ಬಳ್ಳಾರಿ: ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯವು ಟ್ರಾನ್ಸ್ ಮಹಿಳೆಯನ್ನು ಅತಿಥಿ ಉಪನ್ಯಾಸಕರನ್ನಾಗಿ ನೇಮಿಸಿದೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೇಣುಕಾ ಪೂಜಾರಿ (35) ಮೂರು ದಿನಗಳ ಹಿಂದೆ ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಸೇರಿದ್ದಾರೆ.
ವಿಶ್ವವಿದ್ಯಾನಿಲಯದ ಕುಲಸಚಿವ ಎಸ್.ಎನ್.ರುದ್ರೇಶ್ ನೀಡಿದ ಬೆಂಬಲವೇ ತನ್ನ ಸಾಧನೆಗೆ ಕಾರಣ ಎಂದು ಹೇಳಿದರು. ಈ ಹಿಂದೆ ಟಿ. ಮಲ್ಲೇಶ್ ಆಗಿದ್ದ ಪ್ರೊ.ರೇಣುಕಾ ಪೂಜಾರಿ ಬಳ್ಳಾರಿ ಜಿಲ್ಲೆಯ ಕುರುಗೋಡು ನಿವಾಸಿ. ಶಾಲಾ-ಕಾಲೇಜು ದಿನಗಳಲ್ಲಿ ಹಲವು ಸವಾಲುಗಳನ್ನು ಎದುರಿಸಿದರೂ ಅವುಗಳನ್ನು ಮೆಟ್ಟಿ ನಿಂತು ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪಿಜಿ ಕೋರ್ಸ್‌ಗೆ ದಾಖಲಾದರು. ತನ್ನ ಪಿಜಿ ಕೋರ್ಸ್ ಮುಗಿದ ನಂತರ, ಅವರು ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡಲು ಬಯಸಿದ್ದರು, ಆದರೆ ದಾಖಲಾತಿ ಪ್ರಕ್ರಿಯೆ ಮುಗಿದಿದ್ದರಿಂದ ಸಾಧ್ಯವಾಗಲಿಲ್ಲ. ಪಿಜಿ ಕೋರ್ಸ್‌ಗೆ ದಾಖಲಾದಾಗ ರುದ್ರೇಶ್ ಮತ್ತು ವಿಶ್ವವಿದ್ಯಾನಿಲಯದ ಉಪಕುಲಪತಿ ಸೇರಿದಂತೆ ಇತರ ಅಧಿಕಾರಿಗಳು ಬೆಂಬಲ ನೀಡಿದರು . ನಂತರ ಅತಿಥಿ ಉಪನ್ಯಾಸಕರಾಗಿ ನೇಮಕಗೊಂಡರು ಎಂದು ಪ್ರೊ.ರೇಣುಕಾ ಪೋಜಾರಿ TNIE ಗೆ ತಿಳಿಸಿದರು. ಟ್ರಾನ್ಸ್‌ಜೆಂಡರ್ ಸಮುದಾಯದವರು ಭಿಕ್ಷಾಟನೆಯು ಜೀವನಕ್ಕಾಗಿ ಇರುವ ಏಕೈಕ ಆಯ್ಕೆ ಎಂದು ನಂಬುತ್ತಾರೆ. ಆದರೆ ಪದವಿ ಕೋರ್ಸ್‌ಗಳನ್ನು ಪೂರ್ಣಗೊಳಿಸಿದವರು ಉದ್ಯೋಗ ಪಡೆದಿದ್ದಾರೆ. ಕೆಲವರು ಹೈಸ್ಕೂಲ್ ಶಿಕ್ಷಕರಾಗಿ ನೇಮಕಗೊಂಡಿದ್ದಾರೆ.
