Connect with us

BELTHANGADY

ಬೆಳ್ತಂಗಡಿ: ಅರಣ್ಯಾಧಿಕಾರಿಗಳಿಂದ ಲಂಚಕ್ಕೆ ಬೇಡಿಕೆ ಹಣ ಕೊಡದಿದ್ದಾಗ ಜಾತಿ ನಿಂದನೆ-ಎಫ್‌ಐಆರ್‌ ದಾಖಲು

Published

on

ಬೆಳ್ತಂಗಡಿ: ಕೃಷಿಗಾಗಿ ಜಮೀನಿನಲ್ಲಿರುವ ಮರ ಕಡಿಯುತ್ತಿರುವ ವೇಳೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು 5 ಲಕ್ಷ ರೂ ಲಂಚಕ್ಕೆ ಬೇಡಿ ಇಟ್ಟು, ಹಣ ಕೊಡದಿದ್ದಾಗ ಜಾತಿ ನಿಂದನೆ ಮಾಡಿದ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಂಧರ್ಬಿಕ ಚಿತ್ರ

ದೂರಿನ ವಿವರ
ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕಜೆ ಎಂಬಲ್ಲಿ ತನ್ನದೇ ಸ್ವಾಧೀನದಲ್ಲಿರುವ ವ್ಯಕ್ತಿಯೋರ್ವರ ಜಮೀನಿನಲ್ಲಿ ಅಡಿಕೆ ಕೃಷಿ ಮಾಡುವ ಉದ್ದೇಶದಿಂದ ಆ ಭೂಮಿಯಲ್ಲಿ ಹೆಬ್ಬಲಸು, ಬಣ್ಪು, ರಾಮಪತ್ರೆ ಹಾಗೂ ಮಾವು ಮರಗಳಿದ್ದು, ಗೇರು ಕೃಷಿ ಕೂಡ ಇತ್ತು. ಗೇರು ಕೃಷಿ ಲಾಭ ಇಲ್ಲದೆ ಇದ್ದುದರಿಂದ ಆ ಮರಗಳನ್ನು ಕಡಿದಿರುತ್ತಾರೆ.

2021ರ ಡಿ.9ರಂದು ವಾಹನದಲ್ಲಿ ಕಡಿದ ಮರವನ್ನು ಹೊರಗಡೆ ಸಾಗಾಟ ಮಾಡಿ ರಾಶಿ ಹಾಕುತ್ತಿದ್ದ ವೇಳೆ ಅರಣ್ಯ ಇಲಾಖೆಯ ಆಧಿಕಾರಿಗಳು ಸ್ಥಳಕ್ಕೆ ಬಂದು ಕಡಿದು ಹಾಕಿದ ಮರ ಹಾಗೂ ವಾಹನವನ್ನು ಜಪ್ತಿ ಮಾಡಿದ್ದಾರೆ.

ಜೊತೆ ಜಾಗದ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಮರುದಿನ ಅಂದರೆ 2021ರ ಡಿ.10 ರಂದು ಯಾವುದೇ ನೋಟೀಸನ್ನು ನೀಡದೇ ಮತ್ತೆ ಅದೇ ಜಮೀನಿಗೆ ಅರಣ್ಯಾಧಿಕಾರಿಗಳು ಅಕ್ರಮ ಪ್ರವೇಶ ಮಾಡಿದ್ದಾರೆ.

ನಂತರ ಜಮೀನಿನ ಮಾಲೀಕ ಹಾಗೂ ಆತನ ತಾಯಿಯನ್ನು ಸ್ಥಳಕ್ಕೆ ಬರಹೇಳಿ ವಿಚಾರಿಸಿ ಮರಗಳನ್ನು ಅರಣ್ಯ ಇಲಾಖಾಧಿಕಾರಿಗಳು ವಶಪಡಿಸಿಕೊಂಡು ಡಿಪ್ಪೋಗೆ ಸಾಗಿಸಿದ್ದಾರೆ.

ಜೊತೆಗೆ ಮತ್ತಷ್ಟು ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಸಿ 5,00,000 ಲಕ್ಷ ರೂ ಬೇಡಿಕೆ ಇಟ್ಟಿದ್ದಾರೆ.

ಆಗ ಜಮೀನು ಮಾಲೀಕ ಹಣ ನೀಡಲು ಸಾಧ್ಯವಿಲ್ಲ ಎಂದಾಗ ಆತನನ್ನು ಬೆದರಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಜಮೀನು ಮಾಲೀಕ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

BELTHANGADY

ದ್ವಿಚಕ್ರ ವಾಹನಕ್ಕೆ ಪಿಕ್‌ಅಪ್ ಡಿ*ಕ್ಕಿ ಹೊಡೆದು ಪರಾರಿ..! ಸವಾರ ಸ್ಪಾಟ್ ಡೆ*ತ್..!

