Tuesday, October 19, 2021

ಒಂದೇ ಕುಟುಂಬದ ಐವರು ಸಾವು ಪ್ರಕರಣ: ದೂರು ನೀಡಿದ ಯಜಮಾನ

ಬೆಂಗಳೂರು: ಒಂದೇ ಕುಟುಂಬದ ಐವರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಮನೆಯ ಯಜಮಾನ ಶಂಕರ್ ದೂರು ದಾಖಲಿಸಿದ್ದಾರೆ.
ಎಲ್ಲ ನನ್ನ ಆಸ್ತಿ, ಹಣ ಎಲ್ಲವನ್ನು ಹೆಂಡತಿ ಹಾಗೂ ಮಗನಿಗೆ ನೀಡಿ ಬಿಟ್ಟಿದ್ದೆ. ನನಗೆ ಹಣ ಬೇಕಾದಾಗ ಅವರನ್ನೇ ಕೇಳಿ ಪಡೆಯಬೇಕಾಗಿತ್ತು ಎಂದು ದೂರಿನಲ್ಲಿ ಶಂಕರ್ ಉಲ್ಲೇಖಿಸಿದ್ದಾರೆ.


ಈ ಹಿಂದಿನಿಂದಲೂ ಪತ್ನಿ ಮತ್ತು ಮಗನ ಜೊತೆ ಶಂಕರ್ ಭಿನ್ನಾಭಿಪ್ರಾಯ ಹೊಂದಿದ್ದರಂತೆ. ಹೆಂಡತಿ‌ ಜೊತೆಗೆ ಹೆಣ್ಣುಮಕ್ಕಳ ವಿಚಾರವಾಗಿ ಭಿನ್ನಾಭಿಪ್ರಾಯ ಹೊಂದಿದ್ದರಂತೆ.

ಹೆಣ್ಣು ಮಕ್ಕಳನ್ನು ಗಂಡನ ಮನೆಗೆ ಕಳುಹಿಸುವಂತೆ ಶಂಕರ್ ಹೇಳ್ತಿದ್ದರಂತೆ. ಆದರೆ ಕಳಿಸೋದಿಲ್ಲ ಎಂದು ಶಂಕರ್ ಜೊತೆ ಪತ್ನಿ ಭಾರತಿ ಜಗಳ ಮಾಡಿಕೊಂಡಿದ್ದರಂತೆ.
ಈ ವೇಳೆ ಹೆಣ್ಣು ಮಕ್ಕಳ ಜೀವನ ಹಾಳು ಮಾಡ್ತಿದೀಯಾ ಎಂದು ಶಂಕರ್ ಕೆಂಡವಾಗಿದ್ದರಂತೆ. ಹಣದ ವ್ಯವಹಾರದ ವಿಚಾರವಾಗಿ ಮಗನ ಜೊತೆಗೆ ಕೂಡ ಭಿನ್ನಾಭಿಪ್ರಾಯ ಇಟ್ಟುಕೊಂಡಿದ್ದರಂತೆ.

ಬಾರ್ ಓಪನ್ ಮಾಡಲು ಮಗ 20 ಲಕ್ಷ ಕೊಟ್ಟು ರಿಜಿಸ್ಟರ್ ಮಾಡಿಸಲು ರೆಡಿ ಮಾಡಿಕೊಂಡಿದ್ದರಂತೆ. ರಿಜಿಸ್ಟರ್ ಮಾಡಲು ಇದಕ್ಕೆ ಶಂಕರ್ ಸಹಿ ಬೇಕಾಗಿತ್ತು.

ಆದರೆ ಸಹಿ ಮಾಡಲು ಶಂಕರ್ ನಿರಾಕರಿಸಿದ್ದರಂತೆ. ಈ ವಿಚಾರವಾಗಿ ಕೂಡ ಭಾನುವಾರ ಮನೆಯಲ್ಲಿ ಜಗಳವಾಗಿತ್ತಂತೆ. ಶಂಕರ್ ಆಶ್ರಮ ಕಟ್ಟಿಸಲು 10 ಲಕ್ಷ ಹಣ ಬೇಕು ಎಂದು ಹೆಂಡತಿ ಮಕ್ಕಳಿಗೆ ಕೇಳಿದ್ದರಂತೆ.

ಈ ವೇಳೆ ಹಣ ನೀಡೋದಕ್ಕೆ ನಿರಾಕರಿಸಿದ್ದ ಪತ್ನಿ, ಮಗ ನಿರಾಕರಿಸಿದ್ದರಂತೆ. ಈ ವಿಚಾರ ಕೂಡ ಭಾನುವಾರ ಜಗಳವಾಗಲು ಕಾರಣ ಎನ್ನಲಾಗಿದೆ.
ಈ ಎಲ್ಲಾ ವಿಚಾರದಿಂದ ಜಗಳ ಮಾಡಿಕೊಂಡು ಶಂಕರ್ ಮನೆಬಿಟ್ಟುಹೋಗಿದ್ದರಂತೆ. ಸಂಜೆ 4.30‌ ಕ್ಕೆ ತಂದೆ ಶಂಕರ್ ಗೆ ವಾಟ್ಸ್ ಆ್ಯಪ್‌ ಮೆಸೇಜ್ ಮಾಡಿದ್ದ ಪುತ್ರ ಮಧುಸಾಗರ್ 10 ಲಕ್ಷ ನೀಡುತ್ತೇನೆ ಮನೆಗೆ ಬಾ ಅಪ್ಪಾ ಎಂದು ಮೆಸೇಜ್ ಮಾಡಿದ್ದನಂತೆ.

ಇದಕ್ಕೆ ಯಾವುದೇ ರೆಸ್ಪಾನ್ಸ್​ನ್ನ ಶಂಕರ್ ನೀಡಿರಲಿಲ್ಲ. 16 ನೇ ತಾರೀಖು ಮನೆ ಬಳಿ ಬಂದಿದ್ದ ಶಂಕರ್. ಮನೆಯಲ್ಲಿ ಯಾರು ಇಲ್ಲದಿರೋದನ್ನ ಗಮನಿಸಿದ್ದಾನೆ. ಎಲ್ಲಾದರು ಹೋಗಿರಬಹುದು ಎಂದು ಸ್ನೇಹಿತನ ಮನೆಯಲ್ಲಿ‌ ಉಳಿದುಕೊಂಡಿದ್ದರಂತೆ.

ನಿನ್ನೆ ಸಂಜೆ ಮನೆ ಬಳಿ ಮತ್ತೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...