ಮಂಗಳೂರು/ಬೆಂಗಳೂರು : ಬೆಂಗಳೂರು ಮೈಸೂರು ರಸ್ತೆಯಲ್ಲಿನ ಟೋಲ್ ಗೇಟ್‌ನಿಂದ ಪ್ರಯಾಣಿಕರಿಗೆ ಮುಕ್ತಿ ನೀಡಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದು, ಟೋಲ್ ಗೇಟ್ ಬದಲಾಗಿ ಸೆಟಲೈಟ್ ಟೋಲ್ ಸಂಗ್ರಹ ಮಾಡಲು ಯೋಜನೆ ರೂಪಿಸಿದೆ. ಶೀಘ್ರವೇ ಈ ಯೋಝನೆ ಜಾರಿಯಾಗುವ ಜೊತೆಗೆ ಎಕ್ಸ್‌ಪ್ರೆಸ್ ವೇ ನಲ್ಲಿ ಬರುವ ಪಟ್ಟಣಗಳಿಗೆ ಪೂರ್ಣ ಪ್ರಮಾಣದ ಸರ್ವಿಸ್ ರಸ್ತೆಯು ನಿರ್ಮಾಣವಾಗಲಿದೆ.
ಬೆಂಗಳೂರು ಮೈಸೂರು ನಡುವಿನ 119 ಕಿಲೋ ಮೀಟರ್ ಉದ್ದದ ಎಕ್ಸ್‌ಪ್ರೆಸ್ ವೇ ಪ್ರಯಾಣಿಕರ ಪ್ರಯಾಣದ ಅವಧಿಯನ್ನು ಕಡಿಮೆ ಮಾಡುತ್ತಿದೆ. ಆದರೆ, 20 ಕಿಲೋ ಮೀಟರ್ ದೂರಕ್ಕೂ ಒಂದೇ ಟೋಲ್ ದರ ಮತ್ತು 119 ಕಿಲೋ ಮೀಟರ್‌ಗೂ ಒಂದೇ ದರ ನೀಡಿ ಪ್ರಯಾಣಿಸಬೇಕಾಗಿತ್ತು. ಸಮೀಪದ ಪಟ್ಟಣಗಳಿಗೆ ಹೋಗಬೇಕಿದ್ದರೂ ಸರ್ವಿಸ್ ರೋಡ್ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಪೂರ್ಣ ಪ್ರಮಾಣದ ಸರ್ವಿಸ್ ರೋಡ್ ನಿರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಎಕ್ಸ್‌ಪ್ರೆಸ್ ವೇ ಗೆ ಎಂಟ್ರಿಕೊಟ್ಟ ವಾಹನಗಳು ಎಷ್ಟು ದೂರು ಕ್ರಮಿಸುತ್ತದೆಯೋ ಅಷ್ಟು ದೂರಕ್ಕೆ ಮಾತ್ರ ಟೋಲ್ ಪಾವತಿಸಬೇಕಾಗುತ್ತದೆ. ಸೆಟಲೈಟ್ ಆಧಾರಿತ ಟೋಲ್ ವ್ಯವಸ್ಥೆಯ ಮೂಲಕ ಪ್ರಯಾಣಿಕರ ಹೊರೆಯನ್ನೂ ಕಡಿಮೆ ಮಾಡಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಇದರಿಂದ ಈ ರಸ್ತೆಯಲ್ಲಿನ ಬಿಡದಿ, ಚೆನ್ನಪಟ್ಟಣ, ಮದ್ದೂರು ಮೊದಲಾದ ಪಟ್ಟಣಗಳ ಜನರಿಗೆ ಅನುಕೂಲವಾಗಲಿದೆ.
