Connect with us

UDUPI

ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವಕ್ಕೆ ಅದ್ಧೂರಿ ಚಾಲನೆ

Published

on

ಕಾರ್ಕಳ: ಕೊರೋನ ಕಾರಣದಿಂದ ಮುಂದೂಡಲ್ಪಟ್ಟಿದ್ದ ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಐದು ದಿನಗಳ ಮಹೋತ್ಸವಕ್ಕೆ ರವಿವಾರ ಅದ್ಧೂರಿ ಚಾಲನೆ ನೀಡಲಾಯಿತು.

 

 

ಮಹೋತ್ಸವದ ಮುಂದಿನ ನಾಲ್ಕು ದಿನಗಳಲ್ಲಿ ಬೆಳಿಗ್ಗೆ 8,10,12 ಹಾಗೂ ಮಧ್ಯಾಹ್ನ 2, 4 ಮತ್ತು 7 ಗಂಟೆಗೆ ಬಲಿಪೂಜೆಗಳು ನೆರವೇರಲಿವೆ.

ನಿನ್ನೆ ಬೆಳಗ್ಗೆ ಪುಣ್ಯಕ್ಷೇತ್ರದ ಮುಖ್ಯ ಗುರು ವಂ.ಅಲ್ಬನ್ ಡಿಸೋಜ ಧ್ವಜಾರೋಹಣ ನೆರವೇರಿಸುವ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಿದರು.

ಬಳಿಕ ಅವರು ಸಂತ ಲಾರೆನ್ಸರ ಪವಿತ್ರ ಅವಶೇಷವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಸಾರ್ವಜನಿಕರ ದರ್ಶನಕ್ಕಾಗಿ ಮಂಟಪದಲ್ಲಿ ಪ್ರತಿಷ್ಠಾಪಿಸಿದರು.

ವಾರ್ಷಿಕ ಮಹೋತ್ಸವದ ಮೊದಲ ದಿನ ಪ್ರಮುಖ ಸಂಭ್ರಮದ ಬಲಿಪೂಜೆಗಳನ್ನು ಶಿವಮೊಗ್ಗದ ಧರ್ಮಾಧ್ಯಕ್ಷ ಅತಿ ವಂ.ಡಾ.ಫ್ರಾನ್ಸಿಸ್ ಸೆರಾವೊ ಮತ್ತು ಮಂಗಳೂರಿನ ಧರ್ಮಾಧ್ಯಕ್ಷ ಅತಿ ವಂ.ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ನೆರವೇರಿಸಿ ಪ್ರಬೋಧನೆ ನೀಡಿದರು.

ಮಹೋತ್ಸವದ ಮೊದಲ ದಿನ ಮಕ್ಕಳಿಗಾಗಿ ಮೀಸಲಿಟ್ಟು, ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಯಿತು. ಅದೇ ರೀತಿ ತಮ್ಮ ತಮ್ಮ ಪುಟಾಣಿ ಮಕ್ಕಳೊಂದಿಗೆ ನೂರಾರು ಮಾತೆಯಂದಿರು ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು. 7 ಗಂಟೆಗೆ ಬಲಿಪೂಜೆ ನೆರವೇರಿಸಲಾಯಿತು.

LATEST NEWS

ಬಾವಿಯ ಪೊಟರೆಯಲ್ಲಿ ಅವಿತು ಕುಳಿತುಕೊಂಡಿದ್ದ ಚಿರತೆ ಸೆರೆ

Published

on

ಉಡುಪಿ : ಉಡುಪಿ ಜಿಲ್ಲೆಯ ಅರಣ್ಯದ ಅಂಚಿನ ಪ್ರದೇಶಗಳಲ್ಲಿ ಚಿರತೆಯ ಕಾಟ ಜೋರಾಗಿದೆ. ಆಹಾರ ಅರಸಿ ಬರುವ ಚಿರತೆಗಳು ಗ್ರಾಮಸ್ಥರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿವೆ.

ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಎರ್ಮಂಜಪಲ್ಲ ಬಳಿಯ ಬಾಗಿ ಎನ್ನುವವರ ಮನೆಯ ಬಾವಿಗೆ ರಾತ್ರಿ ಚಿರತೆಯೊಂದು ಬಿದ್ದಿತ್ತು. ಬಾವಿಯ ಪೊಟರೆಯಲ್ಲಿ ಅವಿತು ಕುಳಿತುಕೊಂಡಿದ್ದ ಚಿರತೆಯನ್ನು ಮೇಲಕ್ಕೆ ಬರುವಂತೆ ಮಾಡಲು, ಅರಣ್ಯ ಇಲಾಖೆ ಹರ ಸಾಹಸ ಪಡುವಂತಾಯ್ತು.

ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಬೋನಿನ ಮೂಲಕ ಚಿರತೆ  ಸೆರೆ ಹಿಡಿಯುವಲ್ಲಿ ಅರಣ್ಯ  ಇಲಾಖೆ  ಸಿಬ್ಬಂದಿ ಯಶಸ್ಸು ಕಂಡಿದ್ದಾರೆ. ಅರಣ್ಯ ಇಲಾಖೆಯ ಕಾರ್ಯ ದಕ್ಷತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

 

Continue Reading

STATE

ಅಂಕೋಲಾ: ಕಾರು ಪ*ಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾ*ವು !!

Published

on

ಅಂಕೋಲಾ: ನ್ಯಾನೋ ಕಾರು ಪ*ಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃ*ತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ಕೊಡಸಣಿಯ ಅಪಾಯಕಾರಿ ಕ್ರಾಸ್ ಬಳಿ ನಡೆದಿದೆ.

ಪರಿಣಾಮ ಓರ್ವ ಮೃ*ತಪಟ್ಟಟ್ಟು, ಮತ್ತೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಹೊನ್ನಾವರ ಅರೆಯಂಗಡಿ ಮೂಲದ ರಮೇಶ ಶಿವಾನಂದ ನಾಯ್ಕ ಮೃ*ತ ದುರ್ದೈವಿ ಎಂದು ಗುರುತಿಸಲಾಗಿದೆ.

ವಧು ಅನ್ವೇಷಣೆಗಾಗಿ ಅದೇ ಕಾರಿನಲ್ಲಿ ಅಂಕೋಲಾ ಕಡೆ ಬರುತ್ತಿದ್ದ ದಿನೇಶ ಎನ್ನುವವನ ತಲೆ ಹಾಗೂ ಇತರೆಡೆ ಗಾ*ಯನೋವುಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾದ್ದು ಪ್ರಾ*ಣಾಪಾಯದಿಂದ ಪಾರಾಗಿದ್ದಾನೆ.

ಅವೈಜ್ಞಾನಿಕ ಹಾಗೂ ಅಪೂರ್ಣ ಹೆದ್ದಾರಿ ಕಾಮಗಾರಿಯಿಂದ ಕೊಡಸಣಿ ಕ್ರಾಸ್ ಬಳಿ ಹತ್ತಾರು ಅಪಘಾತಗಳು ಸಾ*ವು ನೋವುಗಳು ಸಂಭವಿಸುತ್ತಲೇ ಇದ್ದು ಕಳೆದ ವಾರ ಇದೇ ಸ್ಥಳದ ಹತ್ತಿಪತ್ತು ಮೀಟರ್ ದೂರದಲ್ಲಿ ಭಾರೀ ವಾಹನ ಒಂದು ಪ*ಲ್ಟಿಯಾಗಿತ್ತು.

Continue Reading

Baindooru

WATCH VIDEO : ಉಡುಪಿ : ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ಲಾರಿ ಪಲ್ಟಿ

Published

on

ಉಡುಪಿ : ಚಾಲಕನ ನಿಯಂತ್ರಣ ತಪ್ಪಿ  ಸಿಮೆಂಟ್ ರೆಡಿಮಿಕ್ಸ್ ಲಾರಿಯೊಂದು ಪಲ್ಟಿಯಾದ ಘಟನೆ ಉಡುಪಿಯ  ಅಂಬಾಗಿಲು – ಪೆರಂಪಳ್ಳಿ ಕ್ರಾಸ್ ನಲ್ಲಿ ಸಂಭವಿಸಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ಘಟನೆಯ ಸಂದರ್ಭ ಸ್ಥಳದಲ್ಲಿ ಯಾವುದೇ ವಾಹನ ಇರದೇ ಇದ್ದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ. ಸಿಮೆಂಟ್ ರೆಡಿಮಿಕ್ಸ್ ಲಾರಿ ಅಂಬಾಗಿಲಿನಿಂದ ಮಣಿಪಾಲದ ಕಡೆಗೆ ತೆರಳುತ್ತಿತ್ತು.

ಇದನ್ನೂ ಓದಿ : ಶೀಘ್ರದಲ್ಲೇ ಉಬರ್‌ನಿಂದ ಶಟಲ್ ಬಸ್ ಸೇವೆ; ಯಾವಾಗ ಪ್ರಾರಂಭ?

ಪೆರಂಪಳ್ಳಿಗೆ ತೆರಳುವ ಕ್ರಾಸ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಪಲ್ಟಿಯಾಗಿ ಬಿದ್ದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Continue Reading

LATEST NEWS

Trending

Exit mobile version