ನೈಜೀರಿಯಾ: ಶಾಲೆಗೆ ಬಂದೂಕುಧಾರಿಗಳ ದಾಳಿ; ಶಿಕ್ಷಕರು ವಿದ್ಯಾರ್ಥಿಗಳ ಅಪಹರಣ-ಓರ್ವ ಬಾಲಕನ ಹತ್ಯೆ;
Assault on school gunmen; Teachers abduct students – murder of a boy;
ನೈಜೀರಿಯಾ: ಶಾಲೆ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ 40 ಮಂದಿಯನ್ನು ಅಪಹರಣ ಮಾಡಿ, ಓರ್ವ ಬಾಲಕನನ್ನು ಹತ್ಯೆಗೈದಿದ್ದಾರೆ. ನೈಜೀರಿಯಾದ ಸೆಂಟ್ರಲ್ ನೈಜೀರಿಯಾ ಸ್ಟೇಟ್ ನಲ್ಲಿ ಈ ಘಟನೆ ಸಂಭವಿಸಿದೆ.
ಹಾಸ್ಟೆಲ್ ನ ಗೋಡೆಗೆ ಒಳನುಗ್ಗಿದ ಬಂಧೂಕುಧಾರಿಗಳು ಮೊದಲು ಎರಡು ಕೊಠಡಿಗಳಿಗೆ ನುಗ್ಗಿದ್ದಾರೆ. ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವಿದ್ಯಾರ್ಥಿಗಳ ಮೇಲೆ ಕಿರಾತಕರು ಫೈರಿಂಗ್ ನಡೆಸಿದ್ದು, ಈ ವೇಳೆ ಗುಂಡೇಟು ತಗುಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.
ಈ ಬಂಧೂಕುಧಾರಿಗಳು ಮಿಲಿಟರಿ ಸಿಬ್ಬಂದಿ ಬಳಸುವ ಕ್ಯಾಮಪ್ಲೋಜ್ ಯೂನಿಫಾರ್ಮ್ ಗಳನ್ನು ಧರಿಸಿ ಒಳನುಗ್ಗಿದ್ದಾರೆ. ಬಳಿಕ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 40 ಮಂದಿಯನ್ನು ಕಿಡ್ನಾಪ್ ಮಾಡಿದ್ದಾರೆ.
ಜೊತೆಗೆ ಅಪಹರಣ ಮಾಡಿದ ವಿಡಿಯೋ ಕೂಡ ರಿಲೀಸ್ ಮಾಡಿದ್ದಾರೆ ಎಂದು ಅಲ್ಲಿನ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.