ರಾಜ್ಯದ ವಿಶ್ವವಿದ್ಯಾನಿಲಯವೊಂದರಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕಗೊಂಡ ಮೊದಲ ಸಮುದಾಯದ ವ್ಯಕ್ತಿ ನಾನು. ನಾನು ಕನ್ನಡದಲ್ಲಿ ಪಿಎಚ್‌ಡಿ ಮಾಡಿದ್ದೇನೆ. ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಳ್ಳಲು NET ಮತ್ತು SET ಪರೀಕ್ಷೆಗಳಿಗೆ ಹಾಜರಾಗುತ್ತೇನೆ. ಭಿಕ್ಷಾಟನೆಯನ್ನು ನಿಲ್ಲಿಸಿ ಮತ್ತು ಶಿಕ್ಷಣವನ್ನು ಮುಂದುವರಿಸಿ ಎಂಬುದು ನನ್ನ ಸಮುದಾಯದವರಿಗೆ ನಾನು ಮನವಿ ಮಾಡುತ್ತೇನೆ. ನಾವು ಒಳ್ಳೆಯ ಕೆಲಸಗಳನ್ನು ಮಾಡಲು ಪ್ರಾರಂಭಿಸಿದರೆ, ಸಮಾಜವು ಖಂಡಿತವಾಗಿಯೂ ನಮ್ಮನ್ನು ಬೆಂಬಲಿಸುತ್ತದೆ ಎಂದು ರೇಣುಕಾ ಹೇಳಿದರು. ಕಳೆದ ವರ್ಷ ತನ್ನನ್ನು ಪಿಎಚ್‌ಡಿ ಗಾಗ ದಾಖಲಿಸಿಕೊಳ್ಳಲು ನಮ್ಮ ಕಚೇರಿಗೆ ಬಂದಿದ್ದರು. ಆದರೆ ಆ ಹೊತ್ತಿಗೆ ದಾಖಲಾತಿ ಪ್ರಕ್ರಿಯೆ ಮುಗಿದಿದ್ದರಿಂದ ಆಕೆಗೆ ಸಾಧ್ಯವಾಗಲಿಲ್ಲ. ಅವರು ಬೋಧನೆಯಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದಾಗ, ನಾನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೊಂದಿಗೆ ಚರ್ಚಿಸಿದೆ. ಆಕೆಯನ್ನು ಡೆಮೊಗೆ ಕರೆಯಲಾಯಿತು ಮತ್ತು ಆಕೆಯ ಬೋಧನಾ ಕೌಶಲ್ಯದಿಂದ ಎಲ್ಲರೂ ಸಂತೋಷಪಟ್ಟರು.ಅವರನ್ನು ಅತಿಥಿ ಅಧ್ಯಾಪಕರಾಗಿ ನೇಮಕ ಮಾಡಲು ಸಿಂಡಿಕೇಟ್ ತನ್ನ ಅನುಮೋದನೆಯನ್ನು ನೀಡಿತು ಎಂದು ರುದ್ರೇಶ್ ತಿಳಿಸಿದ್ದಾರೆ.
ಮಂಗಳೂರು/ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯುತ್ತಿದ್ದು ಇಂದು ಕೊನೆ ದಿನವಾಗಿದೆ. ಇನ್ನು ಮುಂದಿನ ಅಂದರೆ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಗಣಿನಾಡು ಬಳ್ಳಾರಿಯಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಹೇಳಿದ್ದಾರೆ.
ಇನ್ನೂ ಮಂಡ್ಯದಲ್ಲಿ ನಡೆದ 87ನೇ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದ ಜನರು ಯಶಸ್ವಿಗೊಳಿಸಿದ್ದಾರೆ. ಸಮಾರಂಭದಲ್ಲಿ ಸಾಕಷ್ಟು ವಿಶೇಷ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಎಲ್ಲವೂ ಜನರ ಗಮನ ಸೆಳೆದಿವೆ. ಇದೇ ಮೊದಲ ಬಾರಿಗೆ ಆಯೋಜಿಸಿದ್ದ ವಿಶೇಷ ಚೇತನರ ಗೋಷ್ಠಿ ಯಶಸ್ವಿಯಾಗಿದೆ. ದಾಖಲೆ ಮಟ್ಟದಲ್ಲಿ ಜನ ಕನ್ನಡ ಹಬ್ಬಕ್ಕೆ ಬಂದು ಯಶಸ್ವಿಗೊಳಿಸಿದ್ದಾರೆ.
ಸಮಾರೋಪ ಸಮಾರಂಭ
ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಮಾರೋಪ ಸಮಾರಂಭದ ಕಡೆಯಲ್ಲಿ ಸಮ್ಮೇಳನದ ನಿರ್ಣಯ ಮಂಡನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ. ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಗೊ.ರು ಚನ್ನಬಸಪ್ಪ, ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಉಪಸ್ಥಿತಿ ಇರಲಿದ್ದಾರೆ.
ಬಳ್ಳಾರಿಯಲ್ಲಿ 88ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ
ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ನಿನ್ನೆ (ಡಿಸೆಂಬರ್ 21) ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ 88ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ನಿರ್ಧಾರದೊಂದಿಗೆ ಬಳ್ಳಾರಿ ಜನ ಖುಷಿಯಾಗಿದ್ದು, ಬಿಸಿಲೂರಿನಿಂದ ಸರ್ವತ್ರ ಕನ್ನಡ ಕಂಪು ಹರಡಲು ಮುಂದಾಗಿದ್ದಾರೆ.
66 ವರ್ಷಗಳ ಬಳಿಕ ಬಳ್ಳಾರಿಗೆ ಸಾಹಿತ್ಯ ಸಮ್ಮೇಳನದ ಅವಕಾಶ
1926 ಹಾಗೂ 1938ರಲ್ಲಿ ಬಳ್ಳಾರಿಯಲ್ಲಿ ಸಮ್ಮೇಳನ ನಡೆದಿತ್ತು. ಸ್ವಾತಂತ್ರ್ಯಾನಂತರ 1958 ರಲ್ಲಿ ವಿ.ಕೃ.ಗೋಕಾಕ್ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಮ್ಮೇಳನ ಅರ್ಥಪೂರ್ಣವಾಗಿ ನಡೆದಿತ್ತು. ಸುದೀರ್ಘ 66 ವರ್ಷಗಳ ಬಳಿಕ ಬಳ್ಳಾರಿಗೆ ಸಾಹಿತ್ಯ ಸಮ್ಮೇಳನದ ಅವಕಾಶ ದಕ್ಕಿದೆ.
ಮಂಗಳೂರು/ಮೆಕ್ಸಿಕೊ: ತನ್ನದೇ ವಿಭಿನ್ನ ಶೈಲಿಯಲ್ಲಿ ಎಂಟ್ರಿ ಕೊಡುತ್ತಿದ್ದ ರೇಯ್ ಮಿಸ್ಟೀರಿಯೋ ಅಬ್ಬರ ನೋಡೋದೇ ಒಂದು ಆನಂದವಾಗಿತ್ತು. 66 ವರ್ಷದ ರೇ ಮಿಸ್ಟೀರಿಯೋ ಸೀನಿಯರ್ ಸಾವನ್ನಪ್ಪಿರುವ ಸುದ್ದಿ ವರದಿಯಾಗಿದೆ.
WWE ಸ್ಟಾರ್ ಗಳ ಸಾವಿನ ಸುದ್ದಿ ಬಗ್ಗೆ ಆಗಾಗ ಸುಳ್ಳು ಸುದ್ದಿ ಕೇಳಿ ಬರುತ್ತಲೇ ಇರುತ್ತದೆ. ಆದರೆ ಈ ಬಾರಿ ರೇ ಮಿಸ್ಟೀರಿಯೋ ಅಭಿಮಾನಿಗಳು ಇದು ಕೂಡ ಸುಳ್ಳಾಗಲಿ ಎಂದು ಬಯಸಿದ್ದರು. ಆದರೆ ಈ ಬಾರಿ ಮಿಸ್ಟೀರಿಯೋ ಕುಟುಂಬಸ್ಥರು ಈ ಶಾಕಿಂಗ್ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ರೇಯ್ ಮಿಸ್ಟೀರಿಯೋ, 1990ರ ಮಕ್ಕಳ ಹಾಟ್ ಫೇವರೆಟ್ WWE ಸ್ಟಾರ್. ರೇಯ್ ಮಿಸ್ಟೀರಿಯೋ ಫೈಟಿಂಗ್ ಹಾಗೂ ಪಲ್ಟಿ ಹೊಡೆಯೋ ಸ್ಟೈಲ್ ಅಷ್ಟು ರೋಮಾಂಚನಕಾರಿ.
ಸಾಮಾನ್ಯವಾಗಿ WWEನಲ್ಲಿ ದಢೂತಿ ದೇಹ. 6 ಅಡಿಗಿಂತ ಎತ್ತರದ ಕುಸ್ತಿಪಟುಗಳು ಅಖಾಡಕ್ಕೆ ಇಳಿಯುತ್ತಾರೆ. ಆದರೆ ಮಿಸ್ಟೀರಿಯೋ ಸೀನಿಯರ್ WWE ಸೂಪರ್ ಸ್ಟಾರ್‌ಗಳ ಮಧ್ಯೆ ಕುಳ್ಳನಂತೆ ಕಾಣುತ್ತಿದ್ದರು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋ ಹಾಗೇ ಮಿಸ್ಟೀರಿಯೋ ಸೀನಿಯರ್ ಅನ್ನ ಸೋಲಿಸೋದು ಅಷ್ಟು ಸುಲಭವಲ್ಲ.
