Tuesday, August 16, 2022

ಬೈಂದೂರು: ಮಹಿಳೆ ಹಾಗೂ ಗಂಡನ ಪಾಲಿಗೆ ರಾಕ್ಷಸನಾದ ಮೈದುನ

ಬೈಂದೂರು: ಮಹಿಳೆ ಹಾಗೂ ಆಕೆಯ ಗಂಡನಿಗೆ ತನ್ನ ಮೈದುನನೇ ತಂಡದೊಂದಿಗೆ ದಾಳಿ ನಡೆಸಿ ತಲವಾರಿನಿಂದ ಕೊಲೆಗೆ ಯತ್ನಿಸಿದ ಘಟನೆ ಬೈಂದೂರಿನ ನಾವುಂದ ಗ್ರಾಮದ, ಚಾತನಕೆರೆ ಎಂಬಲ್ಲಿ ನಿನ್ನೆ ನಡೆದಿದೆ.

ಘಟನೆ ವಿವರ

ಸಬೀನಾ ಅವರ ಗಂಡನ ಅಕ್ಕನ ಮಗನಾದ ಸಿಯಾಬ್‌ ಎಂಬಾತ ತನ್ನ ಸ್ನೇಹಿತರ ಜೊತೆ ಸೇರಿ ಮನೆಯಲ್ಲಿಯೇ ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದನು. ಈ ಬಗ್ಗೆ ಆಕೆಯ ಗಂಡ ಹಾಗೂ ಸಬೀನಾ ಸಿಯಾಬ್‌ಗೆ ಬುದ್ದಿ ಹೇಳುತ್ತಿದ್ದರು.

ಈ ವೇಳೆ ಮಧ್ಯೆ ಬಂದ ಅತ್ತೆ ಖತೀಜಾ ಅವರು ಸಿಯಾಬ್‌ನನ್ನು ಬೆಂಬಲಿಸಿ ಮಾತನಾಡುತ್ತಿದ್ದರು. ಅದರಂತೆ ನಿನ್ನೆ ಬೆಳಿಗ್ಗೆ 9 ಗಂಟೆಗೆ ಸಬೀನಾ ಮನೆಯಲ್ಲಿರು ವೇಳೆ ಆರೋಪಿ ಸಿಯಾಬ್‌ ಆರೋಪಿತ ಇಸಾಕ್ ಇತರ ಮೂವರು ಆರೋಪಿಗಳೊಂದಿಗೆ ತಲವಾರು ಹಿಡಿದುಕೊಂಡು ಬಂದಿದ್ದು,

ನಮಗೆ ಮನೆಯಲ್ಲಿ ಬಯ್ಯುತ್ತಿಯಾ ನಾನು ಸಿಗರೇಟು ಸೇದುತ್ತೇನೆ ಏನು ಬೇಕಾದರೂ ಮಾಡುತ್ತೇನೆ ಅದನ್ನು ಕೇಳಲು ನೀನು ಯಾರು ಎಂಬುದಾಗಿ ಬೆದರಿಸಿದ್ದಾನೆ.
ನಂತರ ಕೋಪದಿಂದ ಸಬೀನಾ ಅವರಿಗೆ ಹೊಡೆಯಲು ಬಂದಿದ್ದ, ತಕ್ಷಣ ಅವರಿಂದ ತಪ್ಪಿಸಿಕೊಂಡು ಸಬೀನಾ ಗಂಡನಿಗೆ ಮೊಬೈಲ್ ಕರೆ ಮಾಡಿ ಸ್ಥಳಕ್ಕೆ ಕರೆದಿದ್ದಾರೆ.

ಸುದ್ದಿ ತಿಳಿದ ಗಂಡ ಮನೆಗೆ ಬಂದಾಗ ಬೋಸುಡಿ ಮಗನೆ ಬಂದೆಯಾ ಬಾ ಮನೆಯಲ್ಲಿ ಭಾರಿ ಮಾತನಾಡುತ್ತಿಯಾ ನಿನ್ನನ್ನು ಕೊಂದೆ ಬಿಡುತ್ತೇನೆ ಎಂದು ಸಿಯಾಬ್‌ ತಾನು ತಂದಿದ್ದ ತಲವಾರಿನಿಂದ ಬೀಸಿದ್ದು, ಈ ವೇಳೆ ತಪ್ಪಿಸಲು ಹೋಗಿ ಕೆಳಕ್ಕೆ ಬಿದ್ದಿದ್ದಾರೆ.

