Friday, August 19, 2022

ಮಂಗಳೂರು: ನೈಟ್‌ ರೌಂಡ್ಸ್‌ನಲ್ಲಿದ್ದ ಪೊಲೀಸರ ಮೇಲೆ ಕುಡಿದು ಹಲ್ಲೆ-ಮೂವರ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ಬಗ್ಗೆ ಪ್ರಶ್ನಿಸಿದ ಪೊಲೀಸ್‌ ಸಿಬ್ಬಂದಿಗೆ ತಂಡವೊಂದು ಹಲ್ಲೆ ನಡೆಸಿ ಪರಾರಿಯಾದ ಘಟನೆ ಉರ್ವಾ ಪೊಲೀಸ್‌ ಠಾಣಾ ವ್ಯಾಪ್ತಿಯ ಚಿಲಿಂಬಿ ಗುಡ್ಡದಲ್ಲಿ ಜೂ.20 ರ ತಡರಾತ್ರಿ ನಡೆದಿದೆ. ಘಟನೆ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ವೃಕ್ಷಿತ್‌, ದುರ್ಗೇಶ್‌ ಹಾಗೂ ಪ್ರಜೀತ್‌ ಎಂದು ಗುರುತಿಸಲಾಗಿದೆ.


ಘಟನೆ ವಿವರ
ಜೂ.20 ರಂದು ಮಧ್ಯರಾತ್ರಿ 1.30 ರ ಸುಮಾರಿಗೆ ಉರ್ವಾ ಪೊಲೀಸ್‌ ಠಾಣಾ ವ್ಯಾಪ್ತಿಯ ಸಿಬ್ಬಂದಿ ನೈಟ್‌ ರೌಂಡ್ಸ್‌ ಹೋಗುತ್ತಿದ್ದ ವೇಳೆ ನಗರದ ಚಿಲಿಂಬಿ ಗುಡ್ಡದ ಸಾರ್ವಜನಿಕ ಪ್ರದೇಶದಲ್ಲಿ 8 ಜನ ಯುವಕರ ತಂಡ ಸಾಮೂಹಿಕ ಮದ್ಯಪಾನ ಮಾಡುತ್ತಿದ್ದರು. ಇದನ್ನು ಕಂಡ ಪೊಲೀಸ್‌ ಸಿಬ್ಬಂದಿ ವೆಂಕಟೇಶ್‌ ಹಾಗೂ ಧನಂಜಯ್‌ ಅವರ ಬಳಿ ಹೋಗಿ ಪ್ರಶ್ನಿಸಿದ್ದಾರೆ.

ಈ ವೇಳೆ ಅವರೊಂದಿಗೆ ದುರ್ವತನೆ ತೋರಿ ಹಲ್ಲೆ ನಡೆಸಿ ಸ್ಥಳದಿಂದ ತಂಡ ಪರಾರಿಯಾಗಿದ್ದು, ಘಟನೆಯಲ್ಲಿ ಇಬ್ಬರು ಸಿಬ್ಬಂದಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಆ.22ರಂದು ನಾಡದೋಣಿ ಎಂಜಿನ್ ತಪಾಸಣೆ

ಮಂಗಳೂರು: 2022-23ನೇ ಸಾಲಿಗೆ ಮೀನುಗಾರಿಕೆ ಉದ್ದೇಶಕ್ಕಾಗಿ ಬಳಸುವ ಸೀಮೆಎಣ್ಣೆಯ ಪರವಾನಿಗೆಯನ್ನು ನವೀಕರಿಸುವ ಹಿನ್ನಲೆಯಲ್ಲಿ ನಾಡದೋಣಿ ಎಂಜಿನ್ ತಪಾಸಣೆ ಆ.22ರ ಸೋಮವಾರ ನಡೆಯಲಿದೆ.ದೋಣಿ ಮಾಲಕರು ದೋಣಿಯ ನೋಂದಣಿ ಪತ್ರದ ಪ್ರತಿ, ಆಧಾರ್ ಪ್ರತಿ ಮತ್ತು...

ಸುರತ್ಕಲ್‌ನಲ್ಲಿ ಕತ್ತಿ ಬೀಸಿ ಹುಚ್ಚಾಟ: ಓರ್ವನ ಬಂಧನ

ಮಂಗಳೂರು: ದಾರಿ ಮಧ್ಯೆ ಕತ್ತಿ ಬೀಸಿ ಹುಚ್ಚಾಟ ನಡೆಸಿದ ಜಾರ್ಖಾಂಡ್‌ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮಂಗಳೂರು ಹೊರ ವಲಯದ ಸುರತ್ಕಲ್ ಸಮೀಪದ ಕಾನದಲ್ಲಿ ನಡೆದಿದೆ.ಅತಲ್ ಕುಲ್ಲು (30) ಬಂಧಿತ...

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದನ್ನು ಖಂಡಿಸಿ ಆ.26 ರಂದು ಮಡಿಕೇರಿ ಎಸ್‌ಪಿ ಕಚೇರಿಗೆ ಮುತ್ತಿಗೆ

ಬೆಂಗಳೂರು: ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಮಡಿಕೇರಿ ಭೇಟಿ ವೇಳೆ ಮೊಟ್ಟೆ ಎಸೆದ ಪ್ರಕರಣವನ್ನು ಕಾಂಗ್ರೆಸ್‌ ಖಂಡಿಸಿದ್ದು, ಆ.26 ರಂದು ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್‌ ಕಾರ್ಯಕರ್ತರು ನಿರ್ಧರಿಸಿದ್ದಾರೆ.ಈ...