Connect with us

UDUPI

ʼಆಜಾದಿ ಕಾ ಅಮೃತ್ ಮಹೋತ್ಸವ್ʼ ರಸಪ್ರಶ್ನೆ ಸ್ಪರ್ಧೆ: ಕಾರ್ಕಳ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

Published

on

ಕಾರ್ಕಳ: 75 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿರುವ ಉಡುಪಿ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸುಮಂತ್ ಶೆಟ್ಟಿ ಮತ್ತು ನಿಹಾರ್ ಭಟ್ ಪ್ರಥಮ ಸ್ಥಾನ ಗಳಿಸಿದ್ದಾರೆ.

 ನಿಹಾರ್ ಭಟ್                    ಸುಮಂತ್ ಶೆಟ್ಟಿ 

ʼಆಜಾದಿ ಕಾ ಅಮೃತ್ ಮಹೋತ್ಸವ್ʼ ನ ಸಂದರ್ಭ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆ.3 ರಂದು ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿಜೇತ ವಿದ್ಯಾರ್ಥಿಗಳಾದ ಸುಮಂತ್ ಶೆಟ್ಟಿ ಮತ್ತು ನಿಹಾರ್ ಭಟ್ ಇವರನ್ನು ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

LATEST NEWS

ಮೂರನೇ ದಾಖಲೆ ಬರೆದ ಉಡುಪಿಯ ಕಲಾವಿದ; ವರ್ಲ್ಡ್ ರೆಕಾರ್ಡ್ ಸೇರಿದ ಅಪೂರ್ವ ಕಲಾಕೃತಿ

Published

on

ಉಡುಪಿ : ಅಶ್ವತ್ಥದ ಎಲೆಯಲ್ಲಿ ನಾನಾ ಸೆಲೆಬ್ರಿಟಿಗಳ ಚಿತ್ರ ಬಿಡಿಸುವ ಮೂಲಕ ಗಮನ ಸೆಳೆದಿರುವ ಉಡುಪಿಯ ಕಲಾವಿದ ಮಹೇಶ್ ಮರ್ಣೆ ಅವರ ಸಾಧನೆಗೆ ಮತ್ತೊಂದು ಗೌರವ ದಕ್ಕಿದೆ. ಮೂರನೇ  ದಾಖಲೆಯ ಗರಿಯೊಂದನ್ನು ಮುಡಿಗೇರಿಸಿಕೊಂಡಿದ್ದಾರೆ.

ಉಡುಪಿಯ ಮರ್ಣೆ ಗ್ರಾಮದ ಶ್ರೀಧರ ಆಚಾರ್ಯ ಮತ್ತು ಲಲಿತ ದಂಪತಿ ಪುತ್ರರಾದ ಕಲಾವಿದ ಮಹೇಶ್ ಮರ್ಣೆ, ಇತ್ತೀಚಿಗೆ ಎರಡು ಗಂಟೆ 30 ನಿಮಿಷಗಳ ಕಾಲ ಉರಿ ಬಿಸಿಲಿನಲ್ಲಿ ಕುಳಿತು ಅಪರೂಪದ ಚಿತ್ರ ಒಂದನ್ನು ರಚಿಸಿದ್ದರು. ಸೂರ್ಯನ  ಕಿರಣಗಳಿಂದ ಮರದ ಹಲಗೆಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು  ಅವರ ಭಾವಚಿತ್ರವನ್ನು ಚಿತ್ರಿಸಿದ್ದರು. ಈ ಕಲಾಕೃತಿಯನ್ನು ರಾಷ್ಟ್ರಪತಿ ಮೆಚ್ಚಿ ಸಂದೇಶ ಕಳುಹಿಸಿದ್ದರು.

