ಮಂಗಳೂರು: ಬೆಂಗಳೂರಿನ ಕಾವಲ್ ಬೈರಸಂದ್ರ ದಲ್ಲಿ ಪೂರ್ವ ಯೋಜಿತವಾಗಿ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆಗಳು ನಡೆಸಿದ ಮತೀಯ ಗೂಂಡಗಿರಿಯನ್ನು ಹಿಂದು ಜಾಗರಣ ವೇದಿಕೆ ಮಂಗಳೂರು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಸಮಾಜದಲ್ಲಿ ಪದೇ ಪದೆ ಗಲಭೆಯನ್ನು ಸೃಷ್ಟಿಸಿ ನೇರವಾಗಿ ಭಾಗಿ ಆಗಿರುವ ಮತೀಯ ಸಂಘಟನೆಯನ್ನು ನಿಷೇಧಿಸುವಂತೆ ಹಿಂದೂ ಜಾಗರಣ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತು. ಈ ಸಂದರ್ಭ ಜಿಲ್ಲಾ ಅಧ್ಯಕ್ಷರಾದ ಹರೀಶ್ ಶಕ್ತಿನಗರ ಮತ್ತು ಜಿಲ್ಲಾ ಪಧಾದಿಕಾರಿಗಳಾದ ಸಂದೀಪ್ ಅಂಬ್ಲಮೊಗೇರ್, ಪುಷ್ಪರಾಜ್ ಕುಳಾಯಿ, ಪ್ರವೀಣ್ ಬಂಟ್ಸ್ ಹಾಸ್ಟೇಲ್ ಉಪಸ್ಥಿತರಿದ್ದರು.