ಮಂಗಳೂರು/ ಬಾಂಗ್ಲಾದೇಶ: ಹೊಸ ಕರೆನ್ಸಿ ನೋಟುಗಳಲ್ಲಿ ಬಾಂಗ್ಲಾದೇಶದ ‘ಬಂಗಬಂಧು’ ಖ್ಯಾತಿಯ ಶೇಖ್ ಮುಜಿಬುರ್ ರೆಹಮಾನ್ ಅವರ ಚಿತ್ರಗಳು ಇರುವುದಿಲ್ಲ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ಇನ್ನೂ ಹೊಸ ಕರೆನ್ಸಿ ನೋಟುಗಳಲ್ಲಿ ಧಾರ್ಮಿಕ ರಚನೆಗಳು, ಬಂಗಾಳಿ ಸಂಪ್ರದಾಯಗಳು ಮತ್ತು ಜುಲೈ ದಂಗೆಯ ಸಮಯದಲ್ಲಿ ಚಿತ್ರಿಸಿದ ‘ಗೀಚುಬರಹ’ಗಳನ್ನು ಕರೆನ್ಸಿ ನೋಟುಗಳಲ್ಲಿ ಸೇರಿಸಲ್ಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಬಾಂಗ್ಲಾದೇಶ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಹುಸ್ನೇರಾ ಶಿಖಾ ‘ಮುಂದಿನ ಆರು ತಿಂಗಳೊಳಗೆ ಹೊಸ ನೋಟು ಮಾರುಕಟ್ಟೆಗೆ ಬಿಡುಗಡೆಯಾಗಬಹುದು ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.
ಗಮನಾರ್ಹವಾಗಿ, ಮುಜಿಬುರ್ ರೆಹಮಾನ್ ಅವರ ಪರಂಪರೆಯನ್ನು ‘ರಾಷ್ಟ್ರಪಿತ’ ಎಂದು ಕರೆಯಲಾಗುತ್ತಿತ್ತು. ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಆಕ್ರಮನಕ್ಕೆ ಒಳಗಾಯಿತು. ವಿವಾದಾತ್ಮಕ ಉದ್ಯೋಗ ಕೋಟಾದ ವಿರುದ್ದ ಪ್ರತಿಭಟನೆ ಪ್ರಾರಂಭವಾಯಿತು. ಸರ್ಕಾರದ ವಿರುದ್ದ ಚಳುವಳಿಗಳು ಉಗ್ರ ಸ್ವರೂಪ ಪಡೆಯಿತು.
ಆಗಸ್ಟ್ ನಲ್ಲಿ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದರು. ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಗಳು ಪ್ರತಿಭಟನಕಾರರ ದಾಳಿಗೆ ಒಳಗಾಯಿತು.
ಇತ್ತಿಚೇಗೆ ಶೇಖ್ ಹಸೀನಾ ಅವರ ಹೇಳಿಕೆಗಳಲ್ಲಿ ಡಾ ಯೂನಸ್ ಅವರನ್ನು ನೇರವಾಗಿ ಗುರಿಯಾಗಿಸಿದ್ದಾರೆ. ಅವರು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಾಂಗ್ಲಾದೇಶದ ಅಂತರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು ಹಸೀನಾ ಹೇಳಿಕೆಗಳನ್ನು ದ್ವೇಷದ ಭಾಷಣ ಎಂದು ಹೇಳಿದೆ ಮತ್ತು ದೇಶದ ನಾಯಕರು ಯೂನಸ್ ಸರ್ಕಾರದ ವಿರುದ್ದ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಹೇಗಿರುತ್ತೆ ಹೊಸ ನೋಟುಗಳು
ಬಾಂಗ್ಲಾದೇಶ ಬ್ಯಾಂಕ್ ಜುಲೈ ದಂಗೆಯ ಫೀಚರ್ ಗಳನ್ನು ಒಳಗೊಂಡಂತೆ ಹೊಸ ನೋಟುಗಳನ್ನು ಮುದ್ರಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಕೇಂದ್ರಿಯಾ ಬ್ಯಾಂಕ್ ಪ್ರಕಾರ, ಮಧ್ಯಂತರ ಸರ್ಕಾರದ ಸೂಚನೆಗಳ ಮೇರೆಗೆ ಟಕಾ 20, 100, 500 ಮತ್ತು 1000 ನೋಟುಗಳನ್ನು ಮುದ್ರಿಸಲಾಗುತ್ತಿದೆ.