Published

on

ಬೆಳ್ತಂಗಡಿ: ದ್ವಿಚಕ್ರ ವಾಹನಕ್ಕೆ ಪಿಕಪ್ ಡಿ*ಕ್ಕಿ ಹೊಡೆದು ದ್ವಿಚಕ್ರ ಸವಾರ ಮೃತಪಟ್ಟ ಘಟನೆ  ಬೆಳ್ತಂಗಡಿಯ ವಾಣಿ ಕಾಲೇಜು ಬಳಿ ಮಾ.25ರಂದು ಮಧ್ಯಾಹ್ನ ನಡೆದಿದೆ.

ಗುರುವಾಯನಕೆರೆಯಿಂದ ಬೆಳ್ತಂಗಡಿಗೆ ದ್ವಿಚಕ್ರವಾಹದಲ್ಲಿ ಬರುತ್ತಿದ್ದ ವೇಳೆ ಬೆಳ್ತಂಗಡಿಯಿಂದ ಹೋಗುತ್ತಿದ್ದ ಪಿಡ್‌ಅಪ್ ಡಿಕ್ಕಿ ಹೊಡೆದಿದೆ.  ಘಟನೆಯಿಂದ ದ್ವಿಚಕ್ರ ವಾಹನ ಸವಾರ ಪುರುಷೋತ್ತಮ(19 ವ)ರವರು ಸ್ಥಳದಲ್ಲೇ ಮೃ*ತಪಟ್ಟಿದ್ದಾರೆ. ದ್ವಿಚಕ ವಾಹನದಲ್ಲಿದ್ದ ಇನ್ನೋರ್ವ ಸಹಸವಾರ ತೌಫಿಕ್(18 ವ) ಗಂಭೀರ ಗಾಯಗೊಂಡಿದ್ದು ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿಕ್ಕಿ ಹೊಡೆದ ಪಿಕ್‌ ಅಪ್ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದೆ. ಪಿಕ್‌ಅಪ್ ಡಿ*ಕ್ಕಿ ಹೊಡೆದ ರಭಸಕ್ಕೆ ಯುವಕರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಈ ವೇಳೆ ಲಾಯಿಲ ರಾಘವೇಂದ್ರ ನಗರದ ನಿವಾಸಿ ದಿ.ಜಯರಾಮ ಎಂಬವರ ಪುತ್ರ ಪುರುಷೋತ್ತಮ ಸ್ಥಳದಲ್ಲೇ ಅಸುನೀಗಿದ್ದಾರೆ. ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

 

Continue Reading

BELTHANGADY

ಬೆಳ್ತಂಗಡಿ: ಬೊಳ್ಮಿನಾರು ಅರಣ್ಯ ಪರಿಸರದಲ್ಲಿ ಅಸ್ಥಿಪಂಜರದ ಸ್ಥಿತಿಯಲ್ಲಿ ವ್ಯಕ್ತಿಯ ಶ*ವ ಪತ್ತೆ..!

Published

on

ಬೆಳ್ತಂಗಡಿ: ಇಲ್ಲಿನ ಪುದುವೆಟ್ಟು ಗ್ರಾಮದ ಬೊಳ್ಮಿನಾರು, ಅರಣ್ಯ ಪರಿಸರದಲ್ಲಿ ಬುಧವಾರ(ಮಾ.20) ಅಸ್ತಿಪಂಜರ ಸ್ಥಿತಿಯಲ್ಲಿ ಓರ್ವ ವ್ಯಕ್ತಿಯ ಶ*ವ ಪತ್ತೆಯಾಗಿದೆ. ಸ್ಥಳದಲ್ಲಿ ದೊರೆತ ಆಧಾರ್ ಕಾರ್ಡ್ ಹಾಗೂ ಇತರ ಸ್ವತ್ತುಗಳ ಪ್ರಕಾರ ಮೃತ ವ್ಯಕ್ತಿಯನ್ನು ಕಳೆಂಜಗ್ರಾಮದ ಕಾಯರ್ತಡ್ಕದ ರಾಜು ಜೋಸೆಫ್ ಎಂದು ಗುರುತಿಸಲಾಗಿದೆ.

ಬುಧವಾರ ಮಧ್ಯಾಹ್ನದ ವೇಳೆ ಅರಣ್ಯ ಪ್ರದೇಶದಿಂದ ಸೊಪ್ಪು ತರಲು ತೆರಳಿದ್ದ ಸ್ಥಳೀಯರು ರಸ್ತೆಯಿಂದ ಸುಮಾರು 100 ಮೀಟರ್ ದೂರ ಪ್ರದೇಶದಲ್ಲಿ ಮಲಗಿರುವ ಸ್ಥಿತಿಯಲ್ಲಿದ್ದ ಶವವನ್ನು ಗುರುತಿಸಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳದಲ್ಲಿ ಮದ್ಯದ ಬಾಟಲ್ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಸಿಕ್ಕಿದ ದಾಖಲೆಗಳ ಪ್ರಕಾರ ರಾಜು ಅವರ ಮನೆಯವರನ್ನು ಸ್ಥಳಕ್ಕೆ ಕರೆಯಿಸಿದ್ದು ಅಲ್ಲಿದ್ದ ಬ್ಯಾಗ್‌ ಹಾಗೂ ಆಧಾರ್ ಕಾರ್ಡ್ ಆಧಾರದಲ್ಲಿ ಮೃತಪಟ್ಟ ವ್ಯಕ್ತಿ ರಾಜು ಎಂದು ಮನೆಯವರು ಸ್ಪಷ್ಟಪಡಿಸಿದ್ದಾರೆ.