ಈ ಯೋಜನೆಗಾಗಿ ಹೆದ್ದಾರಿ ಪ್ರಾಧಿಕಾರ ಎಲ್ಲಾ ರೂಪುರೇಷೆ ತಯಾರಿಸಿ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಿದೆ. ಶೀಘೃದಲ್ಲೇ ಸರ್ವಿಸ್ ರಸ್ತೆಯ ಕಾಮಗಾರಿ ಕೈಗೆತ್ತಿಕೊಂಡು ಎಕ್ಸ್‌ಪ್ರೆಸ್ ವೇ ನಿಂದ ಸರ್ವಿಸ್ ರಸ್ತೆಗೆ ಎಂಟ್ರಿ ಮತ್ತು ಎಕ್ಸಿಟ್ ನೀಡಲಿದೆ. ಇದರಿಂದ ಪ್ರಯಾಣಿಕರ ಟೋಲ್ ಸಮಸ್ಯೆ ಹಾಗೂ ಸುತ್ತಿ ಬಳಸಿ ಊರು ತಲುಪುವ ಸಮಸ್ಯೆಗೆ ಮುಕ್ತಿ ಸಿಗಲಿದೆ.
ಮಂಗಳೂರು : ಕೆಲವು ವರ್ಷಗಳ ಬಳಿಕ ಈ ಬಾರಿ ಮತ್ತೆ ಆರಂಭಗೊಂಡಿರುವ ಕರಾವಳಿ ಉತ್ಸವ ಎರಡೇ ದಿನಗಳಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದಕ್ಕೆ ಜಿಲ್ಲಾಡಳಿತ ಉತ್ತಮ ವ್ಯವಸ್ಥೆಯನ್ನು ಕೂಡಾ ಮಾಡಿದ್ದು, ಈ ಬಾರಿ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಸಂಘಟಿಸಿರುವುದಕ್ಕೆ ಎಲ್ಲರಿಂದಲೂ ಶ್ಲಾಘನೆ ವ್ಯಕ್ತವಾಗಿದೆ.
ಡಿಸೆಂಬರ್ 21ರಿಂದ ಆರಂಭಗೊಂಡಿರುವ ಕರಾವಳಿ ಉತ್ಸವದ ಆಕರ್ಷಕ ಮೆರವಣಿಗೆ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡಿವೆ. ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಡಿ.೨೧ರಿಂದ ಜನವರಿ ೧೯ರವರೆಗೆ ನಡೆಯಲಿದೆ. ಪ್ರತೀ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಝಲಕ್ ಇರಲಿದೆ. ಕರಾವಳಿ ಕರ್ನಾಟಕದ ಕಲೆ, ಕರಕುಶಲ ಮತ್ತು ಖಾದ್ಯಗಳ ಪ್ರದರ್ಶನ, ಸಾಂಸ್ಕೃತಿಕ ವೈವಿಧ್ಯಗಳ ಜೊತೆಗೆ ಮನೋರಂಜನೆಯ ಭರಪೂರವಿದೆ. ಇದಲ್ಲದೇ ಡಿ.29ರವರೆಗೆ ಮೇರಿಹಿಲ್ ಹೆಲಿಪ್ಯಾಡಿನಲ್ಲಿ ಹೆಲಿಕಾಫ್ಟರ್ ರೈಡ್ ಆರಂಭಿಸಲಾಗಿದ್ದು, ಇದಕ್ಕೂ ಬಹಳಷ್ಟು ಜನ ಆಗಮಿಸುತ್ತಿದ್ದಾರೆ. ಡಿ.22ರಿಂದ ಜ.19ರವರೆ ಕದ್ರಿ ಪಾರ್ಕಿನಲ್ಲಿ ರೋಬೋಟಿಕ್ ಚಿಟ್ಟೆ ಪ್ರದರ್ಶನವಿದ್ದು, ಈ ಪ್ರದರ್ಶನವನ್ನು ವೀಕ್ಷಣೇ ಮಾಡಲು ಬಹಳಷ್ಟು ಜನ ಆಗಮಿಸುತ್ತಿದ್ದಾರೆ.
