Connect with us

LATEST NEWS

22ನೇ ವಯಸ್ಸಿಗೆ ಸಾಧನೆ; ಐಪಿಎಸ್ ಅಧಿಕಾರಿಯಾದ ಸಫಿನ್ ಹಸನ್

Published

on

ಮಂಗಳೂರು/ಗುಜರಾತ್ : ಸಫಿನ್ ಹಸನ್ 22ನೇ ವಯಸ್ಸಿಗೆ ಯುಪಿಎಸ್ಸಿ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾದ ಘಟನೆ ಗುಜರಾತ್‌ನ ಪಾಲನ್ ಪುರಿಯ ಕನೋದರ್‌ನಲ್ಲಿ ನಡೆದಿದೆ.

ಸಫಿನ್ ತಂದೆ-ತಾಯಿ ವಜ್ರ ಖನಿಜ ಕಂಪನಿಯೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಆದರೆ 2000 ದಲ್ಲಿ ತಂದೆ-ತಾಯಿ ಕೆಲಸವನ್ನು ಕಳೆದುಕೊಂಡ ಬಳಿಕ ಕುಟುಂಬ ತುಂಬಾ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗಿ ಬಂತು. ಸಫಿನ್ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಶಾಲೆಯು ಅವರ 11 ಮತ್ತು 12 ನೇ ತರಗತಿಗಳ ಶುಲ್ಕವನ್ನು ಮನ್ನಾ ಮಾಡಿತ್ತು. ನಿತ್ಯ ಬೆಳಗ್ಗೆ ಸಫನ್ ತಾಯಿ ಬೇರೆಯವರ ಮನೆಗೆ ಅಡುಗೆ ಕೆಲಸಕ್ಕೆ ತೆರಳಿ, ತಂದೆ ಇಟ್ಟಿಗೆಗಳನ್ನು ಸಾಗಿಸುವ ಕೆಲಸ ಮಾಡುತ್ತಿದ್ದರು.ಅಲ್ಲದೇ , ಪ್ರತೀ ರಾತ್ರಿ ವೇಳೆ ಅಂಗಡಿಯಲ್ಲಿ ಬೇಯಿಸಿದ ಮೊಟ್ಟೆಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಕುಟುಂಬದವರು ಭೋಧನಾ ಶುಲ್ಕ ನೀಡಿದ ಕಾರಣ ಸಫೀನ್ ಇಂಜಿನಿಯರಿಂಗ್ ಪೋರ್ಣಗೊಳಿಸಿದರು.

ಚಿಕ್ಕ ವಯಸ್ಸಿನಿಂದಲೇ ದೊಡ್ಡ ಅಧಿಕಾರಿಯಾಗುವ ಕನಸು ಕಂಡಿದ್ದ ಸಫೀನ್, ಶಾಲಾ, ಕಾಲೇಜುಗಳಲ್ಲಿ ಉತ್ತಮವಾಗಿ ವ್ಯಾಸಂಗ ಮಾಡುತ್ತಿದ್ದರು. 2017ರಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆಯಲು ಹೋಗುವಾಗ ದಾರಿ ಮಧ್ಯೆ ಭೀಕರ ಅಪಘಾತವಾಗಿ ಗಾಯಗೊಂಡಿದ್ದರೂ, ಎದೆಗುಂದದೆ ಪರೀಕ್ಷೆಗೆ ಹಾಜರಾಗಿದ್ದರು.

ತನ್ನ ಜೀವನದಲ್ಲಿ ಇಷ್ಟೆಲ್ಲಾ ಘಟನೆಗಳು ನಡೆದರೂ ದೃತಿಗೆಡದೆ ಸಫಿನ್ ಹಸನ್ 2018 ರಲ್ಲಿ 2ನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದರು. ಶ್ರಮಕ್ಕೆ ಪ್ರತಿಫಲವಾಗಿ 570 ನೇ ರ್‍ಯಾಂಕ್ ಗಳಿಸಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನಂತರ 2019ರ ಡಿಸೆಂಬರ್ 23ರಂದು ಜಾಮ್‌ನಗರ ಜಿಲ್ಲೆಯಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದು, ಇದೀಗ ಐಪಿಯಸ್ ಅಧಿಕಾರಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

LATEST NEWS

ಮಂಗಳೂರಿನಲ್ಲಿ ಘೋರ ದುರಂತ : `ಸ್ವಿಮ್ಮಿಂಗ್​ ಪೂಲ್’ ನಲ್ಲಿ ಮುಳುಗಿ ಮೂವರು ಯುವತಿಯರು ಸಾ*ವು!