ಮಂಗಳೂರು/ಮೆಕ್ಸಿಕೊ: ತನ್ನದೇ ವಿಭಿನ್ನ ಶೈಲಿಯಲ್ಲಿ ಎಂಟ್ರಿ ಕೊಡುತ್ತಿದ್ದ ರೇಯ್ ಮಿಸ್ಟೀರಿಯೋ ಅಬ್ಬರ ನೋಡೋದೇ ಒಂದು ಆನಂದವಾಗಿತ್ತು. 66 ವರ್ಷದ ರೇ ಮಿಸ್ಟೀರಿಯೋ ಸೀನಿಯರ್ ಸಾವನ್ನಪ್ಪಿರುವ ಸುದ್ದಿ ವರದಿಯಾಗಿದೆ.
WWE ಸ್ಟಾರ್ ಗಳ ಸಾವಿನ ಸುದ್ದಿ ಬಗ್ಗೆ ಆಗಾಗ ಸುಳ್ಳು ಸುದ್ದಿ ಕೇಳಿ ಬರುತ್ತಲೇ ಇರುತ್ತದೆ. ಆದರೆ ಈ ಬಾರಿ ರೇ ಮಿಸ್ಟೀರಿಯೋ ಅಭಿಮಾನಿಗಳು ಇದು ಕೂಡ ಸುಳ್ಳಾಗಲಿ ಎಂದು ಬಯಸಿದ್ದರು. ಆದರೆ ಈ ಬಾರಿ ಮಿಸ್ಟೀರಿಯೋ ಕುಟುಂಬಸ್ಥರು ಈ ಶಾಕಿಂಗ್ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ರೇಯ್ ಮಿಸ್ಟೀರಿಯೋ, 1990ರ ಮಕ್ಕಳ ಹಾಟ್ ಫೇವರೆಟ್ WWE ಸ್ಟಾರ್. ರೇಯ್ ಮಿಸ್ಟೀರಿಯೋ ಫೈಟಿಂಗ್ ಹಾಗೂ ಪಲ್ಟಿ ಹೊಡೆಯೋ ಸ್ಟೈಲ್ ಅಷ್ಟು ರೋಮಾಂಚನಕಾರಿ.
ಸಾಮಾನ್ಯವಾಗಿ WWEನಲ್ಲಿ ದಢೂತಿ ದೇಹ. 6 ಅಡಿಗಿಂತ ಎತ್ತರದ ಕುಸ್ತಿಪಟುಗಳು ಅಖಾಡಕ್ಕೆ ಇಳಿಯುತ್ತಾರೆ. ಆದರೆ ಮಿಸ್ಟೀರಿಯೋ ಸೀನಿಯರ್ WWE ಸೂಪರ್ ಸ್ಟಾರ್‌ಗಳ ಮಧ್ಯೆ ಕುಳ್ಳನಂತೆ ಕಾಣುತ್ತಿದ್ದರು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋ ಹಾಗೇ ಮಿಸ್ಟೀರಿಯೋ ಸೀನಿಯರ್ ಅನ್ನ ಸೋಲಿಸೋದು ಅಷ್ಟು ಸುಲಭವಲ್ಲ.
