Connect with us

LATEST NEWS

ಸುರತ್ಕಲ್ ಪ್ಲ್ಯಾಟ್ ನಲ್ಲಿ ಕಳ್ಳತನ ನಾಲ್ವರ ಆರೆಸ್ಟ್

Published

on

ಮಂಗಳೂರು ಸೆಪ್ಟೆಂಬರ್ 22: ಮಂಗಳೂರು ಸುರತ್ಕಲ್ ಹೊರವಲಯದ ಇಡ್ಯಾ ಎಂಬಲ್ಲಿಯ ಜಾರ್ಡಿನ್ ಅಪಾರ್ಟ್ ಮೆಂಟ್ ನಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಬಂಧಿತ ಆರೋಪಿಗಳನ್ನು ನವೀನ್, ರಘು, ಅಮೇಶ್, ಸಂತೋಷ್ ಎಂದು ಗುರುತಿಸಲಾಗಿದ್ದು, ಬಂಧಿತರಿಂದ 224 ಗ್ರಾಂ ಚಿನ್ನ, 30.80 ಲಕ್ಷ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ.


ಬಂಧಿತ ಆರೋಪಿಗಳು ಆಗಸ್ಟ್ 15 ರಂದು ಸುರತ್ಕಲ್ ಬಳಿಯ ಫ್ಲಾಟಿಗೆ ನುಗ್ಗಿ ಕಳ್ಳತನ ಕೃತ್ಯ ಎಸಗಿದ್ದರು. ಕೇರಳ ಮೂಲದ ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.ಪೆಟ್ರೋಲ್ ಬಂಕ್ ಹೊಂದಿದ್ದ ವಿದ್ಯಾ ಪ್ರಭು ನಗದು ಇಟ್ಟು ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಫ್ಲಾಟ್‌ ಅನ್ನು ವಹಿವಾಟಿಗೆ ಬಳಸಿಕೊಳ್ಳುತ್ತಿದ್ದರು.ಈ ಬಗ್ಗೆ ಅರಿತಿದ್ದ ಫ್ಲಾಟ್ ಸೆಕ್ರೆಟರಿ ನವೀನ್‌‌ನಿಂದ ಕಳ್ಳತನ ಪ್ಲಾನ್ ಹಾಕಿದ್ದ ಎಂದು ಮಂಗಳೂರು ಕಮಿಷನರ್ ವಿಕಾಸ್ ಕುಮಾರ್ ಮಾಹಿತಿ ನೀಡಿದ್ದಾರೆ.

ಘಟನೆಯ ಬಗ್ಗೆ ಫ್ಲಾಟ್‌ ಮಾಲಕಿ ವಿದ್ಯಾ ಪ್ರಭು ಪೊಲೀಸರಿಗೆ ದೂರು ನೀಡಿದ್ದು, 51 ಲಕ್ಷ ನಗದು, 224 ಗ್ರಾಂ ಚಿನ್ನ ಕಳವಾಗಿದೆ ಎಂದು ತಿಳಿಸಿದ್ದರು. ಆರೋಪಿಗಳಿಂದ 30.85 ಲಕ್ಷ ನಗದು, ಚಿನ್ನ, ಕಾರು ವಶ ಪಡಿಸಿಕೊಳ್ಳಲಾಗಿದೆ.

LATEST NEWS

ಬ್ರಾಹ್ಮಣರಿಲ್ಲದೆ ಸಂವಿಧಾನವೇ ಇಲ್ಲ ; ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್

