Thursday, September 29, 2022

ಬಂಟ್ವಾಳ: ಕೆ.ಜೆ & ಡಿ.ಜೆ.ಹಳ್ಳಿ ಗಲಭೆ ಪ್ರಕರಣ-ಬೋಳಂತೂರು ಹಾಗೂ ಪುತ್ತೂರು ನಿವಾಸಿ ಬಂಧನ

ಬಂಟ್ವಾಳ: ಬೆಂಗಳೂರು ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ, ಬಂಟ್ವಾಳ ಹಾಗೂ ಪುತ್ತೂರು ಪೋಲೀಸರು ವಶಪಡಿಸಿಕೊಂಡ ಬೋಳಂತೂರು ನಿವಾಸಿ ಹಾಗೂ ಪುತ್ತೂರಿನ ವ್ಯಕ್ತಿಯೋರ್ವನನ್ನು ಬೆಂಗಳೂರು ಪೊಲೀಸರು ಇಂದು ಬಂಧಿಸಿದ್ದಾರೆ.

ಬಂಟ್ವಾಳದ ಮಹಮ್ಮದ್ ತಪ್ಸೀರ್ ಹಾಗೂ ಪುತ್ತೂರು ನಿವಾಸಿ ಅಬ್ದುಲ್ ಖಾದರ್ ಬಂಧಿತ ಆರೋಪಿಗಳು.

ಬಂಟ್ವಾಳ ಪೋಲೀಸರ ತಂಡ ರಾಜ್ಯದ ಪೋಲೀಸ್ ನಿರ್ದೇಶನದಂತೆ ಬಂಟ್ವಾಳ ಡಿ.ವೈಎಸ್ ಪಿ ಅವರ ಮಾರ್ಗದರ್ಶನದಲ್ಲಿ ನಿನ್ನೆ ಬಂಟ್ವಾಳದ ಮಹಮ್ಮದ್ ತಪ್ಸೀರ್ ಮನೆಗೆ ಮುಂಜಾನೆ ವೇಳೆ ದಾಳಿ ನಡೆಸಿದ್ದರು‌.

ಅ ಬಳಿಕ ವಿಟ್ಲ ಪೋಲೀಸ್ ಇನ್ಸ್‌ಪೆಕ್ಟರ್ ಎಚ್.ನಾಗರಾಜ್ ಅವರು ತಪ್ಸೀರ್ ನ್ನು ವಿಚಾರಣೆ ನಡೆಸಿ ಮನೆಯಲ್ಲಿದ್ದ ಪ್ರಮುಖ ದಾಖಲೆಗಳನ್ನು ಹಾಗೂ ಮೊಬೈಲ್ ಫೋನ್ ವಶಕ್ಕೆ ತೆಗೆದುಕೊಂಡು ಆತನನ್ನು ವಶಕ್ಕೆ ತೆಗೆದುಕೊಂಡು ಬಂಟ್ವಾಳ ಪೊಲೀಸರಿಗೆ ಒಪ್ಪಿಸಲಾಗಿತ್ತು.

ಆ ಬಳಿಕ ಬಂಟ್ವಾಳ ನಗರ ಠಾಣಾ ಪಿ.ಎಸ್.ಐ‌.ಅವಿನಾಶ್, ಗ್ರಾಮಾಂತರ ಎಸ್.ಐ.ಹರೀಶ್ ಹಾಗೂ ಸಿಬ್ಬಂದಿ ಆರೋಪಿಗಳನ್ನು ಪೋಲೀಸ್ ವಾಹನದ ಮೂಲಕ ಪುತ್ತೂರು ನಿವಾಸಿ ಅಬ್ದುಲ್ ಖಾದರ್ ಹಾಗೂ ಬೊಳಂತೂರು ನಿವಾಸಿ ಮಹಮ್ಮದ್ ತಪ್ಸೀರ್ ಇಬ್ಬರನ್ನು ಬೆಂಗಳೂರಿಗೆ ನಿನ್ನೆ ಕರೆದುಕೊಂಡು ಹೋಗಿದ್ದು, ಇಂದು ಮುಂಜಾನೆ ಬೆಂಗಳೂರು ತಲುಪಿದ್ದಾರೆ.

