Connect with us

    FILM

    ಬಾಂಗ್ಲಾ ಬಿಕ್ಕಟ್ಟು : ಖ್ಯಾತ ನಟ ಶಾಂತೊಖಾನ್, ನಿರ್ಮಾಪಕ ಸಲೀಂ ಖಾನ್ ಹ*ತ್ಯೆ

    Published

    on

    ಮಂಗಳೂರು/ ಕೋಲ್ಕತ್ತಾ : ಬಾಂಗ್ಲಾ ಸುಡುತ್ತಿದೆ. ಹಲವು ಮಂದಿ ಗಲಭೆಗೆ ಬ*ಲಿಯಾಗಿದ್ದಾರೆ. ಪ್ರಧಾನಿ ಶೇಖ್ ಹಸೀನಾ ನಾಪತ್ತೆಯಾಗಿದ್ದಾರೆ. ಅವರ ಸಾರಥ್ಯದ ಆವಾಮಿ ಲೀಗ್ ಪದಕ್ಷ ನಾಯಕರ ಶ*ವಗಳು ಈಗಾಗಲೇ ಪತ್ತೆಯಾಗಿವೆ. ನಾಯಕರ ಮನೆ, ಉದ್ಯಮಗಳ ಮೇಲೆ ದಾ*ಳಿ ಮಾಡಿ ಲೂಟಿ ಮಾಡಲಾಗುತ್ತಿದೆ. ಮನೆಗಳಿಗೆ ಬೆಂ*ಕಿ ಹಚ್ಚಲಾಗುತ್ತಿದೆ.

    ಮೈಕ್ರೋ ಫೈನಾನ್ಸ್ ವಿಷಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊಹಮ್ಮದ ಯೂನಿಸ್ ಅವರ ಸಾರಥ್ಯದಲ್ಲಿ ಬಾಂಗ್ಲಾ ದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದೆ.

     

    ನಟ, ನಿರ್ಮಾಪಕನ ಹತ್ಯೆ:

    ಬಾಂಗ್ಲಾ ಹಿಂಸಾಚಾರದಲ್ಲಿ ಹೊತ್ತಿ ಉರಿಯುತ್ತಿದ್ದು, ಹಲವು ನಾಯಕರ ಹತ್ಯೆ ನಡೆದಿದೆ. ವರದಿಗಳ ಪ್ರಕಾರ,  ಬಾಂಗ್ಲಾದ ಖ್ಯಾತ ನಟ ಹಾಗೂ ನಿರ್ಮಾಪಕರನ್ನೂ ಹ*ತ್ಯೆ ಮಾಡಲಾಗಿದೆ. ನಟ ಶಾಂತೊ ಖಾನ್ ಹಾಗೂ ಅವರ ತಂದೆ ನಿರ್ಮಾಪಕ ಸಲೀಂ ಖಾನ್ ಅವರನ್ನು ಕೊ*ಲೆಗೈಯಲಾಗಿದೆ.

    ಬಾಲಿಯಾ ಯೂನಿಯನ್‌ನಲ್ಲಿರುವ ಫರಕ್ಕಾಬಾದ್ ಬಜಾರ್‌ಗೆ ಸಲೀಂ ಮತ್ತು ಶಾಂತೊ ತಮ್ಮ ಹಳ್ಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ, ಸಮೀಪದ ಬಗರಬಜಾರ್ ಪ್ರದೇಶವನ್ನು ತಲುಪಿದಾಗ, ಆಕ್ರೋಶಗೊಂಡ ಗುಂಪು ಅವರನ್ನು ಹಿಡಿದು ಕೊಂ*ದಿತು ಎಂದು ವರದಿ ಹೇಳಿದೆ.