Published

on

ಮಂಗಳೂರು/ಬೆಂಗಳೂರು : ‘ಬ್ರಾಹ್ಮಣ ಸಮುದಾಯದವರು ಭಾರತೀಯ ಸಂವಿಧಾನ ರಚನೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ’ ಎಂದು ಅಂಬೇಡ್ಕರ್ ಅವರೇ ಹೇಳಿದ್ದರು ಎಂಬುವುದಾಗಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ತಿಳಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಎರಡು ದಿನಗಳ ಬ್ರಾಹ್ಮಣ ಸಮಾವೇಶದಲ್ಲಿ ಮಾತನಾಡಿದ ನ್ಯಾಯಾಧೀಶರು, “ಬ್ರಾಹ್ಮಣ ಪದವನ್ನು ಜಾತಿಗಿಂತ ‘ವರ್ಣ’ ದೊಂದಿಗೆ ಸಂಯೋಜಿಸಬೇಕು. ವೇದಗಳನ್ನು ವರ್ಗೀಕರಿಸಿದ ವೇದವ್ಯಾಸ ಮೀನುಗಾರ ಮಹಿಳೆಯ ಮಗ ಆಗಿದ್ದರು. ರಾಮಾಯಣದ ಕರ್ತೃ ವಾಲ್ಮೀಕಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂದ ಮಾತ್ರಕ್ಕೆ “ನಾವು (ಬ್ರಾಹ್ಮಣರು) ಅವರನ್ನು ಕೀಳಾಗಿ ನೋಡಿದ್ದೇವೆಯೇ? ಶತಮಾನಗಳಿಂದ ಶ್ರೀರಾಮನನ್ನು ಪೂಜಿಸುತ್ತಿದ್ದೇವೆ ಮತ್ತು ಅವರ ಮೌಲ್ಯಗಳನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ” ಎಂದು ಗರ್ವದಿಂದ ಹೇಳಿದರು.

ಬ್ರಾಹ್ಮಣೇತರ ರಾಷ್ಟ್ರೀಯತಾವಾದಿ ಹೋರಾಟಗಳಲ್ಲಿ ತಮ್ಮ ಹಿಂದಿನ ಸಂಬಂಧವನ್ನು ಉಲ್ಲೇಖಿಸಿದ ನ್ಯಾಯಾಧೀಶರು ನ್ಯಾಯಾಂಗ ಸ್ಥಾನದ ಇತಿಮಿತಿಗಳಲ್ಲಿ ಮಾತನಾಡುತ್ತಿದ್ದಾಗಿ ತಿಳಿಸಿದರು. “ಬಿ. ಎನ್. ರಾವ್ ಅವರು ಸಂವಿಧಾನದ ಕರಡನ್ನು ಸಿದ್ಧಪಡಿಸದಿದ್ದರೆ, ಅದನ್ನು ರೂಪಿಸಲು ಇನ್ನೂ 25 ವರ್ಷಗಳು ಬೇಕಾಗುತ್ತಿತ್ತು ಎಂದು ಡಾ. ಅಂಬೇಡ್ಕರ್ ಒಮ್ಮೆ ಭಂಡಾರ್ಕರ್ ಸಂಸ್ಥೆಯಲ್ಲಿ ಹೇಳಿದ್ದರು. ಸಂವಿಧಾನದ ಕರಡು ರಚನೆಯಲ್ಲಿ ಸಮಿತಿಯಲ್ಲಿದ್ದ ಏಳು ಸದಸ್ಯರಲ್ಲಿ ಮೂವರು – ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯಂಗಾರ್, ಎನ್. ಗೋಪಾಲಸ್ವಾಮಿ ಅಯ್ಯಂಗಾರ್ ಮತ್ತು ಬಿ. ಎನ್. ರಾವ್ – ಬ್ರಾಹ್ಮಣರಾಗಿದ್ದರು” ಎಂದು ಹೇಳುತ್ತಾ, ರಾಷ್ಟ್ರದ ಕಾನೂನು ಚೌಕಟ್ಟನ್ನು ರೂಪಿಸುವಲ್ಲಿ ಅವರ ಪಾತ್ರವನ್ನು ಒತ್ತಿ ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು, “ಜನರು ಆಹಾರ ಅಥವಾ ಶಿಕ್ಷಣಕ್ಕಾಗಿ ಹೆಣಗಾಡುತ್ತಿರುವಾಗ ಇಂತಹ ದೊಡ್ಡ ಕಾರ್ಯಕ್ರಮಗಳು ಏಕೆ ಬೇಕು ಎಂದು ಹಲವರು ಕೇಳುತ್ತಾರೆ. ಆದರೆ ಸಮುದಾಯವನ್ನು ಒಟ್ಟುಗೂಡಿಸಲು ಮತ್ತು ಅದರ ಸಮಸ್ಯೆಗಳನ್ನು ಚರ್ಚಿಸಲು ಈ ಸಮಾವೇಶಗಳು ಅತ್ಯಗತ್ಯ. ಅಂತಹ ಕಾರ್ಯಕ್ರಮಗಳನ್ನು ಏಕೆ ನಡೆಸಬಾರದು?” ಎಂದು ಪ್ರಶ್ನಿಸಿದರು. ಈ ರೀತಿಯ ವಾಗ್ವಾದಗಳು ನಡೆಯುವ ಮೂಲಕ ಬ್ರಾಹ್ಮಣ ಸಮಾವೇಶ ಸಮಾರೋಪಗೊಂಡಿತು.