ರೇಯ್ ಮಿಸ್ಟೀರಿಯೋ ಆಡಿದ ಒಂದೊಂದು ಮ್ಯಾಚ್‌ಗಳು ರೋಚಕ ಫಲಿತಾಂಶಗಳನ್ನೇ ಕೊಡುತ್ತಿದ್ದವು. ರೇಯ್ ಮಿಸ್ಟೀರಿಯೋ ಫೈಟಿಂಗ್ ಸ್ಟೈಲ್ ಹಾಗೂ ರೋಚಕ ಟ್ವಿಸ್ಟ್‌ಗಳು ನೋಡುಗರನ್ನ ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತಿದ್ದವು.
ಕುಸ್ತಿ ಪ್ರಪಂಚದ ಮೇಲೆ ರೇ ಮಿಸ್ಟೀರಿಯೋ ಸೀನಿಯರ್ ಅವರ ಪ್ರಭಾವವು ಮುಂದಿನ ಪೀಳಿಗೆಯೂ ಕೂಡ ನೆನಪಿಸುವಂತೆ ಮಾಡುತ್ತದೆ. ಅವರ ವಿಶಿಷ್ಟ ಶೈಲಿಯ ಫೈಟಿಂಗ್ ಗಳು, ರಿಂಗ್ ನಲ್ಲಿ ಆಡುವ ರೀತಿ, ಪಲ್ಟಿ ಹೊಡೆಯೋ ಸ್ಟೈಲ್ ಅಭಿಮಾನಿಗಳನ್ನು ರೋಮಾಂಚನಗೊಳಿಸುತ್ತಿತ್ತು. ಆದರೆ ಇವರ ನಿಧನ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಅತೀವ ದುಃಖ ಉಂಟುಮಾಡಿದೆ.
4.28 ಶತಕೋಟಿ ಡಾಲರ್ ಮೊತ್ತದ ವಿದ್ಯಾರ್ಥಿ ಸಾಲವನ್ನು ಮನ್ನಾ ಮಾಡುವ ಯೋಜನೆಯನ್ನು ಅಧ್ಯಕ್ಷರು ಘೋಷಿಸಿದ್ದಾರೆ. ಇದರೊಂದಿಗೆ ವಿದ್ಯಾರ್ಥಿ ಸಾಲದಿಂದ ಮುಕ್ತರಾದವರ ಸಂಖ್ಯೆ ಸುಮಾರು 5 ದಶಲಕ್ಷಕ್ಕೆ ತಲುಪಿದೆ ಎಂದು ಶ್ವೇತಭವನದ ಹೇಳಿಕೆಯಲ್ಲಿ ತಿಳಿಸಿದೆ.
ಮಂಗಳೂರು/ಕೀವ್: ಉಕ್ರೇನ್ ನ 8 ಸ್ಪೋಟಕ ಡ್ರೋನ್ ವಿಮಾನಗಳು ರಷ್ಯಾದ ಕಜನ್ ನಗರದ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಇದೇ ನಗರದಲ್ಲಿ ಇತ್ತೀಚೆಗೆ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆ ನಡೆದಿದ್ದು, ಭಾರತದ ಪ್ರಧಾನಿ ಸೇರಿದಂತೆ ಹಲವು ವಿಶ್ವ ನಾಯಕರು ಆಗಮಿಸಿದ್ದರು.
ಇತ್ತೀಚೆಗೆ ಉಕ್ರೇನ್ ಮೇಲೆ ಕ್ಷೀಪಣಿ ದಾಳಿ ನಡೆಸಿದ್ದ ರಷ್ಯಾಗೆ ಡ್ರೋನ್ ದಾಳಿ ಮೂಲಕ ಉಕ್ರೇನ್ ತಿರುಗೇಟು ನೀಡಿದ್ದು, ಉಕ್ರೇನ್ ದಿಢೀರ್ ಕ್ರಮಕ್ಕೆ ರಷ್ಯಾದ ಕಜಾನ್ ಜನತೆ ಬೆಚ್ಚಿ ಬಿದ್ದಿದ್ದಾರೆ.