    ಸಲೀಂ ಖಾನ್ ಅವರು ಟಾಲಿವುಡ್ ತಾರೆಗಳೊಂದಿಗೆ ಹಲವಾರು ಚಲನಚಿತ್ರಗಳನ್ನು ನಿರ್ಮಿಸುವ ಮೂಲಕ ಬಂಗಾಳಿ ಚಿತ್ರರಂಗದ ಮೇಲೆ ಗಮನಾರ್ಹ ಪ್ರಭಾವ ಬೀರಿದವರು. ಅವರು ಡಾಲಿವುಡ್ ಸೂಪರ್‌ಸ್ಟಾರ್ ಶಕೀಬ್ ಖಾನ್ ನಟಿಸಿದ ಶಾಹೆನ್‌ಶಾ ಮತ್ತು ಬಿದ್ರೋಹಿ ಸೇರಿದಂತೆ ಹಲವಾರು ಹಿಟ್ ಚಲನಚಿತ್ರಗಳನ್ನು ನಿರ್ಮಿಸಿದ್ದರು. ಅವರು ತುಂಗಿ ಪರಾರ್ ಮಿಯಾ ಭಾಯ್ ಎಂಬ ಚಲನಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರ ಅವರ ಮಗ ಶಾಂತೋ ಖಾನ್ ಅವರ ಚೊಚ್ಚಲ ಚಿತ್ರವಾಗಿದೆ. ಅವರು ತಮ್ಮ ತಂದೆಯ ನಿರ್ಮಾಣದ ಅಡಿಯಲ್ಲಿ ಹಲವಾರು ಚಲನಚಿತ್ರಗಳಲ್ಲಿ ನಟಿಸಿದರು.

    ಇದನ್ನೂ ಓದಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿ ಬಂದ ಬೆನ್ನಲ್ಲೇ ಬಿಗ್​​ ಅಪ್​ಡೇಟ್ಸ್​​ ಕೊಟ್ಟ ರಾಕಿಂಗ್ ಸ್ಟಾರ್ ಯಶ್

    2022 ರಲ್ಲಿ, ಶಾಪ್ಲಾ ಮೀಡಿಯಾ ಬಿಕ್ಖೋವ್ ಅನ್ನು ಬಿಡುಗಡೆ ಮಾಡಿತು. ಈ ಚಿತ್ರದಲ್ಲಿ ಶಾಂತೋ ಖಾನ್ ಜೊತೆಗೆ ಸ್ರಬಂತಿ ಚಟರ್ಜಿ ಮತ್ತು ಇತರ ಟಾಲಿ ನಟರಾದ ರಜತವ ದತ್ತಾ ಮತ್ತು ಜಾಯ್‌ದೀಪ್ ಮುಖರ್ಜಿ ನಟಿಸಿದ್ದಾರೆ. ಸಲೀಂರ ಮುಂಬರುವ ಪ್ರಾಜೆಕ್ಟ್‌ಗಳ ಕುರಿತು ಹೇಳುವುದಾದರೆ, ರಿತುಪರ್ಣ ಸೇನ್‌ಗುಪ್ತಾ ಅವರೊಂದಿಗೆ ಅಗ್ನಿಬಿನಾ, ಬೋನಿ ಸೇನ್‌ಗುಪ್ತಾ ಅವರೊಂದಿಗೆ ಮನೋಬ್ ದಾನೋಬ್, ಮತ್ತು ಬೋನಿ ಮತ್ತು ಕೌಶಾನಿ ಮುಖರ್ಜಿ ಅವರೊಂದಿಗೆ ಚುಟಿ ಚಿತ್ರಗಳ ತಯಾರಿ ನಡೆಯುತ್ತಿತ್ತು.

    FILM

    ತೆಲುಗು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಮಂಗಳೂರಿನ ಯುವಕ

    Published

    on

    ಮಂಗಳೂರು : ರಿಯಾಲಿಟಿ ಶೋಗಳಲ್ಲಿ ಅತ್ಯಂತ ಹೆಚ್ಚು ಜನಮೆಚ್ಚಿದ, ಪ್ರಶಂಸೆಗೆ ಪಾತ್ರವಾಗಿರುವ ಬಿಗ್ ಬಾಸ್ ಗೆ ಎಂಟ್ರಿ ಕೊಡೋದು ಸುಲಭದ ಮಾತಲ್ಲ. ಚಿತ್ರರಂಗ ಮತ್ತು ಸೀರಿಯಲ್ ಕ್ಷೇತ್ರದ ಘಟಾನುಘಟಿಗಳು ಈ ಶೋ ನಲ್ಲಿ ಪಾಲ್ಗೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ ಅನ್ನೋದು ಸುಳ್ಳಲ್ಲ. ಇಂಥ ಫೇಮಸ್ ರಿಯಾಲಿಟಿ ಶೋನಲ್ಲಿ ಮಂಗಳೂರಿನ ಯುವಕನೊಬ್ಬ ಎಂಟ್ರಿ ಕೊಟ್ಟಿದ್ದಾನೆ.

