಸಿಎನ್‌ಜಿ ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಾದ ಘಟನೆ ನಡೆದಿದೆ.

  ಸಿಎನ್‌ಜಿ ಸೋರಿಕೆ ಗಮನಕ್ಕೆ ಬಂದ ತಕ್ಷಣ ಲಾರಿ ಚಾಲಕ ಹೆದ್ದಾರಿ ಬದಿಗೆ ನಿಲ್ಲಿಸಿದ್ದು, ಬಳಿಕ ಬಂಟ್ವಾಳ ಅಗ್ನಿಶಾಮಕ ದಳದವರು ಸ್ಥಳಕ್ಕೆ ತೆರಳಿದ್ದಾರೆ.

  ಅದಾಗಲೇ ಸೋರಿಕೆಯನ್ನು ಚಾಲಕ ಹಾಗೂ ಸ್ಥಳೀಯರು ಸೇರಿ ತಡೆದಿದ್ದಾರೆ.

  Continue Reading

  BANTWAL

  ಬಂಟ್ವಾಳ: ವಿದ್ಯುತ್ ಶಾ*ಕ್‌ ಹೊಡೆದು ಶಾಮಿಯಾನದ ಕೆಲಸಗಾರ ಬ*ಲಿ

  Published

  on

  ಬಂಟ್ವಾಳ: ಪುಂಜಾಲಕಟ್ಟೆಯಲ್ಲಿ ನಿನ್ನೆಯ ದಿನ ಶಾಮಿಯಾನದ ಲಾರಿ ಪಲ್ಟಿಯಾಗಿ ಓರ್ವ ಮೃ*ತಪಟ್ಟ ಘಟನೆಯ ಬೆನ್ನಲ್ಲೇ ಶಾಮಿಯಾನದ ಕೆಲಸಗಾರನೋರ್ವ ವಿದ್ಯುತ್ ಶಾ*ಕ್‌ ಗೆ ಬ*ಲಿಯಾದ ದುರಂ*ತ ಘಟನೆ ನಡೆದಿದೆ.

  ಲಾರಿಯಿಂದ ಶಾಮಿಯಾನದ ಸಾಮಾಗ್ರಿಗಳನ್ನು ಇಳಿಸುವ ವೇಳೆ ವಿದ್ಯುತ್ ವಯರ್ ತಾಗಿ ನಾಲ್ವರು ಕೆಲಸಗಾರರಿಗೆ ಗಾಯವಾಗಿದ್ದು, ಅದರಲ್ಲಿ ಓರ್ವ ಗಂಭೀರವಾಗಿ ಗಾ*ಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಇದ್ದರು. ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃ*ತಪಟ್ಟ ಘಟನೆ ಕಡೇಶಿವಾಲಯ ಸಮೀಪ ಕಾಡಬೆಟ್ಟು ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.

  ಈತ ಕಲ್ಲಡ್ಕ ಸಾಲಿಯಾನ್ ಶಾಮಿಯಾನದ ಕೆಲಸಗಾರರು ಎಂದು ಸ್ಥಳೀಯರು ತಿಳಿಸಿದ್ದು, ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ನಾಲ್ವರು ಕೆಲಸಗಾರರು ಉತ್ತರಪ್ರದೇಶ ಮೂಲದವರು ಎಂದು ಹೇಳಲಾಗುತ್ತಿದೆ.

  ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  Continue Reading

  BANTWAL

  ವಿಟ್ಲದಲ್ಲಿ ಕುಸಿದು ಬಿದ್ದ ಕೋಳಿ ಶೆಡ್; 1500ಕ್ಕೂ ಅಧಿಕ ಕೋಳಿ ಸಾ*ವು

  Published

  on

  ವಿಟ್ಲ: ಕೋಳಿ ಸಾಕಾಣೆ ಮಾಡುವ ಶೆಡ್ ನೆಲಕ್ಕುರುಳಿ ಸುಮಾರು ಒಂದೂವರೆ ಸಾವಿರ ಕೋಳಿಗಳು ಮೃ*ತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಸೇಕೆಹಿತ್ಲು ಎಂಬಲ್ಲಿ ನಡೆದಿದೆ.

  ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ನಿವಾಸಿ ರಾಘವರವರ ಮಾಲಕತ್ವದ ಶೆಡ್ ಇದಾಗಿದ್ದು, ಸುಮಾರು 2200 ಕೋಳಿಗಳನ್ನು ಅವರು ಸಾಕಾಣೆ ಮಾಡುತ್ತಿದ್ದರು.

  ಶೆಡ್ಡಿನ ಮೇಲ್ಚಾವಣಿ ಒಮ್ಮೆಲೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಸುಮಾರು 1500 ಕೋಳಿಗಳು ಅದರಡಿಗೆ ಬಿದ್ದು ಸತ್ತುಹೋಗಿವೆ. ಘಟನೆಯಿಂದಾಗಿ ಶೆಡ್ ಸಂಪೂರ್ಣ ನಾ*ಶವಾಗಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.

  Continue Reading

  LATEST NEWS

  Trending