ಬಂಟ್ವಾಳ: ವ್ಯಕ್ತಿಯೋರ್ವ ಒಡಹುಟ್ಟಿದ ಸಹೋದರ ಮತ್ತು ತಾಯಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ ಘಟನೆ ಅಳಿಕೆ ಗ್ರಾಮದ ನೆಗಳಗುಳಿ ಎಂಬಲ್ಲಿ ನಡೆದಿದೆ.
ಅಳಿಕೆ ನೆಗಳಗುಳಿ ನಿವಾಸಿ ಕೃಷ್ಣ ಕುಮಾರ್ ಮತ್ತು ಆತನ ತಾಯಿ ವಾರಿಜ ಹಲ್ಲೆಗೊಳಗಾಗಿದ್ದು, ಕೃಷ್ಣ ಕುಮಾರ್ ಅವರ ಸಹೋದರ ಹರೀಶ್ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಮದ್ಯಪಾನ ಮಾಡಿ ಬಂದಿದ್ದ ಹರೀಶ್ ಮನೆಮಂದಿ ಜೊತೆಗೆ ಜಗಳ ಮಾಡಿದ್ದಲ್ಲದೇ ತನಗೆ ಉಪದೇಶ ಮಾಡಿದ ಸಹೋದರ ಮತ್ತು ತಾಯಿ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.