ರಾಜು ಅವರು ಕೆಲವು ವರ್ಷಗಳ ಹಿಂದೆಯೇ ಮನೆ ಬಿಟ್ಟಿದ್ದರು ಎಂದು ಮನೆಯವರು ತಿಳಿಸಿದ್ದಾರೆ. ಪೊಲೀಸರು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಲಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Continue Reading

BELTHANGADY

ಆಡಿನ ಮರಿಗಳನ್ನು ಕಾರಿಗೆ ಹಾಕಿಕೊಂಡ್ರು… ಆಮೇಲೆ ನಡೆದಿದ್ದೇ ಬೇರೆ..!

Published

on

ಕೊಟ್ಟಿಗೆಹಾರ : ರಸ್ತೆ ಬದಿಯಲ್ಲಿ ಮೇಯುತ್ತಿದ್ದ ಆಡು ಹಾಗೂ ಮರಿಗಳನ್ನು ಕಾರಿನಲ್ಲಿ ಹಾಕಿ ತೆಗೆದುಕೊಂಡು ಹೋದ ಕುಟುಂಬವನ್ನ ಜನರು ಅಡ್ಡಗಟ್ಟಿ ಹ*ಲ್ಲೆ ಮಾಡಿದ ಘಟನೆ ಕೊಟ್ಟಿಗೆಹಾರದ ಸಮೀಪ ನಡೆದಿದೆ. ಜಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರದ ಅತ್ತಿಗೆರೆ ಎಂಬಲ್ಲಿ ಈ ಘಟನೆ ನಡೆದಿದೆ. ಆಡು ಹಾಗೂ ಮರಿಯನ್ನು ಕಾರಿನಲ್ಲಿ ಹಾಕಿ ತೆಗೆದುಕೊಂಡು ಹೋದ ವಿಚಾರ ತಿಳಿದ ಆಡಿನ ಮಾಲೀಕ ಸಾರ್ವಜನಿಕರ ಜೊತೆ ಕಾರನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಜನರು ಕಾರಿನ ಗಾಜು ಪುಡಿ ಮಾಡಿದ್ದು, ಕಾರಿನ ಒಳಗಿದ್ದ ಕುಟುಂಬಕ್ಕೆ ಗಾಯಗಳಾಗಿದೆ.

goat theft

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜಬೀವುಲ್ಲಾ ಹಾಗೂ ಅವರ ಕುಟುಂಬ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ದಾರಿಯಲ್ಲಿ ಕಂಡ ಆಡು ಹಾಗೂ ಮರಿಗಳನ್ನು ಕಾರಿನಲ್ಲಿ ಹಾಕಿಕೊಂಡು ಹೋಗಿದ್ದರು. ಇದನ್ನು ನೋಡಿದ ಸ್ಥಳೀಯರೊಬ್ಬರು ಆಡಿನ ಮಾಲೀಕರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿದ ಜನರು ಈ ಕೃತ್ಯ ಎಸಗಿದ್ದಾರೆ. ಕಾರಿನಲ್ಲಿ ಮಕ್ಕಳು , ಮಹಿಳೆಯರಿದ್ದರೂ ಕೆಟ್ಟದಾಗಿ ವರ್ತಿಸಿ ಕಾರಿನ ಗಾಜು ಪುಡಿಗೈದು ಕಾರಿನಲ್ಲಿದ್ದವರನ್ನು ಅ*ವ್ಯಾಚ ಪದಗಳಿಂದ ನಿಂಧಿಸಿದ್ದಾರೆ. ಬಳಿಕ ಬಣ್ಕಲ್ ಪೊಲೀಸರಿಗೆ ಮಾಹತಿ ನೀಡಿ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು, ಆಡು ಹಾಗೂ ಮರಿಗಳನ್ನು ಕದ್ದ ಆರೋಪದಲ್ಲಿ ಕಾರಿನಲ್ಲಿದ್ದ ಕುಟುಂಬದ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ. ಆದ್ರೆ ಈ ರೀತಿ ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ ಸಾರ್ವಜನಿಕರ ಮೇಲೆ ಯಾಕೆ ಕೇಸು ದಾಖಲಿಸಿಲ್ಲ ಅನ್ನೋದು ಪ್ರಶ್ನೆಯಾಗಿದೆ.

Continue Reading

LATEST NEWS

Trending