Connect with us

    ಫ್ರೆ. 14 ರಂದು “ಪುಲ್ವಾಮಾ ಹುತಾತ್ಮ ದಿನ” ಆಚರಿಸಲು ಬಜರಂಗದಳ ಕರೆ 

    Published

    on

    ಫ್ರೆ. 14 ರಂದು “ಪುಲ್ವಾಮಾ ಹುತಾತ್ಮ ದಿನ” ಆಚರಿಸಲು ಬಜರಂಗದಳ ಕರೆ 

    ಮಂಗಳೂರು: ಜಮ್ಮುವಿನ ಪುಲ್ವಾಮಾದಲ್ಲಿ ಕಳೆದ ವರ್ಷ ಫೆ.14 ರಂದು  ಭಯೋತ್ಪಾದಕರ ದಾಳಿಗೆ 44 ಸಿಆರ್ ಪಿಎಫ್ ಯೋಧರು ಬಲಿಯಾಗಿದ್ದು, ಈ ದಿನವನ್ನು ಪುಲ್ವಾಮಾ ಹುತಾತ್ಮ ದಿನಾಚರಣೆಯನ್ನಾಗಿ ಆಚರಿಸಬೇಕೆಂದು ಬಜರಂಗದಳ ಕರೆ ನೀಡಿದೆ.

    ಈ ಬಗ್ಗೆ ಮಂಗಳೂರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಜರಂಗದಳ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್, 2019 ಫೆ.14 ಮರೆಯಲಾಗದ ದಿನ. ಈ ದಿನ ನಾವು ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಯೋಧರನ್ನು ಸ್ಮರಿಸುವಂತಹ ದಿನ. ಅದಕ್ಕಾಗಿ ಫೆ. 14ರಂದು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ‘ಪುಲ್ವಾಮಾ ಹುತಾತ್ಮ ದಿವಸ್’ ನ್ನು ಆಚರಿಸಲು ಭಜರಂಗದಳ ಕಾರ್ಯಕರ್ತರು ಮುಂದಾಗಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲಾ ರಾಷ್ಟ್ರ ಪ್ರೇಮಿಗಳು ಭಾಗವಹಿಸಿ ಸೈನಿಕರಿಗೆ ಶ್ರದ್ದಾಂಜಲಿ ಅರ್ಪಿಸಬೇಕು ಎಂದರು. ಮಾತ್ರವಲ್ಲದೆ ಪ್ರತೀ ವರ್ಷ ಫೆ.14ರಂದು ಪುಲ್ವಾಮಾ ಹುತಾತ್ಮ ದಿನ ಆಚರಿಸುವಂತೆ ಒತ್ತಾಯಿಸಿ ಕೇಂದ್ರ ಸರಕಾರಕ್ಕೆ ಗೃಹ ಸಚಿವರ ಮೂಲಕ ಮನವಿ ಮಾಡಲಿದ್ದೇವೆ ಎಂದು ಹೇಳಿದರು.

    ಇನ್ನು ಪ್ರೇಮಿಗಳ ದಿನಾಚರಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭಾರತ ದೇಶ ಪುಣ್ಯಭೂಮಿ. ಅಲ್ಲದೆ ನಮ್ಮ ಸಂಸ್ಕೃತಿ ಆಚರಣೆಗಳಿಗೆ ಆದರದ್ದೇ ಆದ ಮಹತ್ವವಿದ್ದು, ಶತಮಾನಗಳ ಇತಿಹಾಸ ಹೊಂದಿದೆ. ಅದರ ಹೊರತಾಗಿಯೂ ಭಾರತೀಯ ಸಂಸ್ಕೃತಿಗೆ ಸೆಡ್ಡು ಹೊಡೆದು ಪಾಶ್ಚಾತ್ಯ ಸಂಸ್ಕೃತಿಗಳು ದಾಳಿ ಮಾಡುತ್ತಿವೆ. ಆದ್ದರಿಂದ ನಮ್ಮ ಸಂಸ್ಕೃತಿ, ಆಚರಣೆಗೆ ಕೆಟ್ಟ ಪರಿಣಾಮ ಬೀಳುತ್ತಿದೆ. ಇದರ ಸಾಲಿಗೆ ಪ್ರೇಮಿಗಳ ದಿನಾಚರಣೆಯು ಸೇರುತ್ತೆ. ಫೆ.14ರಂದು ಈ ದಿನವನ್ನು ಆಚರಿಸುವ ಬದಲು ವೀರ ಸೈನಿಕರ ದಿನವನ್ನ ಆಚರಣೆ ಮಾಡಬೇಕೆಂದು ಮನವಿ ಮಾಡಿದರು. ಇನ್ನು ಪ್ರತೀ ಬಾರಿಯೂ ಪ್ರೇಮಿಗಳ ದಿನಾಚರಣೆಗೆ ವಿವಿಧ ರೀತಿಯಲ್ಲಿ ಅಡ್ಡಿಪಡಿಸುತ್ತಾ ಬರುತ್ತಿರುವ ಬಜರಂಗದಳ ಈ ಬಾರಿಯೂ ವಿರೋಧ ವ್ಯಕ್ತಪಡಿಸಿದಂತಾಗಿದೆ. ಈ ಸಂದರ್ಭದಲ್ಲಿ ಹಲವಾರು ಭಜರಂಗದಳ ಪ್ರಮುಖರು ಉಪಸ್ಥಿತರಿದ್ದರು.

    ವಿಡಿಯೋಗಾಗಿ

     

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಜಮೀನು ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ಸುಪ್ರೀಂ ಕೋರ್ಟ್‌..!

    Published

    on

    ಮಂಗಳೂರು/ ನವದೆಹಲಿ : ಇತ್ತೀಚಿನ ದಿನಗಳಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಅನೇಕ ಜನರು ತಮ್ಮ ಕೃಷಿ ಹಾಗೂ ಪಟ್ಟಾ ಜಮೀನುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡುವ ಪರಿಸ್ಥಿತಿ ಬಂದಿದೆ. ಹೀಗೆ ಬಿಟ್ಟು ಕೊಟ್ಟ ಜಮೀನಿಗೆ ಪರಿಹಾರ ನೀಡಲಾಗುತ್ತಿದೆಯಾದ್ರೂ ಪರಿಹಾರದ ಹಣಕ್ಕಾಗಿ ಜನರು ಅಲೆದಾಡುವ ಪರಿಸ್ಥಿತಿ ಕೂಡಾ ಇದೆ. ಆದ್ರೆ ಇನ್ನು ಮುಂದೆ ಈ ರೀತಿ ಸ್ವಾಧೀನಪಡಿಸಿದ ಜಮೀನಿಗೆ ಪರಿಹಾರ ನೀಡಲು ವಿಳಂಬವಾದ್ರೆ ಚಿಂತಿಸಬೇಕಾಗಿಲ್ಲ. ಯಾಕಂದ್ರೆ ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

    ಭೂ ಪರಿಹಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಭೂಮಿ ಕಳೆದುಕೊಳ್ಳುವ ಸಂತ್ರಸ್ತರ ಪರವಾಗಿ ತೀರ್ಪೊಂದನ್ನು ನೀಡಿದೆ. ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ವಿಶೇಷ ಅಧಿಕಾರ ಬಳಸಿಕೊಂಡು ನ್ಯಾಯಾಲಯವು ಈ ತೀರ್ಪು ನೀಡಿದೆ. ಈ ತೀರ್ಪಿನಿಂದಾಗಿ ಇನ್ನು ಮುಂದೆ ಭೂ ಸ್ವಾಧೀನ ಮಾಡಿ ಪರಿಹಾರ ಸಮಯಕ್ಕೆ ಸರಿಯಾಗಿ ನೀಡದೇ ಇದ್ರೆ ಸರ್ಕಾರದ ಬೊಕ್ಕಸಕ್ಕೇ ನಷ್ಟ ಉಂಟಾಗಲಿದೆ. ಯಾಕಂದ್ರೆ ಇನ್ನು ಮುಂದೆ ಸರ್ಕಾರ ಭೂ ಸ್ವಾಧೀನ ಮಾಡಿ ಧೀರ್ಘಕಾಲ ಪರಿಹಾರ ನೀಡದೇ ಇದ್ದರೆ ಪರಿಹಾರ ನೀಡುವ ಸಮಯದಲ್ಲಿನ ಮಾರುಕಟ್ಟೆಯ ದರವನ್ನು ಸಂತ್ರಸ್ತರಿಗೆ ನೀಡಬೇಕಾಗುತ್ತದೆ.

    ಯಾವ ಕಾರಣಕ್ಕೆ ಈ ಅದೇಶ ನೀಡಲಾಗಿದೆ..?

    ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(KIADB) ವಿರುದ್ಧ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿ ಈ ಆದೇಶ ನೀಡಲಾಗಿದೆ. ಬೆಂಗಳೂರು ಮೈಸೂರು ಕಾರಿಡಾರ್ ಯೋಜನೆಗಾಗಿ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು 2003 ರಲ್ಲಿ KIADB ಅಧಿಸೂಚನೆ ಹೊರಡಿಸಿತ್ತು. ಆದ್ರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೂ ಸಂತ್ರಸ್ತರಿಗೆ ಪರಿಹಾರವನ್ನು ನೀಡಿರಲಿಲ್ಲ. ನೋಟಿಫಿಕೇಷನ್ ಬಳಿಕವೂ ಪರಿಹಾರ ಸಿಗದ ಕಾರಣ ಜಮೀನು ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. 2019 ರಲ್ಲಿ ಪರಿಹಾರ ನೀಡಲು KIADB ಮುಂದಾಗಿತ್ತಾದ್ರೂ ಅದು 2003 ರ ಮಾರುಕಟ್ಟೆ ದರವಾಗಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ್ರಕರಣದ ತೀರ್ಪು ಹೊರಬಿದ್ದಿದೆ. ಕೆಐಎಡಿಬಿಯು ಸಂತ್ರಸ್ತರಿಗೆ 2019 ರ ಮಾರುಕಟ್ಟೆ ದರದಲ್ಲೇ ಪರಿಹಾರ ನೀಡಬೇಕು ಎಂದು ಆದೇಶ ನೀಡಿದೆ. ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠ ಈ ಪ್ರಕರಣದ ವಿಚಾರಣೆ ನಡೆಸಿದೆ

    Continue Reading

    BANTWAL

    ಬಂಟ್ವಾಳ: ನೇತ್ರಾವತಿ ನದಿಯ ದೋಣಿಯ ಅಂಬಿಗ ನಾಪತ್ತೆ

    Published

    on

    ಬಂಟ್ವಾಳ: ನೇತ್ರಾವತಿ ನದಿಯ ದೋಣಿಯ ಅಂಬಿಗ ಬರಿಮಾರು ಕಡವಿನಬಾಗಿಲು ನಿವಾಸಿ ದಿವಾಕರ ನಾಪತ್ತೆಯಾಗಿದ್ದಾರೆ.

    ದಿವಾಕರ ಅವರು ಸುಮಾರು 30 ವರ್ಷಗಳಿಂದ ಅಂಬಿಗನಾಗಿ ಕೆಲಸ ಮಾಡುತ್ತಿದ್ದು, ಇವರು ನುರಿತ ಈಜುಗಾರರಾಗಿದ್ದರು. ಬರಿಮಾರು-ಸರಪಾಡಿಗೆ ದೋಣಿ ಮೂಲಕ ಸಂಪರ್ಕ ಸೇತುವೆಯಾಗಿ ಇವರು ಪ್ರತಿದಿನ ಕೆಲಸ ಮಾಡುತ್ತಿದ್ದರು.

    ಜ.3 ರ ಶುಕ್ರವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಬರಿಮಾರಿನಿಂದ ಸರಪಾಡಿಗೆ ಹೋಗಿ ಅಲ್ಲಿನ ಅಂಗಡಿಯೊಂದರಿಂದ ಮನೆಗೆ ತರಕಾರಿ ಪಡೆದು, ವಾಪಸ್ ತೆರಳಿದ್ದು, 11 ಗಂಟೆ ವೇಳೆ ದೋಣಿ ಬರಿಮಾರು ಕಡವಿನ ಬಾಗಿಲಿನಲ್ಲಿ ತೇಲಾಡುವ ಸ್ಥಿತಿಯಲ್ಲಿ ಕಂಡು ಬಂದಿದೆ. ದಿವಾಕರ ಅವರು ಕಾಣಿಸಿದ ಕಾರಣ ಅವರ ಪತ್ನಿ ಸರಪಾಡಿಯ ಅಂಗಡಿಯ ಮೂಲಕ ಮಾಲೀಕರಿಗೆ ಫೋನ್ ಮಾಡಿ ವಿಚಾರಿಸಿದ್ದರು.

    ಬರಿಮಾರು ಕಡವಿನ ಬಾಗಿಲಿನಲ್ಲಿ ಹಸಿಹುಲ್ಲು ಕಟ್ಟು, ಮೊಬೈಲ್, ಚಪ್ಪಲಿ ಕಂಡು ಬಂದಿದೆ. ದಿವಾಕರ ಅವರಿಗೆ ಮೂರ್ಛೆ ರೋಗವಿದ್ದು, ಈ ಹಿಂದೆ ಕೂಡಾ ನದಿ ಬದಿಯಲ್ಲಿ ಬಿದ್ದ ಘಟನೆ ನಡೆದಿತ್ತು. ಇವತ್ತು ಕೂಡಾ ಮೂರ್ಛೆ ರೋಗ ಭಾದಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಸ್ಥಳೀಯರು ನದಿ ಸುತ್ತಮುತ್ತ ಹುಡುಕಾಟ ನಡೆಸುತ್ತಿದ್ದು, ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ.

    Continue Reading

    LATEST NEWS

    ಮನೆಯಲ್ಲಿ ಹೊಸ ಕ್ಯಾಲೆಂಡರ್ ಎಲ್ಲಿ ಹಾಕಿದರೆ ಸೂಕ್ತ ಗೊತ್ತಾ..?

    Published

    on

    ಹೊಸ ವರ್ಷ ಬಂದಾಗ ಹಳೆಯ ಕ್ಯಾಲೆಂಡರ್‌ ತೆಗೆದು ಹೊಸ ಕ್ಯಾಲೆಂಡರ್‌ ಹಾಕುವುದು ಪದ್ಧತಿ. ವಾಸ್ತುಪ್ರಕಾರ ಕೆಲವೊಂದು ದಿಕ್ಕಿನಲ್ಲಿ ಕ್ಯಾಲೆಂಡರ್‌ ಹಾಕುವುದರಿಂದ ಲಾಭವಿದೆ. ಆದರೆ ಇನ್ನು ಕೆಲವು ದಿಕ್ಕಿನಲ್ಲಿ ಕ್ಯಾಲೆಂಡರ್‌ ಹಾಕಿದರೆ ಅಪಾಯ ಕಟ್ಟಿಟ್ಟ ಭುತ್ತಿ. ಅದರ ಕುರಿತು ವಿವರ ಇಲ್ಲಿದೆ.

    ವಾಸ್ತುಶಾಸ್ತ್ರದ ಪ್ರಕಾರ ಹಳೆಯ ಕ್ಯಾಲೆಂಡರ್‌ಗಳನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ. ಇದು ಪ್ರಗತಿಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಹಳೆ ಕ್ಯಾಲೆಂಡರ್ ತೆಗೆದು ಹೊಸ ವರ್ಷದಲ್ಲಿ ಹೊಸ ಕ್ಯಾಲೆಂಡರ್ ಅಳವಡಿಸಬೇಕು. ಇದರಿಂದ ಹೊಸ ವರ್ಷದಲ್ಲಿ ಹಳೆ ವರ್ಷಕ್ಕಿಂತ ಹೆಚ್ಚು ಶುಭ ಅವಕಾಶಗಳು ಲಭಿಸುತ್ತವೆ. ಹೊಸ ಕ್ಯಾಲೆಂಡರ್ ಅನ್ನು ಇಡುವಾಗ ಅನುಸರಿಸಬೇಕಾದ ವಾಸ್ತು ನಿಯಮಗಳು ಯಾವುವು ಎಂದು ತಿಳಿಯೋಣ.

