Home ಗಲ್ಫ್‌ ವಾರ್ತೆ ದುಬೈನಲ್ಲಿ ನಡೆಯಲಿದೆ ಬಂಟ್ಸ್ ಪ್ರೀಮಿಯರ್ ಲೀಗ್- 2020 ಕ್ರಿಕೆಟ್‌ ಪಂದ್ಯಾಟ

ದುಬೈನಲ್ಲಿ ನಡೆಯಲಿದೆ ಬಂಟ್ಸ್ ಪ್ರೀಮಿಯರ್ ಲೀಗ್- 2020 ಕ್ರಿಕೆಟ್‌ ಪಂದ್ಯಾಟ

ದುಬೈನಲ್ಲಿ ನಡೆಯಲಿದೆ ಬಂಟ್ಸ್ ಪ್ರೀಮಿಯರ್ ಲೀಗ್- 2020 ಕ್ರಿಕೆಟ್‌ ಪಂದ್ಯಾಟ

ದುಬೈ: ಆಕ್ಟಿಯಸ್ ಮ್ಯಾನೇಜ್‌ಮೆಂಟ್‌ ಕನ್ಸಲ್ಟೆಂಟ್ ಇದರ ಸಹಭಾಗಿತ್ವದಲ್ಲಿ ತುಳುನಾಡ ಬಂಟೆರ್‌ ಯುಎಇ ಬಂಟ್ಸ್ ಪ್ರೀಮಿಯರ್ ಲೀಗ್ 2020 ಕ್ರಿಕೆಟ್‌ ಪಂದ್ಯಾಟ ದುಬೈನಲ್ಲಿ ನಡೆಯಲಿದೆ.

ಮಾರ್ಚ್ 6 ರಂದು ದುಬೈನ ಅಜ್ಮನ್‌ ಓವಲ್‌ನಲ್ಲಿ ಪಂದ್ಯಾಟ ನಡೆಯಲಿದೆ. ದುಬೈನಲ್ಲಿ ನೆಲೆಸಿರುವ ಬಂಟ ಸಮುದಾಯದ ಕ್ರಿಕೆಟ್‌ ಪ್ರೇಮಿಗಳಿಗಾಗಿ ಪಂದ್ಯಾಟ ಆಯೋಜಿಸಲಾಗಿದೆ.

ಯುಎಇ ಬಂಟ್ಸ್ ಪ್ರೀಮಿಯರ್ ಲೀಗ್ 2020 ಸೀಸನ್‌ 2 ಕ್ರಿಕೆಟ್‌ ಪಂದ್ಯಾಟಕ್ಕೆ ವಿನೋದ್‌ ಶೆಟ್ಟಿ ನೇತೃತ್ವದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು. ದುಬೈನ ಲ್ಯಾವೆಂಡರ್ ಹೋಟೆಲ್ ಯಸ್ಮೀನ್ ಸಭಾಂಗಣದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕೃಷ್ಣ ಪ್ರಸಾದ್ ಮತ್ತು ಆನಂದ್, ವಿನೋದ್‌ ಶೆಟ್ಟಿಯವರಿಗೆ ಸಹಕರಿಸಿದರು.

ಇನ್ನು ಮುಖ್ಯ ಅತಿಥಿಗಳಾಗಿ ದುಬೈನ ಟೆಕ್ನೋಕಾಮ್ ನೆಟ್‌ವರ್ಕಿಂಗ್ ಮತ್ತು ಕಮ್ಯುನಿಕೇಷನ್ಸ್ ಎಲ್ಎಲ್‌ಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಂಕರ್ ಎನ್ ಶೆಟ್ಟಿ, ಜೈನ್ ಇನ್ವೆಸ್ಟ್‌ಮೆಂಟ್‌ ಮಾಲೀಕ ಶರತ್ ಶೆಟ್ಟಿ, ಹೀಟ್ ಶೀಲ್ಡ್‌ ಶಿಮಾನ್ತೂರು ಗ್ಲಾಡಿಯೇಟರ್ಸ್‌ನ ಮಾಲೀಕ ಪ್ರೇಮನಾಥ ಶೆಟ್ಟಿ, ಮಾಲಾಡಿ ವಾರಿಯರ್ಸ್ನ ಮಾಲೀಕ ದೇವೇಶ್ ಆಳ್ವ, ದುಬೈ ಬಂಟೆಟ್ಸ್ನ ಮಹೇಶ್ ಡಿ ಶೆಟ್ಟಿ, ವರಹಾ ರೂಪಾ ಮಂಗಳೂರು ಮುಖ್ಯಸ್ಥ ಪ್ರವೀಣ್ ಶೆಟ್ಟಿ, ಎಸಿಇ ಅವೆಂಜರ್ಸ್‌ನ ಗುಣಶೀಲ್ ಶೆಟ್ಟಿ, ಫಾರ್ಚೂನ್‌ ಬಂಟ್ಸ್‌ ಮುಖ್ಯಸ್ಥ ಪ್ರವೀಣ್ ಶೆಟ್ಟಿ, ಪಯ್ಯರ್‌ ಪಂಟರ್ಸ್‌ ಮುಖ್ಯಸ್ಥ ರವಿಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

- Advertisment -

RECENT NEWS

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ ಬಂಟ್ವಾಳ : ಲಾಕ್ ಡೌನ್ ಹೆಸರಿನಲ್ಲಿ ಪೆರುವಾಯಿ ವ್ಯವಸಾಯ ಸಹಕಾರಿ ಸಂಘದ ಕಟ್ಟಡದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೇ...

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!?

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!? ಮಂಗಳೂರು : ಕೇರಳ ಗಡಿ ತೆರವಿನಿಂದ ಮಂಗಳೂರಿಗರಿಗೆ ಮತ್ತೆ ಆತಂಕ ಶುರುವಾಗಿದೆ. ಕಾಸರಗೋಡಿನಿಂದ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯಲ್ಲಿ...

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್ ನವದೆಹಲಿ : ಇನ್ನು ಮುಂದೆ ಕೊರೋನಾ ಸೋಂಕಿಗೆ ಸಂಬಂಧಿಸಿದ ಪರೀಕ್ಷೆಗಳು ಸಂಪೂರ್ಣ ಉಚಿತ. ಹೀಗೆಂತಾ ಸರ್ವೋಚ್ಚಾ ನ್ಯಾಯಾಲಯದ ಮಹತ್ವದ...

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..!

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..! ಬಂಟ್ವಾಳ : ಲಾಕ್ ಡೌನ್ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳರ ಕೈಚಳ ಮುಂದುವರೆದಿದೆ.ಬಂಟ್ವಾಳದ ಚರ್ಚ್ ಒಂದಕ್ಕೆ ನುಗ್ಗಿದ...