ಇದನ್ನೂ ಓದಿ  : ಎಲಿಮಿನೇಟ್ ಆದ ಸ್ಪರ್ಧಿಗಳ ರೀ ಎಂಟ್ರಿ; ಕುತೂಹಲ ಕೆರಳಿಸಿದ ಎಲಿಮಿನೇಷನ್

ಇದೀಗ ಈ ಕಲಾಕೃತಿಯು ಕಿಂಗ್ಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಗೊಂಡಿದೆ. ಇದು ಮಹೇಶ್ ಮರ್ಣೆ ಹೆಸರಿಗೆ ಸೇರ್ಪಡೆಯಾದ ಮೂರನೇ ದಾಖಲೆಯಾಗಿದ್ದು, ಅವರ ಸುಪ್ರಸಿದ್ಧ ಕಲಾತ್ಮಕ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.

Continue Reading

LATEST NEWS

ತಾವೇ ಮಾರಾಟ ಮಾಡಿದ್ದ ಬಸ್ಸನ್ನು ಕದ್ದು ತಂದು ಸಿಕ್ಕಿ ಬಿದ್ದ ಅಪ್ಪ -ಮಗ!

Published

on

ಕಾಪು : ಸೇಲ್ ಮಾಡಿದ ಬಸ್ಸೊಂದನ್ನು ಸೇಲ್ ಮಾಡಿದವರೇ ಕದ್ದೊಯ್ದಿದ್ದಾಗಿ ತುಮಕೂರಿನ ಉದ್ಯಮಿಯೊಬ್ಬರು ಉಡುಪಿಯ ಕಾಪು ಪೊಲೀಸರಿಗೆ ದೂರು ನೀಡಿದ್ದಾರೆ. ಕಾಪುವಿನ ಸಮೀರ್ ಹಾಗೂ ಆತನ ತಂದೆ ಅಬ್ದುಲ್ ಖಾದರ್ ವಿರುದ್ಧ ಈ ದೂರು ನೀಡಲಾಗಿದೆ. ಅವರಿಂದ 9.5 ಲಕ್ಷಕ್ಕೆ ಸೆಕೆಂಡ್ ಹ್ಯಾಂಡ್ ಬಸ್ ಖರೀದಿ ಮಾಡಿದ್ದು, ತುಮಕೂರಿನಲ್ಲಿ ನಿಲ್ಲಿಸಿದ್ದ ಬಸ್‌ ಕದ್ದು ತಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತುಮಕೂರು ಟು ಕಾಪು : ಬಸ್ ಕಥೆ

ತುಮಕೂರಿನ ನಿವಾಸಿ ಸೈಯದ್ ಗೌಸ್ ಎಂಬವರು ಸ್ನೇಹಿತರಲ್ಲಿ ಸೆಕೆಂಡ್ ಹ್ಯಾಂಡ್ ಬಸ್ ಖರೀದಿಸುವ ಇಚ್ಛೆ ವ್ಯಕ್ತಪಡಿಸಿದಾಗ ಒಎಲ್‌ಎಕ್ಸ್ ಮೂಲಕ ಉಡುಪಿಯ ಕಾಪುವಿನ ಸಮೀರ್ ಅವರ ಬಳಿ ಸೆಕೆಂಡ್ ಹ್ಯಾಂಡ್ ಬಸ್ ಇರುವ ಮಾಹಿತಿ ಪಡೆದುಕೊಂಡಿದ್ದರು. ಸಮೀರ್ ಅವರನ್ನು ಸಂಪರ್ಕಿಸಿ ಬಸ್ ಖರೀದಿಗೆ ಮಗ ಸಿದ್ದೀಕ್ ಹಾಗೂ ಸ್ನೇಹಿತ ಜಾವೇದ್ ಜೊತೆಯಲ್ಲಿ ಕಾಪುವಿನ ಮಲ್ಲಾರ್ ಎಂಬಲ್ಲಿಗೆ ಬಂದಿದ್ದರು.

