Thursday, December 1, 2022

ಬಿಕರ್ಣಕಟ್ಟೆಯ ಬಾಲ ಯೇಸು ಮಂದಿರದಲ್ಲಿ ಆಯುಧ ಪೂಜಾ ಪ್ರಯುಕ್ತ ಸಾಮೂಹಿಕ ವಾಹನ ಪೂಜೆ..!

ಮಂಗಳೂರು : ನಗರದ ಕ್ರೈಸ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಬಿಕರ್ಣಕಟ್ಟೆಯ ಬಾಲ ಯೇಸು ಮಂದಿರದಲ್ಲಿ ನವರಾತ್ರಿಯ ಪ್ರಯುಕ್ತ ಇಂದು ಆಯುಧ ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮಂದಿರದ ಪ್ರಾಂಗಣದಲ್ಲಿ ನಡೆದ ಈ ಆಯುಧ ಪೂಜಾ ಕಾರ್ಯಕ್ರಮ ಪ್ರಯುಕ್ತ  ನೂರಾರು ಚತುಷ್ಚಕ್ರ ಮತ್ತು ದ್ವಿಚಕ್ರ , ಆಟೋಗಳ ಚಾಲಕರು ಮಾಲಕರು ಭಾಗವಹಿಸಿ ತಮ್ಮ ವಾಹನಗಳಿಗೆ ಪೂಜೆ ಮಾಡಿಸಿದರು.

ಚರ್ಚಿನ ಧರ್ಮಗರುಗಳು ವಾಹನಗಳನ್ನು ಆಶೀರ್ವದಿಸಿದರು. ಇಂದು ದಿನ ಪೂರ್ತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.

ಅಕ್ಟೋಬರ್ 5 ರಂದು ಕೂಡ ಈ ವಾಹನ ಪೂಜಾ ಕಾರ್ಯಕ್ರಮ ಮುಂದುವರೆಯಲಿದೆ ಎಂದು ಚರ್ಚಿನ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

Hot Topics