Friday, August 19, 2022

ಶ್ರೀರಾಂಪುರ ಪೊಲೀಸರ ಕಾರ್ಯಾಚರಣೆ : ಗಾಂಜಾ ದಂಧೆ ನಡೆಸುತ್ತಿದ್ದ ಅಟೋ ಚಾಲಕ ಅಂದರ್..!

ಬೆಂಗಳೂರು: ಬೆಂಗಳೂರು ಪೊಲೀಸರು ಭರ್ಜರಿ ಗಾಂಜಾ ಬೇಟೆಯಾಡಿದ್ದು ಈ ಸಂಬಂಧ ದಂಧೆಯ ಕಿಂಗ್ ಪಿನ್ ಅಟೋ ಚಾಲಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಆಂಧ್ರ ಪ್ರದೇಶದಿಂದ ಗಾಂಜಾ ತರಿಸಿಕೊಂಡು ಬೆಂಗಳೂರು ನಗರದಲ್ಲಿ ಈ ತಂಡ ಅವ್ಯಾಹತವಾಗಿ ಮಾರಾಟ ಮಾಡಿ‌ ಹಣ ಸಂಪಾದನೆ ಮಾಡುತ್ತಿದ್ದರು. ಈ ಮಾಹಿತಿ ಪಡೆದ ಶ್ರೀರಾಮಪುರ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಶ್ರೀರಾಮಪುರದ ಅಂಬೇಡ್ಕರ್ ನಗರದ ನಿವಾಸಿ ಸತೀಶ್ ಹಾಗೂ ವಸಂತ್ ಬಂಧಿತ ಆರೋಪಿಗಳಾಗಿದ್ದಾರೆ.  ದಂಧೆಕೋರರಿಂದ 45 ಕೆಜಿ‌ ಗಾಂಜಾ ಹಾಗೂ ಆಟೋ ಜಪ್ತಿ ಮಾಡಲಾಗಿದೆ.

ಆಟೋ ಚಾಲಕ ಸತೀಶ್ ವಿಶಾಖಪಟ್ಟಣದಿಂದ ಪರಿಚಯಸ್ಥರಿಗೆ ಮುಂಗಡ ಹಣ ನೀಡಿ ಅಲ್ಲಿಂದ ಲಗೇಜ್ ಮಾದರಿಯಲ್ಲಿ ಗಾಂಜಾ ಪ್ಯಾಕ್ ಮಾಡಿ ಅಪರಿಚಿತ ಪ್ರಯಾಣಿಕರಿಗೆ ಹಣದ ಆಸೆ ತೋರಿಸಿ ಬೆಂಗಳೂರಿಗೆ ತರಿಸುತ್ತಿದ್ದನಂತೆ.

ದಂಧೆ‌ ಬಗ್ಗೆ ಯಾರಿಗೂ ಗುಮಾನಿ ಬಾರದಿರಲು ‘ಮ್ಯಾಂಗೊ‌’ ಎಂಬ ಕೋರ್ಡ್ ವರ್ಡ್ ಇಟ್ಟಿದ್ದ. ಬೆಂಗಳೂರಿಗೆ ಗಾಂಜಾ ತಲುಪುತ್ತಿದ್ದಂತೆ ಗಾಂಜಾ ಸ್ವೀಕರಿಸುತ್ತಿದ್ದ ಸತೀಶ್, ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಗಾಂಜಾ ತುಂಬಿ ಆಟೋದಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ  ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್‌ ಮೀನಾ ಮಾಹಿತಿ ನೀಡಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಸತೀಶ್ ವಿರುದ್ಧ ಗಾಂಜಾ ಸರಬರಾಜು, ಸುಲಿಗೆ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here

Hot Topics

ಇಂದು & ನಾಳೆ ಮಂಗಳೂರಿನಲ್ಲಿ ಮೂಡುಬಿದ್ರೆ ಸೇರಿದಂತೆ ಹಲವೆಡೆ ವಿದ್ಯುತ್ ವ್ಯತ್ಯಯ

ಮಂಗಳೂರು: ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11ಕೆ.ವಿ ವಿವೇಕ್ ಮೋಟಾರ್ ಫೀಡರ್ ಮತ್ತು 11ಕೆ.ವಿ ಮಾರ್ಕೆಟ್ ಫೀಡರ್‍ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.ಆದ ಕಾರಣ ಇಂದು ಬೆಳಿಗ್ಗೆ 10...

ದೇರಳಕಟ್ಟೆಯಲ್ಲೂ ಕಾಣಿಸಿಕೊಂಡ ಸಾವರ್ಕರ್‌ ಫ್ಲೆಕ್ಸ್

ಮಂಗಳೂರು: ಶಿವಮೊಗ್ಗದಲ್ಲಿ ಸಾರ್ವಕರ್‌ ಫ್ಲೆಕ್ಸ್‌ನಿಂದ ಗಲಭೆ ಉಂಟಾದ ಬೆನ್ನಲ್ಲೇ ಮಂಗಳೂರು ನಗರದ ಹೊರವಲಯದ ದೇರಳಕಟ್ಟೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮುಖಂಡರೊಬ್ಬರು ಸಾವರ್ಕರ್ ಪರವಾಗಿ ಫ್ಲೆಕ್ಸ್ ಹಾಕಿದ್ದಾರೆ. ಪೊಲೀಸರು ಅದನ್ನು ತೆರವುಗೊಳಿಸಿದ್ದಾರೆ.ದೇರಳಕಟ್ಟೆ ಮತ್ತು ಅಸೈಗೋಳಿಯಲ್ಲಿ...

ಪುಂಡ ಕಾಂಗ್ರೆಸ್ಸಿಗರೇ ನಿಮಗೆ ಎಚ್ಚರಿಕೆ ಕೊಡ್ತೇನೆ ಎಂದ ಯಶ್ಪಾಲ್‌ ಸುವರ್ಣ

ಮಂಗಳೂರು: ಇವತ್ತಿನ ಪೀಳಿಗೆಗೆ ಸಾವರ್ಕರ್ ಅವರ ಆದರ್ಶ, ಕೊಡುಗೆಗಳನ್ನು ತಿಳಿಸುವ ನಿಟ್ಟಿನಲ್ಲಿ ನಾವು ಕೇವಲ ಆ ಭಾಗದಲ್ಲಿ ಫ್ಲೆಕ್ಸ್ ಮಾತ್ರವಲ್ಲ,ಪುತ್ಥಳಿ ನಿರ್ಮಾಣಕ್ಕೆ ಅನುಮತಿ ಕೋರಿ ಉಡುಪಿ ನಗರ ಸಭೆಗೆ ಪತ್ರವನ್ನು ಬರೆದಿದ್ದೇವೆ ಎಂದು...