Continue Reading

LATEST NEWS

ಐಸಿಸಿ ವರ್ಷದ ಏಕದಿನ ತಂಡ ಪ್ರಕಟ; ಭಾರತೀಯರಿಗಿಲ್ಲ ಸ್ಥಾನ

Published

on

ಮಂಗಳೂರು/ದುಬೈ : ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವರ್ಷ ಪೂರ್ತಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಗುರುತಿಸಿ ಒಂದು ತಂಡವನ್ನು ಕಟ್ಟುತ್ತದೆ. ಇದು ಎಲ್ಲ ಸ್ವರೂಪಗಳಲ್ಲೂ ಮಾಡುತ್ತಲೇ ಬರುತ್ತಿದೆ. ಈಗ ಐಸಿಸಿ ವರ್ಷದ ಏಕದಿನ ತಂಡವನ್ನು ಪ್ರಕಟ ಮಾಡಿದೆ.

ವಿಪರ್ಯಾಸವೆಂದರೆ ಈ ತಂಡದಲ್ಲಿ ಒಬ್ಬನೇ ಒಬ್ಬ ಭಾರತೀಯ ಆಟಗಾರ ಇಲ್ಲ ಎಂಬುದೇ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ.

ಆದರೆ, ಈ ತಂಡದಲ್ಲಿ ಮೂವರು ಪಾಕಿಸ್ತಾನ ತಂಡದ ಆಟಗಾರರು ಮತ್ತು ನಾಲ್ವರು ಲಂಕಾ ಆಟಗಾರರು ಸ್ಥಾನ ಪಡೆದಿರುವುದು ವಿಶೇಷ. ಐಸಿಸಿ ಪ್ರಕಟಿಸಿದ ಏಕದಿನ ತಂಡವನ್ನು ಶ್ರೀಲಂಕಾದ ಚರಿತ್ ಅಸಲಂಕಾ ಮುನ್ನಡೆಸುತ್ತಿದ್ದಾರೆ. ಅಸಲಂಕಾ ಆಡಿದ 16 ಪಂದ್ಯಗಳಲ್ಲಿ 50.2ರ ಸರಾಸರಿಯಲ್ಲಿ 605 ರನ್ ಕಲೆ ಹಾಕಿದ್ದು, ಇವರಿಗೆ ನಾಯಕನ ಪಟ್ಟ ಕಟ್ಟಲಾಗಿದೆ.

ಇದನ್ನೂ ಓದಿ: ಮಾಜಿ ಕ್ರಿಕೆಟಿಗ ಸೆಹ್ವಾಗ್-ಆರತಿ ದಾಂಪತ್ಯದಲ್ಲಿ ಬಿರುಕು ?

ಶ್ರೀಲಂಕಾ ತಂಡದ ಪರ ಕುಸಾಲ್ ಮೆಂಡೀಸ್ ಆಡಿದ 17 ಪಂದ್ಯಗಳಲ್ಲಿ 742 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸರಾಸರಿ 53 ಆಗಿದೆ. ಈ ತಂಡದಲ್ಲಿ ಸ್ಥಾನ ಪಡೆದ ಇನ್ನೊಬ್ಬ ಲಂಕಾ ಆಟಗಾರ ಪತುನ್ ನಿಸ್ಸಂಕಾ. ಇವರು ಆಡಿದ 12 ಪಂದ್ಯಗಳಲ್ಲಿ 694 ರನ್ ಸಿಡಿಸಿದ್ದಾರೆ. ಉಳಿದಂತೆ ಸ್ಪಿನ್ ಬೌಲರ್ ವನಿಂದು ಹಸರಂಗಾ ಅವರಿಗೆ ತಂಡದಲ್ಲಿ ಸ್ಥಾನ ಲಭಿಸಿದೆ.