ತಕ್ಷಣ ಆರೋಪಿ ಮತ್ತು ತಂಡ ಅವರ ಮೇಲೆ ಹಲ್ಲೆ ನಡೆಸಿದೆ. ನಂತರ ಸಿಯಾಬ್‌ ಸಬೀನಾ ಬಾನು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಇಷ್ಟೆಲ್ಲಾ ಘಟನೆ ನಡೆಯುವ ವೇಳೆ ಅತ್ತೆ ಖತೀಜಾರವರು ಸಬೀನಾ ಹಾಗೂ ಗಂಡನನ್ನು ಕೊಂದು ಹಾಕುವಂತೆ ಉತ್ತೇಜನ ನೀಡಿದ್ದಾರೆ.

ಈ ವೇಳೆ ಬೊಬ್ಬೆ ಕೇಳಿದ ಸ್ಥಳೀಯರು ಬಂದಾಗ ಆರೋಪಿ ತನ್ನ ತಂಡದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಮೂಡುಬಿದಿರೆ: ಎಂ.ಜೆ.ಎಂ ಮಸ್ಜಿದ್ ಕುಂಡದ ಬೆಟ್ಟುವಿನಲ್ಲಿ ಫ್ರೀಡಂ ಸಂಗಮ, ಸನ್ಮಾನ

ಮೂಡುಬಿದಿರೆ: ಇಲ್ಲಿನ ವೇಣೂರಿನ ಎಂ.ಜೆ.ಎಂ ಮಸ್ಜಿದ್ ಕುಂಡದ ಬೆಟ್ಟು ಹಾಗೂ ಎಸ್.ಬಿ.ಎಸ್ ದಾರುಸ್ಸಲಾಂ ಮದ್ರಸ ಕುಂಡದಬೆಟ್ಟು ಇದರ ವತಿಯಿಂದ ಫ್ರೀಡಂ ಸಂಗಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕುಂಡದಬೆಟ್ಟುವಿನಲ್ಲಿ ನಡೆಯಿತು.ಎಸ್.ಎನ್.ಎಂ ಪಾಲಿಟೆಕ್ನಿಕ್ ಮೂಡಬಿದಿರೆಯ...

ಮಂಗಳೂರು: ಗುರುಪುರದ ಅಡ್ಡೂರು ಜಂಕ್ಷನ್‌ನಲ್ಲಿ ಸ್ವಾತಂತ್ರ್ಯ ಸಂಭ್ರಮ

ಮಂಗಳೂರು: 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಂಗಳೂರು ನಗರ ಹೊರವಲಯದ ಗುರುಪುರದ ಅಡ್ಡೂರು ಜಂಕ್ಷನ್‌ನಲ್ಲಿ ಫ್ರೆಂಡ್ಸ್ ಕ್ಲಬ್ ಅಡ್ಡೂರು ಇದರ ವತಿಯಿಂದ ಧ್ವಜಾರೋಹಣ ನಡೆಯಿತು.ಮೊದಲಿಗೆ ಅಡ್ಡೂರು ಜಂಕ್ಷನ್‌ನಲ್ಲಿ ನಿರ್ಮಿಸಲಾಗಿರುವ ನೂತನ ಧ್ವಜಸ್ತoಭವನ್ನು ನಿಕಟಪೂರ್ವ...

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆ ಕೆಂಪು ಕೋಟೆಯಲ್ಲಿ ಹಾರಾಡಿದ ತಿರಂಗಾ

ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಧ್ವಜಾರೋಹಣ ಮಾಡಿದರು. ಪ್ರಧಾನಿಯಾದ ಬಳಿಕ ಅವರು ಇಂದು 9ನೆ ಬಾರಿ ರಾಷ್ಟ್ರಧ್ವಜಾರೋಹಣ ಮಾಡಿದರು.ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ...