Monday, August 15, 2022

ಮುಲ್ಕಿ: ಆಟೋ ರಿಕ್ಷಾಕ್ಕೆ ಬಸ್ ಡಿಕ್ಕಿ- ಚಾಲಕನ ಜೊತೆ ಪ್ರಯಾಣಿಕ ಪವಾಡ ಸದೃಶ ಪಾರು

ಮುಲ್ಕಿ: ಆಟೋ ರಿಕ್ಷಾಕ್ಕೆ ಸರ್ವಿಸ್ ಬಸ್ ಡಿಕ್ಕಿಯಾಗಿ ಆಟೋ ಚಾಲಕ ಸಹಿತ ಪ್ರಯಾಣಿಕ ಪವಾಡಸದೃಶ ಪಾರಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡ್ ಬೈಪಾಸ್ ಬಳಿ ನಡೆದಿದೆ.

ಉಡುಪಿ ಜಿಲ್ಲೆ ಹೆಜಮಾಡಿ ಕಡೆಯಿಂದ ಸುರತ್ಕಲ್ ಕಡೆಗೆ ಕೆಲಸದ ನಿಮಿತ್ತ ಹೋಗುತ್ತಿದ್ದ ಆಟೋಗೆ ಕಾರ್ನಾಡು ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ ಬಳಿ ಮಂಗಳೂರಿನಿಂದ ಬಂದು ಕಾರ್ನಾಡ್ ಒಳಪೇಟೆಗೆ ತಿರುಗುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಆಟೋ ಪಲ್ಟಿಯಾಗಿದ್ದು ಆಟೋದಲ್ಲಿದ್ದ ಚಾಲಕ ಹೆಜಮಾಡಿ ನಿವಾಸಿ ಜಯಕರ್ ಸಹಿತ ಕಟ್ಟಡ ಕಾರ್ಮಿಕ ಪವಾಡಸದೃಶ ಪಾರಾಗಿದ್ದಾರೆ.

ಆಟೋದಲ್ಲಿ ಕಟ್ಟಡದ ಕೆಲಸಕ್ಕೆಂದು ಸಾಗಿಸುತ್ತಿದ್ದ ಪೈ೦ಟ್ ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿದೆ.

ಸುಮಾರು ಹದಿನೈದು ಸಾವಿರ ರೂಪಾಯಿ ಮೌಲ್ಯ ನಷ್ಟವಾಗಿದ್ದು ಆಟೋಗೆ ಹಾನಿಯಾಗಿದೆ.
ಸುರತ್ಕಲ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಖಾಸಗಿ ಕಾಲೇಜಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ: ಪ್ರಾಧ್ಯಾಪಕರ ವಿರುದ್ಧ FIR

ಉಡುಪಿ: ತಾಲೂಕಿನ ಬ್ರಹ್ಮಾವರ ಖಾಸಗಿ ಪದವಿ ಪೂರ್ವ ಕಾಲೇಜಿನಲ್ಲಿ ಇಬ್ಬರು ಸಹಾಯಕ ಪ್ರಾಧ್ಯಾಪಕರು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದು, ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.ದೂರು ಬಾರ್ಕೂರು ಖಾಸಗಿ ಪದವಿ ಪೂರ್ವ ಕಾಲೇಜಿನ...

ಕೋಟ್ಯಧಿಪತಿ ಉದ್ಯಮಿ ರಾಕೇಶ್ ಝುಂಝುನ್‌ವಾಲಾ ನಿಧನ

ಹೊಸದಿಲ್ಲಿ: ದೇಶದ ಖ್ಯಾತ ಹೂಡಿಕೆದಾರ, ಕೋಟ್ಯಧಿಪತಿ ಉದ್ಯಮಿ ರಾಕೇಶ್ ಝುಂಝುನ್‌ವಾಲಾ ಅವರು ಭಾನುವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು. ಮುಂಬಯಿಯ ಆಸ್ಪತ್ರೆಯೊಂದರಲ್ಲಿ ಅವರು ನಿಧನರಾಗಿದ್ದಾರೆ. ಅವರು ಈ ಹಿಂದೆ ತಮ್ಮ ಸಿಂಪಲ್‌...

ಶಿರಾಡಿ ಘಾಟ್ ಹೆದ್ದಾರಿಗೆ ಶಾಶ್ವತ ಯೋಜನೆ ರೂಪಿಸುವಂತೆ ಗಡ್ಕರಿಗೆ ಮನವಿ ಮಾಡಿದ ಸಂಸದ ಡಾ. ಹೆಗ್ಗಡೆ

ಮಂಗಳೂರು: ರಾಜಧಾನಿ ಬೆಂಗಳೂರು ಮತ್ತು ಕರಾವಳಿಯನ್ನು ಬೆಸೆಯುವ ಶಿರಾಡಿ ಘಾಟ್ ಹಾದುಹೋಗುವ ಹೆದ್ದಾರಿ ಬಗ್ಗೆ ಶಾಶ್ವತ ಯೋಜನೆ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ಕಳೆದ ಶನಿವಾರ ದೆಹಲಿಯಲ್ಲಿ...