    ವಾಸ್ತು ಪ್ರಕಾರ, ನಿಮ್ಮ ಮನೆಯ ಮುಖ್ಯ ಬಾಗಿಲಿಗೆ ಕ್ಯಾಲೆಂಡರ್ ಅನ್ನು ಹಾಕಬೇಡಿ. ಹಾಗೆ ಮಾಡುವುದರಿಂದ ನಿಮ್ಮ ಪ್ರಗತಿಗೆ ಅಡ್ಡಿಯಾಗುತ್ತದೆ ಮತ್ತು ನಿಮ್ಮ ಕೆಲಸಕ್ಕೂ ಸಹ ಅಡ್ಡಿಯಾಗುತ್ತದೆ. ಕ್ಯಾಲೆಂಡರ್‌ಗಳನ್ನು ಮುಖ್ಯ ಬಾಗಿಲಿನ ಮೇಲೆ ಇಡಬಾರದು.

    ಹೊಸ ವರ್ಷದ ಕ್ಯಾಲೆಂಡರ್ ಅನ್ನು ಬಾಗಿಲಿನ ಹಿಂದೆ ಇಡುವುದರಿಂದ ಬಹಳಷ್ಟು ಹಾನಿಯಾಗುತ್ತದೆ. ವಾಸ್ತವವಾಗಿ, ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಕ್ಯಾಲೆಂಡರ್ ಅನ್ನು ಯಾವಾಗಲೂ ನಿಮ್ಮ ಮುಂದೆ ಇರಿಸಿ ಮತ್ತು ಅದರ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಬೇಕು.

    ಅನೇಕ ಜನರು ಹೊಸ ವರ್ಷದ ಕ್ಯಾಲೆಂಡರ್ ಅನ್ನು ಇಟ್ಟುಕೊಳ್ಳುತ್ತಾರೆ ಆದರೆ ಹಳೆಯದನ್ನು ತೆಗೆದುಹಾಕಲು ಮರೆಯುತ್ತಾರೆ. ಆ ತಪ್ಪನ್ನು ಮಾಡಬೇಡಿ. ಹಳೆಯ ಕ್ಯಾಲೆಂಡರ್ ಅನ್ನು ಮನೆಯಲ್ಲಿ ಇಡಬೇಡಿ. ಅದು ನಿಮ್ಮನ್ನು ಜೀವನದಲ್ಲಿ ಮುನ್ನಡೆ ಸಾಧಿಸಲು ಬಿಡುವುದಿಲ್ಲ. ನೀವು ಎಷ್ಟೇ ಪ್ರಯತ್ನಿಸಿದರೂ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ.

    ಅದರಲ್ಲೂ ಕ್ಯಾಲೆಂಡರ್ ಅನ್ನು ಉತ್ತರ, ಪಶ್ಚಿಮ ಅಥವಾ ಪೂರ್ವ ದಿಕ್ಕಿನಲ್ಲಿರುವ ಗೋಡೆಯ ಮೇಲೆ ಇಡಬೇಕು. ಬಹಳ ಮುಖ್ಯವಾಗಿ ಹಿಂಸಾತ್ಮಕ ಪ್ರಾಣಿಗಳು, ದುಃಖದ ಮುಖಗಳ ಚಿತ್ರಗಳೊಂದಿಗೆ ಇರುವ ಕ್ಯಾಲೆಂಡರ್‌ ಹಾಕಬೇಡಿ. ಉತ್ತರ ದಿಕ್ಕು ಕುಬೇರನ ದಿಕ್ಕು. ಈ ದಿಕ್ಕಿನಲ್ಲಿ ಹಸಿರು, ಕಾರಂಜಿ, ನದಿ, ಸಮುದ್ರ, ಜಲಪಾತಗಳು, ಮದುವೆ ಇತ್ಯಾದಿಗಳ ಚಿತ್ರಗಳನ್ನು ಹೊಂದಿರುವ ಕ್ಯಾಲೆಂಡರ್ ಅನ್ನು ಈ ದಿಕ್ಕಿನಲ್ಲಿ ಇಡಬೇಕು. ಇನ್ನು ಈ ದಿಕ್ಕಿನದಲ್ಲಿ ಕ್ಯಾಲೆಂಡರ್‌ ಹಾಕಿದರೆ ಮನೆಯಲ್ಲಿ ಸುಖ ಸಮೃದ್ಧಿ ನೆಲೆಯಾಗುತ್ತದೆ.

    Continue Reading

    LATEST NEWS

    Trending