ಮಂಗಳೂರು: ನಿಷೇಧಿತ ಪಿಎಫ್‌ಐ ಸಂಘಟನೆಯ ದ.ಕ ಜಿಲ್ಲಾಧ್ಯಕ್ಷ ಎಜಾಝ್ ಬಂಟ್ವಾಳ ಎಂಬಾತನನ್ನು ಕೊಯಮತ್ತೂರು ಪೊಲೀಸರು ವಶಕ್ಕೆ ಪಡೆದಿದ್ದು, ಎನ್‌ಐಗೆ ಹಸ್ತಾಂತರಿಸುವ ಸಾಧ್ಯತೆಯಿದೆ.
ಪಿಎಫ್‌ಐ ಸಂಘಟನೆ ಅಧ್ಯಕ್ಷನಾಗಿ ಎಜಾಝ್ ಬಂಟ್ವಾಳ ವಿರುದ್ಧ ಎನ್‌ಐಎ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದರು.
ಇದರಿಂದ ಎಜಾಝ್ ಮಂಗಳೂರು ವಿಮಾಣ ನಿಲ್ದಾಣದ ಬದಲು ಕೊಯಮತ್ತೂರು ಏರ್‌ಪೋರ್ಟ್ ಮೂಲಕ ವಿದೇಶಕ್ಕೆ ತೆರಳಲು ಯತ್ನಿಸಿದ್ದಾನೆ.
ಆದರೆ ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದಾಗ ಲುಕ್‌ಔಟ್ ನೋಟಿಸ್ ಇರುವುದು ಪತ್ತೆಯಾದ ಕಾರಣ ತಕ್ಷಣ ಕೊಯಮತ್ತೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.