ಘಟನೆಯಲ್ಲಿ ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಆದರೆ ಕಟ್ಟಡಗಳು ವ್ಯಾಪಕವಾಗಿ ಹಾನಿಗೊಳಗಾಗಿರುವುದಾಗಿ ವರದಿಗಳು ತಿಳಿಸಿವೆ.
ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳು ರಷ್ಯಾದ ಕಜಾನ್ ನಗರದ ಮೇಲೆ ದಾಳಿ ನಡೆಸಿವೆ ಎಂದು ಹೇಳಲಾಗುತ್ತಿದೆ. ದಾಳಿಯಲ್ಲಿ 3 ಕಟ್ಟಡಗಳು ಹಾನಿಗೊಳಗಾಗಿದ್ದು, ಜನರನ್ನು ಅಲ್ಲಿಂದ ಸ್ಥಳಾಂತರಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಸ್ಥಳೀಯ ಆಡಳಿತವು ಜನರಿಗೆ ಊಟ, ಬಟ್ಟೆಗಳನ್ನು ಒದಗಿಸಿದೆ ಎಂದು ತಿಳಿದುಬಂದಿದೆ.
ಕಜನ್ ಮಾಸ್ಕೋದಿಂದ ಪೂರ್ವಕ್ಕೆ ಸುಮಾರು 800 ಕಿಲೋಮೀಟರ್ ದೂರದಲ್ಲಿದೆ. ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ಪ್ರಕಾರ, ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಯ ಕಜಾನ್ ನಗರದಲ್ಲಿ ಡ್ರೋನ್ ಅನ್ನು ಉರುಳಿಸಿದ್ದು, ಕೆಲವು ಡ್ರೋನ್ ಗಳು ಅದನ್ನು ಭೇದಿಸಿ ದಾಳಿನಡೆಸಿವೆ ಎಂದು ತಿಳಿಸಿದೆ.
9/11 ಶೈಲಿಯ ದಾಳಿ
ಉಕ್ರೇನ್ ದಾಳಿಯು, ಸಪ್ಟೆಂಬರ್ 11, 2001ರಂದು ನ್ಯೂಯಾರ್ಕ್ ವಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಕ್ಕೆ ವಿಮಾನದ ಮೂಲಕ ದಾಳಿ ನಡೆಸಿದ ಘಟನೆಯನ್ನು ನೆನಪಿಸುವಂತಿದೆ.
ಸೆಪ್ಟೆಂಬರ್ 11, 2001ರಂದು ಅಮೆರಿಕಗೆ ಅಲ್ ಕೈದಾ ಉಗ್ರ ಸಂಘಟನೆ ಶಾಕ್ ಕೊಟ್ಟಿದ್ದರು. ಈ ಭೀಕರ ಉಗ್ರ ದಾಳಿಯಲ್ಲಿ 2977 ಅಮಾಯಕರು ಮೃತರಾಗಿದ್ದರು.
ಅಲ್ ಖೈದಾ ಎಂಬ ಇಸ್ಲಾಮಿಕ್ ಉಗ್ರ ಸಂಘಟನೆ ಅಧಿನಾಯಕ ಒಸಾಮಾ ಬಿನ್ ಲಾಡೆನ್ ನೇತೃತ್ವದಲ್ಲಿ ಅಮೆರಿಕದ ಮೇಲೆ ಉಗ್ರ ದಾಳಿ ನಡೆಸಿತ್ತು. ನ್ಯೂಯಾರ್ಕ್ ನ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರದ ಮೇಲೆ ವಿಮಾನ ದಾಳಿ ನಡೆದಿತ್ತು. ಸೆಪ್ಟೆಂಬರ್ 11, 2001 ಈ ಘಟನೆ ನಡೆದಿದ್ದು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಉಕ್ರೇನ್ ನ ಈ ದಢೀರ್ ದಾಳಿಯು 9/11ರ ಅಟ್ಯಾಕ್ ಸ್ಮರಿಸುವಂತೆ ಮಾಡಿದೆ.