DAKSHINA KANNADA
ಯಕ್ಷಗಾನದ ಕಂಚಿನ ಕಂಠ ಬಲಿಪ ನಾರಾಯಣ ಭಾಗವತ ಇನ್ನು ನೆನಪು ಮಾತ್ರ..!
ಮಂಗಳೂರು :ಯಕ್ಷಗಾನದ ತೆಂಕು ತಿಟ್ಟಿನ ಹೆಸರಾಂತ ಭಾಗವತರಾದ ಬಲಿಪ ನಾರಾಯಣ ಭಾಗವತ ಅವರು ಇಂದು ಗುರುವಾರ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.ಮೂಡಬಿದಿರೆಯ ಸಮೀಪದ ನೂಯಿ ಎಂಬಲ್ಲಿ ವಾಸವಾಗಿದ್ದರು.
1938 ರಲ್ಲಿ ಕಾಸರಗೋಡು ಜಿಲ್ಲೆಯ ಎಣ್ಮಕಜೆ ಗ್ರಾಮದ ಪಡ್ರೆ ಎಂಬಲ್ಲಿ ಬಲಿಪ ಮಾಧವ ಭಟ್ಟ ಮತ್ತು ಸರಸ್ವತಿ ದಂಪತಿಗೆ ಜನಿಸಿದ ಬಲಿಪ ನಾರಾಯಣ ಭಾಗವತರಿಗೆ ಅಜ್ಜ ಹಿರಿಯ ಬಲಿಪ ನಾರಾಯಣ ಭಟ್ಟ ಮತ್ತು ತಂದೆ ಬಲಿಪ ಮಾಧವ ಭಟ್ಟರೇ ಗುರುಗಳಾಗಿದ್ದು 6 ದಶಕಗಳ ಅನುಭವ ಹೊಂದಿದ್ದಾರೆ.
ನಾರಾಯಣ ಭಾಗವತರು ಏಳನೇ ತರಗತಿಯವರಿಗೆ ಓದಿದ್ದು. ಅಜ್ಜ ದಿ.ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತು ತಮ್ಮ 13ನೇ ವರ್ಷದಲ್ಲಿಯೇ ರಂಗ ಪ್ರವೇಶಗೈದರು.
ಕಟೀಲು ಮೇಳದಲ್ಲಿ ಸುಮಾರು 40 ವರ್ಷಕ್ಕಿಂತಲೂ ಅಧಿಕ ಕಾಲ ತಿರುಗಾಟ ನಡೇಸಿದ ಕೀರ್ತಿ ಅವರದಾಗಿದ್ದು.
ನಿರಂತರ 60ವರ್ಷಗಳಿಂದ ಸುದೀರ್ಘ ಕಾಲದ ಕಲಾ ಸೇವೆ. ಪಡ್ರೆ ಜಠಾಧಾರಿ ಮೇಳವನ್ನು ಕಟ್ಟಿ ನಡೆಸಿ ಯಜಮಾನಿಕೆಯ ಅನುಭವವನ್ನೂ ಪಡೆದ ಅವರಿಗೆ 50ಕ್ಕೂ ಹೆಚ್ಚು ಪ್ರಸಂಗಗಳ ಕಂಠಪಾಠ ಹೊಂದಿದವರಾಗಿದ್ದರು, ಹದಿನೈದರಷ್ಟು ಪ್ರಸಂಗಗಳನ್ನು ರಚಿಸಿದ ಕವಿ ಆಗಿದ್ದರು.
ಯಕ್ಷಗಾನದ ಪೂರ್ವರಂಗ ಸಂಗೀತವನ್ನು ನಿಖರವಾಗಿ ಬಲ್ಲ ಏಕೈಕ ಭಾಗವತ ಎಂಬ ಹೆಗ್ಗಳಿಕೆ ನಾರಾಯಣ ಭಾಗವತರದ್ದು.
ಶುದ್ಧ ಯಕ್ಷಗಾನ ಶೈಲಿಯನ್ನು ಉನ್ನತ ಕಂಠಸಿರಿಯಿಂದ ಹಾಡುವ ತಾಕತ್ತುಳ್ಳ ಅಮೂಲ್ಯ ಸ್ವರ ಹೊಂದಿದ, ಭಾಗವತ ಪರಂಪರೆಯನ್ನು ಮೇಲೆತ್ತಿದ ಮೇರು ವ್ಯಕ್ತಿತ್ವ ಅವರದ್ದು ಆಗಿತ್ತು.
ಬಲಿಪ ಭಾಗವತರ ನಿಧಾನಕ್ಕೆ ಗಣ್ಯರು, ಜನಪ್ರತಿನಿಧಿಗಳು ಸೇರಿ ಸಾವಿರಾರು ಮಂದಿ ಕಲಾವಿದರು ತೀವ್ರ ಸಂತಾಪ ಸೂಚಿಸಿದ್ದಾರೆ.
ದೇವಿ ಮಾಹಾತ್ಮೆ, ಕಟೀಲು ಕ್ಷೇತ್ರ ಮಾಹಾತ್ಮೆ, ತೆಂಕು ತಿಟ್ಟಿನ ಎಲ್ಲಾ ಪೌರಾಣಿಕ ಪ್ರಸಂಗಳ ಪದ್ಯಗಳಿಗೆ ತನ್ನ ಪರಿಪೂರ್ಣ ಯಕ್ಷಗಾನೀಯ ಶೈಲಿಯ ಏರು ಸ್ವರದ ಭಾಗವತಿಕೆಯ ಮೂಲಕ ಪರಿಪೂರ್ಣ ನ್ಯಾಯ ಒದಗಿಸಿಕೊಟ್ಟವರು ಬಲಿಪ ಭಾಗವತರು.
35ಕ್ಕೂ ಮಿಕ್ಕಿ ಪ್ರಸಂಗಳನ್ನು ರಚನೆ ಮಾಡಿದ ಭಾಗವತರು ಯಕ್ಷಗಾನದ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದ್ದರು.
ಇವರ ಕಲಾ ಸೇವೆ ಗುರುತ್ತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2010, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ 2010, ಆಳ್ವಾಸ್ ನುಡಿಸಿರಿ 2010, ಕರ್ನಾಟಕ ಸಂಘ ದುಬೈ 1988, ಶ್ರೀ ಎಡನೀರು ಮಠ 1994, ಕರಾವಳಿ ಯಕ್ಷಗಾನ ಸಮ್ಮೇಳನ 2000, ಕರ್ನಾಟಕ ಜನಪದ ಪರಿಷತ್ತು ಬೆಂಗಳೂರು 2002, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ, 2002, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬೆಂಗಳೂರು 2004, ಕೇರಳ ಸಂಗೀತ ನಾಟಕ ಅಕಾಡೆಮಿ ತಿರುವನಂತಪುರ 2007, ಕರ್ನಾಟಕ ಜಾನಪದ ಕಲಾ ಅಧ್ಯಯನ ಕೇಂದ್ರ ಉಡುಪಿ 2008, ಕಲ್ಕೂರ ಪ್ರತಿಷ್ಠಾನ 2015 ಹೀಗೇ 200 ಕ್ಕೂ ಅಧಿಕ ಪ್ರಶಸ್ತಿ- ಪುರಸ್ಕಾರಗಳು ಅರಸಿಕೊಂಡು ಬಂದಿವೆ.
ಸಂಸದ ನಳಿನ್ ಕುಮಾರ್ ಕಟೀಲ್ ಸಂತಾಪ
ಬಲಿಪ ನಾರಾಯಣ ಭಾಗವತರ ನಿಧನದಿಂದ ಯಕ್ಷ ರಂಗದ ಹಿರಿಯ ಚೇತನವೊಂದು ಅಗಲಿದಂತಾಗಿದೆ. ಬಲಿಪ ಪರಂಪರೆಯ ಕಂಚಿನ ಕಂಠ ಹಾಗೂ ಅಪಾರ ವಿದ್ವತ್ ನ ಜತೆ ಅವರು ಮೇರು ಸದೃಶ ವ್ಯಕ್ತಿತ್ವ ಹೊಂದಿದ್ದರು. ಯಕ್ಷರಂಗಕ್ಕೆ ಅವರು ನೀಡಿದ ಕೊಡುಗೆ ಶಾಶ್ವತವಾಗಿ ಅಭಿಮಾನಗಳ ಮನಸ್ಸಿನಲ್ಲಿ ಉಳಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಸಂತಾಪದಲ್ಲಿ ತಿಳಿಸಿದ್ದಾರೆ.
DAKSHINA KANNADA
ಮೇಯರ್ ಫೋನ್ ಇನ್ : ಮಂಗಳೂರು ನಗರದ 8 ಕಡೆ ಬಸ್ ಬೇ ನಿರ್ಮಾಣ- ಸುಧೀರ್ ಶೆಟ್ಟಿ
ಮಂಗಳೂರು: ಮಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 53 ಪ್ರದೇಶಗಳಲ್ಲಿ ಬಸ್ಸು ತಂಗುದಾಣ ನಿರ್ಮಿಸಲು ಮಂಗಳೂರು ಪೊಲೀಸ್ ಕಮಿಷನರ್ ಪ್ರಸ್ತಾವನೆ ಸಲ್ಲಿಸಿದ್ದು, ಪ್ರಸ್ತುತ 8 ಪ್ರದೇಶಗಳಲ್ಲಿ ಬಸ್ ಬೇ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.
ಮೇಯರ್ ಕಚೇರಿಯಲ್ಲಿ ಶನಿವಾರ ನಡೆದ ಮೇಯರ್ ಫೋನ್ ಇನ್ ಕಾರ್ಯಕ್ರಮದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಮೊದಲ ಹಂತದಲ್ಲಿ ನಾಗರಿಕರಿಂದ ಹೆಚ್ಚು ಬೇಡಿಕೆ ಇರುವ ಬಿಜೈ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ ಸಮೀಪ, ಲೇಡಿಹಿಲ್, ಕಂಕನಾಡಿ ಜಂಕ್ಷನ್, ಬಂಟ್ಸ್ ಹಾಸ್ಟೇಲ್ ಸೇರಿದಂತೆ ಒಟ್ಟು 8 ಕಡೆಗಳಲ್ಲಿ ಬಸ್ ಬೇ ನಿರ್ಮಿಸಲಾಗುವುದು.
ಬಳಿಕ ಹಂತ ಹಂತವಾಗಿ ಉಳಿದೆಡೆ ಬಸ್ ಬೇ ನಿರ್ಮಿಸಲಾಗುವುದು ಎಂದರು. ನಗರದಲ್ಲಿ 53 ಬಸ್ಸು ತಂಗುದಾಣಕ್ಕೆ ಪೊಲೀಸರು ಪ್ರಸ್ತಾವನೆ ಸಲ್ಲಿಸಿದ್ದರೂ ಅಧಿಕಾರಿಗಳುಮಾತ್ರ ಕಡತದಲ್ಲೇ ಬಾಕಿ ಇರಿಸಿದ್ದು, ಮನಪಾ ಆಡಳಿತದ ಸಭೆಗೆ ಹಾಜರುಪಡಿಸದಿರುವುದು ಗಮನಕ್ಕೆ ಬಂತು.
ಕೂಡಲೇ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಪ್ರಸ್ತಾವನೆಯನ್ನು ಮುಂದಿನ ಸಭೆಗೆ ಹಾಜರುಪಡಿಸುವಂತೆ ಸೂಚನೆ ನೀಡಿದರು.
ಬೀದಿ ಬದಿ ವ್ಯಾಪಾರಸ್ಥರು ನಗರದ ಅನೇಕ ಕಡೆಗಳಲ್ಲಿ ರಸ್ತೆ ಹಾಗೂ ಫುಟ್ಪಾತ್ ಅತಿಕ್ರಮಣ ನಡೆಸಿದ್ದಾರೆ.
ಅಗಲಗೊಂಡರಸ್ತೆಯಲ್ಲಿ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದೆ.
ಈ ಬಗ್ಗೆ ಪಾಲಿಕೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
bengaluru
ಬೆಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ನಡೆಯುವ ಕಂಬಳಕ್ಕೆ ಡೇಟ್ ಫಿಕ್ಸ್-ಅಶೋಕ್ ಕುಮಾರ್ ರೈ
ಮಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಥಮ ಬಾರಿಗೆ ಹೊನಲು ಬೆಳಕಿನ ಕರಾವಳಿಯ ಜಾನಪದ ಕ್ರೀಡೆ ಕಂಬಳ ನ. 25 ಮತ್ತು 26ರಂದು ನಡೆಯಲಿದೆ ಎಂದು ಬೆಂಗಳೂರು ಕಂಬಳ ಸಮಿತಿಯ ಸಂಘಟಕ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿ ಸೇರಿದಂತೆ ರಜನಿಕಾಂತ್, ಐಶ್ವರ್ಯ ರೈ ಸೇರಿದಂತೆ ಸಿನಿಮಾ ಕ್ಷೇತ್ರದ ನಟ ನಟಿಯರು ಭಾಗವಹಿಸಲಿದ್ದಾರೆ.
ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ನಡೆಯುವ ಈ ಕಂಬಳ ಕೂಟದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳ ಸುಮಾರು 130 ಜೊತೆ ಕೋಣಗಳು ಅದರ ಮಾಲಕರು ಭಾಗವಹಿಸಲಿದ್ದಾರೆ ಎಂದರು.
ಇದರ ಜೊತೆ 125 ಸ್ಟಾಲ್ ಗಳಲ್ಲಿ ಕರಾವಳಿಯ ತಿಂಡಿ ತಿನಿಸುಗಳು ಗ್ರಾಹಕರಿಗೆ ದೊರೆಯಲಿದೆ.
ಸುಮಾರು 7 ರಿಂದ 8 ಲಕ್ಷ ಜನರು ಇದನ್ನು ವೀಕ್ಷಿಸುವ ನಿರೀಕ್ಷೆ ಇದೆ ಎಂದು ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಡುಪಿ, ದಕ್ಷಿಣ ಕನ್ನಡ ಕಂಬಳ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಂಬಳ ಸಮಿತಿ ಪದಾಧಿಕಾರಿಗಳಾದ ರೋಹಿತ್ ಹೆಗ್ಡೆ, ಬಾರ್ಕೂರು ಶಾಂತರಾಮ ಶೆಟ್ಟಿ, ಲೋಕೇಶ್ ಶೆಟ್ಟಿ, ಚಂದ್ರಹಾಸ ಸನಿಲ್, ಮುರಳಂಧರ ರೈ, ವಿಜಯಕುಮಾರ್ ಜೈನ್ ಉಪಸ್ಥಿತರಿದ್ದರು.
DAKSHINA KANNADA
ಕರಾವಳಿ ಉತ್ಸವ ಮೈದಾನದಲ್ಲಿ ಪ್ರಥಮ ಬಾರಿಗೆ ಅಂತರ್ಜಲ ಸುರಂಗ ಮಾರ್ಗ ಮೀನುಗಳ ಪ್ರದರ್ಶನ
ಮಂಗಳೂರು: ದಕ್ಷಿಣ ಭಾರತದಾದ್ಯಂತ ಕಳೆದ ನಾಲ್ಕು ದಶಕಗಳಿಂದ ಗ್ರಾಹಕರ ಮೇಳಗಳನ್ನು ಸಂಘಟಿಸುವಲ್ಲಿ ಧ್ರುವತಾರೆಯಾಗಿ ಗುರುತಿಸಿಕೊಂಡಿರುವ ಎನ್‌ಸಿಎಫ್ ಸಂಘಟಿಸಲ್ಪಡುತ್ತಿರುವ ರಾಷ್ಟ್ರೀಯ ಗ್ರಾಹಕ ಮೇಳವನ್ನು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಉದ್ಘಾಟಿಸಿದರು.
ಬಳಿಕ ರಾಷ್ಟ್ರೀಯ ಗ್ರಾಹಕರ ಮೇಳದ ಅಂಗವಾನಿ ನಿರ್ಮಿಸಲ್ಪಟ್ಟಿರುವ ಅಂತರ್ಜಲ ಸುರಂಗ ಮಾರ್ಗ ಮೀನುಗಳ ಪ್ರದರ್ಶನವನ್ನು ಶಾಸಕ ವೇದವ್ಯಾಸ್ ಕಾಮತ್ ಉದ್ಘಾಟಿಸಿದರು.
ಈ ಅಂತರ್ಜಲ ಸುರಂಗವು ಹಲವು ಪ್ರಬೇದದ ಮೀನುಗಳೊಂದಿಗೆ ಸುಂದರ ಮತ್ಸ್ಯ ಲೋಕವನ್ನು ಸೃಷ್ಟಿಸಿ ಮಂಗಳೂರಿನ ಜನತೆಗೆ ರಸದೌತಣವನ್ನು ನೀಡಲು ಸಜ್ಜಾಗಿವೆ.
ಅಲ್ಲದೆ, ರೊಬೊಟಿಕ್ ಅನಿಮಲ್ ಶೋದಲ್ಲಿ ದೈತ್ಯಾಕಾರದ ವನಮೃಗಗಳು ಹಾಗೂ ಅವುಗಳ ಘರ್ಜನೆ ದಟ್ಟಾರಣ್ಯದಲ್ಲಿ ವಿಹರಿಸಿದ ಅನುಭವವನ್ನು ನೀಡಲಿದೆ.
ಈ ಮೊದಲು ಮಂಗಳೂರಿಗೆ ಸೋವಲ್ಡ್, ಅಕ್ವಾ ಶೋ, ಬರ್ಡ್ ಶೋ, ತಾಜ್‌ಮಹಲ್‌ನಂತಹ ವಿನೂತನ ರೀತಿಯ ಮೆಗಾ ಶೋಗಳನ್ನು ನೀಡಿರುವ ಈ ಸಂಸ್ಥೆ ಪ್ರತಿ ಬಾರಿಯೂ ಹೊಚ್ಚ ಹೊಸ ಶೋಗಳನ್ನು ನೀಡುತ್ತಾ ಬಂದಿದೆ.
ಈ ರಾಷ್ಟ್ರೀಯ ಗ್ರಾಹಕರ ಮೇಳವು ಸಂಪೂರ್ಣ ಕುಟುಂಬಕ್ಕಾಗಿ ಪಿಂಗ್ ಮತ್ತು ಮನರಂಜನಾ ಮೇಳವಾಗಿರುತ್ತದೆ.
ರಾಷ್ಟ್ರೀಯ ಗ್ರಾಹಕರ ಮೇಳವು ವ್ಯಾಪಾರ ಮಳಿಗೆಗಳೊಂದಿಗೆ, ವಿಶೇಷ ಮತ್ತು ಅತ್ಯಧಿಕ ರಿಯಾಯಿತಿ ದರದಲ್ಲಿ ಗ್ರಾಹಕರನ್ನು ಆಕರ್ಷಿಸಲಿದೆ.
ಗೃಹ ಬಳಕೆ ಉತ್ಪನ್ನಗಳು, ಅಡುಗೆ ಮನೆ ಉತ್ಪನ್ನಗಳು, ಕೈಮಗ್ಗದ ಉತ್ಪನ್ನಗಳು, ಕರುಶಲ, ಉತ್ಪನ್ನಗಳು, ಡ್ರೆಸ್ ಮೆಟೀರಿಯಲ್ ಫ್ಯಾರನ್ ಪಾದರಕ್ಷೆಗಳು, ಆಟಿಕೆಗಳು, ಆಹಾರೋತ್ಪನ್ನಗಳು ಮತ್ತು ಇನ್ನೂ ಹಲವಾರು ಉತ್ಪನ್ನಗಳು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಲಭ್ಯವಾಗಲಿದೆ.
ಮನೋರಂಜನಾ ವಿಭಾಗದಲ್ಲಿ ಟೋರಾ ಟೋರಾ, ಡ್ಯಾಶಿಂಗ್ ಕಾರ್, ಜಾಯಿಂಟ್ ಸ್ಟೀಲ್, ಡ್ರಾಗನ್ ಟೇನ್, ಮೆದ್ರಿ ಕೊಲಂಬಸ್, 30 ಶೋಸ್, ಸೇರಿ ಹೌಸ್, ಏ ಶಾಟ್, ಸ್ಟೇಸ್ ಜೆಟ್, ಇತ್ಯಾದಿಗಳು ಇವೆ.
ಮನೋರಂಜನೆಗೆ ಸಂಜೆ 4ರಿಂದ 9ರವರೆಗೆ ಮನೋರಂಜನೆಗೆ ಕರಾವಳಿ ಉತ್ಸವ ಮೈದಾನದಲ್ಲಿ ಅವಕಾಶವಿರುತ್ತದೆ.
ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಸುದೀರ್ ಶೆಟ್ಟಿ ಕಣ್ಣೂರು ಮತ್ತು ಎನ್‌ಸಿಎಫ್ ವತಿಯಿಂದ ಚೈತನ್ಯ ಹಾಗೂ ವಿಜಯ ಕುಮಾರ್ ಮತ್ತು ನಿಸರ್ಗ ಪಬ್ಲಿಸಿಟಿಯ ಮಂಜುನಾಥ್ ಉಪಸ್ಥಿತರಿದ್ದರು.
- bengaluru7 days ago
ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ನಟ ವಿಜಯ ರಾಘವೇಂದ್ರ ಭೇಟಿ..!
- DAKSHINA KANNADA6 days ago
2ನೇ ಮದುವೆಯಾದ ಕಿರುತೆರೆ ನಟಿ ಜ್ಯೋತಿ ರೈ …!
- DAKSHINA KANNADA7 days ago
ಮಂಗಳೂರಿನ ಆಟೋಮ್ಯಾಟ್ರಿಕ್ಸ್ ಶೋ ರೂಮ್ ನಲ್ಲಿ ಟಾಟಾ ನೆಕ್ಸಾನ್, ಇ.ವಿ ಬಿಡುಗಡೆ
- LATEST NEWS6 days ago
ವಾರವಿಡೀ ಕಾಡಿನಲ್ಲಿ ಸಿಲುಕಿದ್ದ ಯುವಕ- ಮನೆಗೆ ವಾಪಸ್ ಆಗುವಂತೆ ರಕ್ಷಣೆ ಮಾಡಿದ ಸಾಕುನಾಯಿ..!
D alva
16/02/2023 at 9:24 PM
Erna swara eeeee super