Sunday, November 27, 2022

ಡಿ.1ರಿಂದಲೇ ದ.ಕ ಜಿಲ್ಲೆಯಲ್ಲಿ ಹೆಚ್ಚಾಗಲಿದೆ ರಿಕ್ಷಾ ಪ್ರಯಾಣ ದರ..!

ಮಂಗಳೂರು: ದ.ಕ ಜಿಲ್ಲೆಯಲ್ಲಿ ಸಂಚರಿಸುವ ಆಟೊ ರಿಕ್ಷಾಗಳ ಪ್ರಯಾಣ ದರವನ್ನು ಡಿ.1ರಿಂದ ಅನ್ವಯಗೊಳ್ಳುವಂತೆ ಪರಿಷ್ಕರಿಸಿ ದ.ಕ ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಆದೇಶ ಹೊರಡಿಸಿದ್ದಾರೆ.


ಕನಿಷ್ಟ ದರ ಮೊದಲ ಒಂದುವರೆ ಕಿ.ಮೀ.ಗೆ 35 ರೂ., ನಂತರದ ಪ್ರತೀ 1 ಕಿ.ಮೀ. 20 ರೂ. ಆಗಿರುತ್ತದೆ. ಮೊದಲ 15 ನಿಮಿಷಗಳವರೆಗೆ ಕಾಯುವ ದರವಿರುವುದಿಲ್ಲ. ಅದು ಉಚಿತವಾಗಿರುತ್ತದೆ.
ಬಳಿಕದ 15 ನಿಮಿಷಕ್ಕೆ 5 ರೂ. ಪಾವತಿಸಬೇಕಿದೆ.

ಪ್ರತೀ 20 ಕೆಜಿ ಲಗೇಜ್ ಉಚಿತವಾಗಿರುತ್ತದೆ. ಹೆಚ್ಚುವರಿ 10 ಕೆಜಿಗೆ 5 ರೂ. ಪಾವತಿಸಬೇಕಿದೆ. ರಾತ್ರಿ 10ರಿಂದ ಮುಂಜಾನೆ 5ರವರೆಗೆ ಪರಿಷ್ಕೃತ ದರದ ಒಂದುವರೆ ಪಟ್ಟು ಹೆಚ್ಚು ತೆಗೆದುಕೊಳ್ಳಬಹುದಾಗಿದೆ. ಡಿ.1ರಿಂದ ತಿಂಗಳೊಳಗೆ ಮೀಟರ್‌ಗಳನ್ನು ತೂಕ ಮತ್ತು ಮಾಪನ ಶಾಸ್ತ್ರ ಇಲಾಖೆಯಿಂದ ಸತ್ಯಾಪನೆ ಮಾಡಿಸಿ ಮುದ್ರೆ ಹಾಕಿಸಿಕೊಳ್ಳಬೇಕು.

ಪ್ರತೀ ರಿಕ್ಷಾದಲ್ಲೂ ದರದ ಪಟ್ಟಿಯನ್ನು ಅಳವಡಿಸಬೇಕು. ಪ್ರಯಾಣಿಕರು ಸೂಚಿಸಿದ ಸ್ಥಳಕ್ಕೆ ಹೋಗಲು ಚಾಲಕರು ನಿರಾಕರಿಸಿದಲ್ಲಿ, ಸಾರ್ವಜನಿಕರಲ್ಲಿ ಅನುಚಿತವಾಗಿ ವರ್ತಿಸಿದಲ್ಲಿ ಪೊಲೀಸ್ ಇಲಾಖೆಯು ಕ್ರಮ ಜರಗಿಸಬೇಕು.

ಪ್ರಯಾಣಿಕರಿಂದ ಅಧಿಕ ದರ ವಸೂಲಿ ಮಾಡಿದರೆ ದೂ.ಸಂ: 0824-2220577/08251-230729/08255-280504ಕ್ಕೆ ದೂರು ನೀಡಬಹುದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಉಡುಪಿಯ ಮಂದಾರ್ತಿಯಲ್ಲೂ ಸ್ಯಾಟ್‌ಲೈಟ್ ಫೋನ್ ಸಕ್ರಿಯ-ಉಗ್ರ ಕೃತ್ಯಕ್ಕೆ ಸಂಚು ಶಂಕೆ..?

ಉಡುಪಿ: ಇದುವರೆಗೆ ಕೇವಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಷ್ಟೇ ಕೇಳಿ ಬರುತ್ತಿದ್ದ ಸ್ಯಾಟಲೈಟ್‌ ಫೋನ್‌ ಕರೆ ಈಗ ದೇವಾಲಯಗಳ ನಗರಿ ಉಡುಪಿ ಜಿಲ್ಲೆಯಲ್ಲೂ ಮೊಳಗಿದೆ. ಉಡುಪಿಯಲ್ಲೂ ಉಗ್ರರ ಕರಿನೆರಳು ಕಾಣಿಸಿದೆ.ಉಡುಪಿಯ ಮಂದಾರ್ತಿ ಸಮೀಪದ ಅರಣ್ಯ...

ಉಡುಪಿ: ಹೊಟೇಲ್‌ನಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅನಾಹುತ….

ಉಡುಪಿ: ಹೊಟೇಲ್‌ವೊಂದರಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಅನಾಹುತ ಸಂಭವಿಸಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಸಕಾಲಿಕ ಕಾರ್ಯಾಚರಣೆಯಿಂದ ಸಂಭಾವ್ಯ ಅವಘಡವೊಂದು ತಪ್ಪಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.ಇಲ್ಲಿನ ಸಿಟಿ ಬಸ್ ನಿಲ್ದಾಣ ಸಮಿಪದಲ್ಲಿರುವ ಟಾಪ್ ಟೌನ್...

ಮಂಗಳೂರಿನಲ್ಲಿ ಹಣದ ಆಮಿಷವೊಡ್ಡಿ ಮತಾಂತರಕ್ಕೆ ಯತ್ನ-ಖ್ಯಾತ ವೈದ್ಯೆ ಸಹಿತ ಮೂವರ ವಿರುದ್ಧ ಸಂತ್ರಸ್ತ ಯುವತಿಯಿಂದಲೇ ದೂರು ದಾಖಲು

ಮಂಗಳೂರು: ಮುಸ್ಲಿಂ ಯುವಕನೊಬ್ಬ ಮತಾಂತರಗೊಳಿಸಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯುವತಿಯೋರ್ವಳು ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.ಆಕೆ ನೀಡಿರುವ ದೂರಿನಲ್ಲಿ 'ಮಂಗಳೂರಿನ ಬಿಕರ್ನಕಟ್ಟೆಯಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾಗ ಬಿಕರ್ನಕಟ್ಟೆಯ ಕೈಕಂಬದಲ್ಲಿರುವ ಖಲೀಲ್‌ನ...