    ತೆಲುಗು ಬಿಗ್ ಬಾಸ್ ನ 8 ನೇ ಆವೃತ್ತಿ ಆಯ್ಕೆಯಾಗಿರುವ ಈ ಯುವಕ ಮಂಗಳೂರಿನ ಪೃಥ್ವಿ ಶೆಟ್ಟಿ. ಮೂಲತಃ ಮಂಗಳೂರಿನವರಾದ  ಇವರು ಇದೀಗ ಬಿಗ್ ಬಾಸ್ ಶೋ ಒಳಗೆ ಎಂಟ್ರಿ ಕೊಟ್ಟು ತಮ್ಮ ಪ್ರದರ್ಶನ ನೀಡುತ್ತಿದ್ದಾರೆ.

    ಧಾರಾವಾಹಿಗಳ ಮೂಲಕ ಗಮನ ಸೆಳೆದ ನಟ :

    ಕುಡ್ಲದ ಪ್ರತಿಭೆಗಳು ಕಿರುತೆರೆ, ಹಿರಿತೆರೆಯಲ್ಲಿ ಮಿನುಗುತ್ತಿದ್ದಾರೆ. ಅವರಲ್ಲಿ ಪೃಥ್ವಿ ಶೆಟ್ಟಿ ಕೂಡ ಒಬ್ಬರು. ತಮ್ಮ ಪ್ರಾಥಮಿಕ ಶಿಕ್ಷಣ ಮತ್ತು ಕಾಲೇಜು ಶಿಕ್ಷಣವನ್ನು ಮಂಗಳೂರು, ಕಾಸರಗೋಡು ಮತ್ತು‌ ಉಡುಪಿ ಜಿಲ್ಲೆಯಲ್ಲಿ ಮುಗಿಸಿರುವ ಪೃಥ್ವಿ ವಿದ್ಯಾಭ್ಯಾಸದ ಬಳಿಕ ಫ್ಯಾಷನ್ ಫೀಲ್ಡ್ ಗೆ ವಾಲಿದ್ದರು. ಕಾಲೇಜು ದಿನಗಳಲ್ಲಿಯೇ ಫ್ಯಾಷನ್ ಶೋಗಳಲ್ಲಿ ಪಾಲ್ಗೊಂಡು ಯಶಸ್ಸು ಕಂಡಿದ್ದ ಪೃಥ್ವಿ, ಬಳಿಕದ ದಿನಗಳಲ್ಲಿ ಚಿತ್ರರಂಗ ಮತ್ತು ಟಿವಿ ಶೋಗಳಲ್ಲಿ  ಅಭಿನಯಿಸುವ ಇಚ್ಛೆಯಿಂದ  ಬೆಂಗಳೂರು ಮಹಾನಗರಕ್ಕೆ ಪ್ರಯಾಣ ಬೆಳೆಸಿದ್ದರು.

    ಹಲವು ಸಣ್ಣ-ಪುಟ್ಟ ಧಾರಾವಾಹಿಗಳಲ್ಲಿ ನಟಿಸಿರುವ ಪೃಥ್ವಿ ಶೆಟ್ಟಿಗೆ ಉತ್ತಮ ಬ್ರೇಕ್ ದೊರೆತಿದ್ದು ಪ್ರೀತಿಯ ಅರಸ ಮತ್ತು ಅರ್ಧಾಂಗಿ ಎನ್ನುವ ಟಿವಿ ಸೀರಿಯಲ್ ನಲ್ಲಿ. ಎರಡೂ ಧಾರಾವಾಹಿಗಳಲ್ಲಿ ತಮ್ಮ ಸಾಧನೆ ತೋರಿರುವ ಪೃಥ್ವಿ ಗೆ ಬಳಿಕದ ದಿನಗಳಲ್ಲಿ ತೆಲುಗು ಭಾಷೆಯ ಮೆಗಾ ಧಾರಾವಾಹಿಗಳಲ್ಲೂ ಅವಕಾಶ ದೊರೆತಿದೆ. ತೆಲುಗಿನ ಸೂಪರ್ ಹಿಟ್ ಧಾರಾವಾಹಿಯಾದ ನಾಗಪಂಚಮಿಯಲ್ಲಿನ ನಟನೆಗೆ ಪೃಥ್ವಿ ಶೆಟ್ಟಿ ಮನೆ ಮಾತಾಗಿದ್ದಾರೆ.