Published

on

ಮಂಗಳೂರು : ಮಂಗಳೂರಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಮೂವರು ಯುವತಿಯರು ಈಜುಕೊಳದಲ್ಲಿ ಮುಳುಗಿ ಸಾ*ವನ್ನಪ್ಪಿರುವ ಘಟನೆ ನಡೆದಿದೆ.

ಮಂಗಳೂರಿನ ಉಚ್ಚಿಲ ಬಳಿಯ ಬೀಚ್ ನ ಖಾಸಗಿ ರೆಸಾರ್ಟ್ ನಲ್ಲಿ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾ*ವನ್ನಪ್ಪಿದ್ದಾರೆ.

ಮೃ*ತ ಯುವತಿಯರನ್ನು ಮೈಸೂರು ಮೂಲದವರು ಎಂದು ಗುರುತಿಸಲಾಗಿದ್ದು, ಕುರುಬರಹಳ್ಳಿಯ ನಿವಾಸಿ ನಿಶಿತಾ ಎಂಡಿ (21), ವಿಜಯನಗರದ ದೇವರಾಜ ಮೊಹಲ್ಲಾದ ಪಾರ್ವತಿ (20), ಮೈಸೂರಿನ ಕೆ.ಆರ್. ಮೊಹಲ್ಲಾದ ಕೀರ್ತನಾ (20) ಎಂದು ಗುರುತಿಸಲಾಗಿದೆ. ನಿನ್ನೆ ಬೆಳಗ್ಗೆ ಬೀಚ್ ರೆಸಾರ್ಟ್ ಗೆ ಆಗಮಿಸಿದ್ದರು.

Continue Reading

LATEST NEWS

BBK 11 : ಹೊರಗಿನ ಗುಟ್ಟು ರಟ್ಟು ಮಾಡಿ ಚೈತ್ರಾ ಎಡವಟ್ಟು; ಕಿಚ್ಚ ಕ್ಲಾಸ್

Published

on

BBK 11 :  ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ  ಬಣ್ಣ ಸಮಯಕ್ಕೆ ತಕ್ಕಂತೆ ಬದಲಾಗುವುದು, ಆಟಗಾರರ ನಡುವೆ ಜಗಳ – ಮನಸ್ತಾಪಗಳು, ಮನೆಯೊಳಗೆ ನೆಲೆಯೂರಲು ಆಡುವ ನಾಟಕಗಳು ಪ್ರತೀದಿನ ನಡೆಯುತ್ತಿರುತ್ತವೆ. ಆದರೆ, ಈ ವಾರದ ಎಲಿಮೀನೆಷನ್ ಗೂ ಮೊದಲು ಅಚ್ಚರಿಯ ಘಟನೆಯೊಂದು ನಡೆದಿತ್ತು.

ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಕೂಡಲೇ ಬಿಗ್ ಬಾಸ್ ತಂಡ ಚೈತ್ರಾ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದ್ದರು. ಇದೀಗ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಚೈತ್ರಾ ಬಿಗ್ ಬಾಸ್ ಮನೆಗೆ ವಾಪಸ್ಸಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಹೊರಗೆ ಹೋಗಿ ಬಂದ ಸ್ಪರ್ಧಿಗಳಿಗೆ ಹೆಚ್ಚಿನ ಮಾಹಿತಿ ಗೊತ್ತಿರಬಹುದು ಎಂಬ ಸಂಶಯ ಇರೋದು ಸಾಮಾನ್ಯ. ಅದೇ ರೀತಿ ಸಂಶಯ ಚೈತ್ರಾ ಹೊರಗಡೆ ಹೋಗಿ ಬಂದಾಗಿನಿಂದ ಉಗ್ರಂ ಮಂಜು ತಲೆಯಲ್ಲಿ ಕೊರೆಯುತ್ತಿತ್ತು. ಹೀಗಾಗಿ ಚೈತ್ರಾರನ್ನು ಮಂಜು ಪ್ರಶ್ನಿಸಿದ್ದಾರೆ.