ಅಫ್ಘಾನಿಸ್ತಾನದ ಪರ ರಹಮಾನುಲ್ಲಾ ಗುರ್ಬಾಜ್, ಅಜ್ಮತುಲ್ಲಾ ಒಮರ್ಜಾಯ್, ಅಲ್ಲಾ ಗಜನ್ಫರ್ ಮೂವರು ಸ್ಥಾನ ಪಡೆದಿದ್ದಾರೆ. ರಹಮಾನುಲ್ಲಾ ಗುರ್ಬಾಜ್ ಪಾಕ್ ತಂಡದ ಸಯಿಮ್ ಅಯುಬ್ ಅವರೊಂದಿಗೆ ಇನಿಂಗ್ಸ್ ಆರಂಭಿಸಲಿದ್ದಾರೆ. ಈ ತಂಡದಲ್ಲಿ ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್‌ರೌಂಡರ್ ಶೆರ್ಫೇನ್ ರುದಪೋರ್ಡ್ ಅವರನ್ನು ಐಸಿಸಿ ವರ್ಷದ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇವರು ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲಿದ್ದಾರೆ.

ಪಾಕ್ ತಂಡದ ಇಬ್ಬರು ವೇಗಿಗಳು
ಈ ವರ್ಷದ ಅಮೋಘ ಪ್ರದರ್ಶನ ನೀಡಿರುವ ಪಾಕ್ ತಂಡದ ಇಬ್ಬರು ಸ್ಟಾರ್ ವೇಗಿಗಳಿಗೆ ಅವಕಾಶ ನೀಡಲಾಗಿದೆ. ಪಾಕ್ ತಂಡದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಆಡಿದ 5 ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ದು, ಇವರು ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಇನ್ನು ಕಳೆದ ವರ್ಷ ಆಡಿದ 8 ಪಂದ್ಯಗಳಲ್ಲಿ 13 ವಿಕೆಟ್ ಪಡೆದಿರುವ ಹ್ಯಾರಿಸ್ ರೌಫ್ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಭಾರತೀಯ ಆಟಗಾರರಿಗೆ ಏಕೆ ಇಲ್ಲ ಸ್ಥಾನ?
2024ರ ಐಸಿಸಿಯ ಅತ್ಯುತ್ತಮ ಏಕದಿನ ತಂಡದಲ್ಲಿ ಒಬ್ಬ ಭಾರತೀಯ ಕ್ರಿಕೆಟಿಗ ಕೂಡ ಸ್ಥಾನ ಪಡೆಯದಿರುವುದು ಅಭಿಮಾನಿಗಳನ್ನು ನಿರಾಸೆಗೊಳಿಸಿದೆ. ಟೀಂ ಇಂಡಿಯಾ 2024ರಲ್ಲಿ ಕೇವಲ ಮೂರು ಏಕದಿನ ಪಂದ್ಯಗಳು ಆಡಿತ್ತು. ಈ ಸರಣಿ ಶ್ರೀಲಂಕಾ ವಿರುದ್ದ ನಡೆದಿತ್ತು. ಈ ಸರಣಿಯನ್ನು ಲಂಕಾ ಕೈವಶ ಮಾಡಿಕೊಂಡಿತ್ತು. ಹೀಗಾಗಿ ಭಾರತದ ಯಾವೊಬ್ಬ ಆಟಗಾರನು ಐಸಿಸಿ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಐಸಿಸಿ ಏಕದಿನ ತಂಡ : ಸೈಮ್ ಅಯೂಬ್, ರಹಮಾನುಲ್ಲಾ ಗುರ್ಬಾಜ್, ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ (ನಾಯಕ), ಶೆರ್ಫಾನೆ ರುದರ್‌ಫೋರ್ಡ್, ಅಜ್ಮತುಲ್ಲಾ ಒಮರ್ಜಾಯ್, ವನಿಂದು ಹಸರಂಗಾ, ಶಾಹೀನ್ ಶಾ ಅಫ್ರಿದಿ, ಹಾರಿಸ್ ರೌಫ್, ಎಎಮ್ ಗಜನ್ಫರ್

