Monday, January 24, 2022

ಮಂಗಳೂರು: ಶಾಲಾ ಮಕ್ಕಳ ವಾಹನ ಚಾಲಕರಿಗೆ ಜಾಗೃತಿ ಶಿಬಿರ

ಮಂಗಳೂರು: ಅತ್ತಾವರ ಉಮಾಮಹೇಶ್ವರಿ ದೇವಸ್ಥಾನದ ಹಾಲ್‌ನಲ್ಲಿ ನಗರದ ಟ್ರಾಫಿಕ್ ಪೊಲೀಸ್ ಮತ್ತು ದ. ಕ ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಆಶ್ರಯದಲ್ಲಿ ಚಾಲಕರಿಗೆ ಜಾಗೃತಿ ಶಿಬಿರವು ಜರುಗಿತು.

ಕಾರ್ಯಕ್ರಮದಲ್ಲಿ ಟ್ರಾಫಿಕ್ ಎಸಿಪಿ ನಟರಾಜ್ ಮಾತನಾಡಿ “ಮಂಗಳೂರಿನ ಚಾಲಕರು ಇತರ ಕಡೆಗಳಿಗೆ ಹೋಲಿಸಿದರೆ ಪ್ರಜ್ಞಾವಂತರು. ಬದಲಿ ಚಾಲಕರನ್ನು ನಿಯೋಜನೆ ಮಾಡುವಾಗ ಜಾಗ್ರತೆ ವಹಿಸಿ.

ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಮಕ್ಕಳ ಜಾಗ್ರತೆ ನಿಮ್ಮ ಹೊಣೆ.

ಹಾಗೂ ಲೈಂಗಿಕತೆ ತೊಂದರೆಗಳಿಂದ ಕಾಪಾಡಿ, ದೌರ್ಜನ್ಯವನ್ನು ಮಾಡುವುದು ಎಷ್ಟು ಅಪರಾಧವೋ ಅಷ್ಟೇ ಅದನ್ನು ನೋಡಿ ಸುಮ್ಮನಿರುವುದೂ ಅಪರಾಧ.

ರಸ್ತೆ ಸುರಕ್ಷತೆ ನಮ್ಮ ಹೊಣೆ, ಚಾಲನೆ ವೇಳೆ ತಾಳ್ಮೆಯುತ ಚಲಾವಣೆ ಮಾಡಿ, ಮಕ್ಕಳ ಮೇಲೆ ಸಲಿಗೆಯಿಂದ ವರ್ತಿಸಬೇಡಿ, ನೀವು ಸರಿಯಾಗಿದ್ದರೂ ನೋಡುವವರು ತಪ್ಪಾಗಿ ಭಾವಿಸುವ ಸಾಧ್ಯತೆ ಇದೆ” ಎಂದು ಚಾಲಕರಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕದ್ರಿ ಟ್ರಾಫಿಕ್ ಇನ್ಸ್‌ಪೆಕ್ಟರ್ ಗೋಪಾಲಕೃಷ್ಣ ಭಟ್ ಮಾತನಾಡಿ ಪೊಲೀಸ್ ಸಿಬ್ಬಂದಿ ಕಾನೂನಿನ ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.

ಆದ್ದರಿಂದ ನಾವು ಯಾರ ಮೇಲೆಯೂ ಕೂಡ ಅನಗತ್ಯ ದಂಡ ವಿಧಿಸಲು ಇಚ್ಚಿಸುವುದಿಲ್ಲ.

ಓವರ್ ಲೋಡ್ ಮಾಡಿಕೊಂಡು ಹೋಗುವ ಹೊಂದಾಣಿಕೆಯನ್ನು ದಯವಿಟ್ಟು ಚಾಲಕರು ಕಡಿಮೆ ಮಾಡಬೇಕು.

ಅದರ ಬದಲು ಇತರ ಚಾಲಕರಿಗೆ ದುಡಿಯಲು ಅವಕಾಶ ನೀಡಿ ಎಂದು ಅವರು ಮನವಿ ಮಾಡಿದರು.