ಬಿಗ್ ಬಾಸ್ ಮನೆಯ ಹೊರಗಡೆ ಜನರ ಅಭಿಪ್ರಾಯದ ಕುರಿತು ಚೈತ್ರಾ ಹಾಗೂ ಮಂಜು ನಡುವೆ ದೊಡ್ಡ ಚರ್ಚೆ ನಡೆದಿದೆ. ಈ ವೇಳೆ ಚೈತ್ರಾ ಮೂರು ದಿನದಿಂದ ವಾತಾವರಣ ಕಂಪ್ಲೀಟ್ ಚೆಂಜ್ ಇದೆ ಎಂದಿದ್ದಾರೆ. ಇದಕ್ಕೆ ಮಂಜು, ಇಲ್ಲಿಯ ವಾತವರಣ ಹೇಗಿದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಚೈತ್ರಾ, ನಾನು ಹೇಳಂಗಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ಮತ್ತೆ ಬಿಗ್ ಬಾಸ್‌ಗೆ ಎಂಟ್ರಿ ಕೊಡಲಿದ್ದಾರೆ ಲಾಯರ್ ಜಗದೀಶ್

ಮುಂದುವರಿದು ಮಾತನಾಡಿದ ಮಂಜು, ರೆಕ್ಕೆ ಏನಾದರೂ ಜಾಸ್ತಿ ಅಗಲ ಇದೆಯಾ, ಜಾಸ್ತಿ ಮುಚ್ಚಿಕೊಂಡು ಇದೆಯಾ ಎಂದು ಮತ್ತೆ ಪ್ರಶ್ನಿಸಿದ್ದಾರೆ. ಇದಕ್ಕೆ ಕೌಂಟರ್ ಕೊಟ್ಟ ಚೈತ್ರಾ, ರೆಕ್ಕೆ ಮುರಿದು ಹೋಗಿದೆ ಎಂದಿದ್ದಾರೆ.  ಹೀಗೆ ಚೈತ್ರಾ ಹಾಗೂ ಮಂಜು ನಡುವೆ ಪಿಸು ಮಾತಿನ ಸಂಭಾಷಣೆ ನಡೆದಿದೆ. ಇನ್ನೂ ಪಿಸು ಮಾತಿನಲ್ಲೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಬಗ್ಗೆ ಜನರ ಅಭಿಪ್ರಾಯ ಹೇಗಿದೆ ಅನ್ನುವ ಸಂದೇಶ ನೀಡಲು ಯತ್ನಿಸುತ್ತಿರುವಾಗ ಬಿಗ್ ಬಾಸ್, ಚೈತ್ರಾ ನೀವು ಪಿಸು ದನಿಯಲ್ಲಿ ಮಾತನಾಡುವಂತಿಲ್ಲ ಎಂದು ಎಚ್ಚರಿಸಿದ್ದಾರೆ. ಬಿಗ್‌ ಬಾಸ್‌ ಆದೇಶ ನೀಡಿದ ಮೇಲೂ ಚೈತ್ರಾ  ಕಥೆಯ ರೂಪದಲ್ಲಿ ಇಂಡೈರೆಕ್ಟ್ ಆಗಿ ಹೊರಗಿನ ವಿಚಾರವನ್ನು ಹಂಚಿಕೊಂಡಿದ್ದರು. ಇದರಿಂದ ಬಿಗ್ ಬಾಸ್ ಗರಂ ಆಗಿದ್ದಾರೆ.

ಸುದೀಪ್ ಕ್ಲಾಸ್ :

ಸುದೀಪ್ ಕ್ಲಾಸ್ :

