KADABA
ಕಡಬ: ತಂಗಿಯ ಮಗಳಿಗೆ ಮಾವನಿಂದಲೇ ಲೈಂಗಿಕ ಕಿರುಕುಳ-ಪೊಕ್ಸೋ ಪ್ರಕರಣ ದಾಖಲು
ಕಡಬ: ಸ್ವಂತ ತಂಗಿಯ ಮಗಳಿಗೆ ನಿರಂತರ ಕಿರುಕುಳ ಹಾಗೂ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಮಾವನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಠಾಣೆಯಲ್ಲಿ ಪೊಕ್ಸೊ ಪ್ರಕರಣ ಸೇರಿದಂತೆ ಇತರ ಪ್ರಕರಣಗಳು ದಾಖಲಾಗಿದೆ.
ಜಾನ್ ಬಂಧಿತ ಆರೋಪಿ. ವೃದ್ಧ ಅಜ್ಜಿಯ ಜೊತೆಯಲ್ಲಿ ವಾಸವಾಗಿರುವ ತಾಯಿ ಕಳೆದುಕೊಂಡ ಅಪ್ರಾಪ್ತ ಬಾಲಕಿ ತನ್ನ ತೋಟದಲ್ಲಿ ನೀರು ಹಾಯಿಸಲು ಸ್ಪಿಂಕ್ಲರ್ ಸೆಟ್ ಮಾಡುತ್ತಿದ್ದ ಸಂದರ್ಭದಲ್ಲಿ ಆಕೆಯ ಸ್ವಂತ ಮಾವ ಜಾನ್ ಎಂಬಾತನು ಬಂದು ಬಾಲಕಿಗೆ ಹಲ್ಲೆ ನಡೆಸಿ,
ನಾನು ನಿನ್ನನ್ನು ರೇಪ್ ಮಾಡುತ್ತೇನೆಂದು ನೀನು ಎಲ್ಲರೆದುರು ಹೇಳಿಕೊಂಡು ಬಂದಿದ್ದೀಯಾ, ಅದರಂತೆ ನಾನು ಈಗ ನಿನ್ನನ್ನು ನಿಜವಾಗಿಯೂ ರೇಪ್ ಮಾಡಿ ತೋರಿಸುತ್ತೇನೆ ಎಂದು ಹೇಳಿ, ಮಾನಭಂಗಕ್ಕೆ ಯತ್ನಿಸಿ, ಹಲ್ಲೆ ನಡೆಸಿರುವ ಬಗ್ಗೆ ದೂರಿನಲ್ಲಿ ವಿವರಿಸಲಾಗಿದೆ.
ಮಾವನ ಈ ನೀಚ ಕೃತ್ಯಕ್ಕೆ ಹೆದರಿದ ಬಾಲಕಿಯು ಕಿರುಚಿದ್ದು, ಈ ವೇಳೆ ಆಕೆಯ ಅಜ್ಜಿ ಧಾವಿಸಿ ಬಂದಿದ್ದಾರೆ.
ಈ ವೇಳೆ ತೋಟಕ್ಕೆ ಬಂದಿದ್ದ ಸಂತ್ರಸ್ತ ಯುವತಿಯ ಅಜ್ಜಿಗೂ ಆರೋಪಿ ಜಾನ್ ಕೈಯಿಂದ ಗುದ್ದಿ, ತಲೆಗೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ವೇಳೆ ಸ್ಥಳೀಯ ನೆರೆಕರೆಯ ಸಂಬಂಧಿಕ ಮಂದಿ ಘಟನಾ ಸ್ಥಳಕ್ಕೆ ಬಂದಿದ್ದು, ಆರೋಪಿಯ ಪತ್ನಿ ಶಿಕ್ಷಕಿಯಾಗಿರುವ ಜೆನ್ಸಿ ಎಂಬಾಕೆಯು ಬಾಲಕಿಗೆ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಸಂತ್ರಸ್ತ ಯುವತಿಯು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆದಿದ್ದು,
ಆಕೆಯು ನೀಡಿದ ದೂರಿನಂತೆ ಕಡಬ ಪೊಲೀಸರು ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಕೆಲವು ತಿಂಗಳ ಹಿಂದೆ ಆರೋಪಿ ಜಾನ್ಸನ್ ಹಾಗೂ ಆತನ ಪತ್ನಿ ಜೆನ್ಸಿ ತನ್ನ ಮೇಲೆ ಹಲ್ಲೆ ನಡೆಸಿರುವ ಮತ್ತು ತನಗೆ ಜೀವ ಬೆದರಿಕೆ ಇರುವ ಬಗ್ಗೆ ಬಾಲಕಿ ಜಿಲ್ಲಾ ಪೊಲೀಸ್ ಎಸ್.ಪಿಗೂ ದೂರನ್ನು ನೀಡಿದ್ದಳು.