ಇದನ್ನೂ ಓದಿ : ಉಳ್ಳಾಲ : ಬಂದೂಕು ತೋರಿಸಿ ಬ್ಯಾಂಕ್ ದರೋಡೆ; ನಗ, ನಗದು ದೋಚಿ ಪರಾರಿಯಾದ ಖದೀಮರು

ಅಲ್ಲಿ ಸಮೀರ್ ಇವರಿಗೆ 2017 ಬಸ್ ತೋರಿಸಿದ್ದು, ದಾಖಲೆ ಪತ್ರ ಮತ್ತೆ ಕೊಡುವುದಾಗಿ ಹೇಳಿ ಎರಡು ಲಕ್ಷ ಮುಂಗಡ ಪಡೆದುಕೊಂಡಿದ್ದು, ಬಾಕಿ ಹಣವನ್ನು ಹದಿನೈದು ದಿನಗಳಲ್ಲಿ ಪಡೆದುಕೊಂಡಿದ್ದ. ಆದ್ರೆ, ತುಮಕೂರಿನಲ್ಲಿ ನಿಲ್ಲಿಸಿದ ಬಸ್ಸನ್ನು ಮತ್ತೆ ಉಡುಪಿಗೆ ತರಲಾಗಿದ್ದು, ತಂದೆ ಮಗ ಇಬ್ಬರೂ ಸೇರಿ ವಂಚಿಸಿದ್ದಾಗಿ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡು ಕಾಪು ಪೊಲೀಸರು ತನಿಖೆ ನಡೆಸುತ್ತಿದ್ದಾರೆ .

Continue Reading

LATEST NEWS

ಕುಂದಾಪುರ : ಕಾರು ಡಿ*ಕ್ಕಿ; ಮಹಿಳೆಗೆ ಗಂಭೀ*ರ ಗಾ*ಯ

Published

on

ಕುಂದಾಪುರ : ಕಾರು ಡಿ*ಕ್ಕಿ ಹೊಡೆದು ಪಾದಚಾರಿ ಮಹಿಳೆಯೊಬ್ಬರು ಗಂಭೀ*ರ ಗಾ*ಯಗೊಂಡ ಘಟನೆ ಕುಂದಾಪುರ ತಾಲೂಕಿನ ತ್ರಾಸಿಯ ರಾಷ್ಟ್ರೀಯ ಹೆದ್ದಾರಿಯ  66 ರಲ್ಲಿ ಸಂಭವಿಸಿದೆ. ತ್ರಾಸಿ ನಿವಾಸಿ ಗೌರಿ ಶೆಟ್ಟಿಗಾರ್‌ (60)  ಗಾ*ಯಗೊಂಡ ಮಹಿಳೆ.

ಗೌರಿ ಶೆಟ್ಟಿಗಾರ್‌ ಅವರು ರಸ್ತೆ ದಾಟುತ್ತಿದ್ದಾಗ ಅವಘ*ಡ ಸಂಭವಿಸಿದೆ. ಕಾರು ಬೈಂದೂರು ಕಡೆಯಿಂದ ಕುಂದಾಪುರದತ್ತ ಸಂಚರಿಸುತ್ತಿತ್ತು. ಡಿ*ಕ್ಕಿ ಹೊಡೆದ ರಭಸಕ್ಕೆ ಮಹಿಳೆ ಸ್ವಲ್ಪ ದೂರಕ್ಕೆ ಎಸೆಯಲ್ಪಟ್ಟಿದ್ದು, ಪ್ರಜ್ಞೆ ತಪ್ಪಿ ಬಿದ್ದಿದ್ದರು.

ಇದನ್ನೂ ಓದಿ : ಆತ್ಮಹತ್ಯೆಗೆ ಯತ್ನಿಸಿದ ಕಳ್ಳ ಈಗ ಪೊಲೀಸರ ಅತಿಥಿ

ಕೂಡಲೇ ಗಂಗೊಳ್ಳಿಯ ಆ್ಯಂಬುಲೆನ್ಸ್‌ನ ಇಬ್ರಾಹಿಂ ಅವರು ಆಕೆಯನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾ*ತದ ದೃಶ್ಯಾವಳಿ ಮಳಿಗೆಯೊಂದರ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading

LATEST NEWS

Trending

Exit mobile version