    ಇದನ್ನೂ ಓದಿ : ಚಿನ್ನದ ಅಂಗಡಿಗೆ ಬಂದು ಬೆಲೆಬಾಳುವ ಮಾಂಗಲ್ಯ ಸರದೊಂದಿಗೆ ಎಸ್ಕೇಪ್ ಆದ ಕಳ್ಳ

    ಈಗಾಗಲೇ ಎರಡು ತೆಲುಗು ಚಿತ್ರಗಳಲ್ಲಿ ನಟಿಸಿರುವ ಪೃಥ್ವಿ ಆ ಚಿತ್ರಗಳಲ್ಲೂ ಯಶಸ್ಸು ಕಾಣುವ ವಿಶ್ವಾಸದಲ್ಲಿದ್ದಾರೆ.  ತೆಲುಗು ಟಿವಿ ಶೋಗಳಲ್ಲಿ ಮಿಂಚಿರುವ ಪೃಥ್ವಿಯವರನ್ನು ಅವರ ಸಾಧನೆ ಹಾಗು ಯಶಸ್ಸನ್ನು ಪರಿಗಣಿಸಿ ಬಿಗ್ ಬಾಸ್ ನ 8 ನೇ ಆವೃತ್ತಿಗೆ ಆಯ್ಕೆ ಮಾಡಲಾಗಿದೆ. ಓಟಿಂಗ್ ನಲ್ಲೂ ಮೂರನೇ ಸ್ಥಾನವನ್ನು ಕಾಯ್ದುಕೊಂಡಿರುವ ಪೃಥ್ವಿ ಬಿಗ್ ಬಾಸ್ ಆಗಿ ಹೊರಬರಲಿ ಎನ್ನುವ ಹಾರೈಕೆಗಳೂ ಕೇಳಿ ಬರಲಾರಂಭಿಸಿದೆ.

    Continue Reading

    DAKSHINA KANNADA

    `ಅಪ್ಪಟ ತುಳುವ, ಅಜ್ಜನ ಭಕ್ತನಾಗಿ ಅಪಪ್ರಚಾರಕ್ಕೆ ಇಳಿಯಲು ಸಾಧ್ಯವೇ?’: ನಟ ಅರ್ಜುನ್ ಕಾಪಿಕಾಡ್

    Published

    on

    ಮಂಗಳೂರು : ಅಪ್ಪಟ ತುಳುವನಾಗಿ, ಅಜ್ಜನ ಭಕ್ತನಾಗಿ ತುಳು ಭಾಷೆ ಮಣ್ಣಿಗಾಗಿ ದುಡಿದವನು. ಎಂದಿಗೂ ಅಜ್ಜನ ಕಾರಣಿಕವನ್ನಷ್ಟೇ ತೋರಿಸುವ ಪ್ರಯತ್ನ ಮಾಡಿದ್ದೇವೆ. ಮನಸ್ಸಿಗೆ ಹಗುರವಾಗುವ ಭಾವನೆಯನ್ನು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳ  ನೀಡುತ್ತದೆ. ಒಮ್ಮೆ ಬಂದಲ್ಲಿ ಇಲ್ಲಿಂದ ಹೋಗುವ ಮನಸ್ಸಾಗುವುದಿಲ್ಲ. ಮನಸ್ಸಲ್ಲಿ ಏನು ಬೇಸರವಿದ್ದರೂ ಇಲ್ಲಿಗೆ ಬಂದಾಗ ಅದನ್ನು ಕಳೆಯುತ್ತೇವೆ ಎಂದು   ರಾಜ್ಯಾದ್ಯಂತ ತೆರೆಕಾಣುತ್ತಿರುವ ಕನ್ನಡ ಚಲನಚಿತ್ರ ‘ಕಲ್ಜಿಗ’ ಚಿತ್ರದ ನಾಯಕ ನಟ ಅರ್ಜುನ್ ಕಾಪಿಕಾಡ್ ಹೇಳಿದರು.

    ಅವರು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ನಡೆಸಿ ಮಾತನಾಡಿದರು.

    ಕೊರಗಜ್ಜ ಕ್ಷೇತ್ರದಲ್ಲಿ ಅರ್ಜುನ್ ಕಾಪಿಕಾಡ್

    ಕೊರಗಜ್ಜ ಕ್ಷೇತ್ರದಲ್ಲಿ ಅರ್ಜುನ್ ಕಾಪಿಕಾಡ್

    ಚಿತ್ರದ ಪ್ರೀಮಿಯರ್ ಷೋ ವೀಕ್ಷಿಸಿರುವ ಪ್ರೇಕ್ಷಕರು ವಿಶಿಷ್ಟವಾದ ಪ್ರೀತಿಯನ್ನು ನೀಡುತ್ತಿದ್ದಾರೆ.  ಚಲನಚಿತ್ರ ತಂಡದ ಮೇಲೆ ಅಜ್ಜನ ಆಶಿರ್ವಾದ ಇದೆ ಅನ್ನುವುದು ಚಿತ್ರದ  ಶೂಟಿಂಗ್ ನಿಂದ ಹಿಡಿದು ಈವರೆಗೆ ನಡೆದ ಸನ್ನಿವೇಶಗಳೆಲ್ಲವೂ ತೋರಿಸಿಕೊಟ್ಟಿದೆ.

    ಕಲ್ಜಿಗ ಸಿನಿಮಾ ಬಿಡುಗಡೆ ಉದ್ಘಾಟನಾ ಸಮಾರಂಭ

    ಕಲ್ಜಿಗ ಸಿನಿಮಾ ಬಿಡುಗಡೆ ಉದ್ಘಾಟನಾ ಸಮಾರಂಭ

    ಅಪ್ಪಟ ತುಳುವನಾಗಿ, ಅಜ್ಜನ ಭಕ್ತನಾಗಿ ತುಳು ಭಾಷೆ ಮಣ್ಣಿಗಾಗಿ ದುಡಿದವನು ಎಂದಿಗೂ ಅಜ್ಜನ ಕಾರಣಿಕವನ್ನಷ್ಟೇ ತೋರಿಸುವ ಪ್ರಯತ್ನ ಮಾಡಿದ್ದೇವೆ ಹೊರತಾಗಿ ಅಜ್ಜನ ಕುರಿತು ಅಪಪ್ರಚಾರ ಮಾಡುವ ಯಾವುದೇ ಕಾರ್ಯಕ್ಕೆ ಮುಂದಾಗಿಲ್ಲ. ಮಿಗಿಲಾಗಿ ಅಜ್ಜನ ವಿಚಾರಗಳ ಕುರಿತು ಹೇಳುವಷ್ಟು ದೊಡ್ಡ ವ್ಯಕ್ತಿಯೂ ಅಲ್ಲ. ಯಾರಿಗಾದರೂ ಮನಸ್ಸಿಗೆ ಬೇಸರವಾಗಿದ್ದಲ್ಲಿ , ಅವರು ಯಾವ ಸ್ಥಳಕ್ಕೆ ಬರುತ್ತಾರೋ? ಅಲ್ಲಿಗೆ ಮುಂಚಿತವಾಗಿ ತಾನೇ ಬಂದು ನಿಂತು ಮಾತನಾಡುವೆನು. ಸಿನೆಮಾ ಒಮ್ಮೆಯಾದರೂ ನೋಡಿ, ನೋಡದೆ ನಿಲ್ಲಿಸಬೇಕು ಅನ್ನುವ ಮಾತುಗಳನ್ನು ಆಡದಿರಿ. ಇಡೀ ಚಿತ್ರತಂಡ ಅಜ್ಜನ ಭಕ್ತರಾಗಿರುವುದರಿಂದ ಅಜ್ಜನ ದಯೆ ಸದಾ ನಮ್ಮ ಬೆನ್ನಲ್ಲಿ ಇರುವಂತೆ ಪ್ರಾರ್ಥನೆ ನಡೆಸಿರುವೆನು ಎಂದರು.

    ಕಾಂತಾರ-2 ಅವಕಾಶ ಸಿಕ್ಕಿದೆ !