ಶಾರದಾ ಶಾಲೆಯ ಪ್ರಾಂಶುಪಾಲ ದಯಾನಂದ ಕಟೀಲ್ “ಚಾಲಕರು ಪೋಷಕರು ಮತ್ತು ಶಾಲೆಯ ಕೊಂಡಿ, ಚಾಲಕರ ಜವಾಬ್ದಾರಿಯನ್ನು ಮಕ್ಕಳ ಲೈಂಗಿಕ ಸುರಕ್ಷತೆ ಕಾಪಾಡಿ, ನೀವು ನಿಮ್ಮ ಮಕ್ಕಳಂತೆ ಮುದ್ದು ಮಾಡುತ್ತೀರಿ ಆದರೆ ನೋಡಿದವರು ಅಪಾರ್ಥ ಮಾಡಿಕೊಳ್ಳುತ್ತಾರೆ.

ಕಾರ್ಯಕ್ರಮದಲ್ಲಿ ಕದ್ರಿ ಟ್ರಾಫಿಕ್ ಇನ್ಸ್‌ಪೆಕ್ಟರ್ ಗೋಪಾಲಕೃಷ್ಣ ಭಟ್, ಪಾಂಡೇಶ್ವರ ಟ್ರಾಫಿಕ್ ಪೊಲೀಸ್ ಇನ್ಸ್‌ಪೆಕ್ಟರ್ ಜಯಾನಂದ, ಸಂಘದ ಅಧ್ಯಕ್ಷ ಉಮೇಶ್ ಅತ್ತಾವರ, ಕಾರ್ಯದರ್ಶಿ ಕಿರಣ್, ಸಂಘಟನಾ ಕಾರ್ಯದರ್ಶಿ ಲೋಕೇಶ್,ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ರೆಹಮಾನ್ ಕುಂಜತಬೈಲ್ ನೆರೆವೇರಿಸಿದರು. ಪ್ರಧಾನ ಕಾರ್ಯದರ್ಶಿ ಕಿರಣ್ ವಂದಿಸಿದರು.

Hot Topics

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ ಕಾರ್ಯಕ್ರಮ ಸುರತ್ಕಲ್ ಗೋವಿಂದದಾದ ಕಾಲೇಜಿನಲ್ಲಿ ಜರಗಿತು‌. ಅಕಾಡಮಿಯ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ,ಶಾಸಕ ಡಾ.ವೈ.ಭರತ್...

ಮಂಗಳೂರು: ಮಾಲೀಕನ ಎದುರೇ ಸ್ಕೂಟರ್‌ ಕದ್ದೊಯ್ದ ಕಳ್ಳ

ಮಂಗಳೂರು: ಮಾಲೀಕನ ಎದುರಿನಲ್ಲಿಯೇ ಕಳ್ಳನೊಬ್ಬ ಸ್ಕೂಟರ್‌ ಕಳವು ಮಾಡಿದ ಘಟನೆ ನಗರದಲ್ಲಿ ನಡೆದಿದೆ.ರಿನ್ಸ್‌ ಮೋನ್‌ ಕ್ಸೇವಿಯರ್‌ ಅವರು ಜ.7ರಂದು ಬೆಳಗ್ಗೆ 11.30ರ ವೇಳೆಗೆ ಪಾರ್ಸಲ್‌ ಬಸ್‌ಗೆ ನೀಡಲು ಜ್ಯೋತಿ ವೃತ್ತದ ಬಳಿ ಸ್ಕೂಟರ್‌...

ಹಾಜಿ ಕಾರ್ಕಳ ಶೇಖ್ ಸಾಬು ಸಾಹೇಬ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಧನ ಸಹಾಯ ಹಾಗೂ ಅಕ್ಕಿ ವಿತರಣೆ

ಕಾರ್ಕಳ: ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮೊಹಮ್ಮದ್ ಮಸೂದ್ ರವರು ಹಾಜಿ ಕಾರ್ಕಳ ಶೇಖ್ ಸಾಬು ಸಾಹೇಬ್ ಮೆಮೋರಿಯಲ್ಟ್ರಸ್ಟ್ ವತಿಯಿಂದ ಮಿತ್ತಬೈಲ್...