DAKSHINA KANNADA
ಬೀದಿ ನಾಯಿಯನ್ನು ರಕ್ಷಿಸಲು ಹೋಗಿ ಉರುಳಿ ಬಿದ್ದ ಆಟೋ..!! ಚಾಲಕ ಗಂಭೀರ
ಕಡಬ: ನಾಯಿ ಒಂದು ಸಡನ್ ಆಗಿ ರಸ್ತೆಗೆ ಅಡ್ಡ ಬಂದ ಕಾರಣ ಅದೇ ರಸ್ತೆಯಲ್ಲಿ ಬರುತ್ತಿದ್ದ ಅಟೋ, ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ. ಅಟೋ ಉರುಳಿ ಬಿದ್ದ ಕಾರಣ ಅಟೋ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ಅಲಂಕಾರು ಗ್ರಾಮದ ಸುರುಳಿ ಎಂಬಲ್ಲಿ ಈ ಅಪಘಾತ ನಡೆದಿದ್ದು, ಅಟೋ ಚಾಲಕ ಸುಬ್ರಹ್ಮಣ್ಯ ನಾಯ್ಕ ಎಂಬವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸುಬ್ರಹ್ಮಣ್ಯ ನಾಯ್ಕ ಅವರು ಅಟೋ ಚಲಾಯಿಸಿಕೊಂಡು ಆಲಂಗಾರು ಕಡೆ ಬರುತ್ತಿದ್ದಾಗ ಇಕ್ಕಟ್ಟಾದ ರಸ್ತೆಯಲ್ಲಿ ನಾಯಿ ಒಂದು ಧಿಡೀರ್ ಆಗಿ ರಸ್ತೆಗೆ ಎಂಟ್ರಿ ಕೊಟ್ಟಿದೆ. ಈ ವೇಳೆ ನಾಯಿಯನ್ನು ರಕ್ಷಿಸಲು ತಕ್ಷಣ ಅಟೋದ ಬ್ರೇಕ್ ಹಿಡಿದಾಗ ಅಟೋ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಅಟೋದಲ್ಲಿ ಯಾವುದೇ ಪ್ರಯಾಣಿಕರು ಇಲ್ಲದ ಕಾರಣ ದೊಡ್ಡ ಅನಾಹುತ ನಡೆದಿಲ್ಲ. ಚಾಲಕ ಸುಬ್ರಹ್ಮಣ್ಯ ನಾಯ್ಕ ಅವರು ಕಾಲು ಮುರಿತಕ್ಕೆ ಒಳಗಾಗಿದ್ದಲ್ಲದೆ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಪುತ್ತೂರು ಆಸ್ಪತ್ರೆಗೆ ರವಾನಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
DAKSHINA KANNADA
ಕಡಬ ತಾಲೂಕು ಪಂಚಾಯತ್ ಕಚೇರಿಗೆ ಲೋಕಾಯುಕ್ತ ದಾಳಿ!
ಕಡಬ : ಕೊಡಗು ಜಿಲ್ಲೆಯ ಲೋಕಾಯುಕ್ತ ಪೊಲೀಸರು ಕಡಬದಲ್ಲಿ ದಾಳಿ ನಡೆಸಿ ಆಶ್ಚರ್ಯ ಮೂಡಿಸಿದ್ದಾರೆ. ಕಡಬ ತಾಲೂಕು ಪಂಚಾಯತ್ ಇಒ ಬಿ.ವಿ ಜಯಣ್ಣ ಅವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಕಡಬ ತಾಲೂಕು ಪಂಚಾಯತ್ ಇಒ ಆಗಿ ಜಯಣ್ಣ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದರು.