Continue Reading

FILM

ರೇಣುಕಾಸ್ವಾಮಿ ಕೊ*ಲೆ ಪ್ರಕರಣ : ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಹೇಳಿದ್ದೇನು?

Published

on

ಮಂಗಳೂರು/ನವದೆಹಲಿ : ರೇಣುಕಾಸ್ವಾಮಿ ಕೊ*ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ  ನಟ ದರ್ಶನ್, ಪವಿತ್ರಾ ಹಾಗೂ ಇತರೆ ಐದು ಜನರಿಗೆ ನೀಡಲಾದ ಜಾಮೀನನ್ನು ರದ್ದುಗೊಳಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.  ಆದರೆ, ರಾಜ್ಯಸರ್ಕಾರ ಸಲ್ಲಿಸಿರುವ ಆಕ್ಷೇಪಣೆ ಅರ್ಜಿಯನ್ನು ಪರಿಶೀಲಿಸುವುದಾಗಿ ತಿಳಿಸಿದೆ.


ಈ ವೇಳೆ ಕರ್ನಾಟಕ ಹೈಕೋರ್ಟ್‌ನ ಜಾಮೀನು ಆದೇಶದ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ಕುರಿತು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲ ಮತ್ತು ಆರ್.ಮಹಾದೇವನ್ ಅವರನ್ನೊಳಗೊಂಡ ಪೀಠವು ದರ್ಶನ್ ಮತ್ತು ಇತರರಿಗೆ ನೋಟೀಸ್ ಜಾರಿ ಮಾಡಿದೆ.

ಇದನ್ನೂ ಓದಿ : ಟೀ ಮಾರುವವನ ಯಡವಟ್ಟಿಗೆ 13 ಮಂದಿ ಬಲಿ

ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀ*ಲ ಸಂದೇಶಗಳನ್ನು ಕಳುಹಿಸಿದ್ದ. ಇದರಿಂದ ರೊಚ್ಚಿಗೆದ್ದ ದರ್ಶನ್ ಹಾಗೂ ಸಂಗಡಿಗರು ರೇಣುಕಾಸ್ವಾಮಿಯ ಹ*ತ್ಯೆ ಮಾಡಿದ್ದಾರೆಂಬ ಆರೋಪದಡಿ 7 ಮಂದಿಯನ್ನು ಬಂಧಿಸಲಾಗಿತ್ತು.  ಜೂ.9 ರಂದು ರೇಣುಕಾಸ್ವಾಮಿ ಮೃ*ತದೇಹ ಬೆಂಗಳೂರಿನ ಮೋರಿಯೊಂದರಲ್ಲಿ ಪತ್ತೆಯಾಗಿತ್ತು.   ಹೈಕೋರ್ಟ್ ಅಕ್ಟೋಬರ್ 30ರಂದು ದರ್ಶನ್‌ಗೆ ತೀವ್ರ ನೋವಿದೆ ಎಂಬ ಕಾರಣಕ್ಕೆ ವೈದ್ಯಕೀಯ ಆಧಾರದ ಮೇಲೆ ಆರು ವಾರಗಳ ಮಧ್ಯಂತರ  ಜಾಮೀನು ನೀಡಿತ್ತು. ಬಳಿಕ ಡಿಸೆಂಬರ್‌ನಲ್ಲಿ ಅವರಿಗೆ ಮತ್ತು ಇತರರಿಗೆ ನಿಯಮಿತ ಜಾಮೀನು ಮಂಜೂರಾಗಿತ್ತು.

 

Continue Reading

LATEST NEWS

Trending

Exit mobile version