Wednesday, October 5, 2022

ಗಾಳಿಪಟದೊಂದಿಗೆ ಹಾರಾಡಿದ 3 ವರ್ಷದ ಮಗು

ತೈವಾನ್ : ಗಾಳಿಪಟ ಉತ್ಸವದಲ್ಲಿ ಗಾಳಿಪಟದೊಂದಿಗೆ ಮಗು ಕೂಡ ಹಾರಾಡಿದ ಘಟನೆ ತೈವಾನಿನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.


ತೈವಾನ್​ ನನ್ಲಿಯೊವೋನಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗಾಳಿಪಟವೊಂದನ್ನು ಹಾರಿಸುವ ಸಂದರ್ಭ ಬಾಲಕಿಯೊಬ್ಬಳ ಬಟ್ಟೆ ಗಾಳಿಪಟದ ಬಾಲಕ್ಕೆ ಸಿಲುಕಿಕೊಂಡಿತ್ತು. ಸಮುದ್ರ ತಟದಲ್ಲಿ ಈ ಕಾರ್ಯಕ್ರಮ ನಡೆದ ಕಾರಣ ಗಾಳಿಯ ರಭಸಕ್ಕೆ ಗಾಳಿಪಟ ಮೇಲೆಕ್ಕೆ ಹಾರಿದಂತೆ ಮಗುವು ಗಾಳಿಯಲ್ಲಿ ತೇಲಾಡಿದೆ. ಈ ದೃಶ್ಯವನ್ನು ಸ್ಥಳದಲ್ಲಿ ಇದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.


ಸಮುದ್ರ ತಡವಾದ್ದರಿಂದ ಗಾಳಿ ಪ್ರಮಾಣ ಹೆಚ್ಚಾಗಿತ್ತು. ಗಾಳಿಪಟದಲ್ಲಿ ಸಿಲುಕಿಕೊಂಡ ಮಗುವು ಮೇಲಕ್ಕೆ ಹಾರಿದೆ. ಸ್ವಲ್ಪ ಹೊತ್ತಿನಲ್ಲೇ ಗಾಳಿ ರಭಸ ಕಡಿಮೆಯಾದಂತೆ ಗಾಳಿಪಟ ಕೆಲಕ್ಕೆ ಬಂದಿವೆ ಈ ವೇಳೆ ಅಲ್ಲಿದ್ದ ಜನರು ಮಗುವಿನ ರಕ್ಷಣೆಗೆ ಧಾವಿಸಿ ಪ್ರಾಣ ಉಳಿಸಿದ್ದಾರೆ. ಈ ಘಟನೆಯಿಂದ ಮಗುವಿಗೆ ತರಚಿದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here

Hot Topics

ಅರಬ್‌ ನಾಡಲ್ಲಿ ನೂತನ ಹಿಂದೂ ದೇವಾಲಯ: ಉದ್ಘಾಟಿಸಿದ UAE ಸಚಿವ ಶೇಖ್ ನಹ್ಯಾನ್

ದುಬೈ(ಯುಎಇ): ಅರಬ್‌ ನಾಡಲ್ಲಿ ಮೊಟ್ಟ ಮೊದಲ ಸ್ವತಂತ್ರ ಹಿಂದೂ ದೇವಾಲಯ ನಿರ್ಮಾಣಗೊಂಡಿದ್ದು, ನಿನ್ನೆ ಉದ್ಘಾಟನೆಗೊಂಡಿದೆ.ಯುಎಇಯ ಜೆಬೆಲ್‌ ಆಲಿಯಲ್ಲಿರುವ ಆರಾಧನಾ ಗ್ರಾಮದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಈ ಮೂಲಕ ಭಾರತೀಯರ ದಶಕದ ಕನಸು ಈಡೇರಿದೆ.ಯುಎಇಯ...

‘ಮಂಗಳೂರು ದಸರಾ’ ವೈಭವದ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶರನ್ನವರಾತ್ರಿ ಅಂಗವಾಗಿ ಕಳೆದ 9 ದಿನಗಳಿಂದ ಪೂಜಿಸಲ್ಪಟ್ಟ ಶಾರದೆ ಹಾಗೂ ನವ ದುರ್ಗೆಯರ ವೈಭವದ ಶೋಭಾ ಯಾತ್ರೆ ಇಂದು ಸಂಜೆ ನಡೆಯಲಿದೆ.ಸಂಜೆ 4 ಗಂಟೆಗೆ ಶಾರದಾ...

ದೇವಳದ ಅಂಗಳದಲ್ಲಿ ಐಟಂ ಸಾಂಗ್‍ಗೆ ಡ್ಯಾನ್ಸ್ – ಯುವತಿ ವಿರುದ್ಧ FIR

ಭೋಪಾಲ್: ಯುವತಿಯೊಬ್ಬಳು ದೇವಸ್ಥಾನವೊಂದರ ಆವರದಲ್ಲಿ ಐಟಂ ಸಾಂಗ್‍ವೊಂದಕ್ಕೆ ಡ್ಯಾನ್ಸ್ ಮಾಡಿ ಕೆಂಗಣ್ದಣಿಗೆ ಗುರಿಯಾದ ಘಟನೆ  ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ.ಇನ್‍ಸ್ಟಾಗ್ರಾಮ್‍ನಲ್ಲಿ 4 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೋಮದಿರುವ ನೇಹಾ ಎಂಬಾಕೆ ದೇವಸ್ಥಾನದಲ್ಲಿ ಮುನ್ನಿ...