ಇದಕ್ಕೂ ಮೊದಲು ಸೋಮವಾರ ಪೇಟೆ ತಾಲೂಕ ಪಂಚಾಯತ್ ನಲ್ಲಿ ಅವರು ಇಒ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲಿರುವಾಗಲೇ ಇವರ ವಿರುದ್ಧ ಅಕ್ರಮ ಆಸ್ತಿಗಳಿಕೆಯ ದೂರು ದಾಖಲಾಗಿದ್ದು, ಆ ವಿಚಾರದ ತನಿಖೆಗೆ ಇಂದು ಕಡಬದಲ್ಲಿ ವಿಚಾರಣೆ ನಡೆಸಿದ್ದಾರೆ.
ಸೋಮವಾರಪೇಟೆಯ ಮನೆ, ಕಡಬದ ಕಚೇರಿ ಹಾಗೂ ಕಡಬದಲ್ಲೇ ಇರುವ ಜಯಣ್ಣ ಅವರ ಬಾಡಿಗೆ ಮನೆ ಮೇಲೆ ಏಕ ಕಾಲಕ್ಕೆ ದಾಳಿ ಮಾಡಲಾಗಿದೆ.
ಕೊಡಗು ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್, ಇನ್ಸ್ ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಇನ್ಸ್ ಪೆಕ್ಟರ್ ಶಶಿಕುಮಾರ್ ಹಾಗೂ ಸಿಬ್ಬಂದಿ ಜಯಣ್ಣ ಅವರ ವಿಚಾರಣೆ ನಡೆಸುತ್ತಿದ್ದಾರೆ.
DAKSHINA KANNADA
KADABA : ಆ್ಯಸಿಡ್ ದಾಳಿ ಪ್ರಕರಣ; ಸಹಕರಿಸಿದ ಇಬ್ಬರು ವಶಕ್ಕೆ
ಕಡಬ : ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣದಲ್ಲಿ ಮತ್ತಿಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೇರಳದಲ್ಲಿ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳನ್ನು ಕಡಬಕ್ಕೆ ಕರೆತಂದಿದ್ದಾರೆ.
ಮಾರ್ಚ್ 5 ರಂದು ಕಡಬದ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಮೇಲೆ ಕೇರಳ ಮೂಲದ ಅಬೀನ್ ಎಂಬ ಎಂಬಿಎ ವಿದ್ಯಾರ್ಥಿ ಆಸಿಡ್ ಎರಚಿ ಬಂಧಿತನಾಗಿದ್ದ. ಆರೋಪಿಗೆ ಅಸಿಡ್ ಎಲ್ಲಿಂದ ಸಿಕ್ಕಿತು ಅನ್ನೋ ವಿಚಾರವಾಗಿ ತನಿಖೆ ನಡೆಸಿದ ಪೊಲೀಸರು ಕೇರಳದ ಎರ್ನಾಕುಲಂ ಹಾಗೂ ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಾರ್ಯಾಚರಣೆ ನಡೆಸಿದ್ದರು.
ಪೊಲೀಸರು ವಶಕ್ಕೆ ಪಡೆದಿರುವವರಲ್ಲಿ ಒಬ್ಬಾತ ಆ್ಯಸಿಡ್ ಪೂರೈಕೆ ಮಾಡಿದ್ದರೆ, ಮತ್ತೋರ್ವ ವ್ಯಕ್ತಿ ಆರೋಪಿಗೆ ಸಮವಸ್ತ್ರ ಹೊಲಿದು ಕೊಟ್ಟಿದ್ದಾನೆ ಎನ್ನಲಾಗಿದೆ. ಇಬ್ಬರನ್ನೂ ಕಡಬಕ್ಕೆ ಕರೆ ತರಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.