Home ಪ್ರಮುಖ ಸುದ್ದಿ ಕೊನೆಗೂ ಪ್ರಿಯತಮೆ ಜೊತೆ ಎಂಗೇಜ್ ಆದ ‘ಬಲ್ಲಾಳದೇವ’ ರಾಣಾ ದಗ್ಗುಬಾಟಿ..!..!

ಕೊನೆಗೂ ಪ್ರಿಯತಮೆ ಜೊತೆ ಎಂಗೇಜ್ ಆದ ‘ಬಲ್ಲಾಳದೇವ’ ರಾಣಾ ದಗ್ಗುಬಾಟಿ..!..!

ಕೊನೆಗೂ ಪ್ರಿಯತಮೆ ಜೊತೆ ಎಂಗೇಜ್ ಆದ ‘ಬಲ್ಲಾಳದೇವ’ ರಾಣಾ ದಗ್ಗುಬಾಟಿ..!

ಅಂತೂ ಇಂತೂ ಹ್ಯಾಂಡ್ಸಮ್ ಹಂಕ್, ‘ಬಾಹುಬಲಿ’ ಸಿನಿಮಾ ಖ್ಯಾತಿಯ ನಟ ರಾಣಾ ದಗ್ಗುಬಾಟಿ ತನ್ನ ಗೆಳತಿ ಜೊತೆ ಎಂಗೇಜ್ ಆಗಿದ್ದಾರೆ.

‘ಬಾಹುಬಲಿ’ ಸಿನಿಮಾ ಖ್ಯಾತಿಯ ದಕ್ಷಿಣ ಭಾರತದ ಖ್ಯಾತ ನಟ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್​ ಅವರು ಮದುವೆಯಾಗುತ್ತಿರುವ ವಿಷಯ ಕಳೆದ ವಾರವಷ್ಟೇ ಅಲ್ಲಲ್ಲಿ ಹರಿದಾಡಿತ್ತು.

ಖುದ್ದು ರಾಣಾ ಅವರೇ, ಸೋಷಿಯಲ್​ ಮೀಡಿಯಾದಲ್ಲಿ ತಾವು ಮದುವೆಯಾಗುತ್ತಿರುವ ಹುಡುಗಿಯ ಫೋಟೋ ಹಾಕಿಕೊಂಡು ಸಂಭ್ರಮಿಸಿದ್ದರು.

ಇದೀಗ ಈ ಜೋಡಿಯ ನಿಶ್ಚಿತಾರ್ಥ ಆಗಿದ್ದು, ‘ಇಟ್ಸ್ಅಫಿಶಿಯಲ್​’ಎಂದು ದಗ್ಗುಬಾಟಿ ಟ್ವಿಟ್ಟರ್ ನಲ್ಲಿ ಫೋಟೋ ಶೇರ್​ ಮಾಡಿದ್ದಾರೆ.

ಟಾಲಿವುಡ್​ನ ಮೋಸ್ಟ್​ಎಲಿಜಿಬಲ್​ ಬ್ಯಾಚಲರ್​ ಆಗಿದ್ದ 35 ವರ್ಷದ ರಾಣಾ, ಮೇ 12ರಂದು ತಾವು ಮಿಹಿಕಾ ಬಜಾಜ್​ ಅವರನ್ನು ಮದುವೆಯಾಗುತ್ತಿರುವುದಾಗಿ ಅಧಿಕೃತವಾಗಿ ಹೇಳಿಕೊಂಡಿದ್ದರು.

ಅದರಂತೆ ಇದೀಗ ಸದ್ದಿಲ್ಲದೇ ಇಬ್ಬರು ಎಂಗೇಜ್ ಆಗಿದ್ದಾರೆ. ಕೊರೊನಾ ಹಿನ್ನಲೆಯಲ್ಲಿ ಸೀಮಿತ ಜನರ ಸಮ್ಮುಖದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ.

