ಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್ ಬಂಟರ ಭವನದಲ್ಲಿ ಶಾಸಕ ಡಾ ವೈ.ಭರತ್ ಶೆಟ್ಟಿ ನೇತೃತ್ವದಲ್ಲಿ ಸರಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಜನಸ್ಪಂದನಾ ಕಾರ್ಯಕ್ರಮಕ್ಕೆ ಅಳವಡಿಸಲಾಗಿದ್ದ ಬ್ಯಾನರನ್ನು ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ನಡೆದಿದೆ.
ಮಂಗಳೂರು ನಗರ ಉತ್ತರ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ಅವರು ತಮ್ಮ ಹೆಸರು ಮತ್ತು ಫೋಟೋ ಸಮೇತ ಪ್ಲೆಕ್ಸ್ ಅಳವಡಿಸಿದ್ದು, ಅದನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ.
ಬಿಜೆಪಿ ಯುವ ಮೋರ್ಚಾ ಮಹಾಶಕ್ತಿ ಕೇಂದ್ರ ಸುರತ್ಕಲ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಹಾಗು ಪಕ್ಷದ ಕಾರ್ಯಕರ್ತರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೃಷ್ಣಾಪುರ 7ನೇ ಬ್ಲಾಕ್ ಬಸ್ಸು ತಂಗುದಾಣದ ಎದುರುಗಡೆ ಅಳವಡಿಸಿದ್ದ ಫ್ಲೆಕ್ಸ್‌ನಲ್ಲಿ ಕಿಡಿಗೇಡಿಗಳು ಭರತ್ ರಾಜ್ ಕೃಷ್ಣಾಪುರ ಅವರ ಭಾವಚಿತ್ರಕ್ಕೆ ಯಾವುದೋ ಆಯುಧದಿಂದ X ಮಾರ್ಕಿನ ರೀತಿಯಲ್ಲಿ ಗೀರಿದ್ದಾರೆ.
ಈ ಹಿಂದೆ ಇದೇ ಪರಿಸರದಲ್ಲಿ ಭರತ್‌ರಾಜ್ ಮೇಲೆ ಕೊಲೆ ಯತ್ನ ನಡೆದಿದ್ದು ಇಂದು ಅವರ ಭಾವ ಚಿತ್ರಕ್ಕೆ X ಗುರುತು ನೋಡಿದಾಗ ಅವರ ಜೀವಕ್ಕೆ ಅಪಾಯವನ್ನುಂಟು ಮಾಡುವ ಪಿತೂರಿಯನ್ನು ಮಾಡುತ್ತಿರುವ ಸಂಶಯ ಮೂಡಿದೆ.
ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಭರತ್ ರಾಜ್ ಕೃಷ್ಣಾಪುರ ವಿರುದ್ಧ ಪಿತೂರಿ ಮಾಡುತ್ತಿರುವ ಕಿಡಿಗೇಡಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಕೋರಲಾಗಿದೆ.