Tuesday, August 16, 2022

ಬಹರೈನ್‌: ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಡಿ.18ರಂದು ‘ಬಾಕಿಲ್‌ ದೆಪ್ಪುಲೆ’

ಮಂಗಳೂರು: ಇಂಡಿಯನ್ ಕ್ಲಬ್ ಬಹರೈನ್ ಮತ್ತು ಬಿ ಯುಂ ಸಿ ಸಹಭಾಗಿತ್ವದಲ್ಲಿ ಬಂಟ್ಸ್ ಬಹರೈನ್ ಅರ್ಪಿಸುವ ತುಳು ನಾಟಕ ‘ಬಾಕಿಲ್‌ ದೆಪ್ಪುಲೆ’ ಇದೇ ಡಿ.18ರಂದು ಸಂಜೆ 6 ಗಂಟೆಗೆ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ.


ದಿನಕರ್ ಬಂಡಾರಿ ಕಣಂಜಾರ್ ಬರೆದಿರುವ ಈ ನಾಟಕಕ್ಕೆ ರಂಗಕಲಾವಿದ ಮೋಹನ್ ದಾಸ್ ರೈ ಎರುಂಬು ನಟಿಸಿ ನಿರ್ದೇಶಿಸಿದ್ದಾರೆ.

ಬಲೆ ಚಾ ಪರ್ಕ ತಂಡದ ಗುರು ಬಾಯರು ಸಂಗೀತ ನಿರ್ದೇಶನ ಮಾಡಲಿದ್ದಾರೆ. ಹಿರಿಯ ಕಲಾವಿದ ಪ್ರವೀಣ್ ಶೆಟ್ಟಿ ಕಿನ್ನಿಗೋಳಿ, ಸುಧೀರ್ ಶೆಟ್ಟಿ, ಪ್ರಸಾದ್ ಶೆಟ್ಟಿ ಮಜ್ಜಾರು, ರವೀಂದ್ರ ಶೆಟ್ಟಿ, ದೀಪ ರವೀಂದ್ರ ಶೆಟ್ಟಿ, ದಿವ್ಯರಾಜ ರೈ ಎರುಂಬು,

ಸುದರ್ಶನ್ ಶೆಟ್ಟಿ,ರಾಜೇಶ್ ಶೆಟ್ಟಿ ಸಂತೋಷ ಶೆಟ್ಟಿ, ಸಂದೀಪ್ ಅಡಪ, ರಂಜಿತ್ ಶೆಟ್ಟಿ, ನಿತಿನ್ ಶೆಟ್ಟಿ, ಶ್ರೀಕಲಾ ಸಂತೋಷ ಶೆಟ್ಟಿ ಮತ್ತು ಕುಶಿ ಉಮೇಶ್ ಶೆಟ್ಟಿ ಬಣ್ಣ ಹಚ್ಚಲಿದ್ದಾರೆ.

ದಿವ್ಯನಿಧಿ ರೈ ಎರುಂಬು ಟೈಟಲ್ ಸಾಂಗ್ ಹಾಡಿದ್ದು, ಹರಿಣಿ ಉಥ್ಕರ್ಸ್ ಶೆಟ್ಟಿ ನೃತ್ಯ ನಿರ್ದೇಶನ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಬಾಲಕಿಯ ಅತ್ಯಾಚಾರ ಪ್ರಕರಣ ಸಾಬೀತು- ಅಪರಾಧಿಗೆ 7 ವರ್ಷ ಕಠಿಣ ಶಿಕ್ಷೆ

ಮಂಗಳೂರು: ಪರಿಶಿಷ್ಟ ಜಾತಿಯ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸೋ) ಎಫ್.ಟಿ.ಎಸ್.ಸಿ-1 ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿ ಮಂಗಳೂರಿನ ಸುಧಾಕರ ಪೂಜಾರಿ ಎಂಬಾತನಿಗೆ 7 ವರ್ಷ ಕಠಿಣ...

ಹಲವಾರು ಕ್ಷೇತ್ರಗಳಲ್ಲಿ ಕರ್ನಾಟಕ ನಂಬರ್ 1: ಧ್ವಜಾರೋಹಣ ಭಾಷಣದಲ್ಲಿ ಸಿಎಂ

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ರಾಜ್ಯವನ್ನು ಉದ್ದೇಶಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದ್ದಾರೆ.‘ನಾಡಿನ ಸಮಸ್ತ ಜನತೆಗೆ 76ನೇ...

ದ.ಕ.ಜಿಲ್ಲಾ ಮಡಿವಾಳರ ಸಂಘ, ರಜಕ ಯೂತ್‌ : ಸ್ವಾತಂತ್ರ್ಯ ಸಂಭ್ರಮ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ (ರಿ) ಮಂಗಳೂರು ಮತ್ತು ರಜಕ ಯೂತ್ ಮಂಗಳೂರು ಸಹಭಾಗಿತ್ವದಲ್ಲಿ ಆಝಾದಿ ಕಾ ಅಮೃತ್ ಮಹೋತ್ಸವದ ಹಿನ್ನೆಲೆಯಲ್ಲಿ ಸಂಘದ ಜಿಲ್ಲಾ ಕಚೇರಿಯಲ್ಲಿ ಸ್ವಾತಂತ್ರ್ಯ ಸಂಭ್ರಮದ...