Monday, January 24, 2022

ಅತ್ತೂರು ಬಸಿಲಿಕಾ ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಕಾರ್ಕಳ: ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು ಜನಸಾಮಾನ್ಯರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ,

ಕಾರ್ಕಳ ತಾಲ್ಲೂಕಿನ ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.

“ಜನವರಿ 16 ರಿಂದ 27 ರವರೆಗೆ ವಿಜೃಂಭಣೆಯಿಂದ ನೆರವೇರಬೇಕಿದ್ದ ಅತ್ತೂರಿನ ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಮುಂದೂಡಲ್ಪಟ್ಟಿದೆ.

ಮುಂದೂಡಲ್ಪಟ್ಟ ವಾರ್ಷಿಕ ಮಹೋತ್ಸವ ದಿನಗಳನ್ನು ಸೂಕ್ತ ಸಮಯದಲ್ಲಿ ಭಕ್ತಾದಿಗಳಿಗೆ ತಿಳಿಸಲಾಗುವುದು.

ಅಷ್ಟೇ ಅಲ್ಲದೆ ಭಕ್ತಾದಿಗಳು ಮತ್ತು ಸಾರ್ವಜನಿಕರು ದೈನಂದಿನ ಜೀವನದಲ್ಲಿ ಸರ್ಕಾರ ಮತ್ತು ಪೌರಾಡಳಿತ ನೀಡಿದ ಕೋವಿಡ್ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಹಕರಿಸಬೇಕಾಗಿ ವಿನಂತಿ” ಎಂದು  ಅತ್ತೂರು-ಕಾರ್ಕಳ ಸಂತ ಲಾರೆನ್ಸ್‌ ಪುಣ್ಯಕ್ಷೇತ್ರ ಬಸಿಲಿಕದ ಧರ್ಮಗುರು ವಿ.ಫಾದರ್ ಅಲ್ಬನ್ ಡಿಸೋಜಾ ಪ್ರಕಟಣೆ ಹೊರಡಿಸಿದ್ದಾರೆ.

 

Hot Topics

ಮಂಗಳೂರು: ಮಾಲೀಕನ ಎದುರೇ ಸ್ಕೂಟರ್‌ ಕದ್ದೊಯ್ದ ಕಳ್ಳ

ಮಂಗಳೂರು: ಮಾಲೀಕನ ಎದುರಿನಲ್ಲಿಯೇ ಕಳ್ಳನೊಬ್ಬ ಸ್ಕೂಟರ್‌ ಕಳವು ಮಾಡಿದ ಘಟನೆ ನಗರದಲ್ಲಿ ನಡೆದಿದೆ.ರಿನ್ಸ್‌ ಮೋನ್‌ ಕ್ಸೇವಿಯರ್‌ ಅವರು ಜ.7ರಂದು ಬೆಳಗ್ಗೆ 11.30ರ ವೇಳೆಗೆ ಪಾರ್ಸಲ್‌ ಬಸ್‌ಗೆ ನೀಡಲು ಜ್ಯೋತಿ ವೃತ್ತದ ಬಳಿ ಸ್ಕೂಟರ್‌...

ಮುಡಿಪು: ದ್ವಿಚಕ್ರ ವಾಹನಕ್ಕೆ ಒಂದೇ ತಿಂಗಳಲ್ಲಿ ಬರೋಬ್ಬರಿ 9 ಸಾವಿರ ಟ್ರಾಫಿಕ್ ಫೈನ್-ಬೆಚ್ಚಿಬಿದ್ದ ಮಾಲಕಿ

ಮುಡಿಪು: ಮೆಡಿಕಲ್ ಸ್ಟೋರ್ ಒಂದರ ಎದುರುಗಡೆ ನಿಲ್ಲಿಸಿದ್ದ ಒಂದೇ ದ್ವಿಚಕ್ರ ವಾಹನಕ್ಕೆ ಪೊಲೀಸರು ಒಂದೇ ತಿಂಗಳಲ್ಲಿ ಒಂಭತ್ತು ಸಾವಿರ ದಂಡ ವಿಧಿಸಿರುವ ಘಟನೆ ಮುಡಿಪು ಜಂಕ್ಷನ್‌ನಲ್ಲಿ‌ ನಡೆದಿದೆ.ಗಣೇಶ್ ಕಾಂಪ್ಲೆಕ್ಸ್‌ನಲ್ಲಿರುವ ಸಂಜೀವಿನಿ ಆಯುರ್ವೇದ ಮಡಿಕಲ್...

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿದ ಬಿಜೆಪಿ ಮುಖಂಡರು

ಬಂಟ್ವಾಳ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಇಂದು ಹಿರಿಯ ಮುಖಂಡರಾದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರ ಬಂಟ್ವಾಳದ ನಿವಾಸಕ್ಕೆ ಭೇಟಿ ಮಾಡಿ ಅವರ ಆರ್ಶೀವಾದ ಪಡೆದರು.ಈ ವೇಳೆ ರಾಜ್ಯ...