ಬಂಟ್ವಾಳ: ಬಂಟ್ವಾಳ ಸಮೀಪದ ಕೊಳ್ನಾಡು ಎಂಬಲ್ಲಿ ನಿರಂತರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಕಲಾವಿದರು ಯಕ್ಷಗಾನ ಬಯಲಾಟ ಪ್ರದರ್ಶನ ನೀಡಿದ್ದು ಇದೀಗ ಆ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಯಕ್ಷಗಾನದ ಶಕ್ತಿಯೇ ಅಂಥಾದ್ದು. ಭಾಗವತರ ಹಾಡುಗಾರಿಕೆ, ಚೆಂಡೆ ಅಬ್ಬರ, ಮದ್ದಲೆ ವಾದನ ಕೇಳಿಸಿತೆಂದರೆ ಇನ್ನೇನೂ ಬೇಡ ಎನ್ನುವ ಭಾವನೆ ಯಕ್ಷ ಪ್ರೇಮಿಗಳಲ್ಲಿ ಇರುತ್ತದೆ.
ಇದಕ್ಕೆ ನಿದರ್ಶನ ಎಂಬಂತೆ ಕಟೀಲು ಮೇಳದ ಕಲಾವಿದರು ಯಕ್ಷಗಾನ ಬಯಲಾಟವನ್ನು ಆಡಿತೋರಿಸಿದ್ದಾರೆ. ಏಕಾಏಕಿ ಸುರಿದ ಮಳೆಯಿಂದ ಕಂಗಾಲಾಗದ ಕಲಾವಿದರು ರಂಗಸ್ಥಳದಲ್ಲಿ ಕುಣಿಯಲಾರದೇ ಕಷ್ಟಪಟ್ಟರೂ ರಂಗಸ್ಥಳದಿಂದ ಕೆಳಗಿಳಿದು ಯಕ್ಷಗಾನ ಪ್ರದರ್ಶನ ನೀಡಿದರು.
ಈ ಘಟನೆ ನಡೆದಿರುವುದು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಮಂಡಳಿಯ ಎರಡನೇ ಮೇಳದ ಆಟವನ್ನು ಏರ್ಪಡಿಸಲಾಗಿತ್ತು.
ಆದರೆ ಏಕಾಏಕಿ ಮಳೆ ಸುರಿಯತೊಡಗಿದ್ದು ಬಳಿಕ ತಗಡಿನ ಚಪ್ಪದ ಅಡಿಯಲ್ಲಿ ಯಕ್ಷಗಾನ ಬಯಲಾಟ ಮುಂದುವರಿಯಿತು.
ಭಾಗವತರು, ಚೆಂಡೆ, ಮದ್ದಳೆ, ಚಕ್ರತಾಳದವರು ಕೂಡಾ ನಿಂತುಕೊಂಡೇ ಸಾಥ್ ನೀಡಿದರು.