ಸಿಡ್ನಿ: ತುಳುನಾಡ ವಿಶೇಷ ಹಬ್ಬ ಆಟಿಡೊಂಜಿ ದಿನವನ್ನು ಆಸ್ಟ್ರೇಲಿಯಾದಲ್ಲಿ ನೆಲೆಯಾಗಿರುವ ತುಳುವರು ಸಿಡ್ನಿಯಲ್ಲಿ ಜು.17ರಂದು ಸಂಭ್ರಮದಿಂದ ಆಚರಿಸಿದರು.
ಇದರಲ್ಲಿ ತುಳುನಾಡ ಖಾದ್ಯಗಳಾದ ಕುಡುಸಾರು, ಕುಡುಚಟ್ನಿ, ಸೇಮೆ, ಕೋರಿ ಸುಕ್ಕ, ಕೋರಿ ಗಸಿ, ಪುಂಡಿ, ಸೇಮೆದಡ್ಯೆ, ಶಾವಿಗೆ ಹಾಲು ಸೇರಿ 14ಕ್ಕೂ ಹೆಚ್ಚು ಭಕ್ಷ್ಯ ಭೋಜನ ಉಣಬಡಿಸಿದರು.
ತುಳುಕೂಟ ಸಿಡ್ನಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಶೃತಿ, ಮೇಘನಾ, ರಂಜೀತಾ, ವೀಣಾ ಹಾಗೂ ಶ್ರೇಯಾ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂಭ್ರಮದಲ್ಲಿ ಮಕ್ಕಳಿಂದ ಹಿಡಿದು ಹಿರಿಯರ ತನಕ 150ಕ್ಕೂ ಹೆಚ್ಚು ತುಳುವರು ಭಾಗಿಯಾಗಿದ್ದರು.
ಸಮಾರಂಭದಲ್ಲಿ ಮಾತನಾಡಿದ ಸುರೇಶ್ ಪೂಂಜಾ, ಆಟಿಯ ಮಹತ್ವ ವಿವರಿಸಿ, ತುಳು ಸಂಸ್ಕೃತಿಯನ್ನು ಉಳಿಸುವ ಬಗ್ಗೆ ಯುವಕರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಕರೆ ನೀಡಿದರು. ನಂತರ ಹಲವು ಪಂದ್ಯಾಟಗಳನ್ನು ಆಯೋಜಿಸಿದ್ದರು.
ಅವಕಾಶ್ ಹಾಗೂ ಸುಮಿತ್ ವಂದಿಸಿದರು. ಕಾರ್ಯಕ್ರಮದ ಪ್ರಾಯೋಜಕತ್ವದ ‘ಸಿಡ್ನಿ ಸ್ಪೋರ್ಟ್ ಕ್ಲಬ್’ನ ಸುಪ್ರೀತ್ ಶಂಭು ಸೇರಿ ಹಲವರ ಸಹಕಾರವನ್ನು ಸ್ಮರಿಸಿದರು. ಅಕ್ಷತಾ ಅವರು ಪ್ರಾರ್ಥನಾ ಗೀತೆ ಹಾಡಿದರು.
Congratulations Punja..& Australian Tuluvas. keep it up
Namaskara materegla a
Rameshchandra from Team iIlesa Bangalore
Tulu karyakrama bhari edde athund nama jokuleg namma bhasheda arivu mast malpodu ayk enchina karyakramolu avonduppudo dever edde malpad all the best good day
Congratulations Australian TULUVAS.