ಆ ಬಳಿಕ ಬಂಟ್ವಾಳ ಪೋಲೀಸರ ತಂಡ ಆರೋಪಿಗಳಿಬ್ಬರನ್ನು ಬೆಂಗಳೂರು ಪೋಲೀಸರ ಕೈ ಗೆ ಒಪ್ಪಿಸಿದ್ದಾರೆ.

ಬೆಂಗಳೂರು ಪೋಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯ ಕ್ಕೆ ಹಾಜರುಪಡಿಸುವ ಸಾಧ್ಯತೆಗಳಿವೆ.

LEAVE A REPLY

Please enter your comment!
Please enter your name here

Hot Topics

ಪುತ್ತೂರಿನಲ್ಲಿ ಜಾಗದ ತಕರಾರು: V.A ಕಚೇರಿಗೆ ನುಗ್ಗಿ ದಾಂಧಲೆ-ಮಾರಕಾಸ್ತ್ರಗಳಿಂದ ಹತ್ಯೆ ಯತ್ನ

ಪುತ್ತೂರು: ಜಾಗದ ತಕರಾರಿಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ ಸವಣೂರು ಕಂದಾಯ ಕಛೇರಿಗೆ ನುಗ್ಗಿ ತಲವಾರಿನಿಂದ ಹಲ್ಲೆಗೆ ಮುಂದಾಗಿ, ಕಲ್ಲು ಎತ್ತುಹಾಕಿ ಕೊಲೆಗೆ ಯತ್ನಿಸಿದ ಘಟನೆ ಪುತ್ತೂರಿನ ಸವಣೂರು ಜಂಕ್ಷನ್ ನಲ್ಲಿ ಇಂದು ನಡೆದಿದೆ.ಸವಣೂರು ಗ್ರಾಮದ...

ಅಪರಿಚಿತರಿಂದ ಕಾಲಿವುಡ್‌ ‘ಆ್ಯಕ್ಷನ್‌ ಸ್ಟಾರ್’ ವಿಶಾಲ್ ಮನೆಗೆ ಕಲ್ಲು ತೂರಾಟ

ಚೆನ್ನೈ: ಕಾಲಿವುಡ್‌ನ 'ಆ್ಯಕ್ಷನ್‌ ಸ್ಟಾರ್' ನಟ ವಿಶಾಲ್ ಅವರ ಮನೆಗೆ ಯಾರೋ ಅಪರಿಚಿತ ಗನ್‌ಮ್ಯಾನ್‌ಗಳು ನುಗ್ಗಿ ಆಕ್ರಮಣ ಮಾಡಿ ಕಲ್ಲುತೂರಾಟ ಮಾಡಿದ್ದಾರೆ. ಅದರ ಪರಿಣಾಮವಾಗಿ ಮನೆಯ ಕಿಟಕಿ ಗಾಜುಗಳು ಒಡೆದಿರುವ ಘಟನೆ ಚೆನ್ನೈಯಲ್ಲಿ...

ಉಡುಪಿ: ಗಿರಿಜಾ ಹೆಲ್ತ್‌ಕೇರ್ & ಸರ್ಜಿಕಲ್ಸ್‌ನಲ್ಲಿ ‘ಫಾರ್ಮಾಸಿಸ್ಟ್‌ ಡೇ’ ಆಚರಣೆ

ಉಡುಪಿ: ಗಿರಿಜಾ ಹೆಲ್ತ್‌ಕೇರ್ ಆ್ಯಂಡ್ ಸರ್ಜಿಕಲ್ಸ್‌ನಲ್ಲಿ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್‌ ವತಿಯಿಂದ ಫಾರ್ಮಾಸಿಸ್ಟ್‌ ದಿನವನ್ನು ಉಡುಪಿಯಲ್ಲಿ ಆಚರಿಸಲಾಯಿತು.ಉಡುಪಿಯ ಸೀನಿಯರ್ ಸಿಟಿ ಲೀಗನ್ ಸಹಕಾರದೊಂದಿಗೆ ಉಡುಪಿ ಭಾಗದ ಕೆಲ ಹಿರಿಯ ಫಾರ್ಮಸಿಸ್ಟ್ ಗಳನ್ನು...