ಶನಿವಾರ ಮತ್ತು ಭಾನುವಾರ ಭಾರೀ ಸಂಖ್ಯೆಯಲ್ಲಿ ಜನಜಂಗುಳಿ ಕಂಡು ಬಂದಿದ್ದು, ಈ ಪ್ರದರ್ಶನ ಸಂಜೆ 4 ರಿಂದ ರಾತ್ರಿ 9 ರವರೆಗೆ ಮಾತ್ರ ಇರಲಿದೆ. ಅಲ್ಲದೆ ಇಂದು ವಸ್ತುಪ್ರದರ್ಶನ ವೇದಿಕೆಯಲ್ಲಿ ನೃತ್ಯರೂಪಕವಿರಲಿದೆ. ನೃತ್ಯೋಪಾಸನ ಕಲಾ ಅಕಾಡೆಮಿ ಪುತ್ತೂರು ಇವರಿಂದ ಕಾರ್ಯಕ್ರಮವಿದೆ. ನಾಳೆ ಸಂಜೆ ದೇವದಾಸ್ ಕಾಪಿಕಾಡ್ ನಿದೇಆರ್ಶನದ ತುಳುಹಾಸ್ಯ ನಾಟಕ ಎರ್ಲಾ ಗ್ಯಾರಂಟಿ ಅತ್ತ್ ಎನ್ನುವ ನಾಟಕ ವಸ್ತು ಪ್ರದರ್ಶನ ವೇದಿಕೆಯಲ್ಲಿ ಪ್ರದರ್ಶಿಸಲ್ಪಡಲಿದೆ.
ಮಂಗಳೂರು/ನವದೆಹಲಿ: ಹಲವು ರಾಷ್ಟ್ರಗಳು ಭಾರತದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿವೆ. ಅಮೆರಿಕದಂತಹ ಪ್ರಬಲ ರಾಷ್ಟ್ರವು ಭಾರತವನ್ನು ಹೊಗಳುತ್ತದೆ. ಭಾರತಕ್ಕೆ ಸಹಾಯ ಮಾಡಲು ರಷ್ಯಾ ಯಾವಾಗಲೂ ಸಿದ್ಧವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಭಾರತವಿಲ್ಲದ ಅಂತಾರಾಷ್ಟ್ರೀಯ ಸಂಬಂಧಗಳು ಅಪೂರ್ಣವೆಂದು ಅನೇಕ ದೇಶಗಳು ಭಾವಿಸುವುದನ್ನು ಅಲ್ಲಗಳೆಯುವಂತಿಲ್ಲ ಎಂದು 2019ರಿಂದ 2022ರವರೆಗೂ ಭಾರತಕ್ಕೆ ಜರ್ಮನ್ ರಾಯಭಾರಿಯಾಗಿದ್ದ ವಾಲ್ಟರ್ ಲಿಂಡ್ನರ್ ಹೇಳಿದ್ದಾರೆ. ವಿಶ್ವದ ಹೆಚ್ಚಿನ ದೇಶಗಳೊಂದಿಗೆ ಸೌಹಾರ್ದಯುತ ಮತ್ತು ವಿಶ್ವಾಸಯುತ ಸಂಬಂಧ ಇರುವ ದೇಶಗಳ ಸಂಖ್ಯೆ ಹೆಚ್ಚಿಲ್ಲ. ಅಂತಹ ವಿರಳ ದೇಶಗಳಲ್ಲಿ ಭಾರತವೂ ಒಂದು ಎಂದು ಮಾಜಿ ಜರ್ಮನ್ ರಾಯಭಾರಿ ವಾಲ್ಟರ್ ಜೆ ಲಿಂಡ್ನರ್ (Walter J. Lindner) ಹೇಳಿದ್ದಾರೆ.
