Saturday, May 21, 2022

ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಸದ್ದು ಮಾಡಿದ ನಿಷೇಧಿತ ಸ್ಯಾಟಲೈಟ್‌ ಫೋನ್‌

ಮಂಗಳೂರು: ಒಂದು ವಾರದ ಅವಧಿಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ದಟ್ಟ ಅರಣ್ಯದ ಕೆಲವು ಪ್ರದೇಶಗಳಲ್ಲಿ ತುರಾಯಾ ಸ್ಯಾಟಲೈಟ್ ಫೋನ್ ಸದ್ದು ಮಾಡಿರುವ ಮಾಹಿತಿ ಗುಪ್ತಚರ ಅಧಿಕಾರಿಗಳು ಲಭಿಸಿದೆ.


ಇಲ್ಲಿಂದ ವಿದೇಶಕ್ಕೆ ಕರೆ ಸಂಪರ್ಕ ಆಗಿರುವುದನ್ನು ಪತ್ತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ತುರಾಯಾ ಸ್ಯಾಟಲೈಟ್ ಫೋನ್ ಬಳಕೆಯನ್ನು ಭಾರತದಲ್ಲಿ ನಿಷೇಧಿಸಲಾಗಿದ್ದರೂ,

ರಾಜ್ಯದ ಕರಾವಳಿಯಲ್ಲಿ ಈ ಫೋನ್ ಸಂಪರ್ಕ ಆಗಿರುವುದನ್ನು ಗುಪ್ತಚರ ಮೂಲಗಳು ದೃಢಪಡಿಸಿವೆ.
ಇತ್ತೀಚೆಗೆ ಶ್ರೀಲಂಕಾದಿಂದ ಐಎಸ್‌ ಪ್ರೇರಿತ ಶಂಕಿತ ಉಗ್ರರು ಭಾರತದ ಕರಾವಳಿಗೆ ನುಸುಳಿದ್ದಾರೆ ಎಂದು ಸುದ್ದಿಯಾಗಿತ್ತು.

ಈ ಕಾರಣದಿಂದ ಕೇಂದ್ರ ಗುಪ್ತಚರ ಇಲಾಖೆಯಿಂದ ಕಟ್ಟೆಚ್ಚರದ ಸೂಚನೆ ಬಂದಿತ್ತು. ಇದರ ಬೆನ್ನಲ್ಲೇ ನಿಷೇಧಿತ ಸ್ಯಾಟಲೈಟ್ ಫೋನ್ ಕರಾವಳಿಯಲ್ಲಿ ಸದ್ದುಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ವ್ಯಾಪ್ತಿಯ ಅರಣ್ಯ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಫೋನ್ ಸಂಪರ್ಕವಾಗಿರುವುದು ಗೊತ್ತಾಗಿದೆ.

ತುರಾಯಾ ಫೋನ್ ಅನ್ನು ಬಳಸಿದವರು ಯಾರು, ಅದರ ಮೂಲಕ ಯಾರನ್ನು ಸಂಪರ್ಕಿಸಲಾಗಿದೆ ಎಂಬುದನ್ನು ಖಚಿತವಾಗಿ ಪತ್ತೆ ಮಾಡಲು ಆಗದು.

ಹೀಗಾಗಿ ಈ ಫೋನ್‌ ಬಳಕೆಯನ್ನು ಭಾರತದಲ್ಲಿ 2012ರಲ್ಲೇ ನಿಷೇಧಿಸಲಾಗಿದೆ. ಈ ಫೋನ್ ಬಳಕೆಯಾಗಿ ಒಂದು ದಿನದ ಬಳಿಕ ಗುಪ್ತಚರ ಪಡೆಗಳಿಗೆ ಸಂದೇಶ ಬರುತ್ತದೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here

Hot Topics

ಪಠ್ಯದಲ್ಲಿ ನಾರಾಯಣಗುರು ಹೆಸರು ಕೈ ಬಿಟ್ಟಿರುವುದು ಮಾನವ ಕುಲಕ್ಕೆ ನೋವಾಗಿದೆ-ಮಾಜಿ ಸಚಿವ ರೈ

ಮಂಗಳೂರು: ಪಠ್ಯಪುಸ್ತಕ ಮರು ಪರಿಷ್ಕರಣೆ ವೇಳೆ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರು ಕೈ ಬಿಟ್ಟಿರುವುದು ಕೇವಲ ಹಿಂದುಳಿದ ವರ್ಗಕ್ಕೆ ಮಾತ್ರ ನೋವಾಗಿಲ್ಲ. ಸಮಸ್ತ ಮಾನವ ಸಮಾಜಕ್ಕೆ ನೋವು ತರುವಂತಹ ವಿಚಾರ ಎಂದು ಮಾಜಿ ಸಚಿವ...

ಪ್ರಮೋದ್‌ ಮಧ್ವರಾಜ್‌ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಲಿದ್ದಾರೆ: ಡಿಕೆಶಿ

ಉಡುಪಿ: ಬಿಜೆಪಿ ಸೇರಿದ ಪ್ರಮೋದ್‌ ಮಧ್ವರಾಜ್‌ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಲಿದ್ದಾರೆ. ನಾನೆಂಥ ದೊಡ್ಡ ತಪ್ಪು ಮಾಡಿದೆ ಎಂದು. ಕಾಂಗ್ರೆಸ್‌ ಪಕ್ಷ ಅವರಿಗೆ, ತಾಯಿಗೆ, ತಂದೆಗೆ ಎಲ್ಲವೂ ಕೊಟ್ಟಿತ್ತು ಎಂದು ಕೆಪಿಸಿಸಿ ಅಧ್ಯಕ್ಷ...

ಮಳೆಯ ನೀರಿನಿಂದ ಕೆರೆಯಂತಾದ ಬಿ.ಸಿ ರೋಡ್ ಬಸ್ ನಿಲ್ದಾಣ

ಬಂಟ್ವಾಳ: ಬಿ.ಸಿರೋಡಿನಿಂದ ಮಂಗಳೂರು ಭಾಗಕ್ಕೆ ತೆರಳುವ ಬಸ್ಸುಗಳು ನಿಲ್ಲುವ ಸ್ಥಳದಲ್ಲಿ ಕೃತಕ ನೀರು ನಿಂತು ಪ್ರಯಾಣಿಕರು ಅದೇ ನೀರಿನಲ್ಲಿ ನಿಂತು ಬಸ್ಸಿಗಾಗಿ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಪುತ್ತೂರು, ಧರ್ಮಸ್ಥಳ, ಉಪ್ಪಿನಂಗಡಿ, ವಿಟ್ಲ ಭಾಗದಿಂದ ಆಗಮಿಸುವ...