Connect with us

BANTWAL

ಬಂಟ್ವಾಳ: ಹಳೆ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

Published

on

ಬಂಟ್ವಾಳ: ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನಿಗೆ ಬಾಟಲಿಯಿಂದ ಹೊಡೆದು ಗಾಯಗೊಳಿಸಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ತುಂಬೆ ಎಂಬಲ್ಲಿ ನಡೆದಿದೆ.

ತುಂಬೆ ನಿವಾಸಿ ಸುಹೈಬ್ ಸಿನಾನ್ ಎಂಬವರು ಹಲ್ಲೆಗೊಳಗಾದವರು.

ಶೂಹೇಬ್ ಅಕ್ತರ್ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪಿ.


ಘಟನೆಯಿಂದ ಗಾಯಗೊಂಡ ಸುಹೈಬ್ ಸಿನಾನ್ ಅವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ವಿವರ
ತುಂಬೆ ಖಾಸಗಿ ಆಸ್ಪತ್ರೆಯ ಕಾಂಪೌಂಡ್ ಒಳಗೆ ಇರುವ ಫಾಸ್ಟ್ ಪುಡ್ ಅಂಗಡಿಯಲ್ಲಿ ಸುಹೈಬ್ ಸಿನಾನ್ ಅವರು ಆಹಾರ ಸೇವಿಸಿ ಹೊರಗೆ ಬರುತ್ತಿದ್ದಂತೆ ಅಲ್ಲಿಗೆ ಬಂದ ಆರೋಪಿ ಶೊಹೇಬ್ ಅಕ್ತರ್ ಅವರು ಏಕಾಏಕಿ ‘ಗುರಾಯಿಸಿ ನೋಡುತ್ತೀಯಾ’ ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿದ್ದ ಬಾಟಲಿಯಿಂದ ತಲೆಗೆ ಹಾಗೂ ಹೊಟ್ಟೆಗೆ ಹೊಡೆದಿದ್ದಾನೆ.

ಘಟನೆಯಿಂದ ಗಾಯಗೊಂಡ ಈತನಿಗೆ ಕೊಲೆ ಬೆದರಿಕೆ ಕೂಡ ಹಾಕಿದ್ದಾನೆ. ಕ್ಷುಲ್ಲಕ ಕಾರಣಗಳಿಗಾಗಿ ಒಂದು ವರ್ಷದ ಹಿಂದೆ ಇವರ ನಡುವೆ ಗಲಾಟೆ ನಡೆದಿದ್ದು ಬಳಿಕ ರಾಜಿಯಾಗಿತ್ತು.

ಅದರೆ ಅದೇ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆತ ಹಲ್ಲೆ ನಡೆಸಿರಬಹುದು ಎಂಬ ಶಂಕೆಯನ್ನು ಪೋಲಿಸರು ವ್ಯಕ್ತಪಡಿಸಿದ್ದಾರೆ.

ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

BANTWAL

ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

Published

on

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2017 ರಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪಾಲಮ ಹೆಹರು ತಾಲೂಕಿನ ಚಿನ್ನಪಳ್ಳಿ ಪೆದ್ದ ಗ್ರಾಮದ ನಿವಾಸಿ ಬಿ. ಮೌಲಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ 6 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಿ. ಮೌಲಾ ಉಳ್ಳಾಲ ತಾಲೂಕಿನ ದೇರಳಕಟ್ಟೆಯ ಕುತ್ತಾರು ಎಂಬಲ್ಲಿ ಇದ್ದಾನೆ ಎಂಬುದಾಗಿ ಲಭಿಸಿದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಅಲ್ಲಿಗೆ ತೆರಳಿ ಆತನನ್ನು ಬಂಧಿಸಿದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ, ನ್ಯಾಯಾಲಯವು ಆರೋಪಿಗೆ ದಂಡ ವಿಧಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ ಸ್ಟೆಬಲ್‌ ಗಣೇಶ್ ಪ್ರಸಾದ್ ಮತ್ತು ಕಾನ್‌ ಸ್ಟೆಬಲ್‌ ವಿಜಯ ಕುಮಾರ ಅವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 

Continue Reading

BANTWAL

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಾಲವಿಕಾಸದ ವಿದ್ಯಾರ್ಥಿನಿಗೆ ಪ್ರಶಸ್ತಿ

Published

on

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪೆರಾಜೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಮಂಗಳೂರಿನ ರಾಮಕೃಷ್ಣ ಹೈ ಸ್ಕೂಲ್ ಬಂಟ್ಸ್ ಹಾಸ್ಟೆಲ್  ಇದರ ಜಂಟಿ ಆಶ್ರಯದಲ್ಲಿ ಡಿ.1ರಂದು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ನಡೆದಿತ್ತು.