ರೇಯ್ ಮಿಸ್ಟೀರಿಯೋ ಆಡಿದ ಒಂದೊಂದು ಮ್ಯಾಚ್‌ಗಳು ರೋಚಕ ಫಲಿತಾಂಶಗಳನ್ನೇ ಕೊಡುತ್ತಿದ್ದವು. ರೇಯ್ ಮಿಸ್ಟೀರಿಯೋ ಫೈಟಿಂಗ್ ಸ್ಟೈಲ್ ಹಾಗೂ ರೋಚಕ ಟ್ವಿಸ್ಟ್‌ಗಳು ನೋಡುಗರನ್ನ ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತಿದ್ದವು.
ಕುಸ್ತಿ ಪ್ರಪಂಚದ ಮೇಲೆ ರೇ ಮಿಸ್ಟೀರಿಯೋ ಸೀನಿಯರ್ ಅವರ ಪ್ರಭಾವವು ಮುಂದಿನ ಪೀಳಿಗೆಯೂ ಕೂಡ ನೆನಪಿಸುವಂತೆ ಮಾಡುತ್ತದೆ. ಅವರ ವಿಶಿಷ್ಟ ಶೈಲಿಯ ಫೈಟಿಂಗ್ ಗಳು, ರಿಂಗ್ ನಲ್ಲಿ ಆಡುವ ರೀತಿ, ಪಲ್ಟಿ ಹೊಡೆಯೋ ಸ್ಟೈಲ್ ಅಭಿಮಾನಿಗಳನ್ನು ರೋಮಾಂಚನಗೊಳಿಸುತ್ತಿತ್ತು. ಆದರೆ ಇವರ ನಿಧನ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಅತೀವ ದುಃಖ ಉಂಟುಮಾಡಿದೆ.
ಉಡುಪಿ: ಪ್ರವಾಸಿಗನನ್ನು ಕರೆದೊಯ್ಯತಿದ್ದ ಜೆಟ್‌ಸ್ಕೀ ಬೋಟ್ ಮ*ಗುಚಿದ ಪರಿಣಾಮ ಇಬ್ಬರು ಸಮುದ್ರಕ್ಕೆ ಬಿದ್ದು, ಜೆಟ್ ಸ್ಕೀ ರೈಡರ್ ನಾ*ಪತ್ತೆಯಾದ ಘಟನೆ ಉಡುಪಿಯ ತ್ರಾಸಿ ಕಡಲ ಕಿನಾರೆಯಲ್ಲಿ ಶನಿವಾರ (ಡಿ.21) ಸಂಜೆ ಸಂಭವಿಸಿದೆ.
ಜೆಟ್ ಸ್ಕೀ ರೈಡರ್ ರವಿದಾಸ್ (45) ನಾ*ಪತ್ತೆಯಾಗಿದ್ದು, ಮತ್ತೋರ್ವ ಬೆಂಗಳೂರಿನ ಪ್ರವಾಸಿಗನನ್ನು ರಕ್ಷಿಸಲಾಗಿದೆ.
ತ್ರಾಸಿ ಕಡಲ ಕಿನಾರೆಯಲ್ಲಿ ಕಾರ್ಯಾಚರಿಸುತ್ತಿರುವ ಬೆಳುಗಾ ವಾಟರ್ ಸ್ಪೋರ್ಟ್ಸ್‌ನ ಜೆಟ್‌ಸ್ಕೀ ಬೋಟ್‌ನಲ್ಲಿ ಓರ್ವ ಪ್ರವಾಸಿಗನನ್ನು ಕೂರಿಸಿಕೊಂಡು ಸಮುದ್ರದಲ್ಲಿ ವಿಹಾರ ನಡೆಸುತ್ತಿದ್ದ ಸಂದರ್ಭ ರೈಡರ್ ನಿಯಂತ್ರಣ ತಪ್ಪಿ ಜೆಟ್‌ಸ್ಕೀ ಮ*ಗುಚಿ ಬಿದ್ದಿತ್ತು. ರೈಡ್‌ಗೆ ಹೋಗುವ ಮುನ್ನ ಬೆಂಗಳೂರು ಮೂಲದ ಪ್ರವಾಸಿಗ ಪ್ರಶಾಂತ್‌ಗೆ ಲೈಫ್ ಜಾಕೆಟ್ ಹಾಕಿ ಸುರಕ್ಷತಾ ಕ್ರಮ ವಹಿಸಿದ್ದರಿಂದ ಆತನನ್ನು ರಕ್ಷಿಸಲಾಗಿದೆ. ನಾ*ಪತ್ತೆಯಾದ ರೈಡರ್ ಮುರುಡೇಶ್ವರ ಮೂಲದ ರವಿದಾಸ್ ನ ಶೋ*ಧ ಕಾರ್ಯ ನಡೆಯುತ್ತಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.