ಸಾಗರ: ಕ್ಷುಲಕ ಕಾರಣಕ್ಕೆ ರಾಮ್ ಸೇನಾ ಮುಖಂಡನ ಮೇಲೆ ಮರಣಾಂತಿಕ ಹಲ್ಲೆ ಮಾಡಿದ ಘಟನೆ ಸಿಗಂದೂರಿನ ತುಮರಿ ಎಂಬಲ್ಲಿ ನಡೆದಿದೆ.
ಗಾಯಗೊಂಡವರನ್ನು ಸಾಗರ ತಾಲೂಕು ಮುಖಂಡ ಮಂಜುನಾಥ್ ಎಂದು ಗುರುತಿಸಲಾಗಿದೆ.
ರಾಘವೇಂದ್ರ, ಹರೀಶ, ಸುಬ್ರಮಣ್ಯ, ನಿರಂಜನ್ ಎಂಬವರು ಕ್ಷುಲ್ಲಕ ಕಾರಣಕ್ಕೆ ಮಂಜುನಾಥ್ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ್ದಾರೆ.
ಸದ್ಯ ರಾಮ್ ಸೇನಾ ಮುಖಂಡ ಮಂಜುನಾಥ್ ಪ್ರಾಣಪಾಯ ದಿಂದ ಪಾರಾಗಿದ್ದಾರೆ. ಉಡುಪಿ ಜಿಲ್ಲಾಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ರಾಮ್ ಸೇನಾ ಜಿಲ್ಲಾ ಮುಖಂಡ ಪ್ರಶಾಂತ್ ಬಂಗೇರ ಮಾತನಾಡಿ, ಇದನ್ನು ರಾಮ್ ಸೇನಾ ರಾಜ್ಯ ಘಟಕ ಹಾಗೂ ರಾಮ್ ಸೇನಾ ಶಿವಮೊಗ್ಗ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ.
ಯಾವುದೇ ಕಾರಣಕ್ಕೂ ಅಪರಾಧಿಗಳನ್ನು ತಪ್ಪಿಸಿಕೊಳ್ಳಲು ಬಿಡೋದಿಲ್ಲ.ಈ ಬಗ್ಗೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆದರೆ ಪೊಲೀಸರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿ ಗಳ ಬಂಧನ ಆಗಿಲ್ಲ. ಆರೋಪಿ ಗಳ ಕಾರ್ ಮುಟ್ಟುಗೊಲು ಆಗಿಲ್ಲ,
ಶೀಘ್ರವೇ ಪೊಲೀಸ್ ಇಲಾಖೆ ಆರೋಪಿ ಗಳನ್ನು ಬಂಧನ ಮಾಡಬೇಕು ಹಾಗೂ ಆರೋಪಿ ಗಳು ಕೃತ್ಯ ಕ್ಕೆ ಬಳಸಿರುವ ಕಾರನ್ನು ವಶಪಡಿಸಿಕೊಳ್ಳಬೇಕು.
ಇಲ್ಲದಿದ್ದರೆ ರಾಮ್ ಸೇನೆ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.