Friday, July 1, 2022

ಬಲ್ಲಾಳ್‌ಭಾಗ್‌ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಮೆದುಳು ನಿಷ್ಕ್ರಿಯ: ಅಂಗಾಂಗ ದಾನ

ಮಂಗಳೂರು: ನಗರದ ಬಲ್ಲಾಳ್‌ಭಾಗ್‌ ಬಳಿ ಏ.9ರಂದು ನಡೆದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಗಾಯಾಳು ಮಹಿಳೆಯ ಮೆದುಳು ನಿಷ್ಕ್ರಿಯಗೊಂಡಿರುವ ಹಿನ್ನೆಲೆಯಲ್ಲಿ ಈಕೆಯ ಅಂಗಾಂಗ ದಾನ ಮಾಡಲು ಮನೆ ಮಂದಿ ನಿರ್ಧರಿಸಿದ್ದಾರೆ.


ಗಾಯಾಳು ಮಹಿಳೆ ಪ್ರೀತಿ ಮನೋಜ್‌ ಕಲ್ಯಾ ಅಂಗಾಂಗ ದಾನ ಮಾಡುವ ಮೂಲಕ ಇನ್ನೊಬ್ಬರ ಬಾಳಿಗೆ ಬೆಳಕಾಗಿದ್ದಾರೆ.

ಏ.9ರಂದು ನಗರದ ಪಿವಿಎಸ್‌ ಕಡೆಯಿಂದ ಲಾಲ್‌ಭಾಗ್‌ ಕಡೆಗೆ ಅತೀ ವೇಗದಿಂದ ಶ್ರವಣ್‌ ಕುಮಾರ್‌ ಎಂಬಾತ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಬಿಎಂಡಬ್ಲ್ಯೂ ಕಾರು ರಸ್ತೆ ವಿಭಾಜಕ್ಕೆ ಢಿಕ್ಕಿ ಹೊಡೆದು ವಿರುದ್ಧ ರಸ್ತೆಗೆ ಹಾರಿದೆ.

ಈ ವೇಳೆ ಆ ರಸ್ತೆಯಲ್ಲಿ ಬರುತ್ತಿದ್ದ ಸ್ಕೂಟಿಗೆ ಢಿಕ್ಕಿ ಹೊಡೆದು ಸ್ಕೂಟಿ ಹಿಂದಿನಿಂದ ಬರುತ್ತಿದ್ದ ಕಾರಿಗೆ ಅಪ್ಪಳಿಸಿದೆ.

ಅಪಘಾತದ ರಭಸಕ್ಕೆ ಮಹಿಳೆ ಹೆಲ್ಮೆಟ್‌ ಧರಿಸಿದ್ದರೂ ಎರಡೂ ಕಾರಿನ ಮಧ್ಯೆ ಸಿಕ್ಕಿ ತಲೆಗೆ ಗಂಭೀರ ಗಾಯವಾಗಿತ್ತು.

ಆಗ ಸ್ಥಳದಲ್ಲಿದ್ದ ಸಾರ್ವಜನಿಕರು ಆಕ್ರೋಶಗೊಂಡು ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಚಾಲಕ ಶ್ರವಣ್‌ ಕುಮಾರ್‌ನನ್ನು ಕಾರಿನಿಂದ ಎಳೆದು ಮನಬಂದಂತೆ ಥಳಿಸಿದ್ದರು.

ಇದೇ ಅಪಘಾತದಲ್ಲಿ ಡಿವೈಡರ್‌ ಮೇಲಿದ್ದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದರೆ ಹಾಗೂ ಮತ್ತೊಂದು ಕಾರಿನಲ್ಲಿದ್ದ ಅಮನ್ ಜಯದೇವನ್ ಎಂಬ ಎಳು ವರ್ಷದ ಮಗು ಸಹ ಗಾಯಗೊಂಡಿತ್ತು.

ಆರೋಪಿ ಶ್ರವಣ್‌ ಕುಮಾರ್‌ ವಿರುದ್ಧ ಅತೀ ವೇಗ ಮತ್ತು ನಿರ್ಲಕ್ಷ್ಯ ಚಾಲನೆ ಮಾಡಿದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆ 308ರ ಅಡಿಯಲ್ಲಿ ಕಲಂ 279, 337, 338ರ ಅನ್ವಯವೂ ಪ್ರಕರಣಗಳನ್ನು ದಾಖಲಿಸಿ ಬಂಧನ ಮಾಡಲಾಗಿತ್ತು.

ಅಂದು ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಪ್ರೀತಿ ಮನೋಜ್‌ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದೀಗ 14 ದಿನಗಳ ಜೀವನ್ಮರಣದ ಹೋರಾಟದಲ್ಲಿದ್ದ ಆಕೆಯ ಮೆದುಳು ನಿಷ್ಕ್ರಿಯಗೊಂಡಿದ್ದು, ಇದೀಗ ಮನೆ ಮಂದಿ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ.

1 COMMENT

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಬೈಕಾಡಿ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗಾಗಿ “ಕಥಾನಕ” ಸ್ಪರ್ಧೆ

ಮಂಗಳೂರು: ಮಂಗಳೂರು ಉರ್ವದ ಬೈಕಾಡಿ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗಾಗಿ ಕನ್ನಡದಲ್ಲಿ ಕಥೆ ಹೇಳುವ ಆನ್ ಲೈನ್ ಕಥಾ ಸ್ಪರ್ಧೆ"ಕಥಾನಕ" ಎಂಬ ಸ್ಪರ್ಧೆ ಆಯೋಜನೆ ಮಾಡಲಾಗಿದೆ.ಈ ಕುರಿತು ಪ್ರತಿಷ್ಠಾನದ ಕಾರ್ಯದರ್ಶಿಯಾದ ಭರತ್ ಬೈಕಾಡಿಯವರು ಮಾಧ್ಯಮಗಳೊಂದಿಗೆ...

ಉಡುಪಿ: ಬಾವಿಗೆ ಹಾರಿ ಯುವತಿ ಜೀವಾಂತ್ಯ

ಉಡುಪಿ: ಬಾವಿಗೆ ಹಾರಿ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಕಾಪುವಿನ ಮಡಂಬು ಇನ್ನಂಜೆಯಲ್ಲಿ ನಡೆದಿದೆ.ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿ, ಗೋಪಾಲ ಶೆಟ್ಟಿಯವರ ಪುತ್ರಿ ಶರ್ಮಿಳಾ (22) ಸಾವನ್ನಪ್ಪಿದ ಯುವತಿ.ಶರ್ಮಿಳಾರವರು ಸುಮಾರು 8 ತಿಂಗಳಿನಿಂದ...

ಮಹಿಳೆಯರ ಸ್ವಾವಲಂಬಿ ಬದುಕಿಗೆ ಭಾಷ್ಯ ಬರೆದ ಉಡುಪಿಯ ಸವಿತಾ ಶೇಟ್

ಉಡುಪಿ: ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಉಡುಪಿಯ ಮಹಿಳೆಯೊಬ್ಬರು ಪ್ರೇರಣೆಯಾಗಿದ್ದಾರೆ. ಉಡುಪಿಯ ಒಳಕಾಡು ನಿವಾಸಿ ಸವಿತಾ ಶೇಟ್ ಎಂಬವರೇ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸ್ಪೂರ್ತಿದಾಯಕರಾಗಿದ್ದಾರೆ.ಇವರ ಗಂಡ ಉದ್ಯಮಿಯಾಗಿದ್ದು ಹಾಗೂ ಮಗ ಶಿಕ್ಷಕರಾಗಿ ಕೆಲಸ...