ಹೈದರಾಬಾದ್​ನಲ್ಲಿ ಈ ಸರಳ ನಿಶ್ಚಿತಾರ್ಥ ನಡೆದಿದ್ದು, ಕುಟುಂಬಸ್ಥರು ಮತ್ತು ಆಪ್ತವರ್ಗದವರು ಮಾತ್ರ ಈ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

ಇನ್ನು ರಾಣಾ ಮತ್ತು ಮಿಹಿಕಾ ಅವರ ನಿಶ್ಚಿತಾರ್ಥಕ್ಕೆ ಹಲವು ಸೆಲೆಬ್ರಿಟಿಗಳು ಶುಭ ಕೋರಿದ್ದು ವಿಶೇಷ. ತಮಿಳು ನಟ ಶಿವಕಾರ್ತಿಕೇಯನ್, ಸೈನಾ ನೆಹವಾಲ್​, ಪ್ರಭಾಸ್​ ಮುಂತಾದವರು ಶುಭ ಕೋರಿ ಸಂದೇಶ ಹಾಕಿದ್ದಾರೆ.

ಅಷ್ಟೇ ಅಲ್ಲದೇ ರಾಣಾ ಅವರ ಸಾವಿರಾರು ಅಭಿಮಾನಿ ಬಂಧುಗಳು ಕೂಡ ತಮ್ಮ ಮೆಚ್ಚಿನ ನಟನ ನಿಶ್ಚಿತಾರ್ಥಕ್ಕೆ ಶುಭ ಕೋರಿದ್ದಾರೆ.

ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ರಾಣಾ ಮತ್ತು ಮಿಹಿಕಾ ಬಜಾಜ್​ ಅವರ ಮದುವೆ ಯಾವಾಗ ಎಂಬ ಪ್ರಶ್ನೆ ಮೂಡುವುದು ಸಹಜ.

ಮೂಲಗಳ ಪ್ರಕಾರ, ಈ ಜೋಡಿ ಡಿಸೆಂಬರ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆಯಂತೆ.

- Advertisment -

RECENT NEWS

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ..

ದಕ್ಷಿಣ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಭೂಕುಸಿತ: 20ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ.. ಗುವಾಹಟಿ: ದಕ್ಷಿಣ ಅಸ್ಸಾಂನ ಬರಾಕ್​ ಕಣಿವೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಮಹಿಳೆಯರು, ಮಕ್ಕಳು ಸೇರಿ 20ಕ್ಕೂ ಹೆಚ್ಚು ಜನ...

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ..

ಲಾಕ್ ಡೌನ್ ನಿಯಮ ಗಾಳಿಗೆ ತೂರಿ ಸೈಂಟ್ ಮೇರಿಸ್ ದ್ವೀಪದಲ್ಲಿ ಪಾರ್ಟಿ ಮಾಡಿದವರ ವಿರುದ್ಧ ತನಿಖೆ.. ಉಡುಪಿ: ಕೋವಿಡ್- 19 ಲಾಕ್ ಡೌನ್ ನಿಯಮ ಉಲ್ಲಂಘಿಸಿ, ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಮೇ 9ರಂದು...

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ವತಿಯಿಂದ ನೂತನ ಮನೆ ಹಸ್ತಾಂತರ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ವತಿಯಿಂದ ನೂತನ ಮನೆ ಹಸ್ತಾಂತರ ಬೆಳ್ತಂಗಡಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯ ಇದರ ವತಿಯಿಂದ ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟುವಿನಲ್ಲಿ ನಿರ್ಮಿಸಲಾದ ಮನೆಯ ಕೀಲಿ ಕೈ ಹಸ್ತಾಂತರ...

ದಿಟ್ಟ ಕ್ರಮಗಳಿಂದ ಸರಕಾರವನ್ನು ತಟ್ಟಿ ಕೇಳಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಸೇವೆಯಿಂದ ನಿವೃತ್ತಿ

ದಿಟ್ಟ ಕ್ರಮಗಳಿಂದ ಸರಕಾರವನ್ನು ತಟ್ಟಿ ಕೇಳಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಸೇವೆಯಿಂದ ನಿವೃತ್ತಿ ಬೆಂಗಳೂರು: ಹಲವಾರು ದಿಟ್ಟ ಕ್ರಮಗಳಿಂದ ಸರಕಾರವನ್ನು ಹಲವು ಬಾರಿ ಎದುರು ಹಾಕಿಕೊಂಡಿದ್ದ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯಿ ಅವರು...