‘ವಾಟ್ ದ ವೆಸ್ಟ್ ಶುಡ್ ಲರ್ನ್ ಫ್ರಂ ಇಂಡಿಯಾ’ (ಪಶ್ಚಿಮ ದೇಶಗಳು ಭಾರತದಿಂದ ಕಲಿಯುವುದೇನು?’) ಎನ್ನುವ ಪುಸ್ತಕದಲ್ಲಿ ವಾಲ್ಟರ್ ಲಿಂಡ್ನರ್ ಅವರು “ಹೊಸ ವಿಶ್ವ ವ್ಯವಸ್ಥೆಯಲ್ಲಿ ಭಾರತದ ಪಾತ್ರವೇನಿರಬಹುದು ಎನ್ನುವ ಅಂಶಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪುಸ್ತಕದ ಬಗ್ಗೆ ಹಾಗೂ ಭಾರತದ ಬಗ್ಗೆ ಅವರು ಎಕನಾಮಿಕ್ ಟೈಮ್ಸ್ನ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಒಂದು ದೇಶದ ಬಗ್ಗೆ ಪುಸ್ತಕಗಳು ಬರೆಯಲಾಗುತ್ತಿದೆ ಎಂದರೆ ಆ ದೇಶದ ಆರ್ಥಿಕತೆ ಬೆಳೆಯುತ್ತಿದೆ ಎಂದು ಭಾವಿಸಬಹುದು. ಚೀನಾದ ಆರ್ಥಿಕತೆ ಬೆಳೆಯುತ್ತಿದ್ದಾಗ ಹೀಗೆ ಪುಸ್ತಕಗಳು ಪ್ರಕಟವಾಗಿದ್ದವು. ಈಗ ಭಾರತದ ಬಗ್ಗೆ ಪುಸ್ತಕಗಳು ಪ್ರಕಟವಾಗುತ್ತಿವೆ. ಇದು ಭಾರತದ ಆರ್ಥಿಕ ಬೆಳವಣಿಗೆ ಸಾಧಿಸಲಾಗುತ್ತಿರುವುದರ ದ್ಯೋತಕವಾಗಿದೆ” ಎಂದಿದ್ದಾರೆ.
ಭಾರತದ ಸಾಫ್ಟ್ ಪವರ್ :
“ಪ್ಲಾಸ್ಟಿಕ್ ವಿರುದ್ಧ ಹೋರಾಡಲೋ, ಅಥವಾ ಮೆಗಾ ಸಿಟಿಗಳನ್ನು ರೂಪಿಸಲೋ ಯಾರಾದರೂ ಏನಾದರೂ ಮಾಡಬೇಕೆಂದರೆ ಮೊದಲು ಭಾರತದಲ್ಲಿ ಅದಕ್ಕೆ ಪರಿಹಾರ ಹುಡುಕಬೇಕು” ಎಂದು ವಾಲ್ಟರ್ ಜೆ ಲಿಂಡ್ನರ್ ತಿಳಿಸಿದ್ದಾರೆ. ಸಾಫ್ಟ್ ಪವರ್ ಎಂಬುದು ಭಾರತದ ಡಿಎನ್‌ಎನಲ್ಲೇ ಇದೆ. ಹೀಗಾಗಿ, ಈ ಮೃದುಶಕ್ತಿಯು ಭಾರತಕ್ಕೆ ಯಾವಾಗಲೂ ಇದ್ದೇ ಇರುತ್ತದೆ. ಇತಿಹಾಸ, ಆದ್ಯಾತ್ಮಿಕತೆ, ಸಂಸ್ಕೃತಿ, ಧರ್ಮ, ಸಂಗೀತ ಇತ್ಯಾದಿ ಕ್ಷೇತ್ರಗಳಲ್ಲಿ ವಿಶ್ವಾದ್ಯಂತ ಭಾರತದ ಛಾಪು ಇದೆ. ಈಗ ಭಾರತದಲ್ಲಿ ವಿಶ್ವದಲ್ಲೇ ಅತಿದೊಡ್ಡ ಜನಸಂಖ್ಯೆ ಇದೆ. ಈಗ ಭಾರತ ಸಾಫ್ಟ್ ಪವರ್ಗಿಂತಲೂ ದೊಡ್ಡ ಪ್ರಭಾವ ಹೊಂದಿದೆ. ಭಾರತದ ಅಭಿಪ್ರಾಯ ಮತ್ತು ಪಾಲ್ಗೊಳ್ಳುವಿಕೆ ಇಲ್ಲದೇ ಜಗತ್ತು ಮುಂದಡಿ ಇಡಲು ಆಗುವುದಿಲ್ಲ ಎನ್ನುವ ಸ್ಥಿತಿ ಇದೆ. ಕಳೆದ ಎರಡು-ಮೂರು ವರ್ಷಗಳಿಂದ ಆಗುತ್ತಿರುವ ಜಾಗತಿಕ ರಾಜಕೀಯ ವಿಚಲನಗಳು, ಯುದ್ಧ, ಬಿಕ್ಕಟ್ಟು ಇತ್ಯಾದಿ ಪರಿಸ್ಥಿತಿಯಲ್ಲೂ ಭಾರತವು ಸೂಪರ್ಪವರ್ ಗುಂಪುಗಳ ನಡುವೆ ಸಮತೋಲನ ಸಾಧಿಸಲು ಯಶಸ್ವಿಯಾಗಿದೆ. ಪೂರ್ವ ಮತ್ತು ಪಶ್ಚಿಮ, ಹಾಗೂ ಉತ್ತರ ಮತ್ತು ದಕ್ಷಿಣ ನಡುವೆ ಸೇತುವಾಗಿದೆ ಎಂದು ವಾಲ್ಟರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಗಳೂರು/ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯುತ್ತಿದ್ದು ಇಂದು ಕೊನೆ ದಿನವಾಗಿದೆ. ಇನ್ನು ಮುಂದಿನ ಅಂದರೆ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಗಣಿನಾಡು ಬಳ್ಳಾರಿಯಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಹೇಳಿದ್ದಾರೆ.