    ಕೊರಗಜ್ಜ ಕ್ಷೇತ್ರದಲ್ಲಿ ಅರ್ಜುನ್ ಕಾಪಿಕಾಡ್

    ಕೊರಗಜ್ಜ ಕ್ಷೇತ್ರದಲ್ಲಿ ಅರ್ಜುನ್ ಕಾಪಿಕಾಡ್

    ಕಲ್ಜಿಗ ಚಿತ್ರ ಒಂದೂವರೆ ವರ್ಷದ ಹಿಂದೆ ಶೂಟಿಂಗ್ ಆರಂಭವಾದ  ದಿನಗಳಿಂದ ಶುಭ ಘಳಿಗೆ ನನ್ನ ಪಾಲಿಗೆ ಒದಗಿಬಂದಿದೆ. ಅಜ್ಜನ ದಯೆಯಿಂದಾಗಿ ಕಾಂತಾರ-2 ಬ್ಯಾಂಕ್ ಗ್ರೌಂಡ್ ನಿರ್ದೇಶಕನಾಗಿ ಸೇವೆ ಸಲ್ಲಿಸುವಂತೆ ಅವಕಾಶ ಒದಗಿಬಂತು.  ಖುದ್ದು ಚಿತ್ರತಂಡದ ಮುಖ್ಯಸ್ಥರೇ ಕರೆ  ಮಾಡಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲದೆ  ಕಲ್ಜಿಗ ಚಿತ್ರದ ಸಸಿಹಿತ್ಲು ಶೂಟಿಂಗ್ ಸ್ಪಾಟ್ ನಲ್ಲಿ ಯಾವುದೇ ರೀತಿಯ ಅಡಚಣೆಗಳಿರಲಿಲ್ಲ. ಅಜ್ಜನ ದಯೆ ಎಷ್ಟಿತ್ತೆಂದರೆ ದಿನವಿಡೀ ಶೂಟಿಂಗ್ ನಡೆಸಿದರೂ ಸುಸ್ತು ಅನ್ನುವ ವಿಚಾರವೇ ಬರಲಿಲ್ಲ. ನೇರ ಮನೆಗೆ ಹೋಗಿ ಆರಾಮವಾಗಿ ಮಲಗುತ್ತಿದ್ದೆವು. ಇಂತಹ ದೈವೀ ಶಕ್ತಿಯನ್ನು ಎಂದಿಗೂ ಅಪಚಾರ ನಡೆಸಲು ಸಾಧ್ಯವೇ ? ಎಂದರು.

    ಇದನ್ನೂ ಓದಿ : ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ ರಾಜ್ ಬಿ ಶೆಟ್ಟಿಯ ಮತ್ತೊಂದು ಸಿನಿಮಾ

    ಈ ಸಂದರ್ಭ ಕಲ್ಜಿಗ ಚಿತ್ರದ ನಿರ್ಮಾಪಕ ಶರತ್ ಕುಮಾರ್, ನಿರ್ದೇಶಕ ಸುಮನ್ ಸುವರ್ಣ,  ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳದ ನವೀನ್ ಕಾಯಂಗಳ, ಪ್ರಸಾದ್ ಕಾಯಂಗಳ, ವನಿತಾ ಗಿರೀಶ್, ಪುರುಷೋತ್ತಮ್ ಕಲ್ಲಾಪು ಉಪಸ್ಥಿತರಿದ್ದರು.

    Continue Reading

    FILM

    ದರ್ಶನ್ ಭೇಟಿಗೆ ಬಳ್ಳಾರಿ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ

    Published

    on

    ಬಳ್ಳಾರಿ: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ರನ್ನು ನೋಡಲು ಬಳ್ಳಾರಿ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಅತ್ತಿಗೆ ಜೊತೆ ದರ್ಶನ್ ಸಹೋದರ ದಿನಕರ್ ಕೂಡ ಆಗಮಿಸಿದ್ದಾರೆ.

    ಚಾರ್ಜ್‌ಶೀಟ್ ಪ್ರತಿ ಸಮೇತ ಇಬ್ಬರು ವಕೀಲರೊಂದಿಗೆ ವಿಜಯಲಕ್ಷ್ಮಿ ಮತ್ತು‌ ಸಹೋದರ ದಿನಕರ್ ಜೈಲಿಗೆ ಭೇಟಿ ನೀಡಿ, ದರ್ಶನ್ ಜೊತೆ ಕಾನೂನು ಸಮರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ, ಪತಿಗಾಗಿ ಡ್ರೈ ಫ್ರೂಟ್ಸ್‌, ಬಿಸ್ಕೆಟ್ ಹಾಗೂ ದೇವರ ಪ್ರಸಾದೊಂದಿಗೆ ಆಗಮಿಸಿದ್ದಾರೆ.

    ಅಂದಹಾಗೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11ರಂದು ದರ್ಶನ್‌ರನ್ನು ಬಂಧಿಸಿದ್ದರು.

    Continue Reading

    LATEST NEWS

    Trending