ಕಥೆಯನ್ನು ಹೇಳುತ್ತಾ ಎಲ್ಲರ ತಲೆಯಲ್ಲಿ ಹುಳ ಬಿಟ್ಟ ಕಾರಣ ಕಿಚ್ಚ ಸುದೀಪ್ ಚೈತ್ರಾ ಮೇಲೆ ಕೋಪಗೊಂಡಿದ್ದರು. ವಾರದ ಕಥೆಯಲ್ಲಿ ಕಿಚ್ಚ ಚೈತ್ರಾಗೆ ಕ್ಲಾಸ್ ತಗೊಂಡಿದ್ದಾರೆ. ಬಿಗ್‌ ಬಾಸ್‌ ವಾರ್ನಿಂಗ್‌ ನೀಡಿದ ಮೇಲೂ ಚೈತ್ರಾ ಈ ರೀತಿ ಮಾಡಿರುವುದು ಕಿಚ್ಚ ಕೋಪ ನೆತ್ತಿಗೇರಿಸಿದೆ. ಇಂತಹ ಕಥೆ ಯಾಕೆ ಹೇಳಿದ್ರಿ ಎಂದು ಕಿಚ್ಚ ಕೇಳಿದ್ದಕ್ಕೆ, ಆಸ್ಪತ್ರೆಯಲ್ಲಿ ಡಾಕ್ಟರ್, ನರ್ಸ್ ಹೇಳಿದ್ದನ್ನು ಹೇಳಿದೆ ಎಂದು ಚೈತ್ರಾ ಸಮರ್ಥಿಸಿಕೊಂಡಿದ್ದಾರೆ. ಕೋಪಗೊಂಡ ಕಿಚ್ಚ ತರಾಟೆಗೆ ತೆಗೆದುಕೊಂಡಿದ್ದು ಮಾತ್ರವಲ್ಲದೇ, ಚೈತ್ರಾಗೆ ಎಸಿಕೆ ಅಂದ್ರೆ ಅಮರ ಚಿತ್ರ ಕಥಾ ಎಂಬುದಾಗಿ ಹೆಸರಿಟ್ಟಿದ್ದಾರೆ.

Continue Reading

LATEST NEWS

ನ.21 ರಿಂದ ರಾಷ್ಟ್ರ ರಾಜಧಾನಿಯಲ್ಲೂ ಸಿಗಲಿದೆ ನಂದಿನಿ ಹಾಲು, ಮೊಸರು

Published

on

ಬೆಂಗಳೂರು:- ನಾನು ನಂದಿನಿ ಡೆಲ್ಲಿಗೆ ಹೊಂಟೀನಿ ಎಂಬಂತೆ ಕರ್ನಾಟಕದ ಹೆಮ್ಮೆಯ ನಂದಿನಿ ಇನ್ಮುಂದೆ ದೇಹಲಿಯಲ್ಲೂ ಸಿಗಲಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನವೆಂಬರ್ 21ರಿಂದ ದೆಹಲಿಯಲ್ಲಿ ನಂದಿನ ಹಾಲಿನ ಉತ್ಪನ್ನಗಳು ಲಭ್ಯ ಆಗಲಿವೆ.

ಆರಂಭಿಕ ಹಂತದಲ್ಲಿ ನಿತ್ಯ 1 ಲಕ್ಷ ಲೀಟರ್ ಹಾಲನ್ನು ದೆಹಲಿಗೆ ಪೂರೈಸಲು ಕೆಎಂಎಫ್ ಮುಂದಾಗಿದೆ. ಹಸುವಿನ ಹಾಲು ಪೂರೈಸುವಂತೆ ಕೆಎಂಎಫ್‍ಗೆ ದೆಹಲಿ ಸರ್ಕಾರ ಮನವಿ ಮಾಡಿತ್ತು. ಈ ಸಂಬಂಧ ಕಳೆದ ನಾಲ್ಕೈದು ತಿಂಗಳಿಂದ ದೆಹಲಿ ಸರ್ಕಾರದ ಜೊತೆ ಕೆಎಂಎಫ್ ಮಾತುಕತೆ ನಡೆಸುತ್ತಿತ್ತು.

29 ವರ್ಷದ ಹಿಂದೆಯೇ ದೆಹಲಿಗೆ ಕೆಎಂಎಫ್ ಹಾಲನ್ನು ಪೂರೈಸುತ್ತಿತ್ತು. ಇದು ಕಾರಣಾಂತರಗಳಿಂದ ನಂತರದ ದಿನಗಳಲ್ಲಿ ಸ್ಥಗಿತಗೊಂಡಿತ್ತು. ಇದೀಗ ದೆಹಲಿಯಲ್ಲಿ ಚಾಲ್ತಿಯಲ್ಲಿರುವ ಅಮೂಲ್, ಮದರ್ ಡೈರಿಗೆ ಕೆಎಂಎಫ್ ಪೈಪೋಟಿ ನೀಡಲಿದೆ.

Continue Reading

LATEST NEWS

Trending

Exit mobile version