ಇನ್ನೂ ಮಂಡ್ಯದಲ್ಲಿ ನಡೆದ 87ನೇ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದ ಜನರು ಯಶಸ್ವಿಗೊಳಿಸಿದ್ದಾರೆ. ಸಮಾರಂಭದಲ್ಲಿ ಸಾಕಷ್ಟು ವಿಶೇಷ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಎಲ್ಲವೂ ಜನರ ಗಮನ ಸೆಳೆದಿವೆ. ಇದೇ ಮೊದಲ ಬಾರಿಗೆ ಆಯೋಜಿಸಿದ್ದ ವಿಶೇಷ ಚೇತನರ ಗೋಷ್ಠಿ ಯಶಸ್ವಿಯಾಗಿದೆ. ದಾಖಲೆ ಮಟ್ಟದಲ್ಲಿ ಜನ ಕನ್ನಡ ಹಬ್ಬಕ್ಕೆ ಬಂದು ಯಶಸ್ವಿಗೊಳಿಸಿದ್ದಾರೆ.
ಸಮಾರೋಪ ಸಮಾರಂಭ
ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಮಾರೋಪ ಸಮಾರಂಭದ ಕಡೆಯಲ್ಲಿ ಸಮ್ಮೇಳನದ ನಿರ್ಣಯ ಮಂಡನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ. ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಗೊ.ರು ಚನ್ನಬಸಪ್ಪ, ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಉಪಸ್ಥಿತಿ ಇರಲಿದ್ದಾರೆ.
ಬಳ್ಳಾರಿಯಲ್ಲಿ 88ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ
ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ನಿನ್ನೆ (ಡಿಸೆಂಬರ್ 21) ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ 88ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ನಿರ್ಧಾರದೊಂದಿಗೆ ಬಳ್ಳಾರಿ ಜನ ಖುಷಿಯಾಗಿದ್ದು, ಬಿಸಿಲೂರಿನಿಂದ ಸರ್ವತ್ರ ಕನ್ನಡ ಕಂಪು ಹರಡಲು ಮುಂದಾಗಿದ್ದಾರೆ.
66 ವರ್ಷಗಳ ಬಳಿಕ ಬಳ್ಳಾರಿಗೆ ಸಾಹಿತ್ಯ ಸಮ್ಮೇಳನದ ಅವಕಾಶ
1926 ಹಾಗೂ 1938ರಲ್ಲಿ ಬಳ್ಳಾರಿಯಲ್ಲಿ ಸಮ್ಮೇಳನ ನಡೆದಿತ್ತು. ಸ್ವಾತಂತ್ರ್ಯಾನಂತರ 1958 ರಲ್ಲಿ ವಿ.ಕೃ.ಗೋಕಾಕ್ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಮ್ಮೇಳನ ಅರ್ಥಪೂರ್ಣವಾಗಿ ನಡೆದಿತ್ತು. ಸುದೀರ್ಘ 66 ವರ್ಷಗಳ ಬಳಿಕ ಬಳ್ಳಾರಿಗೆ ಸಾಹಿತ್ಯ ಸಮ್ಮೇಳನದ ಅವಕಾಶ ದಕ್ಕಿದೆ.