ಈ ಪ್ರತಿಭಾ ಕಾರಂಜಿಯಲ್ಲಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ದೇವಿಕಾ ಕೆ ಭಾಗವಹಿಸಿ ಪ್ರೌಢ ಶಾಲಾ ವಿಭಾಗದ ಕನ್ನಡ ಕವನ ವಾಚನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಇವರನ್ನು ಶಾಲಾ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Continue Reading

BANTWAL

Bnatwala: ಡಿ.3ರಂದು ಅಕ್ಷಯ ಪಾತ್ರ ಪ್ರತಿಷ್ಠಾನದ ಕೇಂದ್ರೀಕೃತ ಅಡುಗೆ ಮನೆ ಉದ್ಘಾಟನೆ

Published

on

ಬಂಟ್ವಾಳ: ಅಕ್ಷಯ ಪಾತ್ರ ಫೌಂಡೇಶನ್ ಇದರ ಅಡುಗೆ ಮನೆಯ ಉದ್ಘಾಟನಾ ಸಮಾರಂಭವು ಡಿ. 3 ರಂದು ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜು ಸಮೀಪ ನಡೆಯಲಿದೆ.

ಅಕ್ಷಯ ಫೌಂಡೇಶನ್ ಮಕ್ಕಳ ಹಸಿವನ್ನು ಹೋಗಲಾಡಿಸುವ ತನ್ನ ಅಚಲವಾದ ಕಾರ್ಯಕ್ಕೆ ಹೆಸರುವಾಸಿಯಾಗಿದ್ದು, ಮಂಗಳೂರಿನಲ್ಲಿ ತನ್ನ ಕೇಂದ್ರೀಕೃತ ಅಡುಗೆ ಮನೆಯ ಉದ್ಘಾಟನೆಯೊಂದಿಗೆ ಮಹತ್ವದ ಮೈಲಿಗಲ್ಲು ತಲುಪಿದೆ. ದಾನಿಗಳಾದ ಜಿಟಿ ಫೌಂಡೇಶನ್ ಮತ್ತು ದಿಯಾ ಸಿಸ್ಟಮ್ಸ್ (ಮಂಗಳೂರು) ಪ್ರೈ.ಲಿ. ಲಿಮಿಟೆಡ್‌ನ ವಿಜಯ್ ಮತ್ತು ಶಾಮ ಕೇಡಿಯಾ, ದಿವಂಗತ  ಡಾ. ವಿ ರವಿಚಂದ್ರನ್ ಅವರ ನಿರಂತರ ಬೆಂಬಲ ಮತ್ತು ದೂರದೃಷ್ಟಿ ಕೊಡುಗೆಯೇ ಈ ಅಡುಗೆ ಮನೆಯಾಗಿದೆ. ಈ ಸಮಾರಂಭವು ಉಡುಪಿಯ ಪುತ್ತಿಗೆ ಮಠದ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಲಿದೆ.

ಈ ಉದ್ಘಾಟನಾ ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್,  ಬೆಂಗಳೂರಿನ ಸೆಂಚುರಿ ರಿಯಲ್ ಎಸ್ಟೇಟ್ ಗ್ರೂಪ್‌ನ ಅಧ್ಯಕ್ಷ ಡಾ. ಪಿ ದಯಾನಂದ ಪೈ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಪಿ.ಮುಲ್ಲೈ ಮುಹಿಲನ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಡಾ. ಆನಂದ ಕೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತ್ ದಾಸ ಮತ್ತು ಅಕ್ಷಯ ಪಾತ್ರ ಫೌಂಡೇಶನ್‌ನ ಉಪಾಧ್ಯಕ್ಷ ಚಂಚಲಪತಿ ದಾಸ ಅವರು ಉಪಸ್ಥಿತರಿರುವರು.

124 ಸರ್ಕಾರಿ ಮತ್ತು 41 ಸರ್ಕಾರಿ ಅನುದಾನಿತ ಸಂಸ್ಥೆಗಳು ಸೇರಿದಂತೆ 165 ಕ್ಕೂ ಹೆಚ್ಚು ಶಾಲೆಗಗಳಿಗೆ ಅಗತ್ಯ ಪೌಷ್ಟಿಕಯುತವಾದ 25,000 ಊಟವನ್ನು ಉತ್ಪಾದಿಸುವ ಸಾಮರ್ಥ್ಯದೊಂದಿಗೆ ಈ ಅಡುಗೆಕೋಣೆ ರೂಪುಗೊಂಡಿದೆ. ಅಡುಗೆಮನೆಯ ವೈವಿಧ್ಯಮಯ ಮೆನುವು ಸಮತೋಲಿತ ಪೋಷಣೆಯನ್ನು ಖಾತ್ರಿಗೊಳಿಸುತ್ತದೆ. ಸೌರಶಕ್ತಿ ಮತ್ತು ಸ್ವಚ್ಛ ಎಲ್ಪಿಜಿ ಯೊಂದಿಗೆ ಪರಿಸರಸ್ನೇಹಿ ಅಡುಗೆಮನೆ ಇದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

LATEST NEWS

Trending